
SANGUR, PUNJAB
|THU, JUL 20, 2023
ರಣ್ ಪ್ರದೇಶದ ಹಾಡುಗಳು: ಕಚ್ಛೀ ಜಾನಪದ ಹಾಡುಗಳ ಸಂಗ್ರಹ
ಪೀಪಲ್ಸ್ ಆರ್ಕೈವ್ಸ್ ಆಫ್ ರೂರಲ್ ಇಂಡಿಯಾವು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಮ್ವಿಎಸ್) ಸಹಯೋಗದೊಂದಿಗೆ ಕಚ್ಛ್ ಪ್ರದೇಶದ ಜಾನಪದ ಹಾಡುಗಳ ಈ ಬಹುಮಾಧ್ಯಮ ಸಂಗ್ರಹವನ್ನು ಪ್ರಸ್ತುತ ಪಡಿಸುತ್ತಿದೆ. ಈ ಸಂಗ್ರಹದಲ್ಲಿರುವ 341 ಹಾಡುಗಳು ಪ್ರೀತಿ, ಹಂಬಲ, ಕಳೆದುಕೊಳ್ಳುವಿಕೆ, ಮದುವೆ, ಭಕ್ತಿ, ಮಾತೃಭೂಮಿ, ಲಿಂಗ ಜಾಗೃತಿ, ಪ್ರಜಾಸತ್ತಾತ್ಮಕ ಹಕ್ಕುಗಳ ವಿಷಯಗಳನ್ನು ಪ್ರತಿಬಿಂಬಿಸುತ್ತವೆ. ತಮ್ಮೊಳಗೆ ಅಡಗಿಸಿಕೊಂಡಿರುವ ರೂಪಕಗಳ ಮೂಲಕ ಈ ಹಾಡುಗಳು ಈ ಪ್ರದೇಶದ ಹೇರಳ ವೈವಿಧ್ಯತೆಯನ್ನೂ ಪ್ರಸ್ತುತಪಡಿಸುತ್ತವೆ. 305 ಸಂಗೀತ ವಾದ್ಯ ವಾದಕರು, ಗಾಯಕರ ಅನೌಪಚಾರಿಕ ತಂಡವು ಈ ಹಾಡುಗಳಿಗೆ ಜೀವ ತುಂಬಿದ್ದಾರೆ. ಈ ಹಾಡುಗಳು ಒಂದು ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದು ಇಲ್ಲಿನ ಮೌಖಿಕ ಪರಂಪರೆಯ ಸಿರಿವಂತಿಕೆಯನ್ನು ಪ್ರತಿನಿಧಿಸುತ್ತಿದ್ದವು. ಆದರೆ ಈಗ ಮೆಲ್ಲನೆ ಈ ಮರಳುಗಾಡಿನಿಂದ ದೂರವಾಗುತ್ತಿವೆ. ಈ ಕಾರಣಕ್ಕಾಗಿಯೇ ಅವುಗಳನ್ನು ಸಂಗ್ರಹಿಸಿಡುವುದು ಬಹಳ ಮುಖ್ಯವಾಗಿದೆ
Author
Translator
7. ಮರಳುಗಾಡಿನಲ್ಲೊಂದು ಪ್ರೇಮದ ಋತು
ಪ್ರೀತಿ, ಮಳೆ ಮತ್ತು ಹಂಬಲದ ಕುರಿತಾದ ಒಂದು ಕಚ್ಛಿ ಜಾನಪದ ಹಾಡು
6. ಹಿತ ಶತ್ರುಗಳು
ಇದೊಂದು ಕಚ್ಛ್ ಮೂಲದ ಯುವತಿಯೊಬ್ಬಳು ಮದುವೆಯ ನಂತರ ತನ್ನ ಕುಟುಂಬದಿಂದ ಬೇರ್ಪಟ್ಟ ದುಃಖವನ್ನು ವ್ಯಕ್ತಪಡಿಸುವ ಹಾಡು
5. ಕಛ್: ನಂಬಿಕೆ ಮತ್ತು ಸಹೋದರತ್ವದ ಮಿನಾರುಗಳು
ಮರುಭೂಮಿಯಿಂದ ಭಕ್ತಿಯ ಅನನ್ಯ ಪರಿಮಳವನ್ನು ತರುವ ಜಾನಪದ ಗೀತೆಯು ಸಂಗೀತ ಮತ್ತು ಅದರಾಚೆಗಿನ ಭಾವೈಕ್ಯತೆಯ ಸಾಂಸ್ಕೃತಿಕ ಆಚರಣೆಗಳಿಗೆ ಹೆಸರುವಾಸಿಯಾಗಿದೆ
4. ಅಂಗಳ, ಮನೆ, ಹಳ್ಳಿ
ಈ ಕಚ್ಛೀ ಹಾಡಿನಲ್ಲಿ ಮದುವೆಯ ನಂತರ ತನ್ನ ತವರನ್ನು ತೊರೆಯುತ್ತಿರುವ ಯುವತಿಯ ಭಾವನೆಗಳನ್ನು ಆಲಿಸಿ
3. ಮಹಿಳೆಯರ ಸ್ವಾತಂತ್ರ್ಯದ ಹಾಡು
ಈ ಜಾನಪದ ಗೀತೆಯಲ್ಲಿ ಕಛ್ ನ ಗ್ರಾಮೀಣ ಮಹಿಳೆಯರು ಆಸ್ತಿಯಲ್ಲಿ ಸಮಾನ ಪಾಲಿಗಾಗಿ ಧ್ವನಿ ಎತ್ತುತ್ತಿದ್ದಾರೆ
2. ಕಚ್ಛ್: ಒಂದು ಕೆರೆ ಮತ್ತು ಪ್ರೇಮಕತೆ
ಪರಿಯಲ್ಲಿ ಮೂಡಿಬರುತ್ತಿರುವ ಕಚ್ಛ್ ಜಾನಪದ ಗೀತೆಗಳ ಈ ಸರಣಿಯಲ್ಲಿ ಎರಡನೇ ಪದ್ಯವಾಗಿ ಭುಜ್ ಮೂಲದ ಈ ಪ್ರೇಮ ಮತ್ತು ಹಂಬಲದ ಕುರಿತಾದ ಗೀತೆಯನ್ನು ಪ್ರಸ್ತುತಪಡಿಸಲಾಗುತ್ತಿದೆ
1. ಕಚ್ನ ಸಿಹಿ ನೀರು: ರಣ್ನ ಜಾನಪದ
ಗುಜರಾತಿನ ವಾಯುವ್ಯ ಪ್ರದೇಶದ ಒಂದು ಜಾನಪದ ಹಾಡು, ಇದು ಕಚ್ನ ಜೀವನ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/songs-of-the-rann-archive-of-kutchi-folk-songs-kn







