ಹೆಸರು: ವಾಜೆಸಿಂಗ್ ಪಾರ್ಗಿ. ಜನನ: 1963. ಗ್ರಾಮ: ಇಟಾವಾ. ಜಿಲ್ಲೆ: ದಾಹೋಡ್, ಗುಜರಾತ್. ಸಮುದಾಯ: ಆದಿವಾಸಿ ಪಂಚಮಹಾಲಿ ಭಿಲ್. ಕುಟುಂಬ ಸದಸ್ಯರು: ತಂದೆ, ಚಿಸ್ಕಾ ಭಾಯ್. ತಾಯಿ, ಚತುರಾ ಬೆನ್. ಮತ್ತು ಐದು ಒಡಹುಟ್ಟಿದವರು, ಅವರಲ್ಲಿ ವಾಜೆಸಿಂಗ್ ಹಿರಿಯರು. ಕುಟುಂಬದ ಜೀವನೋಪಾಯ: ಕೃಷಿ ಕೂಲಿ.

ಬಡ ಆದಿವಾಸಿ ಕುಟುಂಬದಲ್ಲಿ ಜನಿಸಿದ ಅವರ ಪಿತ್ರಾರ್ಜಿತ ಆಸ್ತಿಯೆಂದರೆ, ವಾಜೇಸಿಂಗ್ ಅವರ ಸ್ವಂತ ಮಾತುಗಳಲ್ಲಿ: 'ಅವರ ತಾಯಿಯ ಗರ್ಭದ ಕತ್ತಲೆ'. 'ಒಂಟಿತನದಿಂದ ಕೂಡಿದ ಮರುಭೂಮಿ'. 'ಬೆವರು ತುಂಬಿದ ಬಾವಿ'. ಅಲ್ಲದೆ, 'ಹಸಿವು', 'ಕತ್ತಲೆಯ ನೆನಪುಗಳು', ಮತ್ತು 'ಮಿಣುಕು ಹುಳುಗಳ ಬೆಳಕು'. ಅವರಿಗೆ ಹುಟ್ಟಿನಿಂದಲೇ ಪದಗಳ ಮೇಲೆ ಪ್ರೀತಿಯಾಗಿತ್ತು.

ಒಮ್ಮೆ, ಅವರು ಯುವಕರಾಗಿದ್ದ ಸಂದರ್ಭದಲ್ಲಿ ಜಗಳದ ಸಂದರ್ಭದಲ್ಲಿ ಆಕಸ್ಮಿಕವಾಗಿ ತೂರಿ ಬಂದ ಗುಂಡು ಅವರ ದವಡೆ ಮತ್ತು ಕುತ್ತಿಗೆಗೆ ತಗುಲಿತು. ಏಳು ವರ್ಷಗಳ ಚಿಕಿತ್ಸೆ, 14 ಶಸ್ತ್ರಚಿಕಿತ್ಸೆಗಳು ಹಾಗೂ ಭರಿಸಲಾಗದ ಸಾಲದ ನಂತರವೂ ಅವರು ಚೇತರಿಸಿಕೊಳ್ಳಲಾಗದ ಗಾಯದಿಂದ ಬಳಲಿದರು. ಜೊತೆಗೆ ಅವರ ದನಿಯೂ ಸದ್ದು ಕಳೆದುಕೊಂಡಿತ್ತು. ಅದು ಅವರ ಪಾಲಿಗೆ ಎರಡೆರಡು ಆಘಾತವಾಗಿತ್ತು. ದನಿಯೇ ಇಲ್ಲದ ಸಮುದಾಯದಲ್ಲಿ ಜನಿಸಿದ ಅವರಿಗೆ, ವೈಯಕ್ತಿಕ ಉಡುಗೊರೆಯಾಗಿ ದೊರಕಿದ್ದ ದನಿಯೂ ಗಂಭೀರವಾಗಿ ಹಾನಿಗೀಡಾಗಿತ್ತು. ಆದರೆ ಅವರ ಕಣ್ಣುಗಳು ಮೊದಲಿನಷ್ಟೇ ತೀಕ್ಷ್ಣವಾಗಿ ಉಳಿದುಕೊಂಡಿದ್ದವು. ಇತ್ತೀಚಿನ ವರ್ಷಗಳಲ್ಲಿ ಗುಜರಾತಿ ಸಾಹಿತ್ಯ ಲೋಕ ಕಂಡ ಅತ್ಯುತ್ತಮ ಪ್ರೂಫ್‌ ರೀಡರ್‌ ಎಂದರೆ ಅದು ವಾಜೇಸಿಂಗ್.‌ ಆದರೆ ಅವರ ಬರಹಗಳಿಗೆ ಸಿಗಬೇಕಾದಷ್ಟು ಗುರುತಿಸುವಿಕೆ ಸಿಗಲೇ ಇಲ್ಲ.

ಈ ಪದ್ಯವನ್ನು ಪಂಚಮಹಾಲಿ ಭಿಲಿಯಿಂದ ಇಂಗ್ಲಿಷ್‌ ಭಾಷೆಗೆ ಪ್ರತಿಷ್ಠಾ ಪಾಂಡ್ಯ ಅನುವಾದಿಸಿರುತ್ತಾರೆ ಮತ್ತು ಈ ಪದ್ಯವನ್ನು ಇಂಗ್ಲಿಷ್‌ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಲಾಗಿದೆ

ಪದ್ಯದ ಪಂಚಮಹಾಲಿ ಭಿಲಿ ಅವತರಣಿಕೆಯ ವಾಚನವನ್ನು ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಆಲಿಸಿ

ಪದ್ಯದ ಇಂಗ್ಲಿಷ್ ಅವತರಣಿಕೆಯ ವಾಚನವನ್ನು ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಆಲಿಸಿ

મરવું હમુન ગમતું નથ

ખાહડા જેતરું પેટ ભરતાં ભરતાં
ડુંગોર ઘહાઈ ગ્યા
કોતેડાં હુકાઈ ગ્યાં
વગડો થાઈ ગ્યો પાદોર
હૂંકળવાના અન કરહાટવાના દંન
ઊડી ગ્યા ઊંસે વાદળાંમાં
અન વાંહળીમાં ફૂંકવા જેતરી
રઈં નીં ફોહબાંમાં હવા
તેર મેલ્યું હમુઈ ગામ
અન લીદો દેહવટો

પારકા દેહમાં
ગંડિયાં શેરમાં
કોઈ નીં હમારું બેલી
શેરમાં તો ર્‌યાં હમું વહવાયાં

હમું કાંક ગાડી નીં દીઈં શેરમાં
વગડાવ મૂળિયાં
એવી સમકમાં શેરના લોકુએ
હમારી હારું રેવા નીં દીદી
પૉગ મેલવા જેતરી ભૂંય

કસકડાના ઓડામાં
હિયાળે ઠૂંઠવાતા ર્‌યા
ઉનાળે હમહમતા ર્‌યા
સુમાહે લદબદતા ર્‌યા
પણ મળ્યો નીં હમુન
હમારા બાંદેલા બંગલામાં આસરો

નાકાં પર
ઘેટાં-બૉકડાંની જેમ બોલાય
હમારી બોલી
અન વેસાઈં હમું થોડાંક દામમાં

વાંહા પાસળ મરાતો
મામાનો લંગોટિયાનો તાનો
સટકાવે વીંસુની જીમ
અન સડે સૂટલીઈં ઝાળ

રોજના રોજ હડહડ થાવા કરતાં
હમહમીને સમો કાડવા કરતાં
થાય કી
સોડી દીઈં આ નરક
અન મેલી દીઈં પાસા
ગામના ખોળે માથું
પણ હમુન ડહી લેવા
ગામમાં ફૂંફાડા મારે સે
ભૂખમરાનો ભોરિંગ
અન
મરવું હમુન ગમતું નથ.

ನನಗೆ ಸಾಯುವುದು ಇಷ್ಟವಿಲ್ಲ

ಬೂಟಿನಗಲದ ಹೊಟ್ಟೆ ತುಂಬಿಸುವುದರಲ್ಲಿ
ಬೆಟ್ಟಗಳು ಕರಗಿದವು
ಹೊಳೆ, ಹಳ್ಳಗಳು ಬತ್ತಿದವು
ಹಳ್ಳಿಗಳು ಕಾಡಿನ ಮೇಲೆ ದಾಳಿಯೆಸಗಿದವು
ಕಾಡಿನ ಗರ್ಜನೆ, ಸಂಭ್ರಮ ಇಲ್ಲವಾದವು
ಈಗ ನನ್ನೊಳಗೆ
ಕೊಳಲನೂದಲು ಬೇಕಿರುವಷ್ಟು ಗಾಳಿಗೂ ತತ್ವಾರ
ಒಂದು ದಿನ ಈ ಹೊಟ್ಟೆ ತುಂಬಿಸಲೆಂದು
ಹಳ್ಳಿ ಬಿಟ್ಟು ನಗರಕ್ಕೆ ನಡೆದೆವು

ಯಾವುದೋ ದೇಶದ
ಯಾವುದೋ ಹುಚ್ಚು ನಗರದಲ್ಲಿ ತಂಗಿದೆವು
ಅಲ್ಲಿ ನಮ್ಮನ್ನು ಕೇಳುವವರಿಲ್ಲ
ನಾವಲ್ಲಿ ಬೇರು ಬಿಟ್ಟೆವು
ಕೆಳ ಜಾತಿಯ ಜನರು ನಾವು
ನಗರದ ಜನರು ಒಂದಿಂಚೂ ಜಾಗ ನೀಡಲಿಲ್ಲ ನಮಗೆ
ಹೆಜ್ಜೆ ಊರುವಷ್ಟು ಸಹ.

ನಾವು ಪ್ಲಾಸ್ಟಿಕ್‌ ಗೋಡೆಗಳೊಳಗೆ
ಚಳಿಗೆ ನಡುಗುತ್ತಾ,
ಸೆಕೆಗೆ ಬೆವರುತ್ತಾ,
ಮಳೆಗೆ ನೆನೆಯುತ್ತಾ ಬದುಕಿದೆವು.
ನಾವು ಕಟ್ಟಿದ ಬಂಗಲೆಗಳಲ್ಲಿ
ನಮಗೆ ಆಶ್ರಯ ಸಿಗುವುದಿಲ್ಲ.

ನಮ್ಮ ಶ್ರಮವನ್ನು ಮಾರಿದೆವು
ಅಡ್ಡ ರಸ್ತೆಗಳ ಹರಾಜಿನಲ್ಲಿ.
ಜಾನುವಾರುಗಳಂತೆ ಮಾರಾಟವಾದೆವು
ಅತ್ಯಲ್ಪ ಮೊತ್ತಕ್ಕೆ ನಾವು.

ಚೇಳಿನಂತೆ ಕುಟುಕತ್ತದೆ
ಬೆನ್ನ ಹಿಂದಿನ
ಮಾಮಾ ಮತ್ತು ಲಂಗೋಟಿಯಾ
ಎನ್ನುವ ಮೂದಲಿಕೆಗಳು
ವಿಷದಂತೆ ತಲೆಗೇರುತ್ತಾ.

ಒಮ್ಮೊಮ್ಮೆ ಅನ್ನಿಸುತ್ತದೆ
ಈ ನರಕದಂತಹ ನಗರ ಬಿಟ್ಟು
ಈ ಅವಮಾನಗಳಿಂದ ದೂರ ಸಾಗಿ
ಹಳ್ಳಿಯ ಮಡಿಲಿನಲ್ಲಿ
ತಲೆಯಿಟ್ಟು ಮಲಗೋಣವೆಂದು
ಆದರೆ…
ಅಲ್ಲಿ, ಹಳ್ಳಿಯಲ್ಲಿ
ಹಸಿವೆನ್ನುವ ಹಾವು
ಹೆಡೆಯೆತ್ತಿ ನಿಂತಿರುತ್ತದೆ
ಇಡಿಯಾಗಿ ನುಂಗಲೆಂದು
ಮತ್ತು…
ನನಗೆ ಸಾಯುವುದು ಇಷ್ಟವಿಲ್ಲ…


ಈ ಕವಿಯು ಪ್ರಸ್ತುತ ದೌಹಾಡ್‌ನ ಕೈಸರ್ ಮೆಡಿಕಲ್ ನರ್ಸಿಂಗ್ ಹೋಮಿನಲ್ಲಿ ನಾಲ್ಕನೇ ಹಂತದ ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾರೆ.

ಅನುವಾದ: ಶಂಕರ. ಎನ್. ಕೆಂಚನೂರು

Vajesinh Pargi

گجرات کے داہود ضلع میں رہنے والے وَجے سنگھ پارگی ایک آدیواسی شاعر ہیں، اور پنچ مہالی بھیلی اور گجراتی زبان میں لکھتے ہیں۔ ’’جھاکڑ نا موتی‘‘ اور ’’آگیانوں اجواڑوں‘‘ عنوان سے ان کی شاعری کے دو مجموعے شائع ہو چکے ہیں۔ انہوں نے نو جیون پریس کے لیے ایک دہائی سے زیادہ وقت تک بطور پروف ریڈر کام کیا ہے۔

کے ذریعہ دیگر اسٹوریز Vajesinh Pargi
Illustration : Labani Jangi

لابنی جنگی مغربی بنگال کے ندیا ضلع سے ہیں اور سال ۲۰۲۰ سے پاری کی فیلو ہیں۔ وہ ایک ماہر پینٹر بھی ہیں، اور انہوں نے اس کی کوئی باقاعدہ تربیت نہیں حاصل کی ہے۔ وہ ’سنٹر فار اسٹڈیز اِن سوشل سائنسز‘، کولکاتا سے مزدوروں کی ہجرت کے ایشو پر پی ایچ ڈی لکھ رہی ہیں۔

کے ذریعہ دیگر اسٹوریز Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru