“ಮೊದಲಿಗೆ ದೊಡ್ಡ ಸದ್ದು ಕೇಳಿಸಿತು. ಹೊಗೆ ಮೋಡ ಎದ್ದ ದಿಕ್ಕನ್ನು ಅನುಸರಿಸಿ ನಾನು ಅಲ್ಲಿಗೆ ಓಡಿದೆ. ಸ್ಫೋಟದ ತೀವ್ರತೆ ಕಾರ್ಖಾನೆಯ ಗೋಡೆಗಳು ಕುಸಿದಿದ್ದವು. ಆ ಅವಶೇಷಗಳ ನಡುವಿನಿಂದ ಲಿಂಗಸಾಮಿ ಓಡಿಬಂದರು. ಅರೆಬೆತ್ತಲೆಯಾಗಿದ್ದ ಅವರ ಮೈಮೇಲಿನ ಬಟ್ಟೆಗಳು ಸುಟ್ಟು ಕರಕಲಾಗಿದ್ದವು. ನಾವು ಅವರ ಚಿಕಿತ್ಸೆಗೆ ವ್ಯವಸ್ಥೆ ಮಾಡುತ್ತಿದ್ದರೆ, ಲಿಂಗಸಾಮಿ ʼನಾನಿನ್ನೂ ಬದುಕಿದ್ದೀನಾ?ʼ ಎಂದು ನಮ್ಮ ಬಳಿ ಕೇಳುತ್ತಿದ್ದರು. ಅವರಿಂದ ಸ್ಕೂಟರ್ ಹತ್ತಲು ಸಾಧ್ಯವಾಗದ ಕಾರಣ ತಳ್ಳುಗಾಡಿಯೊಂದರ ಮೇಲೆ ಮಲಗಿಸಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದೆವು” ಎಂದು ನೆನಪಿಸಿಕೊಂಡರು ಸ್ಥಳೀಯ ವರದಿಗಾರರಾದ ಮಾರೀಸ್ವರನ್. ಇವರು ಜುಲೈ 1, 2025 ರಂದುಸ್ಫೋಟ ಸಂಭವಿಸಿದ ಶಿವಕಾಸಿಯ ಪಟಾಕಿ ಕಾರ್ಖಾನೆಯಿಂದ ಕಾಲ್ನಡಿಗೆಯ ದೂರದಲ್ಲಿ ಅವರ ಮನೆಯಿದೆ.
ಮರುದಿನ ನಾನು ಆ ಸ್ಥಳಕ್ಕೆ ಮರಳಿದೆ. ಅಂದು ಕಾರ್ಖಾನೆಯ ಗೇಟುಗಳಿಗೆ ಬೀಗ ಹಾಕಲಾಗಿತ್ತು. ಕಾರ್ಖಾನೆಯ ಒಂದು ಘಟಕವನ್ನು ನೆಲಸಮ ಮಾಡಲಾಗಿತ್ತು. ಈ ಪ್ರದೇಶದ ಸುತ್ತಮುತ್ತ ರಸ್ತೆಯೂ ಉತ್ತಮ ಗುಣಮಟ್ಟದಲ್ಲಿರಲಿಲ್ಲ. ನನಗೆ ನನ್ನ ಸ್ಕೂಟರನ್ನು ಓಡಿಸುವುದು ಸಹ ಕಷ್ಟವಾಯಿತು. ಇಂತಹ ಪರಿಸ್ಥಿತಿಯಲ್ಲಿ ಇಲ್ಲಿಂದ 25 ಕಿಲೋಮೀಟರ್ ದೂರದಲ್ಲಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಎಷ್ಟು ಕಷ್ಟವಾಗಿರಬಹುದು ಎಂದು ನಾನು ಯೋಚಿಸತೊಡಗಿದೆ.




















