2024ರ ಚುನಾವಣೆಯಲ್ಲಿ ಮತ ಚಲಾಯಿಸಿದ ಸ್ವಾತಂತ್ರ್ಯ ಹೋರಾಟಗಾರ್ತಿ ಭಬಾನಿ ಮಹತೋ
ಧೈರ್ಯಶಾಲಿ ಮತ್ತು ಅಪ್ರತಿಮ ವ್ಯಕ್ತಿತ್ವದವರಾದ ಭಬಾನಿ ಮಹತೋ ಭಾರತದ ಸ್ವಾತಂತ್ರ್ಯಕ್ಕಾಗಿ ದಶಕಗಳ ಐತಿಹಾಸಿಕ ಹೋರಾಡಿದವರು, ಮತ್ತು ಹಾಗೆ ಹೋರಾಡುತ್ತಲೇ ತನ್ನ ಕುಟುಂಬ ಮತ್ತು ಇತರ ಕ್ರಾಂತಿಕಾರಿಗಳನ್ನು ಸಾಕಿದವರು, ಅವರೆಲ್ಲರಿಗಾಗಿ ಅಡುಗೆ ಮಾಡಿ ಅವರನ್ನೆಲ್ಲ ಪೋಷಿಸಿದವರು. ಇಂತಹ ದಿಟ್ಟ ಹೋರಾಟದ ಮನೋಭಾವದ ಅವರು ಮೊನ್ನೆ 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಮತ ಚಲಾಯಿಸಿದರು. ಮತ್ತು ಆ ಮೂಲಕ ಸುಮಾರು 106 ವರ್ಷ ವಯಸ್ಸಿನ ಅವರು ತಮ್ಮ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯದ ಹೋರಾಟವನ್ನು ಮುಂದುವರಿಸಿದ್ದಾರೆ...