32 ವರ್ಷದ ಗಣೇಶ್ ಸೆಪ್ಟೆಂಬರ್ ತಿಂಗಳ ಒಂದು ತಮ್ಮ ಮನೆಯಲ್ಲಿ ಕುಳಿತು ಮೊಬೈಲ್ ನೋಡುತ್ತಿರುವಾಗ ಅವರು ಸದಸ್ಯರಾಗಿದ್ದ ಸರ್ಕಾರೇತರ ಸಂಘಟನೆಯೊಂದರ ವಾಟ್ಸಾಪ್ ಗ್ರೂಪ್ ಒಂದರಲ್ಲಿ ಒಂದು ಮೆಸೇಜ್ ಕಾಣಿಸಿಕೊಂಡಿತು. ಅದರಲ್ಲಿ ರಾತೋ ನದಿಯ ನೀರು ಏರುತ್ತಿರುವ ಬಗ್ಗೆ ಎಚ್ಚರಿಕೆಯನ್ನು ಹಿಂದಿ ಭಾಷೆಯಲ್ಲಿ ನೀಡಲಾಗಿತ್ತು. ಆ ಕ್ಷಣದಲ್ಲಿ ಅವರಿಗೆ ಹೊಳೆದ ಸಂಗತಿಯೆಂದರೆ, ನನ್ನ ಕುಟುಂಬ ಹಾಗೂ ಮನೆಯಲ್ಲಿನ ಅಗತ್ಯ ವಸ್ತುಗಳನ್ನು ಕಾಪಾಡಿಕೊಳ್ಳಲು ತನಗೆ ಕೇವಲ ಎರಡು ಗಂಟೆಗಳ ಸಮಯವಿದೆ ಎನ್ನುವುದು.
ಆ ಸಮಯದಲ್ಲಿ ದಕ್ಷಿಣ ನೇಪಾಳದ ಟೆರಾಯ್ ಪ್ರದೇಶದ ತಗ್ಗು ಪ್ರದೇಶಗಳಲ್ಲಿ ವಿಪರೀತ ಮಳೆಯಾಗಿತ್ತು. ಈ ಪ್ರದೇಶವಿರುವುದು ಪೂರ್ವ ಭಾರತದ ರಾಜ್ಯವಾದ ಬಿಹಾರದ ಸೀತಾಮಡಿ ಜಿಲ್ಲೆಯ ಸುರಸಂದ್ ವಿಭಾಗದಲ್ಲಿರುವ ಗಣೇಶ್ ಅವರ ಹುಟ್ಟೂರಾದ ಸರ್ಖಂಡಿಯೋ ಬಿಠಾ ಎನ್ನುವಲ್ಲಿಂದ ಉತ್ತರಕ್ಕೆ ಸುಮಾರು 220 ಕಿಲೋಮೀಟರ್ ದೂರದಲ್ಲಿ.
ಇದೆಲ್ಲಾ ಆಗಿ ಎಂಟು ತಿಂಗಳುಗಳಾಗಿವೆ. ನಮ್ಮೊಂದಿಗೆ ಮಾತನಾಡುತ್ತಿದ್ದ 2025ರ ಮೇ ತಿಂಗಳ ಬಿರುಬಿಸಿಲಿನ ಸಂಜೆಯೊಂದರ ಹೊತ್ತು, ಗಣೇಶ್ ಮಾವಿನ ಮರದಡಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದರು. ಅವರು ಆ ದಿನ ತನ್ನ ಅವಳಿ ಮಕ್ಕಳು (ಒಬ್ಬ ಹುಡುಗ ಮತ್ತು ಒಬ್ಬ ಹುಡುಗಿ, ಇಬ್ಬರಿಗೂ 5 ವರ್ಷ ವಯಸ್ಸು), ತನ್ನ 28 ವರ್ಷದ ಪತ್ನಿ ನಗೀನಾ ದೇವಿ, ಎರಡು ಮೇಕೆಗಳು ಮತ್ತು ಸುಮಾರು ಒಂದು ಕ್ವಿಂಟಲ್ ಆಹಾರ ಧಾನ್ಯಗಳನ್ನು—ಗೋಧಿ, ಧಾನ್ಯಗಳು ಮತ್ತು ಅಕ್ಕಿ— ಪಕ್ಕದ ಮನೆಯವರ ಮಾಲಿಕತ್ವದ ಕಾಂಕ್ರೀಟ್ ಮನೆಗೆ ಗಡಿಬಿಡಿಯಲ್ಲಿ ಸಾಗಿಸಿದ್ದರು. ಈ ಮನೆಯನ್ನು ಪ್ರವಾಹದ ನೀರು ನುಗ್ಗದ ರೀತಿಯಲ್ಲಿ ಆರು ಅಡಿ ಎತ್ತರದ ಅಡಿಪಾಯ ನಿರ್ಮಿಸಿ ಕಟ್ಟಲಾಗಿದೆ.
ತೆರಾಯಿ ಬೆಟ್ಟಗಳ ನಡುವೆ ಹುಟ್ಟಿ ಹರಿಯುವ ರಾತೋ ಗಣೇಶ್ ಅವರ ಊರಿನ ಮೂಲಕ ಹರಿದು ಹೋಗುತ್ತದೆ. ಮೇಲಿನ ಪ್ರದೇಶದಲ್ಲಿ ಜೋರು ಮಳೆಯಾದರೆ ಆ ನೀರು ನದಿಯ ಮೂಲಕ ಸರ್ಖಂಡಿಯೊ ಬಿಥಾ ತಲುಪಲು ಸುಮಾರು ಎರಡು ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ.
ಗಣೇಶ್ ಮತ್ತು ಅವರ ಕುಟುಂಬವು ಒಂದೆರಡು ದಿನಗಳ ಕಾಲ ತಮ್ಮ ನೆರೆಮನೆಯಲ್ಲೇ ಉಳಿದಿದ್ದರು. ಈ ಆಹ್ವಾನಿತರಲ್ಲದ ಅತಿಥಿಗಳನ್ನು ಆ ಮನೆಯವರು ಸ್ವಾಗತಿಸಿದರೇ? “ಹೌದು, ಯಾಕಿಲ್ಲ? ಕಷ್ಟ ಅಂದ್ರೆ ಅಕ್ಕಪಕ್ಕದವರಲ್ಲದೆ ಇನ್ಯಾರು ಆಗ್ತಾರೆ?”
ಈ ನಡುವೆ ಅವರ ಹುಲ್ಲಿನ ಸೂರನ್ನು ಹೊಂದಿರುವ ಅವರ ಮಣ್ಣಿನ ಗುಡಿಸಲಿನಲ್ಲಿ 3 ಅಡಿಗಳಷ್ಟು ಎತ್ತರಕ್ಕೆ ಪ್ರವಾಹದ ನೀರು ನಿಂತಿತ್ತು. ನೆರೆ ನೀರು ಇಳಿದಂತೆ ನೆಲದಮೇಲೆಮತ್ತುಮಣ್ಣಿನಒಲೆಮತ್ತುಪಾತ್ರೆಗಳುಸೇರಿದಂತೆನೆಲದಮೇಲೆಇರಿಸಲಾದಎಲ್ಲದರಮೇಲೆ ಕೆಸರಿನಿಂದ ಉಂಟಾದ ದಪ್ಪ ಮಣ್ಣಿನ ಪದರವನ್ನು ಕಾಣಬಹುದಿತ್ತು. ಆ ಗುಡಿಸಲನ್ನು ಮತ್ತೆ ಮನುಷ್ಯರು ವಾಸಿಸುವಂತೆ ಮಾಡಲು ಅವರಿಗೆ ಒಂದು ವಾರ ಮತ್ತು 10,000 ($117) ರೂಪಾಯಿಗಳನ್ನು ವ್ಯಯಿಸಿದರು. ಇದು ದಿನಕ್ಕೆ 400 ರೂಪಾಯಿ ಸಂಪಾದಿಸುವ ಭೂರಹಿತ ಕಾರ್ಮಿಕ ಗಣೇಶ್ ಪಾಲಿಗೆ ಗಣನೀಯ ಮೊತ್ತವೇ ಹೌದು.

















