ಆಗಸ್ಟ್ 15, 1947ರಂದು ದೇಶದ ಉಳಿದ ಭಾಗಗಳು ಭಾರತದ ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದ ಸಮಯದಲ್ಲಿ, ಮಲ್ಲು ಸ್ವರಾಜ್ಯಂ ಮತ್ತು ತೆಲಂಗಾಣದ ಅದರ ಸಹ ಕ್ರಾಂತಿಕಾರಿಗಳು ಇನ್ನೂ ಹೈದರಾಬಾದ್ನ ಸಶಸ್ತ್ರ ಸೈನ್ಯದ ನಿಜಾಮ ಮತ್ತು ಪೊಲೀಸರ ವಿರುದ್ಧ ಹೋರಾಡುತ್ತಿದ್ದರು. 1946ರಲ್ಲಿ 16ನೇ ವಯಸ್ಸಿನಲ್ಲಿ, ತನ್ನ ತಲೆಯ ಮೇಲೆ 10,000 ರೂ.ಗಳ ಬಹುಮಾನವನ್ನು ಹೊಂದಿದ್ದ ಈ ನಿರ್ಭೀತ ಯೋಧೆಯ ಬದುಕಿನ ಇಣುಕು ನೋಟವನ್ನು ಈ ವೀಡಿಯೊ ನಮಗೆ ನೀಡುತ್ತದೆ. ಈ ಮೊತ್ತಕ್ಕೆ ಆಗಿನ ಕಾಲದಲ್ಲಿ ನೀವು 83,000 ಕಿಲೋ ಅಕ್ಕಿಯನ್ನು ಖರೀದಿಸಬಹುದಾಗಿತ್ತು.

ಇವರ ಬದುಕಿನ 84ನೇ ವಯಸ್ಸಿನ ಮತ್ತು 92 ನೇ ವಯಸ್ಸಿನ ಅವರ ಬದುಕಿನ ಕೆಲವು ತುಣುಕುಗಳನ್ನು ಈ ವೀಡಿಯೊ ನಮ್ಮೆದುರು ತರುತ್ತದೆ. ಈ ವರ್ಷದ ಮಾರ್ಚ್ 19ರಂದು ನಿಧನರಾದ ಈ ಮಹಾನ್ ಸ್ವಾತಂತ್ರ್ಯ ಹೋರಾಟಗಾರ್ತಿಯನ್ನು ಗೌರವಿಸಲು ನಾವು ಇಂದು, ಆಗಸ್ಟ್ 15, 2022ರಂದು ಈ ವಿಡಿಯೋವನ್ನು ಪ್ರಕಟಿಸುತ್ತಿದ್ದೇವೆ. ಪೆಂಗ್ವಿನ್ ಇಂಡಿಯಾ ನವೆಂಬರ್ ತಿಂಗಳಿನಲ್ಲಿ ಪ್ರಕಟಿಸಲಿರುವ ಪರಿ ಸ್ಥಾಪಕ-ಸಂಪಾದಕ ಪಿ. ಸಾಯಿನಾಥ್ ಅವರ ಮುಂಬರುವ ಪುಸ್ತಕ ದಿ ಲಾಸ್ಟ್ ಹೀರೋಸ್: ಫುಟ್‌ ಸೋಲ್ಜರ್ಸ್‌ ಆಫ್ ಇಂಡಿಯನ್ ಫ್ರೀಡಂ ಪುಸ್ತಕದಲ್ಲಿ ಮಲ್ಲು ಸ್ವರಾಜ್ಯಂ ಅವರ ಬದುಕಿನ ಸಂಪೂರ್ಣ ಕಥೆಯನ್ನು ನೀವು ಓದಬಹುದು.

ವಿಡಿಯೋ ನೋಡಿ: ಸ್ವಾತಂತ್ರ್ಯ ಹೋರಾಟಗಾರ್ತಿ ಮಲ್ಲು ಸ್ವರಾಜ್ಯಂ: 'ಪೊಲೀಸರು ಹೆದರಿ ಓಡಿದ್ದರು'

ಅನುವಾದ: ಶಂಕರ. ಎನ್. ಕೆಂಚನೂರು

PARI Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru