ಸಾಂಪ್ರದಾಯಿಕ ಉಡುಪು, ಸೊಂಟದ ಮೇಲೊಂದು ಮತ್ತು ತಲೆಯ ಮೇಲೆರಡು ಕೊಡ ಹೊತ್ತಿರುವ ಯುವತಿಯರು ಮತ್ತು ವಯಸ್ಸಾದ ಮಹಿಳೆಯರ ರೂಢಿಗತ ಚಿತ್ರಗಳು ಭಾರತದ ಗ್ರಾಮೀಣ ಮಹಿಳೆಯರ ಜೀವನವನ್ನು ಬಹಳ ಹಿಂದಿನಿಂದಲೂ ಪ್ರತಿನಿಧಿಸುತ್ತಾ ಬಂದಿವೆ. ಭಾರತೀಯ ಹಳ್ಳಿಗಳಲ್ಲಿನ ಬಾವಿಗಳು, ಕೆಲವೊಮ್ಮೆ ಸುಂದರವಾದವು, ಕೆಲವೊಮ್ಮೆ ವರ್ಣಿಸಲಾಗದವು, ಅವು ಕೇವಲ ನೀರನ್ನು ತರುವ ಸ್ಥಳವಾಗಿರಲಿಲ್ಲ. ಉತ್ತಮ ಸ್ನೇಹ ಮತ್ತು ಇತ್ತೀಚಿನ ಹಳ್ಳಿಯ ಹಗರಣಗಳಿಂದ ಹಿಡಿದು ನೀರಿನ ಬಳಕೆಯನ್ನು ನಿರ್ಧರಿಸುವ ಅನ್ಯಾಯದ ಜಾತಿ ಸಂಬಂಧಗಳವರೆಗೆ ಎಲ್ಲವೂ ಬಾವಿಯ ಸುತ್ತಲೂ ತೆರೆದುಕೊಳ್ಳುತ್ತದೆ.

ವಿಪರ್ಯಾಸವೆಂದರೆ, ಅದೇ ಜೀವ ಉಳಿಸುವ ಬಾವಿಯು ತಮ್ಮ ಅತ್ತೆ-ಮಾವನ ಮನೆಗಳಲ್ಲಿ ನರಳುತ್ತಿರುವ ಅನೇಕ ಮಹಿಳೆಯರಿಗೆ ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಹಾಡಿನಲ್ಲಿರುವ ಬಾವಿಯೂ ವಿಫಲ ಮದುವೆಯ ಕಾರಣಕ್ಕೆ ನೊಂದಿರುವ ಹೆಣ್ಣೊಬ್ಬಳಿಗೆ ಆಪ್ತವಾಗಿದೆ. ಇಂತಹ ಮನೆಗೆ ಮದುವೆ ಮಾಡಿಕೊಟ್ಟ ಕುರಿತು ದೂರಲು ಅವಳಿಗೆ ಉಳಿದಿರುವುದು ಈ ಬಾವಿ ಮಾತ್ರ.

ಅಂಜಾರ್‌ ಮೂಲದ ಶಂಕರ್‌ ಬರೋಟ್‌ ಹಾಡಿರುವ ಈ ನೋವಿನ ಹಾಡಿನಲ್ಲಿ ಮಹಿಳೆ ತನ್ನ ಕುಟುಂಬದಲ್ಲಿನ ಕ್ರೂರ ಗಂಡಸರ ಕುರಿತು ದೂರುತ್ತಾಳೆ. ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಹಾಡಲ್ಪಡುವ ವೈವಿಧ್ಯಮಯ ಹಾಡುಗಳಲ್ಲಿ ಈ ಹಾಡುಗಳು ತಮ್ಮದೇ ಆದ ಸ್ಥಾನವನ್ನು ಹೊಂದಿವೆ.

ಅಂಜಾರ್ ಎನ್ನುವ ಊರಿನ ಶಂಕರ್ ಬರೋಟ್ ಹಾಡಿದ ಜಾನಪದ ಹಾಡನ್ನು ಕೇಳಿ

Gujarati

જીલણ તારા પાણી મને ખારા ઝેર લાગે મને ઝેર ઝેર લાગે
જીલણ તારા પાણી મને ઝેર ઝેર લાગે મને ખારા ઝેર લાગે
દાદો વેરી થયા’તા મને  વેરીયામાં દીધી, મારી ખબરું ન લીધી
જીલણ તારા પાણી મને ઝેર ઝેર લાગે મને ખારા ઝેર લાગે
કાકો મારો વેરી મને  વેરીયામાં દીધી, મારી ખબરું ન લીધી
જીલણ તારા પાણી મને ઝેર ઝેર લાગે મને ખારા ઝેર લાગે
મામો મારો વેરી મને  વેરીયામાં દીધી, મારી ખબરું ન લીધી
જીલણ તારા પાણી મને ઝેર ઝેર લાગે મને ખારા ઝેર લાગે
જીલણ તારા પાણી મને ઝેર ઝેર લાગે મને ખારા ઝેર લાગે

ಕನ್ನಡ

ನಿನ್ನ ಬಾವಿಯ ಉಪ್ಪು ನೀರು ನನ್ನ ಪಾಲಿಗೆ ವಿಷ
ನೀರೇ ನನ್ನ ಪಾಲಿಗೆ ವಿಷವಾಗಿದೆ.
ಉಪ್ಪು ನೀರೆನ್ನುವುದು ನನ್ನ ಪಾಲಿಗೆ ವಿಷ (2)
ದಾದಾ ನನ್ನ ವೈರಿ, ತಾತ ನನ್ನನ್ನು ವೈರಿಗಳಿಗೆ ಕೊಟ್ಟರು.
ಅವರು ನನ್ನ ಕುರಿತು ಎಂದೂ ಯೋಚಿಸಲಿಲ್ಲ. ಉಪ್ಪು ನೀರಿನಂತೆ…
ಕಾಕಾ ನನ್ನ ವೈರಿ. ನನ್ನ ಚಿಕ್ಕಪ್ಪ ನನ್ನನ್ನು ಶತ್ರುಗಳಿಗೆ ಕೊಟ್ಟುಬಿಟ್ಟ
ಅವನು ನನ್ನ ಕುರಿತು ಎಂದೂ ಯೋಚಿಸಲಿಲ್ಲ. ಉಪ್ಪು ನೀರಿನಂತೆ…
ನನ್ನ ಮಾಮ ನನ್ನ ವೈರಿ. ನನ್ನ ಮಾಮಾ ನನ್ನನ್ನು ಶತ್ರುಗಳಿಗೆ ಕೊಟ್ಟುಬಿಟ್ಟ
ಅವನು ನನ್ನ ಕುರಿತು ಎಂದೂ ಯೋಚಿಸಲಿಲ್ಲ. ಉಪ್ಪು ನೀರಿನಂತೆ…
ನೀರು ನನ್ನ ಪಾಲಿಗೆ ವಿಷ. ಉಪ್ಪು ನೀರು ನನ್ನ ಪಾಲಿಗೆ ವೈರಿ.

PHOTO • Labani Jangi

ಹಾಡಿನ ಪ್ರಕಾರ : ಸಾಂಪ್ರದಾಯಿಕ ಜಾನಪದ ಗೀತೆ

ಕ್ಲಸ್ಟರ್ : ಮದುವೆಯ ಹಾಡುಗಳು

ಹಾಡು : 5

ಹಾಡಿನ ಶೀರ್ಷಿಕೆ : ಜೀಲಾನ್ ತಾರಾ ಪಾನಿ ಮುನೆ ಖರಾ ಜೆರ್ ಲಾಗೆ

ಸಂಗೀತ : ದೇವಲ್ ಮೆಹ್ತಾ

ಗಾಯಕ : ಅಂಜಾರ್‌ನ ಶಂಕರ್ ಬರೋಟ್

ಬಳಸಿದ ವಾದ್ಯಗಳು : ಹಾರ್ಮೋನಿಯಂ, ಡ್ರಮ್, ಬ್ಯಾಂಜೊ

ರೆಕಾರ್ಡಿಂಗ್ ವರ್ಷ : 2012, ಕೆಎಂವಿಎಸ್ ಸ್ಟುಡಿಯೋ

ಸಮುದಾಯ ನಡೆಸುವ ರೇಡಿಯೋ ಸೂರ್ವಾಣಿ ರೆಕಾರ್ಡ್ ಮಾಡಿದ 341 ಹಾಡುಗಳು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಮೂಲಕ ಪರಿಗೆ ಬಂದಿವೆ.

ಪ್ರೀತಿ ಸೋನಿ, ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ, ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಭಾರತಿಬೆನ್ ಗೋರ್ ಇವರುಗಳಿಗೆ ಅಮೂಲ್ಯ ಸಹಾಯಕ್ಕಾಗಿ ವಿಶೇಷ ಧನ್ಯವಾದಗಳು.

ಅನುವಾದ: ಶಂಕರ. ಎನ್. ಕೆಂಚನೂರು

Pratishtha Pandya

PARI సృజనాత్మక రచన విభాగానికి నాయకత్వం వహిస్తోన్న ప్రతిష్ఠా పాండ్య PARIలో సీనియర్ సంపాదకురాలు. ఆమె PARIభాషా బృందంలో కూడా సభ్యురాలు, గుజరాతీ కథనాలను అనువదిస్తారు, సంపాదకత్వం వహిస్తారు. ప్రతిష్ఠ గుజరాతీ, ఆంగ్ల భాషలలో కవిత్వాన్ని ప్రచురించిన కవయిత్రి.

Other stories by Pratishtha Pandya
Illustration : Labani Jangi

లావణి జంగి 2020 PARI ఫెలో. పశ్చిమ బెంగాల్‌లోని నాడియా జిల్లాకు చెందిన స్వయం-బోధిత చిత్రకారిణి. ఆమె కొల్‌కతాలోని సెంటర్ ఫర్ స్టడీస్ ఇన్ సోషల్ సైన్సెస్‌లో లేబర్ మైగ్రేషన్‌పై పిఎచ్‌డి చేస్తున్నారు.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru