કચ્છી
કારે ઊનારે સૂડલા પખી ઘેલી ગુજરાત (૨)
આમૂં જાંભૂં ને રેણ મિઠી, સૂડલા પખી કચ્છડો બારે માસ
પગ પિરમાણે સૂડલા પખી કડલા ઘડાય (૨)
કાંભી એ તે હીરલા જડાઈયાં સૂડલા પખી કચ્છડો બારે માસ
કારે ઊનારે સૂડલા પખી ઘેલી ગુજરાત
હથ પિરમાણે સૂડલા પખી મુઠીયો ઘડાય (૨)
બંગલીએ તેં હીરલા જડાઈયાં, સૂડલા પખી કચ્છડો બારે માસ
કારે ઊનારે સૂડલા પખી ઘેલી ગુજરાત
ડોક પિરમાણે સૂડલા પખી હારલો ઘડાય (૨)
હાંસડી તે હીરલા જડાઈયાં સૂડલા પખી કચ્છડો બારે માસ
કારે ઊનારે સૂડલા પખી ઘેલી ગુજરાત
નક પિરમાણે સૂડલા પખી નથડી ઘડાય (૨)
ડામણી તે હીરલા જડાઈયાં સૂડલા પખી કચ્છડો બારે માસ
કારે ઊનારે સૂડલા પખી ઘેલી ગુજરાત
આમૂં જાભૂં ને રેણ મિઠી સૂડલા પખી કચ્છડો બારે માસ.(૨)
ಕನ್ನಡ
ಬಿರು ಬೇಸಿಗೆಯ ಉರಿಬಿಸಿಲ ದಿನಗಳಲಿ,
ಗುಜರಾತಿನ ಜನರ ಮನವ ಮಂತ್ರಮುಗ್ಧಗೊಳಿಸುವ ಹಸಿರು ಗಿಳಿಯೇ,
ವರ್ಷವಿಡೀ ನಲಿದು ಹಾರುತ್ತಾ ನೀನು,
ಮಾವು, ನೇರಳೆ, ಸಿಹಿ ಹಣ್ಣುಗಳ ತಿನ್ನುವೆ,
ಕಚ್ನ ಹಸಿರು ವರ್ಣದ ಗಿಳಿಯೇ!
ನನ್ನ ಕಾಲಿಗೆ ಕಡಗವ ತೊಡಿಸುವೆಯಾ,
ವಜ್ರ ಕೂರಿಸಿದ ಕಾಂಬಿಯ ಒಡವೆ ತಂದುಕೊಡುವೆಯಾ,
ಕಚ್ನ ಹಸಿರು ಬಣ್ಣದ ಗಿಳಿಯೇ,
ಬಿರು ಬೇಸಿಗೆಯ ಉರಿಬಿಸಿಲ ದಿನಗಳಲಿ,
ಗುಜರಾತಿನ ಜನರ ಮನವ ಮಂತ್ರಮುಗ್ಧಗೊಳಿಸುವ ಹಸಿರು ಗಿಳಿಯೇ
ನನ್ನ ಬೆರಳಿಗೆ ಮುತ್ತಿನ ಒಡವೆ ತೊಡಿಸು,
ವಜ್ರ ಕೂರಿಸಿದ ಬಂಗಾರದ ಬಳೆಯಿಂದ ಕೈ ಸಿಂಗರಿಸು,
ಕಚ್ನ ಹಸಿರು ಬಣ್ಣದ ಗಿಳಿಯೇ,
ಬಿರು ಬೇಸಿಗೆಯ ಉರಿಬಿಸಿಲ ದಿನಗಳಲಿ,
ಗುಜರಾತಿನ ಜನರ ಮನವ ಮಂತ್ರಮುಗ್ಧಗೊಳಿಸುವ ಹಸಿರು ಗಿಳಿಯೇ
ನನ್ನ ಕಂಠವ ಸಿಂಗರಿಸಲು ಹಾರವ ರೂಪಿಸು,
ಝಗಮಗಿಸುವ ರತ್ನದ ಹಂಸದಿಯ ತಂದು ಕೊಡು,
ಕಚ್ನ ಹಸಿರು ಬಣ್ಣದ ಗಿಳಿಯೇ,
ಬಿರು ಬೇಸಿಗೆಯ ಉರಿಬಿಸಿಲ ದಿನಗಳಲಿ,
ಗುಜರಾತಿನ ಜನರ ಮನವ ಮಂತ್ರಮುಗ್ಧಗೊಳಿಸುವ ಹಸಿರು ಗಿಳಿಯೇ
ನನ್ನ ಮೂಗಿಗೆ ನಥನಿಯ ತೊಡಿಸು,
ರತ್ನದ ದಾಮನಿಯಿಂದ ಹಣೆಯ ಸಿಂಗರಿಸು,
ಕಚ್ನ ಹಸಿರು ಬಣ್ಣದ ಗಿಳಿಯೇ,
ಬಿರು ಬೇಸಿಗೆಯ ಉರಿಬಿಸಿಲ ದಿನಗಳಲಿ,
ಗುಜರಾತಿನ ಜನರ ಮನವ ಮಂತ್ರಮುಗ್ಧಗೊಳಿಸುವ ಹಸಿರು ಗಿಳಿಯೇ
ವರ್ಷವಿಡೀ ನಲಿದು ಹಾರುತ್ತಾ ನೀನು,
ಮಾವು, ನೇರಳೆ, ಸಿಹಿ ಹಣ್ಣುಗಳ ತಿನ್ನುವೆ,
ಕಚ್ನ ಹಸಿರು ವರ್ಣದ ಗಿಳಿಯೇ!