ಶೋಭಾರಾಂ ಗೆಹೆರ್ವರ್: ಗಾಂಧಿ ಮತ್ತು ಅಂಬೇಡ್ಕರ್ ನಡುವೆ ಆಯ್ಕೆ ಮಾಡಿಕೊಳ್ಳಬೇಕೆ?
2023ರ ಆಗಸ್ಟ್ 15ರ ಸಂಭ್ರಮದ ದಿನದದಂದು ಪರಿ ನಿಮ್ಮ ಓದಿಗಾಗಿ ಸ್ವಾತಂತ್ರ್ಯ ಹೋರಾಟದಲ್ಲಿ ಗುಂಡೇಟು ತಿಂದು ಗಾಯಗೊಂಡ ಶೋಭಾರಾಮ್ ಗೆಹೆರ್ವರ್ ಅವರ ಕತೆಯನ್ನು ತಂದಿದೆ. ರಾಜಸ್ಥಾನದ ದಲಿತ ಸಮುದಾಯಕ್ಕೆ ಸೇರಿದ ಈ 98 ವರ್ಷದ ಹಿರಿಯ ವ್ಯಕ್ತಿ ಸ್ವಯಂ-ಘೋಷಿತ ಗಾಂಧಿವಾದಿ ಹಾಗೂ ಅಂಬೇಡ್ಕರ್ ಅವರ ಕಟ್ಟಾ ಅಭಿಮಾನಿ. ಮತ್ತು ಅಂದಿನ ಕಾಲದ ಕ್ರಾಂತಿಕಾರಿ ಭೂಗತ ಹೊರಾಟದ ಭಾಗವೂ ಆಗಿದ್ದವರು. ಈ ಲೇಖನವು 2022ರಲ್ಲಿ ಪೆಂಗ್ವಿನ್ ಪ್ರಕಾಶನ ಪ್ರಕಟಿಸಿದ ಪಿ. ಸಾಯಿನಾಥ್ ಅವರ 'ದಿ ಲಾಸ್ಟ್ ಹೀರೋಸ್, ಫೂಟ್ ಸೋಲ್ಜರ್ಸ್ ಆಫ್ ಇಂಡಿಯಾಸ್ ಫ್ರೀಡಂ' ಪುಸ್ತಕದ ಆಯ್ದ ಭಾಗ
ಪಿ. ಸಾಯಿನಾಥ್ ಅವರು ಪೀಪಲ್ಸ್ ಆರ್ಕೈವ್ ಆಫ್ ರೂರಲ್ ಇಂಡಿಯಾದ ಸ್ಥಾಪಕ ಸಂಪಾದಕರು. ದಶಕಗಳಿಂದ ಗ್ರಾಮೀಣ ವರದಿಗಾರರಾಗಿರುವ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್' ಮತ್ತು 'ದಿ ಲಾಸ್ಟ್ ಹೀರೋಸ್: ಫೂಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ' ಎನ್ನುವ ಕೃತಿಗಳನ್ನು ರಚಿಸಿದ್ದಾರೆ.
Translator
G N Mohan
ಜಿ.ಎನ್.ಮೋಹನ್ ಬೆಂಗಳೂರು ಮೂಲದ ಹಿರಿಯ ಪತ್ರಕರ್ತ. ಈಟಿವಿ ಮತ್ತು ನ್ಯೂಸ್ 18 ಚಾನೆಲ್‌ಗಳ ಮಾಜಿ ಪ್ರಧಾನ ಸಂಪಾದಕರಾಗಿದ್ದ ಅವರು 'ಎವೆರಿಬಡಿ ಲವ್ಸ್ ಎ ಗುಡ್ ಡ್ರಾಟ್ಸ್' ಪುಸ್ತಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.