ರಾಜು ದುಮರ್‌ಗೊಂಯಿ ಅವರು ತಾರ್ಪಿ (ತಾರ್ಪಾ ಎಂದೂ ಕರೆಯುತ್ತಾರೆ) ನುಡಿಸಲು ಪ್ರಾರಂಭಿಸುತ್ತಿದ್ದಂತೆ ಅವರ ಕೆನ್ನೆಗಳು ಉಬ್ಬಿಕೊಳ್ಳುತ್ತವೆ. ಬಿದಿರು ಮತ್ತು ಒಣಗಿದ ಸೋರೆಕಾಯಿ ಬುರುಡೆ ಬಳಸಿ ಮಾಡಿದ ಈ ಐದು ಅಡಿ ಉದ್ದದ ಸಂಗೀತ ವಾದ್ಯವು ಉಸಿರು ತುಂಬಿದ ತಕ್ಷಣವೇ ಜೀವಂತವಾಗಿ ಅದರ ಇಂಪು ವಾತಾವರಣದಲ್ಲಿ ಹರಡುತ್ತದೆ.

2020ರ ಡಿಸೆಂಬರ್ 27ರಿಂದ 29ರವರೆಗೆ ರಾಜ್ಯ ಸರ್ಕಾರ ಆಯೋಜಿಸಿದ್ದ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವದಲ್ಲಿ ಈ ಸಂಗೀತಗಾರ ಮತ್ತು ಅವರ ವಾದ್ಯವನ್ನು ಸುತ್ತಲಿದ್ದವರು ಗಮನಿಸದೆ ಇರುವ ಹಾಗಿರಲಿಲ್ಲ. ಈ ಕಾರ್ಯಕ್ರಮವನ್ನು ಛತ್ತೀಸಗಢದ ರಾಯ್ಪುರದಲ್ಲಿ ಅಯೋಜಿಸಲಾಗಿತ್ತು.

ಸಂಗೀತಗಾರ ರಾಜು ಮಹಾರಾಷ್ಟ್ರದ ಪಾಲ್ಘರ್ ಎನ್ನುವಲ್ಲಿರುವ ಮೊಖಡಾ ಗುಣದಜಪಾಡಾ ಎನ್ನುವ ಊರಿನವರು. ಅವರು ಈ ವಾದ್ಯವನ್ನು ದಸರಾ, ನವರಾತ್ರಿ ಹಾಗೂ ಇತರ ಹಬ್ಬಗಳ ಸಮಯದಲ್ಲಿ ನುಡಿಸುವುದಾಗಿ ತಿಳಿಸಿದರು.

ಇದನ್ನೂ ಓದಿ: 'ನನ್ನ ತಾರ್ಪಾ ನನ್ನ ದೇವರು'

ಅನುವಾದ: ಶಂಕರ. ಎನ್. ಕೆಂಚನೂರು

Purusottam Thakur

పురుషోత్తం ఠాకూర్ 2015 PARI ఫెలో. ఈయన జర్నలిస్ట్, డాక్యుమెంటరీ చిత్ర నిర్మాత. ప్రస్తుతం అజీమ్ ప్రేమ్‌జీ ఫౌండేషన్‌తో కలిసి పనిచేస్తున్నారు. సామాజిక మార్పు కోసం కథలు రాస్తున్నారు

Other stories by Purusottam Thakur
Editor : PARI Desk

PARI డెస్క్ మా సంపాదకీయ కార్యక్రమానికి నాడీ కేంద్రం. ఈ బృందం దేశవ్యాప్తంగా ఉన్న రిపోర్టర్‌లు, పరిశోధకులు, ఫోటోగ్రాఫర్‌లు, చిత్రనిర్మాతలు, అనువాదకులతో కలిసి పని చేస్తుంది. PARI ద్వారా ప్రచురితమైన పాఠ్యం, వీడియో, ఆడియో, పరిశోధన నివేదికల ప్రచురణకు డెస్క్ మద్దతునిస్తుంది, నిర్వహిస్తుంది కూడా.

Other stories by PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru