ಓಹ್ ದೇವ್ರೇ.! ಎಂದು ಉದ್ಘರಿಸುತ್ತಾ ಆಕೆ ತಮ್ಮ ಬೆಳಗಿನ ತಮ್ಮ ಫಿಲ್ಟರ್ ಕಾಫಿಯನ್ನು ಕೆಳಗಡೆ ಇಟ್ಟರು. ಈಗ ತಮ್ಮ ಫೋನ್ ಅನ್ನು ತಮ್ಮ ಎರಡೂ ಕೈಗಳಿಂದ ಹಿಡಿದು, ತಮ್ಮ ಕಚೇರಿಗೆ ಇಮೇಲ್ ಕಳಿಸುವಲ್ಲಿ ನಿರತರಾಗಿದ್ದ ತಮ್ಮ ಪತಿಗಾಗಿ ಅವರು ಅದನ್ನು ಗಟ್ಟಿ ಧ್ವನಿಯಲ್ಲಿ ಓದುತ್ತಿದ್ದರು. "16 migrant workers run over by goods train near Aurangabad in Maharashtra"- ನೀವು ಈ ಸುದ್ದಿ ಓದಿದ್ರಾ? ಎಂತಹ ನರಕಯಾತನೆಯ ಘಟನೆ ನಡೆಯುತ್ತಿದೆ ಇಲ್ಲಿ..? ಈ ಸ್ಥಬ್ದತೆ ಆವರಿಸಿಕೊಳ್ಳುವಷ್ಟರಲ್ಲಿ ಇನ್ನೊಂದು ನಿಮಿಷವಾಗಿತ್ತು ಮತ್ತು ಉಳಿದ ಸುದ್ದಿಯೊಂದಿಗೆ ಸಣ್ಣ ಗುಟುಕಿನಲ್ಲಿ ಕಾಫಿ ಹೀರಬೇಕೆಂದರೆ, ಅದು ಆಗಲೇ ತಣ್ಣಗಾಗಿತ್ತು. "ಅಬ್ಭಾ! ಎಷ್ಟೊಂದು ಜನರು, ಇವರೆಲ್ಲ ಎಲ್ಲಿಂದ ಬರುತ್ತಾರೆ? ಎಂದು ಉದ್ಘರಿಸುತ್ತಿರುವ ಹೊತ್ತಿಗೆ ಅವರ ಧ್ವನಿಯಲ್ಲಿನ ಆಶ್ಚರ್ಯವು ಮೊದಲಿಗಿಂತ ಬಹುತೇಕ ಇಳಿದಿತ್ತು.
"ಈ ಗುಂಪಿನಲ್ಲಿರುವ ಕೆಲವರು ಉಮರಿಯಾದವರು ಎಂದು ಅವರು ಹೇಳುತ್ತಿದ್ದಾರೆ. ಮನು, ನಾವು ಕಳೆದ ಡಿಸೆಂಬರ್ನಲ್ಲಿ ಈ ಸ್ಥಳಕ್ಕೆ ಹೋಗಿರಲಿಲ್ಲವೇ? ಆ ರಜೆಯ ಉಲ್ಲೇಖವು ಪತಿಯನ್ನು ತನ್ನ ಇ-ಮೇಲ್ ಪ್ರಪಂಚದಿಂದ ಹೊರಬಂದು ಈ ಸುದ್ದಿಗೂ ಬೆಲೆ ಕೊಡುವಂತೆ ಮಾಡಿತು. "ಹೌದು," ಪತಿ ಹೇಳಿದ. "ಬಾಂಧವಗಢ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗಿದ್ದು ನಾವು. ಇದು ಮಧ್ಯಪ್ರದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿದೆ. ಈ ಜನರು ಕೆಲಸ ಹುಡುಕಿಕೊಂಡು ಜಲ್ನಾ ತನಕ ಪ್ರಯಾಣಿಸಿರುವುದರಲ್ಲಿ ಆಶ್ಚರ್ಯವಿಲ್ಲ. ಆದರೆ ಹಳಿಗಳ ಮೇಲೆ ಮಲದ್ದರು ಅಲ್ವಾ? ಅವರು ಅಷ್ಟು ಮೂರ್ಖರಾಗಬಹುದೇ? "
“ಓಹ್, ಅದು ತುಂಬಾ ಸುಂದರವಾಗಿತ್ತು,” ಅವಳು ಇನ್ನೊಂದು ಗ್ರಹಕ್ಕೆ ಮರಳಿದಂತೆ ತೋರುತ್ತಿತ್ತು, “ಶೇಶ್ ಶೈಯಾ ನೆನಪಿದೆಯೇ? ವಿಷ್ಣುವಿನ ಭವ್ಯವಾದ ಪ್ರತಿಮೆ ಮತ್ತು ಹಚ್ಚ ಹಸಿರಿನ ಸಾಲ್ (ಶಾಲ ಮರದ) ಕಾಡುಗಳಿಂದ ಆವೃತವಾದ ಸ್ತಬ್ಧ ವಸಂತ ಋತು...ಈ ಲಾಕ್ಡೌನ್ ಮುಗಿದ ನಂತರ ನಾವು ಮತ್ತೊಮ್ಮೆ ಅಲ್ಲಿಗೆ ಹೋಗಬೇಕು..”



