ಲಡ್ಕ್ಯ ದವಡೆ ಅವರು, “ಆದಿವಾಸಿಗಳು ಮುಂಬೈನಲ್ಲಿ ನೆಲೆಸಿದ್ದಾರೆ” ಎಂದು ತಿಳಿಸಿದರು. ಮುಂಬೈ ಉಪನಗದಲ್ಲಿ ಆಗಸ್ಟ್ 9, 2023ರ ವಿಶ್ವ ಆದಿವಾಸಿಗಳ ದಿನದಂದು ಆದಿವಾಸಿ ಕೊಪ್ಪಲಿನಿಂದ ಒಟ್ಟಾಗಿ ಬಂದ ಸುಮಾರು 3000 ಜನರನ್ನು ಕಂಡಾಗ ಈ ನೆಲಸಿಗರ ಸಂಖ್ಯೆ ಕಡಿಮೆಯಲ್ಲವೆಂಬುದು ಮನದಟ್ಟಾಗುತ್ತದೆ.
ಬೆಚ್ಚಗಿನ ಒಂದು ಮುಂಜಾನೆಯಲ್ಲಿ, ಮುಂಬೈನ ಆರೆ ಕಾಡಿನ ಪ್ರವೇಶದ್ವಾರ, ಗೋರೆಗಾಂವ್ನ ಚೆಕ್ ನಾಕಾದ ಬಳಿ ಆರೆ ಕಾಡು, ಸಂಜಯ್ ಗಾಂಧಿ ನ್ಯಾಷನಲ್ ಪಾರ್ಕ್, ಮುಲುಂದ್, ಭಂದುಪ್, ಕಂಡಿವಲಿ, ಗೊರೈ ಮತ್ತು ಮಧ್ ದ್ವೀಪದ ಆದಿವಾಸಿಗಳು ಒಟ್ಟುಗೂಡಿದಾಗ, ವಾತಾವರಣದಲ್ಲಿ ಹಬ್ಬದ ಸಂಭ್ರಮ ಮತ್ತು ಭರವಸೆಯು ಕಂಡುಬರುತ್ತಿತ್ತು.
ಉತ್ತರ ಮುಂಬೈನ R/Central ಮುನಿಸಿಪಲ್ ವಾರ್ಡಿನ ಗೊರೈನಲ್ಲಿ ಬೊರ್ಘಿಲ್ಪಡ ಪ್ರದೇಶದ ಲಡ್ಕ್ಯ, “ಇಂದು ನಮ್ಮ ಹಬ್ಬ” ಎಂದರು. ಮಹಿಳೆಯರು ಬಣ್ಣಬಣ್ಣದ ಸೀರೆಗಳನ್ನು ಉಟ್ಟಿದ್ದರು. ಕೆಲವು ಪುರುಷರು ಎಲೆ ಮತ್ತು ಅಡಕೆಯ ಹಾರಗಳನ್ನು ಧರಿಸಿದ್ದರು.
ಆದಿವಾಸಿಗಳು ಒಟ್ಟುಗೂಡಿ, ತಮ್ಮ ಹಕ್ಕನ್ನು ಪ್ರತಿಪಾದಿಸಲು ನೀಡಿದ ಒಕ್ಕೊರಲಿನ ಕರೆಯೇ ಈ ಅಂತರರಾಷ್ಟ್ರೀಯ ಹಬ್ಬ. ವರ್ಲಿ ಆದಿವಾಸಿ ಸಮುದಾಯದ ಲಡ್ಕ್ಯ, “ನಾವು ಬೆಟ್ಟಗಳು ಮತ್ತು ಕಾಡುಗಳನ್ನು ಪೋಷಿಸಿದ್ದೇವೆ. ಈಗ ಸರ್ಕಾರದ ಬಳಿ ಯಾವುದೇ ಭೂಮಿಯು ಉಳಿದಿಲ್ಲ. ಆದ್ದರಿಂದ ಅವರು ನಮ್ಮನ್ನು ನಮ್ಮ ಪಾಡಾಗಳಿಂದ ಒಕ್ಕಲೆಬ್ಬಿಸಲು ಬಯಸುತ್ತಾರೆ” ಎಂದರು. ಭೂಮಿಯ ದಾಖಲೆಗಳಿಲ್ಲದೆ ಇವರ ಹಕ್ಕುಗಳನ್ನು ಸಾಬೀತುಪಡಿಸುವುದು ಕಷ್ಟ. ಹೀಗಾಗಿ ಅವರು ಮನೆಗಳು, ವಾಡಿಗಳು ಮತ್ತು ಹೊಲಗಳಿರುವ ತಮ್ಮ ಪೂರ್ವಜರ ಭೂಮಿಯನ್ನು ತೊರೆಯುವ ಆಘಾತಕ್ಕೀಡಾಗಿದ್ದಾರೆ. ಓದಿ: Aarey Adivasis: ‘Then we lost this land of ours’
















