“ಇವು ಕೇವಲ ಚರ್ಮದ ವಸ್ತುಗಳಲ್ಲ. ಇವರು ನಮ್ಮ ದೇವಾನುದೇವತೆಗಳು. ಇವು ದೈವಿಕ ಶಕ್ತಿಗಳ ಮೂರ್ತರೂಪಗಳು,” ಎಂದು ತಮ್ಮ ಮುಂದೆ  ಹರಡಲಾಗಿರುವ ಬೊಂಬೆಗಳನ್ನು ನೋಡುತ್ತಾ ರಾಮಚಂದ್ರ ಪುಲವರ್ ಹೇಳುತ್ತಾರೆ. ಅವರ ಮುಂದೆ ಇಡಲಾದ ಸಂಕೀರ್ಣವಾದ ಕೆತ್ತನೆಯುಳ್ಳ ಆಕೃತಿಗಳನ್ನು ಕೇರಳದ ಮಲಬಾರ್‌ನ ದಕ್ಷಿಣ ಕರಾವಳಿ ಪ್ರದೇಶದ ಜನಪ್ರಿಯ ಕಲಾಪ್ರಕಾರವಾದ ತೋಳ್ಪಾವಕೂತ್ತು ಬೊಂಬೆಯಾಟದಲ್ಲಿ ಬಳಸಲಾಗುತ್ತದೆ.

ಈ ಬೊಂಬೆಗಳನ್ನು ಚಕ್ಕಿಲಿಯನ್ ನಂತಹ ನಿರ್ದಿಷ್ಟ ಸಮುದಾಯಗಳು ಸಾಂಪ್ರದಾಯಿಕವಾಗಿ ತಯಾರಿಸುತ್ತವೆ. ಈ ಕಲೆಗಿದ್ದ ಜನಪ್ರಿಯತೆ ಕಡಿಮೆಯಾಗುತ್ತಿದ್ದಂತೆ ಈ ಸಮುದಾಯದವರೂ ಇದರಿಂದ ದೂರ ಸರಿಯುತ್ತಿದ್ದಾರೆ. ಆದ್ದರಿಂದ ಕೃಷ್ಣನ್‌ಕುಟ್ಟಿ ಪುಲವರ್ ಅವರು ಈ ಕಲೆಯನ್ನು ಜೀವಂತವಾಗಿಡಲು ಬೊಂಬೆ ತಯಾರಿಸುವ ಕೌಶಲವನ್ನು ಇತರರಿಗೆ ಕಲಿಸುವ ಕೆಲಸಕ್ಕೆ ಕೈಹಾಕಿದ್ದಾರೆ. ಅವರ ಮಗ ರಾಮಚಂದ್ರ ಒಂದು ಹೆಜ್ಜೆ ಮುಂದೆ ಹೋಗಿ ತಮ್ಮ ಕುಟುಂಬ ಮತ್ತು ನೆರೆಹೊರೆಯ ಮಹಿಳೆಯರಿಗೆ ಬೊಂಬೆ ತಯಾರಿಸುವ ತರಬೇತಿ ನೀಡುತ್ತಿದ್ದಾರೆ. ರಾಜಲಕ್ಷ್ಮಿ, ರಜಿತಾ ಮತ್ತು ಅಶ್ವತಿ - ಇವರು ಪುರುಷರ ಕೆಲಸಕ್ಕಷ್ಟೇ ಮೀಸಲಾಗಿರುವ ದೇವಾಲಯದ ಆವರಣದಲ್ಲಿ ಕೆಲಸ ಮಾಡುವ ಮಹಿಳಾ ಬೊಂಬೆಯಾಟಗಾರರು.

ಈ ಬೊಂಬೆಗಳನ್ನು ಅದರ ಕೆಲಸ ಮಾಡುವವರು ಮಾತ್ರವಲ್ಲ, ಪ್ರದರ್ಶನಕ್ಕೆ ಬರುವ ಭಕ್ತರು ಕೂಡ ದೈವಿಕ ಶಕ್ತಿಗಳೆಂದು ನಂಬುತ್ತಾರೆ. ಇವುಗಳನ್ನು ಎಮ್ಮೆ ಮತ್ತು ಮೇಕೆ ಚರ್ಮವನ್ನು ಬಳಸಿ ತಯಾರಿಸಲಾಗಿದೆ. ತೊಗಲು ಗೊಂಬೆಯಾಟಗಾರರು ಚರ್ಮದ ಮೇಲೆ ಚಿತ್ತಾರಗಳನ್ನು ಬಹಳ ನಾಜೂಕಿನಿಂದ ಚಿತ್ರಿಸುವ ಮೂಲಕ ಈ ಕೆಲಸವನ್ನು ಪ್ರಾರಂಭಿಸುತ್ತಾರೆ. ಕೆತ್ತನೆ ಕೆಲಸಗಳಿಗೆ ಉಳಿ ಮತ್ತು ಪಂಚ್‌ಗಳಂತಹ ವಿಶೇಷ ಸಾಧನಗಳನ್ನು ಬಳಸುತ್ತಾರೆ. “ನುರಿತ ಕಮ್ಮಾರರು ಕಡಿಮೆಯಾಗಿರುವುದರಿಂದ ಇಂತಹ ಸಾಧನಗಳು ಸಿಗುವುದು ಬಹಳ ಕಷ್ಟವಾಗಿ ಹೋಗಿದೆ,” ಎಂದು ರಾಮಚಂದ್ರ ಅವರ ಪುತ್ರ ರಾಜೀವ್ ಪುಲವರ್ ಹೇಳುತ್ತಾರೆ.

ಸಾಕ್ಷ್ಯಚಿತ್ರ ನೋಡಿ: ಪಾಲಕ್ಕಾಡಿನ ಗೊಂಬೆ ತಯಾರಕರು

ಬೊಂಬೆಗಳ ಮೇಲೆ ಬಿಡಿಸುವ ವಿನ್ಯಾಸಗಳು ಪ್ರಕೃತಿ ಮತ್ತು ಪುರಾಣಗಳಿಂದ ಸಮ್ಮಿಲಿತವಾಗಿದೆ. ನಿಸರ್ಗ ಸೌಂದರ್ಯಕ್ಕೆ ಗೌರವ ಸಲ್ಲಿಸಲು ಸಲುವಾಗಿ ಅಕ್ಕಿ ಧಾನ್ಯಗಳು, ಚಂದ್ರ ಮತ್ತು ಸೂರ್ಯನಿಂದ ಪ್ರಭಾವಿತವಾದ ವಿನ್ಯಾಸಗಳನ್ನು ಚಿತ್ರಿಸಲಾಗುತ್ತದೆ. ಭಗವಾನ್ ಶಿವನ ಡಮರುಗ ಮತ್ತು ಗೊಂಬೆಯಾಟದ ಸಂದರ್ಭದಲ್ಲಿ ಹಾಡುವ ಪೌರಾಣಿಕ ಕಥೆಗಳಿಂದ ಪ್ರೇರಿತವಾದ ನಿರ್ದಿಷ್ಟ ವೇಷಭೂಷಣ ಮಾದರಿಗಳನ್ನು ಬಳಸಲಾಗುತ್ತದೆ.  ಓದಿ: ತೋಳ್‌ಪಾವಕೂತ್‌ ಗೊಂಬೆಯಾಟ: ಮಲಬಾರಿನ ಸೌಹಾರ್ದತೆಯ ಪ್ರತೀಕ .

ಸೂತ್ರದಾರರು ಬೊಂಬೆಗಳಿಗೆ ಬಣ್ಣ ಹಚ್ಚಲು ನೈಸರ್ಗಿಕ ಬಣ್ಣಗಳನ್ನು ಇಂದಿಗೂ ಬಳಸುತ್ತಿದ್ದಾರೆ. ಆದರೂ ಈ ಕೆಲಸ ತುಂಬಾ ತ್ರಾಸದಾಯಕ. ಆಧುನಿಕ ಅವಶ್ಯಕತೆಗಳಿಗೆ ಹೊಂದಿಕೊಳ್ಳಲು ಈಗ ಅಕ್ರಿಲಿಕ್ ಬಣ್ಣಗಳನ್ನು ಬಳಸಲು ಆರಂಭಿಸಿದ್ದಾರೆ. ಈ ಪ್ರಯೋಗವನ್ನು ವಿಶೇಷವಾಗಿ ಮೇಕೆ ಚರ್ಮದ ಮೇಲೆ ವಿನ್ಯಾಸಗಳನ್ನು ಬಿಡಿಸುವಾಗ ಮಾಡಲಾಗಿದೆ.

ತೋಳ್ಪಾವಕೂತ್ತು ಕೇರಳದ ಮಲಬಾರ್ ಪ್ರದೇಶದ ಬಹುಸಂಸ್ಕೃತಿಯ ಮತ್ತು ಎಲ್ಲರನ್ನೂ ಒಳಗೊಳ್ಳುವ ಸಂಪ್ರದಾಯಗಳನ್ನು ಪ್ರತಿನಿಧಿಸುತ್ತದೆ. ವೈವಿಧ್ಯಮಯ ಬೊಂಬೆಗಳಿಂದಾಗಿ ಹೃದಯ ತುಂಬಿಬರುವ ಒಂದು ಟ್ರೆಂಡನ್ನು ಸೃಷ್ಟಿಯಾಗಿದೆ.

ಈ ಕಥೆಯನ್ನು ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ನ ಫೆಲೋಶಿಪ್ ಅಡಿಯಲ್ಲಿ ಮಾಡಲಾಗಿದೆ.

ಅನುವಾದಕರು: ಚರಣ್‌ ಐವರ್ನಾಡು

Sangeeth Sankar

سنگیت شنکر، آئی ڈی سی اسکول آف ڈیزائن کے ریسرچ اسکالر ہیں۔ نسل نگاری سے متعلق اپنی تحقیق کے تحت وہ کیرالہ میں سایہ کٹھ پتلی کی تبدیل ہوتی روایت کی چھان بین کر رہے ہیں۔ سنگیت کو ۲۰۲۲ میں ایم ایم ایف-پاری فیلوشپ ملی تھی۔

کے ذریعہ دیگر اسٹوریز Sangeeth Sankar
Text Editor : Archana Shukla

ارچنا شکلا، پیپلز آرکائیو آف رورل انڈیا کی کانٹینٹ ایڈیٹر ہیں۔ وہ پبلشنگ ٹیم کے ساتھ کام کرتی ہیں۔

کے ذریعہ دیگر اسٹوریز Archana Shukla
Translator : Charan Aivarnad

Charan Aivarnad is a poet and a writer. He can be reached at: [email protected]

کے ذریعہ دیگر اسٹوریز Charan Aivarnad