"ಅವರು ನಮ್ಮ ಗೋಧಿಯನ್ನೇ ನಮಗೆ ಅದರ ಮೂರು ಪಟ್ಟು ಬೆಲೆಗೆ ಮಾರಾಟ ಮಾಡುತ್ತಾರೆ"
ತಮ್ಮ ಕೃಷಿ ಭೂಮಿಯ ಹಕ್ಕುಗಳಿಗಾಗಿ ಹೋರಾಡುತ್ತಿರುವ ರೈತ ಮತ್ತು ಕೃಷಿ ಕಾರ್ಮಿಕ ಮಹಿಳೆಯರು ಹೊಸ ಕೃಷಿ ಕಾನೂನುಗಳ ವಿರುದ್ಧ ಮುಂಬೈನಲ್ಲಿ ಪ್ರತಿಭಟನೆ ನಡೆಸುತ್ತಿದ್ದರು, ತಮ್ಮ ಬೆಳೆಗಳನ್ನು ಎಮ್.ಎಸ್.ಪಿ ದರಕ್ಕಿಂತ ಕಡಿಮೆ ಬೆಲೆಗೆ ಮಾರುವ ಮೂಲಕ ಇನ್ನಷ್ಟು ನಷ್ಟವನ್ನು ಎದುರಿಸುವುದು ಸಾಧ್ಯವಿಲ್ಲವೆನ್ನುವ ಕಾರಣಕ್ಕಾಗಿ ಅವರು ಈ ಹೋರಾಟ ನಡೆಸುತ್ತಿದ್ದಾರೆ.