ಪ್ಯಾನೆಲ್ 'ಕಾಣುವ ಕೆಲಸಗಳ ನಡುವೆ ಕಾಣದೆ ಹೋಗುವ ಮಹಿಳೆಯರು' ಶೀರ್ಷಿಕೆಯ ಛಾಯಾಚಿತ್ರ ಪ್ರದರ್ಶನದ ಭಾಗವಾಗಿದ್ದು, ಇದರ ಅಡಿಯಲ್ಲಿ ಗ್ರಾಮೀಣ ಮಹಿಳೆಯರು ಮಾಡುವ ವಿವಿಧ ಕಾರ್ಯಗಳನ್ನು ಚಿತ್ರರೂಪದಲ್ಲಿ ದಾಖಲಿಸಲಾಗಿದೆ. ಎಲ್ಲಾ ಚಿತ್ರಗಳನ್ನು ಪಿ. ಸಾಯಿನಾಥ್ ಅವರು 1993 ರಿಂದ 2002 ನಡುವೆ ತಮ್ಮ 10 ರಾಜ್ಯಗಳಲ್ಲಿನ ಓಡಾಟದಲ್ಲಿ ತೆಗೆದಿದ್ದಾರೆ. ಇಲ್ಲಿ, ಪರಿ ಛಾಯಾಚಿತ್ರ ಪ್ರದರ್ಶನದ ಡಿಜಿಟಲ್ ಪ್ರಾತಿನಿಧ್ಯವನ್ನು ಸೃಜನಾತ್ಮಕವಾಗಿ ರಚಿಸಿದೆ, ಇದನ್ನು ಹಲವು ವರ್ಷಗಳಿಂದ ದೇಶದ ಬಹುತೇಕ ಭಾಗಗಳಲ್ಲಿ ಪ್ರದರ್ಶಿಸಲಾಗಿದೆ.

ಅದೇ ಮನೆ, ಅದೇ ಕೆಲಸ…

ಈ ಮಹಿಳೆ ಈಗಾಗಲೇ ಅಡುಗೆ ಮಾಡಿಟ್ಟಿದ್ದಾರೆ. ತಮಿಳುನಾಡಿನಲ್ಲಿ ನೆಲೆಸಿರುವ ಇವರ ಕುಟುಂಬ ಜೀವನೋಪಾಯಕ್ಕಾಗಿ ತಾಳೆಬೆಲ್ಲ ತಯಾರಿಸಿ ಮಾರಾಟ ಮಾಡುತ್ತಾರೆ. ಈ ದೊಡ್ಡ ಪಾತ್ರೆಯಲ್ಲಿ ಅದನ್ನೇ ತಯಾರಿಸುತ್ತಿದ್ದಾರೆ. ಇವರು ಮಾಡುವ ಕೆಲಸದಲ್ಲಿ ಸಣ್ಣ ತಪ್ಪಾದರೂ ಈ ಕುಟುಂಬದ ಮುಂದಿನ ದಿನಗಳ ಆದಾಯವನ್ನೇ ಕಸಿದುಕೊಳ್ಳಬಹುದು.

ಇದು ಮುಗಿಯಲು ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಅವರು ಅದೇ ಸಮಯವನ್ನು ಅಡುಗೆಯಲ್ಲಿ ಕಳೆದರು. ದಿನವಿಡೀ ಕೆಲವು ಕೆಲಸಗಳನ್ನು ಮಾಡುವಾಗ ಹೊಗೆಯನ್ನು ಉಸಿರಾಡುತ್ತಾ ಹಲವು ಗಂಟೆಗಳ ಕಾಲ ಕಳೆಯಬೇಕಾಗುತ್ತದೆ. ಮತ್ತು, ಮಹಿಳೆಯಾಗಿ ಆಕೆಗೆ ನೀಡಲಾದ ಎಲ್ಲಾ ಇತರ ಕಾರ್ಯಗಳಲ್ಲಿ, ಈ ಕೆಲಸವು ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಚಿಕ್ಕಂದಿನಿಂದಲೂ ಈ ಕೆಲಸ ಅವರ ಮೇಲೆ ಹೇರಲಾಗಿರುವುದರಿಂದ ಅವರಂತಹ ಲಕ್ಷಗಟ್ಟಲೆ ಹೆಣ್ಣುಮಕ್ಕಳು ಬಹುಬೇಗ ಶಾಲೆ ಬಿಡುತ್ತಾರೆ.

ವೀಡಿಯೋ ವೀಕ್ಷಿಸಿ: 'ಈ ಚಿತ್ರದಲ್ಲಿ ಮನುಷ್ಯರು ಇಲ್ಲದ ಕಾರಣ ತೆಗೆದಿದ್ದೇನೆ' ಎನ್ನುತ್ತಾರೆ ಪಿ ಸಾಯಿನಾಥ್; ಮತ್ತು ನೀವು ಅಲ್ಲಿ ಮನುಷ್ಯನನ್ನು ಕಲ್ಪಿಸಿಕೊಳ್ಳಬೇಕಾದರೆ, ನಿಮ್ಮ ಮನಸ್ಸಿನಲ್ಲಿ ಮಹಿಳೆಯ ಚಿತ್ರವಷ್ಟೇ ರೂಪುಗೊಳ್ಳುತ್ತದೆ

ಮನೆಯಲ್ಲಿ ಮಾಡಬೇಕಾದ ಕೆಲಸಗಳು ಬಹಳಷ್ಟಿರುತ್ತವೆ. ಆಂಧ್ರಪ್ರದೇಶದ ವಿಜಯನಗರಂನಲ್ಲಿ ತಲೆಯ ಮೇಲೆ ಬುಟ್ಟಿ ಹೊತ್ತ ಯುವತಿ (ಕೆಳಗೆ) ಇನ್ನಷ್ಟೇ ಮನೆಗೆ ಹೋಗಿ ಅಡುಗೆ ಮಾಡಬೇಕಿದೆ. ಆಕೆ ಅಡುಗೆ ಮತ್ತು ಇತರ ಕೆಲಸಗಳಿಗೆ ಉರುವಲು ಸಂಗ್ರಹಿಸಲು ಹೊಲಗಳಲ್ಲಿ ಗಂಟೆಗಟ್ಟಲೆ ಕಾಲ ಕಳೆಯುತ್ತಾರೆ. ಆಕೆಯ ನೆರೆಹೊರೆಯವರು ಈಗಾಗಲೇ ಅಡುಗೆ ಮಾಡಲು ಪ್ರಾರಂಭಿಸಿದ್ದಾರೆ, ಆದರೆ ಆ ಮಹಿಳೆ ತೆರೆದ ಪ್ರದೇಶದಲ್ಲಿ ಅಡುಗೆ ಮಾಡುತ್ತಿದ್ದಾರೆ.

ನೆರೆಹೊರೆಯವರ ಅದೃಷ್ಟ ಒಂದಿಷ್ಟು ಉತ್ತಮವಾಗಿದೆ. ಅನೇಕ ಮಹಿಳೆಯರು ಕಿಟಕಿಗಳಿಲ್ಲದ ಸಣ್ಣ ಜಾಗದಲ್ಲಿ ಅಡುಗೆ ಮಾಡುತ್ತಾರೆ. ಮತ್ತು ಅಡುಗೆ ಮಾಡುವಾಗ, ಒಲೆಯಲ್ಲಿ ಉರಿಯುತ್ತಿರುವ ಉರುವಲಿನಿಂದ ಹೊರಬರುವ ಹೊಗೆಯನ್ನು ಅವರು ಎದುರಿಸುತ್ತಾರೆ. ಕೈಗಾರಿಕಾ ಕಾರ್ಮಿಕರು ಎದುರಿಸುತ್ತಿರುವ ಕಲುಷಿತ ಕಾರ್ಖಾನೆಗಳ ಹೊಗೆಗಿಂತ ಈ ಹೊಗೆ ಹೆಚ್ಚು ಅಪಾಯಕಾರಿ.

PHOTO • P. Sainath
PHOTO • P. Sainath
PHOTO • P. Sainath

ಉತ್ತರ ಪ್ರದೇಶದ ಗಾಜಿಪುರದಲ್ಲಿ, ಈ ಮಹಿಳೆ (ಮೇಲಿನ ಎಡ) ಧಾನ್ಯವನ್ನು ರುಬ್ಬುತ್ತಿದ್ದಾರೆ. ಈ ಕಾರ್ಯವು ನೋಡಲು ಸರಳವಾಗಿದೆ, ಆದರೆ ಇದಕ್ಕೆ ಹೆಚ್ಚಿನ ಶ್ರಮ ಬೇಕಾಗುತ್ತದೆ. ಇದು ಆಹಾರ ತಯಾರಿಕೆ ಅಥವಾ ಆಹಾರ ಸಂಸ್ಕರಣೆಯ ವಿವಿಧ ಕಾರ್ಯಗಳಲ್ಲಿ ಒಂದಾಗಿದೆ. ಸಂಸ್ಕರಣೆಯ ಹೆಚ್ಚಿನ ಕೆಲಸವನ್ನು ಮಹಿಳೆಯರೇ ಮಾಡುತ್ತಾರೆ. ಇಷ್ಟು ದುಡಿಮೆ ಮಾಡಿ ಮಕ್ಕಳನ್ನು ಸಾಕುವುದರ ಜೊತೆಗೆ ದನಕರುಗಳನ್ನೂ ನೋಡಿಕೊಳ್ಳಬೇಕು.

ಅವರ ಇತರ ಕೆಲಸಗಳಲ್ಲಿ ಬಟ್ಟೆ ಒಗೆಯುವುದು, ರುಬ್ಬುವುದು, ತರಕಾರಿಗಳನ್ನು ಕತ್ತರಿಸುವುದು, ಪಾತ್ರೆಗಳನ್ನು ಶುಚಿಗೊಳಿಸುವುದು ಮತ್ತು ವಿವಿಧ ಸಮಯಗಳಲ್ಲಿ ವಿವಿಧ ಕುಟುಂಬ ಸದಸ್ಯರಿಗೆ ಆಹಾರ ನೀಡುವುದು ಸೇರಿದೆ. ಅನಾರೋಗ್ಯ ಹೊಂದಿರುವ ಸಂಬಂಧಿಕರನ್ನು ನೋಡಿಕೊಳ್ಳುವುದು ಯಾವಾಗಲೂ ಅವರ ಜವಾಬ್ದಾರಿಯಾಗಿದೆ. ಈ ಎಲ್ಲಾ ಕೆಲಸಗಳನ್ನು 'ಮಹಿಳೆಯರ ಕೆಲಸ' ಎಂದು ನೋಡಲಾಗುತ್ತದೆ ಮತ್ತು ಪ್ರತಿಯಾಗಿ ಇದಕ್ಕೆ ಅವರಿಗೆ ಸಂಬಳವಿಲ್ಲ. ಈ ವಿಷಯದಲ್ಲಿ ಗ್ರಾಮೀಣ ಮಹಿಳೆಯರು ನಗರ ಪ್ರದೇಶದ ಮಹಿಳೆಯರಿಗಿಂತ ಭಿನ್ನವಾಗಿಲ್ಲ. ಆದರೆ ನೀರು ಮತ್ತು ಉರುವಲಿಗಾಗಿ ದೂರದ ಪ್ರಯಾಣ ಮತ್ತು ಹೊಲಗಳಲ್ಲಿ ವಿವಿಧ ರೀತಿಯ ಕೆಲಸಗಳು ಗ್ರಾಮೀಣ ಮಹಿಳೆಯರ ಹೊರೆಯನ್ನು ಹೆಚ್ಚಿಸುತ್ತವೆ.

PHOTO • P. Sainath
PHOTO • P. Sainath

ಜಾರ್ಖಂಡ್‌ನ ಪಲಾಮು ಜಿಲ್ಲೆಯ ಬುಡಕಟ್ಟು ಮಹಿಳೆ (ಮೇಲಿನ ಚಿತ್ರದಲ್ಲಿ ಬಲಗಡೆ) ಅಡುಗೆಗಾಗಿ ಗೆಟ್ಟಿ (ಗೆಡ್ಡೆಗಳು) ಶುಚಿಗೊಳಿಸುತ್ತಿದ್ದಾರೆ. ಬರಗಾಲದಲ್ಲಿ ಇವುಗಳನ್ನು ಪಡೆಯುವುದು ಸುಲಭವಲ್ಲ. ಅದನ್ನು ಸಂಗ್ರಹಿಸಲು ಅವರು ಬೆಳಿಗ್ಗೆ ಹೆಚ್ಚಿನ ಸಮಯವನ್ನು ಕಾಡಿನಲ್ಲಿ ಕಳೆದಿದ್ದಾರೆ. ಅವರು ಈಗಾಗಲೇ ನೀರು ತರಲು ಸಾಕಷ್ಟು ಸಮಯವನ್ನು ಕಳೆದಿದ್ದಾರೆ, ಆದರೆ ಹೆಚ್ಚು ನೀರು ತರಲು ಅವರು ಇನ್ನೊಂದು ಸುತ್ತು ಹೋಗಿಬರಬೇಕಾಗಬಹುದು. ಈ ಕಾರ್ಯಗಳನ್ನು ನಿರ್ವಹಿಸುವಾಗ, ದಾರಿಯಲ್ಲಿ, ಅವರು ತನ್ನ ಗ್ರಾಮದ ಸುತ್ತಲೂ ಹರಡಿರುವ ಬಾಲೂಮಾತ್ ಕಾಡಿನಲ್ಲಿ ಕಾಡು ಪ್ರಾಣಿಗಳನ್ನು‌ ಸಹ ಎದುರಿಸಬೇಕಾಗಬಹುದು.

ಮಹಿಳೆಯರು ಮನೆಯಲ್ಲಿ ಕೊನೆಯದಾಗಿ ತಿನ್ನುತ್ತಾರೆ ಮತ್ತು ಕಡಿಮೆ ತಿನ್ನುತ್ತಾರೆ. ಅವರು ವಿಶ್ರಾಂತಿಯನ್ನೂ ಬಹಳ ಕಡಿಮೆ ತೆಗೆದುಕೊಳ್ಳುತ್ತಾರೆ. ಅಷ್ಟೇ ಏಕೆ, ದೇಹದ ಶಕ್ತಿಯನ್ನೆಲ್ಲ ಹಿಂಡುವ ಈ ದಿನಚರಿ ಅವರ ಆರೋಗ್ಯವನ್ನು ಕೂಡಾ ಕೆಡಿಸುತ್ತದೆ.

PHOTO • P. Sainath
PHOTO • P. Sainath

ಅನುವಾದ: ಶಂಕರ. ಎನ್. ಕೆಂಚನೂರು

پی سائی ناتھ ’پیپلز آرکائیو آف رورل انڈیا‘ کے بانی ایڈیٹر ہیں۔ وہ کئی دہائیوں تک دیہی ہندوستان کے رپورٹر رہے اور Everybody Loves a Good Drought اور The Last Heroes: Foot Soldiers of Indian Freedom کے مصنف ہیں۔

کے ذریعہ دیگر اسٹوریز پی۔ سائی ناتھ
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

کے ذریعہ دیگر اسٹوریز Shankar N. Kenchanuru