ನಾನು ಏನನ್ನಾದರೂ ಹೇಳಿದರೆ ಕತ್ತಲು ಅದನ್ನು
ಸಹಿಸಲಾರದು
ಆದರೆ ಮೌನವಾಗುಳಿದರೆ ಬೆಳಕಿಲ್ಲದ ಹಣತೆ
ಏನೆಂದುಕೊಳ್ಳಬಹುದು?
ಸುರ್ಜಿತ್ ಪಾತರ್ (1945-2024) ಎಂದೂ ಮೂಕ ಪ್ರೇಕ್ಷಕರಾಗಿ ಉಳಿದವರಲ್ಲ. ಅವರ ಅತಿ ದೊಡ್ಡ ಭಯವೆಂದರೆ ತನ್ನೊಳಗೆ ಹೇಳದೆ ಉಳಿದ ಕವಿತೆಯೊಂದು ಉಳಿದು ಹೋಗಿಬಿಡುವುದೆನ್ನುವುದಾಗಿತ್ತು. ಹೀಗಾಗಿ ಅವರು ಸದಾ ದನಿಯೆತ್ತುತ್ತಿದ್ದರು. ಅವರ ಕವಿತೆಗಳು ಸೂಕ್ಷ್ಮ ದನಿಯಲ್ಲಿದ್ದರೆ, ಅವರ ಕೆಲಸಗಳು ತೀಕ್ಷ್ಣವಾಗಿರುತ್ತಿದ್ದವು. ಭಾರತದಲ್ಲಿ ಬೆಳೆಯುತ್ತಿರುವ ಕೋಮುವಾದೀಕರಣದ ಬಗ್ಗೆ ಸರ್ಕಾರದ ನಿರಾಸಕ್ತಿಯ ವಿರುದ್ಧ ಅವರು ತನ್ನ ಪ್ರತಿಭಟನೆಯ ಸಂಕೇತವಾಗಿ 2015ರಲ್ಲಿ ತನಗೆ ದೊರೆತಿದ್ದ ಪದ್ಮಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸಿದ್ದರು). ಅವರ ಕವಿತೆಗಳು ವಿಭಜನೆಯಿಂದ ಹೆಚ್ಚುತ್ತಿದ್ದ ಉಗ್ರಗಾಮಿತ್ವದ ಕುರಿತಾಗಿಯೂ ದನಿಯೆತ್ತಿದ್ದವು. ಇತ್ತೀಚೆಗೆ ರೈತ ಪ್ರತಿಭಟನೆಯ ಕುರಿತಾಗಿಯೂ ಬರೆಯುವ ಮೂಲಕ ಅವರು ಪಂಜಾಬಿನ ಪ್ರತಿ ಆಗುಹೋಗುಗಳ ಕುರಿತು ವಾಸ್ತವಿಕ ನೆಲೆಯಲ್ಲಿ ಬರೆಯುತ್ತಿದ್ದರು.
ದುರ್ಬಲರು, ವಲಸಿಗರು, ಕಾರ್ಮಿಕರು, ರೈತರು, ಮಹಿಳೆಯರು ಮತ್ತು ಮಹಿಳೆಯರ ಪರವಾಗಿ ದಿಟ್ಟವಾಗಿ ದನಿಯೆತ್ತಿ ಮಾತನಾಡುತ್ತಿದ್ದ ಜಲಂಧರ್ ಜಿಲ್ಲೆಯ ಪತ್ತಾರ್ ಕಲಾನ್ ಗ್ರಾಮದ ಈ ಕವಿಯ ಹಾಡುಗಳು ಅವರ ನಂತರವೂ ಜನರ ನಡುವೆ ಜೀವಂತವಾಗುಳಿದಿವೆ.
ಪ್ರಸ್ತುತ ರದ್ದುಗೊಂಡಿರುವ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆದಿದ್ದ ರೈತ ಪ್ರತಿಭಟನೆಯ ಸಮಯದಲ್ಲಿ ಅವರು ಬರೆದಿದ್ದ ʼಪ್ರಜಾಪ್ರಭುತ್ವದ ಉತ್ಸವʼ ಎನ್ನುವ ಕವಿತೆಯು ಸ್ಥಿತಿಸ್ಥಾಪಕತ್ವ ಹಾಗೂ ಭಿನ್ನಾಭಿಪ್ರಾಯದ ಕುರಿತು ಸಶಕ್ತ ದನಿಯಲ್ಲಿ ಮಾತನಾಡುತ್ತದೆ.
ਇਹ ਮੇਲਾ ਹੈ
ਕਵਿਤਾ
ਇਹ ਮੇਲਾ ਹੈ
ਹੈ ਜਿੱਥੋਂ ਤੱਕ ਨਜ਼ਰ ਜਾਂਦੀ
ਤੇ ਜਿੱਥੋਂ ਤੱਕ ਨਹੀਂ ਜਾਂਦੀ
ਇਹਦੇ ਵਿਚ ਲੋਕ ਸ਼ਾਮਲ ਨੇ
ਇਹਦੇ ਵਿਚ ਲੋਕ ਤੇ ਸੁਰਲੋਕ ਤੇ ਤ੍ਰੈਲੋਕ ਸ਼ਾਮਲ ਨੇ
ਇਹ ਮੇਲਾ ਹੈ
ਇਹਦੇ ਵਿਚ ਧਰਤ ਸ਼ਾਮਲ, ਬਿਰਖ, ਪਾਣੀ, ਪੌਣ ਸ਼ਾਮਲ ਨੇ
ਇਹਦੇ ਵਿਚ ਸਾਡੇ ਹਾਸੇ, ਹੰਝੂ, ਸਾਡੇ ਗੌਣ ਸ਼ਾਮਲ ਨੇ
ਤੇ ਤੈਨੂੰ ਕੁਝ ਪਤਾ ਹੀ ਨਈਂ ਇਹਦੇ ਵਿਚ ਕੌਣ ਸ਼ਾਮਲ ਨੇ
ਇਹਦੇ ਵਿਚ ਪੁਰਖਿਆਂ ਦਾ ਰਾਂਗਲਾ ਇਤਿਹਾਸ ਸ਼ਾਮਲ ਹੈ
ਇਹਦੇ ਵਿਚ ਲੋਕ—ਮਨ ਦਾ ਸਿਰਜਿਆ ਮਿਥਹਾਸ ਸ਼ਾਮਲ ਹੈ
ਇਹਦੇ ਵਿਚ ਸਿਦਕ ਸਾਡਾ, ਸਬਰ, ਸਾਡੀ ਆਸ ਸ਼ਾਮਲ ਹੈ
ਇਹਦੇ ਵਿਚ ਸ਼ਬਦ, ਸੁਰਤੀ , ਧੁਨ ਅਤੇ ਅਰਦਾਸ ਸ਼ਾਮਲ ਹੈ
ਤੇ ਤੈਨੂੰ ਕੁਝ ਪਤਾ ਹੀ ਨਈਂ ਇਹਦੇ ਵਿੱਚ ਕੌਣ ਸ਼ਾਮਲ ਨੇ
ਜੋ ਵਿਛੜੇ ਸਨ ਬਹੁਤ ਚਿਰਾ ਦੇ
ਤੇ ਸਾਰੇ ਸੋਚਦੇ ਸਨ
ਉਹ ਗਏ ਕਿੱਥੇ
ਉਹ ਸਾਡਾ ਹੌਂਸਲਾ, ਅਪਣੱਤ,
ਉਹ ਜ਼ਿੰਦਾਦਿਲੀ, ਪੌਰਖ, ਗੁਰਾਂ ਦੀ ਓਟ ਦਾ ਵਿਸ਼ਵਾਸ
ਭਲ਼ਾ ਮੋਏ ਤੇ ਵਿਛੜੇ ਕੌਣ ਮੇਲੇ
ਕਰੇ ਰਾਜ਼ੀ ਅਸਾਡਾ ਜੀਅ ਤੇ ਜਾਮਾ
ਗੁਰਾਂ ਦੀ ਮਿਹਰ ਹੋਈ
ਮੋਅਜਜ਼ਾ ਹੋਇਆ
ਉਹ ਸਾਰੇ ਮਿਲ਼ ਪਏ ਆ ਕੇ
ਸੀ ਬਿਰਥਾ ਜਾ ਰਿਹਾ ਜੀਵਨ
ਕਿ ਅੱਜ ਲੱਗਦਾ, ਜਨਮ ਹੋਇਆ ਸੁਹੇਲਾ ਹੈ
ਇਹ ਮੇਲਾ ਹੈ
ਇਹਦੇ ਵਿਚ ਵਰਤਮਾਨ, ਅਤੀਤ ਨਾਲ ਭਵਿੱਖ ਸ਼ਾਮਲ ਹੈ
ਇਹਦੇ ਵਿਚ ਹਿੰਦੂ ਮੁਸਲਮ, ਬੁੱਧ, ਜੈਨ ਤੇ ਸਿੱਖ ਸ਼ਾਮਲ ਹੈ
ਬੜਾ ਕੁਝ ਦਿਸ ਰਿਹਾ ਤੇ ਕਿੰਨਾ ਹੋਰ ਅਦਿੱਖ ਸ਼ਾਮਿਲ ਹੈ
ਇਹ ਮੇਲਾ ਹੈ
ਇਹ ਹੈ ਇੱਕ ਲਹਿਰ ਵੀ , ਸੰਘਰਸ਼ ਵੀ ਪਰ ਜਸ਼ਨ ਵੀ ਤਾਂ ਹੈ
ਇਹਦੇ ਵਿਚ ਰੋਹ ਹੈ ਸਾਡਾ, ਦਰਦ ਸਾਡਾ, ਟਸ਼ਨ ਵੀ ਤਾਂ ਹੈ
ਜੋ ਪੁੱਛੇਗਾ ਕਦੀ ਇਤਿਹਾਸ ਤੈਥੋਂ, ਪ੍ਰਸ਼ਨ ਵੀ ਤਾਂ ਹੈ
ਤੇ ਤੈਨੂੰ ਕੁਝ ਪਤਾ ਹੀ ਨਈ
ਇਹਦੇ ਵਿਚ ਕੌਣ ਸ਼ਾਮਿਲ ਨੇ
ਨਹੀਂ ਇਹ ਭੀੜ ਨਈਂ ਕੋਈ, ਇਹ ਰੂਹਦਾਰਾਂ ਦੀ ਸੰਗਤ ਹੈ
ਇਹ ਤੁਰਦੇ ਵਾਕ ਦੇ ਵਿਚ ਅਰਥ ਨੇ, ਸ਼ਬਦਾਂ ਦੀ ਪੰਗਤ ਹੈ
ਇਹ ਸ਼ੋਭਾ—ਯਾਤਰਾ ਤੋ ਵੱਖਰੀ ਹੈ ਯਾਤਰਾ ਕੋਈ
ਗੁਰਾਂ ਦੀ ਦੀਖਿਆ 'ਤੇ ਚੱਲ ਰਿਹਾ ਹੈ ਕਾਫ਼ਿਲਾ ਕੋਈ
ਇਹ ਮੈਂ ਨੂੰ ਛੋੜ ਆਪਾਂ ਤੇ ਅਸੀ ਵੱਲ ਜਾ ਰਿਹਾ ਕੋਈ
ਇਹਦੇ ਵਿਚ ਮੁੱਦਤਾਂ ਦੇ ਸਿੱਖੇ ਹੋਏ ਸਬਕ ਸ਼ਾਮਲ ਨੇ
ਇਹਦੇ ਵਿਚ ਸੂਫ਼ੀਆਂ ਫੱਕਰਾਂ ਦੇ ਚੌਦਾਂ ਤਬਕ ਸ਼ਾਮਲ ਨੇ
ਤੁਹਾਨੂੰ ਗੱਲ ਸੁਣਾਉਨਾਂ ਇਕ, ਬੜੀ ਭੋਲੀ ਤੇ ਮਨਮੋਹਣੀ
ਅਸਾਨੂੰ ਕਹਿਣ ਲੱਗੀ ਕੱਲ੍ਹ ਇਕ ਦਿੱਲੀ ਦੀ ਧੀ ਸੁਹਣੀ
ਤੁਸੀਂ ਜਦ ਮੁੜ ਗਏ ਏਥੋਂ, ਬੜੀ ਬੇਰੌਣਕੀ ਹੋਣੀ
ਬਹੁਤ ਹੋਣੀ ਏ ਟ੍ਰੈਫ਼ਿਕ ਪਰ, ਕੋਈ ਸੰਗਤ ਨਹੀਂ ਹੋਣੀ
ਇਹ ਲੰਗਰ ਛਕ ਰਹੀ ਤੇ ਵੰਡ ਰਹੀ ਪੰਗਤ ਨਹੀਂ ਹੋਣੀ
ਘਰਾਂ ਨੂੰ ਦੌੜਦੇ ਲੋਕਾਂ 'ਚ ਇਹ ਰੰਗਤ ਨਹੀਂ ਹੋਣੀ
ਅਸੀਂ ਫਿਰ ਕੀ ਕਰਾਂਗੇ
ਤਾਂ ਸਾਡੇ ਨੈਣ ਨਮ ਹੋ ਗਏ
ਇਹ ਕੈਸਾ ਨਿਹੁੰ ਨਵੇਲਾ ਹੈ
ਇਹ ਮੇਲਾ ਹੈ
ਤੁਸੀਂ ਪਰਤੋ ਘਰੀਂ, ਰਾਜ਼ੀ ਖੁਸ਼ੀ ,ਹੈ ਇਹ ਦੁਆ ਮੇਰੀ
ਤੁਸੀਂ ਜਿੱਤੋ ਇਹ ਬਾਜ਼ੀ ਸੱਚ ਦੀ, ਹੈ ਇਹ ਦੁਆ ਮੇਰੀ
ਤੁਸੀ ਪਰਤੋ ਤਾਂ ਧਰਤੀ ਲਈ ਨਵੀਂ ਤਕਦੀਰ ਹੋ ਕੇ ਹੁਣ
ਨਵੇਂ ਅਹਿਸਾਸ, ਸੱਜਰੀ ਸੋਚ ਤੇ ਤਦਬੀਰ ਹੋ ਕੇ ਹੁਣ
ਮੁਹੱਬਤ, ਸਾਦਗੀ, ਅਪਣੱਤ ਦੀ ਤਾਸੀਰ ਹੋ ਕੇ ਹੁਣ
ਇਹ ਇੱਛਰਾਂ ਮਾਂ
ਤੇ ਪੁੱਤ ਪੂਰਨ ਦੇ ਮੁੜ ਮਿਲਣੇ ਦਾ ਵੇਲਾ ਹੈ
ਇਹ ਮੇਲਾ ਹੈ
ਹੈ ਜਿੱਥੋਂ ਤੱਕ ਨਜ਼ਰ ਜਾਂਦੀ
ਤੇ ਜਿੱਥੋਂ ਤੱਕ ਨਹੀਂ ਜਾਂਦੀ
ਇਹਦੇ ਵਿਚ ਲੋਕ ਸ਼ਾਮਲ ਨੇ
ਇਹਦੇ ਵਿਚ ਲੋਕ ਤੇ ਸੁਰਲੋਕ ਤੇ ਤ੍ਰੈਲੋਕ ਸ਼ਾਮਿਲ ਨੇ
ਇਹ ਮੇਲਾ ਹੈ
ਇਹਦੇ ਵਿਚ ਧਰਤ ਸ਼ਾਮਿਲ, ਬਿਰਖ, ਪਾਣੀ, ਪੌਣ ਸ਼ਾਮਲ ਨੇ
ਇਹਦੇ ਵਿਚ ਸਾਡੇ ਹਾਸੇ, ਹੰਝੂ, ਸਾਡੇ ਗੌਣ ਸ਼ਾਮਲ ਨੇ
ਤੇ ਤੈਨੂੰ ਕੁਝ ਪਤਾ ਹੀ ਨਈਂ ਇਹਦੇ ਵਿਚ ਕੌਣ ਸ਼ਾਮਲ ਨੇ।
ಒಂದು ಜಾತ್ರೆ
ಕಣ್ಣಿಗೆಟುಕುವ ದೂರವನ್ನೂ ಮೀರಿ
ನೆರೆದಿದ್ದಾರೆ ಜನರಿಲ್ಲಿ.
ಭೂಮಿಯಷ್ಟೇ ಅಲ್ಲ,
ಮೂಲೋಕಗಳ ಜನ ಸೇರಿದ್ದಾರೆ ಇಲ್ಲಿ.
ಇದೊಂದು ಜನಜಾತ್ರೆ.
ನೆಲ, ಮರ, ಗಾಳಿ, ನೀರು,
ನಮ್ಮ ನಗು, ಕಣ್ಣೀರು,
ನಮ್ಮೆಲ್ಲ ಹಾಡುಗಳೂ ಇಲ್ಲಿವೆ.
ಹೀಗಿದ್ದರೂ ನೀವೆನ್ನುತ್ತೀರಿ,
ಯಾರೆಲ್ಲ ಇಲ್ಲಿ ಸೇರಿದ್ದಾರೆಂದು ತಿಳಿದಿಲ್ಲವೆಂದು!
ನಮ್ಮ ಪೂರ್ವಜರ ಉಜ್ವಲ ಇತಿಹಾಸ,
ಈ ನೆಲದ ಜನರ ಜಾನಪದ, ಐತಿಹ್ಯ, ಪುರಾಣಗಳು,
ನಮ್ಮ ಮಂತ್ರ, ನಮ್ಮ ತಾಳ್ಮೆ, ನಮ್ಮ ಭರವಸೆ,
ನಮ್ಮ ಪವಿತ್ರ ನುಡಿ, ಲೌಕಿಕ ಹಾಡುಗಳು,
ನಮ್ಮ ತಿಳುವಳಿಕೆ, ನಮ್ಮ ಪ್ರಾರ್ಥನೆಗಳೆಲ್ಲವೂ ಇಲ್ಲಿವೆ.
ಹೀಗಿದ್ದರೂ ನೀವೆನ್ನುತ್ತೀರಿ,
ನಿಮಗೇನೂ ಗೊತ್ತೇ ಇಲ್ಲವೆಂದು!
ಎಲ್ಲರನ್ನೂ ಬಾಧಿಸುವ ಸೋಜಿಗವೆಂದರೆ
ನಾವು ಕಳೆದುಕೊಂಡಿದ್ದೆಲ್ಲ ಹೋದದ್ದೆಲ್ಲಿ
ಎಂದು:
ನಮ್ಮ ಧೈರ್ಯ, ನಮ್ಮ ಆಪ್ತತೆ, ನಮ್ಮ ಸಂತೋಷ, ನಮ್ಮ ಕೆಚ್ಚು,
ಗುರುವಿನ ಬೋಧನೆಯಲ್ಲಿನ ನಮ್ಮ ನಂಬಿಕೆ?
ಹೋದದ್ದು ಇರುವುದನ್ನು ಒಂದಾಗಿಸುವವರಾರು?
ದೇಹ ಮತ್ತು ಆತ್ಮಗಳನ್ನು ಮುಕ್ತಗೊಳಿಸುವವರಾರು?
ಗುರುವಿನ ಕೃಪೆ ಮಾತ್ರವಲ್ಲವೇ.
ಇದೋ ನೋಡಿ ಪವಾಡ!
ಗುರಿಯಿಲ್ಲದ ಈವರೆಗಿನ ಅಯೋಗ್ಯ ಜೀವನ
ಈಗ ಮರಳಿ ಯೋಗ್ಯವೂ, ಸುಂದರವೂ ಆಗಿದೆ.
ಇದೊಂದು ಜಾತ್ರೆ
ನಮ್ಮ ಭೂತ, ವರ್ತಮಾನ ಮತ್ತು ಭವಿಷ್ಯ ಇಲ್ಲಿವೆ.
ಇಲ್ಲಿ ಹಿಂದೂ, ಮುಸ್ಲಿಮ, ಬೌದ್ಧ, ಜೈನ ಮತ್ತು ಸಿಖ್ ಜನರಿದ್ದಾರೆ.
ಇಲ್ಲಿದ್ದಾರೆ ನಿಮಗೆ ತೋರಿಬರುವ ಮತ್ತು
ನಿಮ್ಮ ದೃಷ್ಟಿಯನ್ನು ಮೀರಿದ ಸಂಗತಿಗಳು.
ಇದೊಂದು ಜಾತ್ರೆ
ಒಂದು ಅಲೆ, ಒಂದು ಹೋರಾಟ, ಒಂದು ಸಂಭ್ರಮ.
ಇಲ್ಲಿದೆ ಕೋಪ, ತಾಪ, ಸಂಘರ್ಷ;
ಅಲ್ಲದೇ ಇಲ್ಲಿದೆ ಅದೊಂದು ಪ್ರಶ್ನೆ…
ಒಂದಲ್ಲ ಒಂದು ದಿನ ಇತಿಹಾಸ ನಿಮ್ಮನ್ನು
ಕೇಳಲಿರುವ ಪ್ರಶ್ನೆ.
ಹೀಗಿದ್ದರೂ
ನಿಮಗೆ ತಿಳಿದೇ ಇಲ್ಲ ಇಲ್ಲಿ ಯಾರೆಲ್ಲ ನೆರೆದಿದ್ದಾರೆಂದು!
ಇದೊಂದು ಜನಜಂಗುಳಿಯಲ್ಲ, ಬದಲಿಗೆ ಆತ್ಮಗಳ ಪರಿಷತ್ತು.
ಚಲನಶೀಲ ವಾಕ್ಯದ ಅರ್ಥ ಇದು,
ಪದಗಳ ಕ್ರಮಬದ್ಧತೆ ಇದು. ಹೌದು, ಇದೊಂದು ರೀತಿಯ ಯಾತ್ರೆ,
ಮೆರವಣಿಗೆ, ಆದರೆ ಹಬ್ಬದಂತಲ್ಲ.
ಇದು ಅನುಯಾಯಿಗಳ,
ಗುರುದೀಕ್ಷೆ ಪಡೆದ ಶಿಷ್ಯರ ಜಾತ್ರೆ.
'ನಾನು', 'ನನ್ನದು’ಗಳ ತೊರೆದು
'ನಾವು ನಾಗರಿಕರು' ಎನ್ನುವತ್ತ ಸಾಗುತ್ತಿರುವ ಜನತೆಯ ಜಾತ್ರೆ.
ಯುಗಯುಗಾಂತರಗಳುದ್ದ ನಾವು ಕಲಿತ
ಪಾಠಗಳಿವೆ ಇಲ್ಲಿ.
ಸೂಫಿ ಫಕೀರರ ಹದಿನಾಲ್ಕು ಆದೇಶಗಳಿವೆ
ಇಲ್ಲಿ.
ನಿಮಗೊಂದು ಮುಗ್ಧ, ಹೃದಯಸ್ಪರ್ಶಿ ಕತೆ ಹೇಳುವೆ.
ನಿನ್ನೆ ದಿಲ್ಲಿಯಿಂದ ಯುವತಿಯೊಬ್ಬಳು
ಕರೆ ಮಾಡಿ,
ನೀವು ಮನೆಗೆ ಹಿಂದಿರುಗಿದಾಗ
ಈ ಸ್ಥಳವು ಪಾಳುಬೀಳಲಿದೆ ಎಂದಳು.
ಸಂಚಾರದ ಅವ್ಯವಸ್ಥೆ ಇರುತ್ತದೆ ಆದರೆ
ಸೌಹಾರ್ದತೆ ಇರದು.
ದಾಸೋಹ ಸೇವೆಸಲ್ಲಿಸುವ ಜನರ ಸಾಲುಗಳು
ಇರುವುದಿಲ್ಲ.
ಮನೆ ತಲುಪಲು ಓಡಾಡುತ್ತಿರುವವರ ಮುಖದಲ್ಲಿ
ಯಾವುದೇ ಮೋಹಕತೆ ಇರುವುದಿಲ್ಲ.
ಏನು ಮಾಡುತ್ತೇವೆ ನಾವಾಗ?
ತೇವಗೊಳ್ಳುವವು ನಮ್ಮ ಕಂಗಳು;
ಎಂತಹ ಪ್ರೀತಿ ಇದು! ಎಂತಹ ಜಾತ್ರೆ!
ನೀವೆಲ್ಲ ಮರಳುವಂತಾಗಲಿ ಮನೆಗೆ ಹರುಷದಿಂದ.
ಈ ಹೋರಾಟದಲ್ಲಿ ಸತ್ಯ ಮತ್ತು ಗೆಲುವು
ನಿಮ್ಮದಾಗಲಿ.
ತರುವಂತಾಗಲಿ ಈ ಭೂಮಿಯಲ್ಲಿ ಹೊಸ ಭವಿಷ್ಯವನ್ನು
ನೀವು,
ಹೊಸ ಭಾವನೆ, ಹೊಸ ದೃಷ್ಟಿಕೋನ, ಹೊಸ ಪರಿಹಾರ,
ಪ್ರೀತಿ, ಸರಳತೆ ಮತ್ತು ಸಾಮರಸ್ಯದ ಸಂಕೇತ.
ತಾಯಿ ಮಕ್ಕಳು ಮತ್ತೆ ಒಂದಾಗುವ ಸಮಯ
ಬರಲೆಂದು ಆಶಿಸುವೆ ನಾನು.
ಇದೋ ಇದೊಂದು ಜಾತ್ರೆ.
ಕಣ್ಣಿಗೆಟುಕುವ ದೂರವನ್ನೂ ಮೀರಿ
ನೆರೆದಿದ್ದಾರೆ ಜನರಿಲ್ಲಿ.
ಭೂಮಿಯಷ್ಟೇ ಅಲ್ಲ, ಮೂಲೋಕಗಳ ಜನ
ಸೇರಿದ್ದಾರೆ ಇಲ್ಲಿ.
ಇದೊಂದು ಜನಜಾತ್ರೆ.
ಡಾ. ಸುರ್ಜಿತ್ ಸಿಂಗ್ ಮತ್ತು ಸಂಶೋಧನಾ ವಿದ್ವಾಂಸ ಅಮೀನ್ ಅಮಿತೋಜ್ ಅವರು ಈ ಕವಿತೆಯನ್ನು ಪರಿಯಲ್ಲಿ ಪ್ರಕಟಿಸುವ ನಿಟ್ಟಿನಲ್ಲಿ ನೀಡಿದ ಅಮೂಲ್ಯ ಕೊಡುಗೆಗಾಗಿ ನಾವು ಧನ್ಯವಾದಗಳನ್ನು ಅರ್ಪಿಸುತ್ತೇವೆ, ಈ ಪ್ರಕಟಣೆ ಅವರ ಸಹಾಯವಿಲ್ಲದೆ ಸಾಧ್ಯವಾಗುತ್ತಿರಲಿಲ್ಲ.
ಅನುವಾದ: ಕಮಲಾಕರ ಕಡವೆ