हम सब कटुए हैं
हम सब कटुए हैं, आमात्य!
अपने कटे हुए सर
कटी हुई बाहें
कटे हुए पैर
और क्षत विक्षत आत्माएं लेकर
हम भटक रहें हैं
हम कातर कबंध…
हम सब कटुए हैं, राजन!
हम उस मां के कटे हुए सर हैं
जिसे पातकी पितृत्व की मदिरा से चूर
पाखंडी परशु ने धड़ से अलग कर दिया था
हम अधूरे धड़ से
मां के कटे हुए शीश के कल्ले
माटी में बोते हैं…
हम सब कटुए हैं, राजपुरूष!
हम उस तापस कुमार के भूलुंठित शीश हैं
जिसे खोखली मर्यादा की म्यान से निकाली गई
और जाति दर्प से विष बुझाई तलवार ने
काट दिया था...
जिसे किसी ने नहीं सुना
और जो अट्टहास गूंजता है हमारी संस्कृति कंदराओं में
हम उस कटे हुए शीश के अट्टहास हैं...
हम सब कटुए हैं, राजदंडाधिकारियो!
हम युगों युगों से
उस युवती की रक्त स्रावित नाक हैं
जिसे पुरुष के अहम ने
जिसे राज पुरुष दंभ ने काट दिया था
हमारी नककटी सभ्यता उस युवती के रक्त में
स्नान कर रही है और डुबकी मार
अपना ईश्वर खोज रही है
हम सब कटुए हैं, चक्रवर्ती!
हम उस योद्धा का कटा हुआ अंगूठा हैं
जिसे एक कपटी गुरुता ने काट लिया था
और फिर लगातार कटते रहे अंगूठे
कटते रहे सर
कटती रहीं बांहे
कटती रही उंगलियां
देखो आक्षितिज बिखरे हैं कटे हुए अंगूठे|
देखो उन कटे हुए अंगूठों के निशान ले रही है मंत्रिपरिषद
देखो उन कटे हुए अंगूठों की माला पहन रहे हैं महामात्य
हम सब कटुए हैं, अभिजात्यों!
हम सब कटुए हैं और बहुमत में हैं
हम खड़े हैं इतिहास के राजपथों पर
अपनी कटी हुई पहचान हथेलियों पर सजाए
आप इस देश को छोड़ें सम्राट
अपने नवनीत वदन और संपूर्ण कलेवर के साथ
ये देश हमारा है
ये आर्यावर्त कटुओं का है
ನಾವೆಲ್ಲರೂ ಕಟುವೇಗಳು
ನಾವೆಲ್ಲರೂ ಕಟುವೇಗಳೇ, ಅಮಾತ್ಯರೇ!
ನಮ್ಮ ಕತ್ತರಿಸಲ್ಪಟ್ಟ ತಲೆ
ಕತ್ತರಿಸಲ್ಪಟ್ಟ ತೋಳುಗಳು
ಕತ್ತರಿಸಲ್ಪಟ್ಟ ಕಾಲುಗಳು
ಮತ್ತು ವಿರೂಪಗೊಂಡ ಆತ್ಮಗಳೊಂದಿಗೆ
ನಾವು ಅಲೆಯುತ್ತಿದ್ದೇವೆ
ರುಂಡವಿಲ್ಲದೆ ಅಲೆಯುತ್ತಿರುವ ಮಾಂಸದ ತುಂಡುಗಳು ರಾಜನ್!
ನಾವು ಪಿತೃತ್ವದ ಅಮಲೇರಿಸಿಕೊಂಡಿದ್ದ
ಪಾತಕಿಯ ಕೊಡಲಿಗೆ ತಲೆಯನ್ನು ಬಲಿ ಕೊಟ್ಟ
ಅಪೂರ್ಣ ದೇಹದ ತಾಯಿಗೆ ಹುಟ್ಟಿದ ಮಕ್ಕಳು ನಾವು
ನಮ್ಮ ತಾಯಿಯ ಕತ್ತರಿಸಿದ ತಲೆಯನ್ನು ನೆಲದಲ್ಲಿ ಬಿತ್ತುತ್ತಿದ್ದೇವೆ ನಾವು
ನಾವೆಲ್ಲರೂ ರುಂಡವಿಲ್ಲದೆ ಅಲೆಯುತ್ತಿರುವ ಮಾಂಸದ ತುಂಡುಗಳು ರಾಜ ಪುರುಷ!
ಪೊಳ್ಳು ಘನತೆಯ ಒರೆಯಿಂದ
ಹೊರತೆಗೆದ, ಜಾತಿಯ ವಿಷದಲ್ಲಿ ಅದ್ದಿದ
ಕತ್ತಿಗೆ ಬಲಿಯಾದ ಶೂದ್ರ ತಪಸ್ವಿಯ ಮಕ್ಕಳು ನಾವು…
ಅಂದು ನಡೆದ ಅನ್ಯಾಯವನ್ನು ಕೇಳಿದವರಿಲ್ಲ,
ಆ ಅಟ್ಟಹಾಸದ ನಗು ಈಗಲೂ ಪ್ರತಿಧ್ವನಿಸುತ್ತದೆ
ನಮ್ಮ ಸಂಸ್ಕೃತಿಯ ಗುಹೆಗಳಲ್ಲಿ
ಆ ಕಡಿದು ಬಿದ್ದ ತಲೆಯ ಅಟ್ಟಹಾಸವೇ ನಾವು
ಹೌದು ದೇಶದ ಆಡಳಿತದಾರರೇ
ನಾವು ರುಂಡವಿಲ್ಲದೆ ಅಲೆಯುತ್ತಿರುವ ಮಾಂಸದ ತುಂಡುಗಳು
ಗಂಡಿನ ಅಹಂ ಮತ್ತು
ರಾಜ ಪಟ್ಟದ ಮದ ಎನ್ನುವ ಕತ್ತಿಯಿಂದ
ಮೂಗು ಕತ್ತರಿಸಲ್ಪಟ್ಟ ಯುವತಿಯ
ಮುಖದಿಂದ ಕತ್ತರಿಸಿಬಿದ್ದ ಮೂಗುಗಳು ನಾವು.
ನಮ್ಮ ಕರಾಳ ನಾಗರಿಕತೆ ಮುಳುಗೇಳುತ್ತಿದೆ
ಆ ಹೆಣ್ಣಿನ ರಕ್ತದಲ್ಲಿ,
ಅದರಲ್ಲೇ ದೇವರುಗಳ ಹುಡುಕುತ್ತಾ
ಮುಳುಗೇಳುತ್ತಿದೆ ತಾನು.
ನಾವು ಕಪಟಿ ಗುರುವೊಬ್ಬನಿಂದ
ಕತ್ತರಿಸಲ್ಪಟ್ಟ ಯೋಧನೊಬ್ಬನ ಹೆಬ್ಬೆರಳು ನಾವು
ಅಂದಿನಿಂದ ಹೆಬ್ಬೆರಳುಗಳನ್ನು ಕತ್ತರಿಸುತ್ತಲೇ ಇದ್ದಾರೆ
ತಲೆಗಳನ್ನು ಕತ್ತರಿಸುತ್ತಿದ್ದಾರೆ
ಆ ಹೆಬ್ಬೆರಳುಗಳನ್ನು ಸಂಗ್ರಹಿಸುವ ಮಂತ್ರಿಮಂಡಲ ನೋಡಿ
ನೋಡಿ, ಆ ಹೆಬ್ಬೆರಳುಗಳನ್ನೇ ಮಾಲೆ ಮಾಡಿ ಧರಿಸಿದ್ದಾನೆ ಮಹಾಮಾತ್ಯ
ಹೌದು ನಾವೆಲ್ಲರೂ ಕತ್ತರಿಸಲ್ಪಟ್ಟವರು!
ಹೌದು ನಾವು ಕಟುವೇಗಳು, ನಾವು ಬಹುಸಂಖ್ಯಾತರು
ಇತಿಹಾಸದ ಬೀದಿಗಳಲ್ಲಿ ನಿಂತಿದ್ದೇವೆ ನಾವು
ನಮ್ಮ ಕತ್ತರಿಸಿ ಎಸೆಯಲ್ಪಟ್ಟ ಗುರುತುಗಳನ್ನು ಅಂಗೈಯಲ್ಲಿ ಹಿಡಿದು
ಈ ನಾಡನ್ನು ಬಿಟ್ಟು ತೊಲಗು ಸಾಮ್ರಾಟನೇ
ನಿನ್ನ ಬೆಣ್ಣೆಯಂತಹ ಮುಖ ಮತ್ತು ನಿನ್ನ ನಾಜೂಕಿನೊಂದಿಗೆ
ಇದು ನಮ್ಮ ದೇಶ
ಈ ಆರ್ಯಾವರ್ತ ಕಟುವೇಗಳದ್ದು