ಸದಾ ಉರಿಬಿಸಿಲಿನಿಂದ ಕೂಡಿದ ರಣ್ ಪ್ರದೇಶದಲ್ಲಿ ಮಳೆಯೆನ್ನುವುದು ವಿಶೇಷ ಸಂಗತಿಯಾಗಿರುವುದರಲ್ಲಿ ಅಚ್ಚರಿಯಿಲ್ಲ. ಇಲ್ಲಿನ ಜನರು ಸುಡುವ ಬಿಸಿಲಿನಿಂದ ತಪ್ಪಿಸಿಕೊಳ್ಳುವ ಸಲುವಾಗಿ ಸದಾ ಮಳೆ ಧ್ಯಾನದಲ್ಲಿರುತ್ತಾರೆ. ಹಾಗೆಯೇ ಇಂತಹ ಪ್ರದೇಶದಲ್ಲಿ ಹೆಣ್ಣೊಬ್ಬಳ ಬದುಕಿನಲ್ಲಿ ಪ್ರೇಮ ತರುವ ಸಮಧಾನವನ್ನು ಮಳೆಗೆ ಹೋಲಿಸಿರುವುದರಲ್ಲಿ ಯಾವ ವಿಶೇಷವೂ ಇಲ್ಲ.
ಆದರೆ ಮಾನ್ಸೂನ್ ಮಳೆಯ ಪ್ರಣಯ ಮತ್ತು ವೈಭವ ಕಚ್ಛೀ ಜಾನಪದ ಗೀತೆಗಳಲ್ಲಿ ಕಂಡುಬರುವುದು ಅಸಾಮಾನ್ಯ ಸಂಗತಿಯೇನಲ್ಲ. ಕುಣಿಯುವ ನವಿಲು, ಕಾರ್ಮೋಡ, ಮಳೆ ಹಾಗೂ ಯುವತಿಯೊಬ್ಬಳು ತನ್ನ ಪ್ರೇಮಿಗಾಗಿ ಹಂಬಲಿಸುವ ಚಿತ್ರಗಳು ಭಾರತದ ಶಾಸ್ತ್ರೀಯ, ಜನಪ್ರಿಯ ಮತ್ತು ಜಾನಪದ ಸಂಗೀತ ಸಂಪ್ರದಾಯಗಳ ವರ್ಣಪಟಲದಲ್ಲಿ ಮಾತ್ರವಲ್ಲದೆ, ವರ್ಣಚಿತ್ರಗಳು ಮತ್ತು ಸಾಹಿತ್ಯದ ಅನೇಕ ಶೈಲಿಗಳಲ್ಲಿಯೂ ಕಂಡುಬರುತ್ತವೆ.
ಆದರೂ, ಗುಜರಾತಿ ಭಾಷೆಯಲ್ಲಿ ಹಾಡಲಾದ ಈ ಹಾಡಿನಲ್ಲಿ ಎಲ್ಲವನ್ನೂ ಒಟ್ಟಿಗೆ ಜೋಡಿಸಿರುವುದನ್ನು ನಾವು ಕೇಳಿದಾಗ, ಇದರಲ್ಲಿನ ಉಪಮೆಗಳು ಮೊದಲ ಮಳೆಯ ಹೊಸ ಮೋಡಿಯನ್ನು ನಮ್ಮೊಳಗೆ ಹುಟ್ಟಿಸುವುದು ಸುಳ್ಳಲ್ಲ. ಈ ಗೀತೆಯನ್ನು ಅಂಜಾರ್‌ನ ಘೇಲ್ಜಿ ಭಾಯಿಯವರ ದನಿಯಲ್ಲಿ ಪ್ರಸ್ತುತಪಡಿಸಲಾಗಿದೆ.
Gujarati
કાળી કાળી વાદળીમાં વીજળી ઝબૂકે
કાળી કાળી વાદળીમાં વીજળી ઝબૂકે
મેહૂલો કરે ઘનઘોર,
જૂઓ હાલો કળાયેલ બોલે છે મોર (૨)
કાળી કાળી વાદળીમાં વીજળી ઝબૂકે
નથડીનો વોરનાર ના આયો સાહેલડી (૨)
વારી વારી વારી વારી, વારી વારી કરે છે કિલોલ.
જૂઓ હાલો કળાયેલ બોલે છે મોર (૨)
હારલાનો વોરનાર ના આયો સાહેલડી (૨)
વારી વારી વારી વારી, વારી વારી કરે છે કિલોલ.
જૂઓ હાલો કળાયેલ બોલે છે મોર (૨)
કાળી કાળી વાદળીમાં વીજળી ઝબૂકે
મેહૂલો કરે ઘનઘોર
જૂઓ હાલો કળાયેલ બોલે છે મોર (૨)
ಕನ್ನಡ
ಗಾಢ ಕಪ್ಪು
ಮೋಡದೊಳಗಿದೆ ಮಿಂಚು
ಗಾಢ ಕಪ್ಪು
ಮೋಡದೊಳಗಿದೆ ಮಿಂಚು
ಮಳೆ ತುಂಬಿಕೊಂಡ
ಮೋಡ ಎಷ್ಟೊಂದು ಭಾರ ನೋಡು
ನೋಡಿ, ನವಿಲು ಹಾಡುತ್ತಾ, ತನ್ನ ರೆಕ್ಕೆ
ಬಿಚ್ಚುತ್ತಿದೆ (2)
ಗಾಢ ಕಪ್ಪು
ಮೋಡದೊಳಗಿದೆ ಮಿಂಚು
ಅದು ನನಗೆ ನಥನಿ
ಉಡುಗೊರೆ ಕೊಡಲಿರುವವ
ಓ ಗೆಳತಿ, ನನಗೆ ಮೂಗು ನತ್ತು
ಕೊಡುವವ ಇನ್ನೂ ಬಂದಿಲ್ಲ (2)
ಮತ್ತೆ ಮತ್ತೆ
ಹಾಡುತ್ತಿದೆ ಆ ನವಿಲು
ನೋಡು ಹೇಗೆ
ತೋರಿಸುತ್ತಿದೆ ತನ್ನ ಗರಿಯ ಸೌಂದರ್ಯ (2)
ನನಗೆ ಹಾರ್ಲೋ
ಉಡುಗೊರೆಯಾಗಿ ತರುವವ
ಓ ಗೆಳತಿ, ನನಗೆಂದು
ಕುತ್ತಿಗೆಗೆ ಹಾರ ತರುವವ ಇನ್ನೂ ಬಂದಿಲ್ಲ ನೋಡು (2)
ಮತ್ತೆ ಮತ್ತೆ
ಹಾಡುತ್ತಿದೆ ಆ ನವಿಲು
ನೋಡು ಹೇಗೆ
ತೋರಿಸುತ್ತಿದೆ ತನ್ನ ಗರಿಯ ಸೌಂದರ್ಯ (2)
ಗಾಢ ಕಪ್ಪು
ಮೋಡದೊಳಗಿದೆ ಮಿಂಚು
ಮಳೆ ತುಂಬಿಕೊಂಡ
ಮೋಡ ಎಷ್ಟೊಂದು ಭಾರ ನೋಡು
ನೋಡಿ, ನವಿಲು ಹಾಡುತ್ತಾ, ತನ್ನ ರೆಕ್ಕೆ
ಬಿಚ್ಚುತ್ತಿದೆ (2)
ಹಾಡಿನ ಪ್ರಕಾರ : ಸಾಂಪ್ರದಾಯಿಕ ಜಾನಪದ ಗೀತೆ
ಕ್ಲಸ್ಟರ್ : ಪ್ರೀತಿ ಮತ್ತು ಹಂಬಲದ ಹಾಡುಗಳು
ಹಾಡು : 7
ಹಾಡಿನ ಶೀರ್ಷಿಕೆ : ಕಾ ಲಿ ವಾಡಾಲಿಮಾ ವಿಜಾಲಿ ಝಬೂ ಕೆ
ಸಂಗೀತ : ದೇವಲ್ ಮೆಹ್ತಾ
ಗಾಯಕ : ಘಾಲ್ಜಿ ಭಾಯ್, ಅಂಜಾರ್
ಬಳಸಿದ ವಾದ್ಯಗಳು : ಡ್ರಮ್, ಹಾರ್ಮೋನಿಯಂ, ಬ್ಯಾಂಜೊ, ಟಾಂಬೊರಿನ್
ರೆಕಾರ್ಡಿಂಗ್ ವರ್ಷ : 2012, ಕೆಎಂವಿಎಸ್ ಸ್ಟುಡಿಯೋ
ಸಮುದಾಯ ನಡೆಸುವ ರೇಡಿಯೋ ಸೂರ್ವಾಣಿ ರೆಕಾರ್ಡ್ ಮಾಡಿದ 341 ಹಾಡುಗಳು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಮೂಲಕ ಪರಿಗೆ ಬಂದಿವೆ.
ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ, ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಭಾರತಿಬೆನ್ ಗೋರ್ ಇವರುಗಳಿಗೆ ಅಮೂಲ್ಯ ಸಹಾಯಕ್ಕಾಗಿ ವಿಶೇಷ ಧನ್ಯವಾದಗಳು.
ಅನುವಾದ: ಶಂಕರ. ಎನ್. ಕೆಂಚನೂರು