ಸರೋಜಿನಿಯು ಒಂದು ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಒಂದು ಷರ್ಟಿನ ಇಸ್ತ್ರಿ ಮಾಡಬಲ್ಲರು. ಪಂಚೆಯ ಇಸ್ತ್ರಿಗೆ ಎರಡು ನಿಮಿಷ ಹಿಡಿಯುತ್ತದೆ. ಕೆಲವೊಮ್ಮೆ ಸ್ವಲ್ಪ ನಿಧಾನಿಸಿ, ಹೆಚ್ಚು ಸುಕ್ಕುಗಟ್ಟಿದ ಷರ್ಟನ್ನು ಒದ್ದೆ ಬಟ್ಟೆಯ  ತುಣುಕುಗಳನ್ನು ತುಂಬಿದ ಕಾಲುಚೀಲವೊಂದರಿಂದ ತೀಡುತ್ತಾರೆ – ಇದು ಬಟ್ಟೆಯನ್ನು ಒದ್ದೆ ಮಾಡಿ ಸುಕ್ಕುಗಳಿಗೆ ಇಸ್ತ್ರಿ ಹಾಕುವ ಜಾಣತನದ ಯುಕ್ತಿ.

80ರ ವಯಸ್ಸಿನ ಸರೋಜಿನಿ, ಬಟ್ಟೆ ಒಗೆಯುವ ಕೆಲಸಕ್ಕೆಂದು ಮೀಸಲಾಗಿರುವ ಕೇರಳದ ಫೋರ್ಟ್‌ ಕೊಚಿನ್‌ನ ಧೋಬಿ ಖಾನಾ ಪ್ರದೇಶದಲ್ಲಿ 15ನೇ ವಯಸ್ಸಿನಿಂದಲೂ ಕೆಲಸವನ್ನು ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕವಾಗಿ ಬಟ್ಟೆ ಒಗೆಯುವ ಸ್ಥಳದಲ್ಲಿನ ತನ್ನ ಜಾಗದಲ್ಲಿ, ಇಸ್ತ್ರಿ ಮಾಡುವುದನ್ನು ಮುಂದುವರಿಸುತ್ತ, “ನಾನು ಆರೋಗ್ಯದಿಂದಿರುವವರೆಗೂ ಇದನ್ನು ನಿರ್ವಹಿಸುತ್ತೇನೆ (ಬಟ್ಟೆಗಳನ್ನು ಒಗೆಯುವುದು ಮತ್ತು ಇಸ್ತ್ರಿ ಮಾಡುವುದು)” ಎನ್ನುತ್ತಾರೆ ಆಕೆ.

ಇದೇ ಸ್ಥಳದಲ್ಲಿನ 60ರ ವಯಸ್ಸಿನ ಕುಮರೇಸನ್‌, “ಇಲ್ಲಿನ ಏಕೈಕ ಕೌಶಲವೆಂದರೆ, ಶ್ರಮವಹಿಸಿ ದುಡಿಯುವುದು” ಎನ್ನುತ್ತಾರೆ. ದಿನಂಪ್ರತಿ ಮುಂಜಾನೆ 5 ಗಂಟೆಗೆ ಅವರು ತಮ್ಮ ಮನೆಯಿಂದ ಒಂದು ಕಿ.ಮೀ.ಗಿಂತಲೂ ಕಡಿಮೆ ದೂರವಿರುವ ತೊಟ್ಟಿಗೆ ಸೈಕಲ್‌ನಲ್ಲಿ ಬರುತ್ತಾರೆ. ತುರ್ತಾಗಿ ಬಟ್ಟೆಗಳನ್ನು ತಲುಪಿಸಬೇಕಾದ ದಿನಗಳಲ್ಲಿ, ಅವರ ಕೆಲಸವು ಮುಂಜಾನೆ ೪ ಗಂಟೆಗೆ ಆರಂಭಗೊಂಡು, ರಾತ್ರಿ 11ರವರೆಗೂ ಮುಂದುವರಿಯುತ್ತದೆ. “ನಾಳೆ ಬಟ್ಟೆಗಳನ್ನು ತಲುಪಿಸಬೇಕಿರುವುದರಿಂದ ಇಂದು ನಾನು ಸ್ವಲ್ಪ ಆರಾಮವಾಗಿರಬಹುದು. ನಾಳೆ ನಾನು ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಬೇಕಾಗುತ್ತದೆ” ಎಂದು ಅವರು ತಿಳಿಸಿದರು.

Left: Kochi's Dhobi Khana, the public laundry, is located at one end of the Veli ground.
PHOTO • Vibha Satish
Right: Sarojini i roning out wrinkles; she has been working here since she was 15
PHOTO • Vibha Satish

ಎಡಕ್ಕೆ: ಸಾರ್ವಜನಿಕವಾಗಿ ಬಟ್ಟೆಯನ್ನು ಒಗೆಯುವ ಕೊಚಿನ್‌ನ ಧೋಬಿ ಖಾನ, ವೆಲಿ ಮೈದಾನದ ಒಂದು ಕೊನೆಯಲ್ಲಿದೆ. ಬಲಕ್ಕೆ: ಇಸ್ತ್ರಿ ಮಾಡಿ, ಸುಕ್ಕುಗಳನ್ನು ತೆಗೆಯುತ್ತಿರುವ ಸರೋಜಿನಿ; ತನ್ನ 15ನೇ ವಯಸ್ಸಿನಿಂದಲೂ ಇಲ್ಲಿನ ಕೆಲಸದಲ್ಲಿ ತೊಡಗಿದ್ದಾರೆ

ಗ್ರೇಟರ್‌ ಕೊಚಿನ್‌ ಡೆವಲಪ್‌ಮೆಂಟ್‌ ಅಥಾರಿಟಿಯಿಂದ ನಿರ್ಮಿಸಲ್ಪಟ್ಟ ಧೋಬಿ ಖಾನ, ಎರ್ನಾಕುಲಂ ಜಿಲ್ಲೆಯ ಫೋರ್ಟ್‌ ಕೊಚಿನ್‌ ಗ್ರಾಮದಲ್ಲಿ, ಎರಡು ಎಕರೆ ಪ್ರದೇಶದ, ವೆಲಿ ಮೈದಾನದ ಒಂದು ಕೊನೆಯಲ್ಲಿದ್ದು, ರಾಜ್ಯದಲ್ಲಿ, ಹಿಂದುಳಿದ ಜಾತಿಯ ಪಟ್ಟಿಗೆ ಸೇರಿಸಲ್ಪಟ್ಟ ವನ್ನನ್‌ ಸಮುದಾಯದವರಿಂದ ನಿರ್ವಹಿಸಲ್ಪಡುತ್ತದೆ. “ಇಲ್ಲಿನ ವನ್ನನ್‌ ಸಮುದಾಯದ ೧೫೦ ಕುಟುಂಬಗಳಲ್ಲಿ ಕೇವಲ ಸುಮಾರು 30 ಕುಟುಂಬಗಳು ಧೋಬಿ ಖಾನದಲ್ಲಿ ಕೆಲಸ ಮಾಡುತ್ತಿವೆ” ಎಂಬುದಾಗಿ, ಸಮುದಾಯದ ಕಾರ್ಯದರ್ಶಿ ಎಂ.ಪಿ. ಮೋಹನ್‌ ತಿಳಿಸುತ್ತಾರೆ.

ಈ ಸಮುದಾಯದ ಜನರಿಗೆ ತಮ್ಮ ಮಕ್ಕಳನ್ನು ಕುರಿತ ಮಹತ್ವಾಕಾಂಕ್ಷೆಯು ಧೋಬಿಯ ಕೆಲಸವನ್ನೂ ಮೀರಿದುದು. “ನನ್ನ ಮಕ್ಕಳಿಗೆ ಈ ಕೆಲಸವನ್ನು ಕಲಿಸಬೇಕೆಂದು ನನಗನಿಸಲಿಲ್ಲ. ಅವರಿಗೆ ನಾನು ವಿದ್ಯಾಭ್ಯಾಸವನ್ನು ನೀಡಿದ್ದೇನೆ. ಅವರು ಓದಿದ್ದಾರೆ. ಈಗ ಬದುಕು ಅವರದ್ದು” ಎನ್ನುತ್ತಾರೆ ಧೋಬಿ ಖಾನದ ಅಗಸ, ಕೆ.ಪಿ. ರಾಜನ್‌.

ಇದಕ್ಕೂ ಮೊದಲು 53ರ ವಯಸ್ಸಿನ ರಾಜನ್‌, ವಿವಿಧ ದಿನಗೂಲಿ ಉದ್ಯೋಗಗಳನ್ನು ನಿರ್ವಹಿಸಿದ್ದಾರೆ. ಕೇಬಲ್‌ಗಳನ್ನು ಹಾಕಲು ಅಗೆಯುವ ಕೆಲಸ, ಹುಲ್ಲು ಕತ್ತರಿಸುವುದು ಇತ್ಯಾದಿ. “ಆದರೆ ಈ ಕೆಲಸ(ಬಟ್ಟೆ ಒಗೆಯುವ ಹಾಗೂ ಇಸ್ತ್ರಿ ಮಾಡುವ)ವನ್ನು ನಾನೆಂದಿಗೂ ಬಿಟ್ಟಿಲ್ಲ. ಕೆಲವು ದಿನಗಳು ನನಗೆ 1000 ರೂ.ಗಳು, ಇನ್ನಿತರ ದಿನಗಳಲ್ಲಿ 500 ರೂ.ಗಳು ದೊರೆಯುತ್ತವೆ. ಕೆಲವು ದಿನಗಳಲ್ಲಿ ಏನೂ ಸಿಗದೆ ಮನೆಗೆ ತೆರಳುತ್ತೇವೆ. ಇದೆಲ್ಲವೂ ಆ ದಿನ ನಾವು ಮಾಡುವ ಕೆಲಸವನ್ನು ಅವಲಂಬಿಸಿರುತ್ತದೆ” ಎನ್ನುತ್ತಾರೆ.

ಧೋಬಿ ಖಾನದ ಕೆಲಸಗಾರರು ತಮ್ಮ ಗಿರಾಕಿಗಳನ್ನು ತಾವೇ ಹುಡುಕಿಕೊಳ್ಳಬೇಕು. ಬಟ್ಟೆಯನ್ನು ಒಗೆಯುವ, ಇಸ್ತ್ರಿ ಮಾಡುವ, ಬಿಳಿಪುಗೊಳಿಸುವ, ಹಿಗ್ಗಿಸುವ ಸೇವೆಗಳನ್ನು ಇವರು ಒದಗಿಸುತ್ತಾರೆ. ಒಂದು ಬಟ್ಟೆಯನ್ನು ಇಸ್ತ್ರಿ ಮಾಡಲು 15 ರೂ.ಗಳನ್ನು, ಒಗೆದು, ಇಸ್ತ್ರಿ ಮಾಡಲು 30 ರೂ.ಗಳನ್ನು ಪಾವತಿಸಬೇಕು.

Left: Between December and February, Dhobi Khana welcomes loads of laundry from tourists and visitors.
PHOTO • Vibha Satish
Right: Jayaprakash showing a tourist's gift of a dollar bill
PHOTO • Vibha Satish

ಎಡಕ್ಕೆ: ಡಿಸೆಂಬರ್‌ ಮತ್ತು ಫೆಬ್ರವರಿಯಲ್ಲಿ, ಧೋಬಿ ಖಾನ, ಪ್ರವಾಸಿಗರು ಮತ್ತು ಊರಿಗೆ ಭೇಟಿ ನೀಡುವವರಿಂದ ಬಟ್ಟೆಯ ರಾಶಿಯನ್ನು ಸ್ವಾಗತಿಸುತ್ತದೆ. ಪ್ರವಾಸಿಗರೊಬ್ಬರು ಕಾಣಿಕೆಯಾಗಿ ನೀಡಿದ ಡಾಲರ್‌ ಅನ್ನು ತೋರಿಸುತ್ತಿರುವ ಜಯಪ್ರಕಾಶ್‌

ಕುಮರೇಸನ್‌ ಹೇಳುವಂತೆ, ಹೋಟೆಲ್‌ ಮತ್ತು ತಂಗುಮನೆ(homestay)ಗಳು ಡಿಸೆಂಬರ್‌ ಮತ್ತು ಫೆಬ್ರವರಿಯಲ್ಲಿ ಪ್ರವಾಸಿಗರು ಮತ್ತು ಭೇಟಿಗಾರರೊಂದಿಗೆ ಸಡಗರದಲ್ಲಿರುತ್ತವೆ. ಈ ತಿಂಗಳುಗಳಲ್ಲಿ, ಧೋಬಿ ಖಾನ, ಒಗೆಯುವ ಬಟ್ಟೆಗಳ ರಾಶಿಯನ್ನು ಸ್ವಾಗತಿಸುತ್ತದೆ. ಇತರೆ ಸಮಯದಲ್ಲಿ, ಆಸ್ಪತ್ರೆಗಳು, ಸ್ಥಳೀಯ ಹೋಟೆಲ್‌ಗಳು ಮತ್ತು ಮನೆಗಳು ಅವರ ಗಿರಾಕಿಗಳು.

ರಾಷ್ಟ್ರೀಯ ಮಾದರಿ ಸಮೀಕ್ಷೆಯ 68ನೇ ಸುತ್ತಿನ ವರದಿಯಂತೆ , ಕಳೆದ ಕೆಲವು ದಶಕಗಳಲ್ಲಿ ಭಾರತೀಯ ಮನೆಗಳಲ್ಲಿನ ಜನರು ಬಟ್ಟೆ ಒಗೆಯುವ ಯಂತ್ರಗಳನ್ನು ಮತ್ತು ಲಾಂಡ್ರೊಮಾಟ್‌ಗಳನ್ನು ಬಳಸುವುದು ಹೆಚ್ಚಾಗಿದೆ.

ಆದರೆ ಧೋಬಿ ರಂಜನ್‌, ಈ ಪೈಪೋಟಿಯಿಂದ ವಿಚಲಿತಗರಾಗಿಲ್ಲ. “ಯಾವುದೇ ಯಂತ್ರಗಳು ನಿರ್ವಹಿಸಲಾಗದ ಗಂಜಿ ಹಾಕುವಂತಹ ಸಂಗತಿಗಳಿವೆ. ರಾಜಕಾರಣಿಗಳು ಧರಿಸುವ ಬಟ್ಟೆಗಳಿಗೆ ನಾವು ಕೈಯಿಂದ ಗಂಜಿ ಹಾಕಬೇಕು” ಎನ್ನುತ್ತಾರೆ ಆತ.

ಕಳೆದ 23 ವರ್ಷಗಳಿಂದ ಎ.ಎಸ್‌. ಜಯಪ್ರಕಾಶ್‌ ಧೋಬಿ ಖಾನೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಟ್ಟೆಗಳನ್ನು ಲಯಬದ್ಧವಾಗಿ ಬಡಿಯುತ್ತಾ 58ರ ಅವರು ಹೀಗೆನ್ನುತ್ತಾರೆ: “ಇದು ನಿಮ್ಮ ಕಾರ್ಪ್‌ರೆಟ್‌ ಕೆಲಸದಂತಲ್ಲ. ನಾವು ಯಾವಾಗ ಕೆಲಸ ಮಾಡಲು ಬಯಸುತ್ತೇವೆಂಬುದನ್ನು ನಾವು ನಿರ್ಧರಿಸುತ್ತೇವೆ.”

Veli Ground in Fort Kochi where the laundry is located
PHOTO • Vibha Satish

ಫೋರ್ಟ್‌ ಕೊಚಿನ್‌ನಲ್ಲಿ ಧೋಬಿಖಾನೆಯು ನೆಲೆಗೊಂಡಿರುವ ವೆಲಿ ಮೈದಾನ

Dhobis here begin their work as early as five in the morning
PHOTO • Vibha Satish

ಇಲ್ಲಿನ ಧೋಬಿಗಳು ಮುಂಜಾನೆ 5 ಗಂಟೆಯ ಹೊತ್ತಿಗಾಗಲೇ ತಮ್ಮ ಕೆಲಸವನ್ನು ಪ್ರಾರಂಭಿಸುತ್ತಾರೆ

Every worker is assigned a thotti (washing pen) to carry out washing. Some pens are unused due to decline in the workforce
PHOTO • Vibha Satish

ಪ್ರತಿಯೊಬ್ಬ ಕೆಲಸಗಾರನಿಗೂ ಒಗೆಯಲಿಕ್ಕೆಂದು ಒಂದು ತೊಟ್ಟಿಯನ್ನು ನಿಗದಿಪಡಿಸಲಾಗಿರುತ್ತದೆ. ಕೆಲಸಗಾರರು ಕಡಿಮೆಯಾಗಿರುವ ಕಾರಣ ಕೆಲವು ತೊಟ್ಟಿಗಳು ಬಳಕೆಯಾಗಿರುವುದಿಲ್ಲ

Kumaresan at work in his thotti
PHOTO • Vibha Satish

ತನ್ನ ತೊಟ್ಟಿಯಲ್ಲಿ ಕೆಲಸದಲ್ಲಿ ತೊಡಗಿರುವ ಕುಮರೇಸನ್‌

Kumaresan at work in his thotti
PHOTO • Vibha Satish

ಗಟ್ಟಿಮುಟ್ಟಾದ ಬಿದಿರಿನ ಕಂಬಗಳ ನಡುವೆ ಕಟ್ಟಿರುವ ಹಗ್ಗಗಳ ಮೇಲೆ ಬಟ್ಟೆಗಳನ್ನು ತೂಗುಹಾಕುತ್ತಿರುವ ಕಮಲಮ್ಮ

Rajan carefully tucking clothes between the ropes to keep them in place
PHOTO • Vibha Satish

ಬಟ್ಟೆಗಳು ಅವುಗಳ ಜಾಗದಲ್ಲಿರುವಂತೆ ಅವುಗಳ ಅಂಚನ್ನು ಬಿಗಿಯುತ್ತಿರುವ ರಾಜನ್‌

Unfazed by competition from modern laundromats and washing machines, Rajan says, ‘There are still things like starching that no machine can do. For the clothes worn by politicians, we need to do it by hand’
PHOTO • Vibha Satish

ಆಧುನಿಕ ವಾಷಿಂಗ್‌ ಮಷೀನುಗಳು ಮತ್ತು ಲಾಂಡ್ರೊಮಾಟ್‌ಗಳ ಪೈಪೋಟಿಯಿಂದ ವಿಚಲಿತರಾಗದ ರಾಜನ್‌, ‘ಯಾವುದೇ ಯಂತ್ರವೂ ನಿರ್ವಹಿಸಲಾಗದ ಗಂಜಿ ಹಾಕುವಂತಹ ವಿಷಯಗಳಿವೆ. ರಾಜಕಾರಣಿಗಳು ಧರಿಸುವ ಬಟ್ಟೆಗಳಿಗೆ ನಾವು ಕೈಯಿಂದ ಅದನ್ನು ಹಾಕಬೇಕುʼಎನ್ನುತ್ತಾರೆ

Crisp white laundry drying inside the ironing shed of Dhobi Khana
PHOTO • Vibha Satish

ಧೋಬಿ ಖಾನದ ಇಸ್ತ್ರಿ ಮಾಡುವ ಶೆಡ್‌ನಲ್ಲಿ ಒಣಗುತ್ತಿರುವ ಗರಿಗರಿಯಾದ ಬಿಳಿಯ ಬಟ್ಟೆಗಳು

Rajan folding a pile of freshly cleaned white bed sheets
PHOTO • Vibha Satish

ಈಗ ತಾನೆ ಸ್ವಚ್ಛಗೊಳಿಸಿದ ಬಿಳಿಯ ಬೆಡ್‌ ಶೀಟ್‌ಗಳ ರಾಶಿಯನ್ನು ಮಡಿಸುತ್ತಿರುವ ರಾಜನ್‌

One of the few mechanical dryers in use here
PHOTO • Vibha Satish

ಇಲ್ಲಿ ಬಳಸಲ್ಪಡುವ ಬಟ್ಟೆ ಒಣಗಿಸುವ ಯಂತ್ರಗಳಲ್ಲಿ ಇದೂ ಒಂದು

Taking break from his work, a worker sipping hot tea
PHOTO • Vibha Satish

ತನ್ನ ಕೆಲಸದಿಂದ ಬಿಡುವು ಪಡೆದ ಕೆಲಸಗಾರರೊಬ್ಬರು ಬಿಸಿ ಚಹಾ ಗುಟುಕರಿಸುತ್ತಿದ್ದಾರೆ

The ironing shed adorned with pictures of gods
PHOTO • Vibha Satish

ದೇವರ ಚಿತ್ರಗಳಿಂದ ಅಲಂಕರಿಸಲ್ಪಟ್ಟ ಇಸ್ತ್ರಿ ಮಾಡುವ ಶೆಡ್‌

The traditional box iron is a companion of the dhobis . Charcoal inside the box has to be burned to heat it before ironing
PHOTO • Vibha Satish

ಪಾರಂಪರಿಕ ಇಸ್ತ್ರಿ ಪೆಟ್ಟಿಗೆಯು ಅಗಸರ ಸಂಗಾತಿ. ಇಸ್ತ್ರಿಗೆ ಮೊದಲು ಅದನ್ನು ಬಿಸಿ ಮಾಡಲು ಪೆಟ್ಟಿಗೆಯ ಒಳಗೆ ಇದ್ದಿಲನ್ನು ಉರಿಸಬೇಕು

Sarojini, 80, blowing on a traditional box iron filled with hot coal
PHOTO • Vibha Satish

ಬಿಸಿ ಇದ್ದಿಲಿನಿಂದ ತುಂಬಿರುವ ಪಾರಂಪರಿಕ ಇಸ್ತ್ರಿ ಪೆಟ್ಟಿಗೆಗೆ ಗಾಳಿ ಊದುತ್ತಿರುವ 80ರ ವಯಸ್ಸಿನ ಸರೋಜಿನಿ

Sarojini uses a sock filled with tiny bits of wet cloth to keep the fabric wet and iron out wrinkles
PHOTO • Vibha Satish

ಸರೋಜಿನಿ, ಬಟ್ಟೆಯನ್ನು ಒದ್ದೆ ಮಾಡಿ ಸುಕ್ಕುಗಳನ್ನು ತೆಗೆಯಲು ಒದ್ದೆ ಬಟ್ಟೆಯ ಚಿಕ್ಕ ತುಣುಕುಗಳನ್ನು ತುಂಬಿದ ಕಾಲುಚೀಲವನ್ನು ಬಳಸುತ್ತಾರೆ

One of the first electric irons at Dhobi Khana that is still in use
PHOTO • Vibha Satish

ಮೊದಲು ಬಳಸುತ್ತಿದ್ದ ಇಲೆಕ್ಟ್ರಿಕ್‌ ಇಸ್ತ್ರಿ ಪೆಟ್ಟಿಗೆಗಳಲ್ಲಿ ಒಂದನ್ನು ಈಗಲೂ ಬಳಸಲಾಗುತ್ತಿದೆ

Sarojini meticulously folding a pile of freshly laundered clothes
PHOTO • Vibha Satish

ಸರೋಜಿನಿ, ಈಗ ತಾನೆ ಒಗೆದ ಬಟ್ಟೆಗಳನ್ನು ಜಾಗರೂಕತೆಯಿಂದ ಮಡಿಸುತ್ತಿದ್ದಾರೆ

Neatly tied bundles of clothes ready for delivery
PHOTO • Vibha Satish

ತಲುಪಿಸಲು ಸಿದ್ಧವಾಗಿರುವ ಅಚ್ಚುಕಟ್ಟಾಗಿ ಕಟ್ಟಿದ ಬಟ್ಟೆಯ ಮೂಟೆ

ಅನುವಾದ: ಶೈಲಜಾ ಜಿ.ಪಿ.

Student Reporter : Vibha Satish

Vibha Satish is a recent graduate of Azim Premji University, Bengaluru, with a master's degree in Development. With a keen interest in livelihoods and the interplay of culture within urban spaces, she reported this story as a part of her final year project.

Other stories by Vibha Satish
Editor : Siddhita Sonavane

Siddhita Sonavane is Content Editor at the People's Archive of Rural India. She completed her master's degree from SNDT Women's University, Mumbai, in 2022 and is a visiting faculty at their Department of English.

Other stories by Siddhita Sonavane
Editor : Riya Behl

రియా బెహల్ జెండర్, విద్యా సంబంధిత విషయాలపై రచనలు చేసే ఒక మల్టీమీడియా జర్నలిస్ట్. పీపుల్స్ ఆర్కైవ్ ఆఫ్ రూరల్ ఇండియా (PARI)లో మాజీ సీనియర్ అసిస్టెంట్ ఎడిటర్ అయిన రియా, PARIని తరగతి గదిలోకి తీసుకువెళ్ళడం కోసం విద్యార్థులతోనూ, అధ్యాపకులతోనూ కలిసి పనిచేశారు.

Other stories by Riya Behl
Photo Editor : Sanviti Iyer

సన్వితి అయ్యర్ పీపుల్స్ ఆర్కైవ్ ఆఫ్ రూరల్ ఇండియాలో కంటెంట్ కోఆర్డినేటర్. గ్రామీణ భారతదేశంలోని సమస్యలను డాక్యుమెంట్ చేయడానికి, నివేదించడానికి విద్యార్థులకు సహాయం చేయడం కోసం ఆమె వారితో కలిసి పనిచేస్తున్నారు.

Other stories by Sanviti Iyer
Translator : Shailaja G. P.

Shailaja ([email protected]) is an author and translator of Kannada language. She has translated Khalid Hussain’s ‘The Kite Runner’ and Francis Buchanan’s ‘A Journey from Madras through the Countries of Mysore Canara and Malabar’ to Kannada. Many of her articles about various social issues including gender equality, women empowerment have been published in print media. Shailaja is also contributing as a translator for NGOs like Point of View, Helpage India and National Federation of the Blind.

Other stories by Shailaja G. P.