" ಈ ತಗಡಿನ ಹಲಗೆ ಬಹಳ ಉಪಯುಕ್ತ. ಆದರೆ, ನಮ್ಮ ಪಾಡಾ ಮಾತ್ರ ಇನ್ನೂ ಕತ್ತಲಲ್ಲೇ ಮುಳುಗಿದೆ. ಹಾಗಾಗಿ, ನಾನು ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಂದಿದ್ದೇನೆ. ಈಗಲಾದರೂ ನಮಗೆ ಬೆಳಕು ನೀಡಿ ಎಂದು ಫೆಬ್ರವರಿ 20-21ರಂದು ನಾಸಿಕ್‌ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಮಂಗಲ್‌ ಘಾಡ್ಗೆ ಹೇಳಿದರು. ತನ್ನ ತಲೆ ಮೇಲೆ ಇಟ್ಟುಕೊಂಡಿದ್ದ ಸೌರ ಫಲಕ ಜಾರಿ ಬೀಳದಂತೆ ಜಾಗ್ರತೆ ವಹಿಸುತ್ತಲೇ ಆಕೆ ಮಾತನಾಡಿದ ಆಕೆ, “ಸೂರ್ಯನ ಕಿರಣ ಈ ಹಲಗೆ ಮೇಲೆ ಬಿದ್ದಾಗ ಅದು ಶಾಖವನ್ನು ಹೀರಿಕೊಳ್ಳುತ್ತದೆ. ಇದನ್ನು ಪ್ರತಿದಿನ ಸಾಯಂಕಾಲ ಮೊಬೈಲ್‌ ಅಥವಾ ಟಾರ್ಚ್‌ ರಿಚಾರ್ಜ್‌ ಮಾಡಲು ಬಳಸುತ್ತೇವೆ. ಇದರಿಂದ ಒಂದಿಷ್ಟು ಅನುಕೂಲ ಆಗಿದೆ” ಎಂದರು.

ಮಂಗಲ್ (ಮೇಲೆ ಕವರ್‌ ಫೋಟೊದಲ್ಲಿ ಕಾಣಿಸುವ ಮಹಿಳೆ) ನಾಸಿಕ್‌ ಜಿಲ್ಲೆಯ ದಿಂಡೋರಿ ತಾಲೂಕಿನ ಶಿಂದ್ವಾಡಾ ಗ್ರಾಮದಿಂದ ಅರ್ಧ ಕಿ.ಮಿ. ದೂರದಲ್ಲಿರುವ ಕುಗ್ರಾಮವೊಂದರ ಮಹಿಳೆಯಾಗಿದ್ದು, ಮನೆಗಳನ್ನು ಹೊಂದಿರುವ ಇಲ್ಲಿ ಆಕೆಯ ಹಾಗೆ ಇತರ ಹಲವರು ಇಂತಹ ಸೌರ ಫಲಕಗಳನ್ನು ಹೊಂದಿದ್ದಾರೆ. ಇಲ್ಲಿನ ಎಲ್ಲ ನಿವಾಸಿಗಳು ಪರಿಶಿಷ್ಟ  ಪಂಗಡಕ್ಕೆ ಸೇರಿದ ಮಹಾದೇವ್‌ ಕೋಳಿ ಸಮುದಾಯಕ್ಕೆ ಸೇರಿದ್ದು, ಜೀವನೋಪಾಯಕ್ಕಾಗಿ ಅರಣ್ಯ ಭೂಮಿಯಲ್ಲಿ ಭತ್ತ, ರಾಗಿ ಮತ್ತು ತೊಗರಿ ಬೆಳೆಯುತ್ತಾರೆ. ೨೦೧೮ರ ಅನಾವೃಷ್ಟಿಯಿಂದ ಹೆಚ್ಚಿನ ರೈತರ ಬೆಳೆ ನಾಶವಾಗಿದೆ. ಕೆಲವರಿಗೆ ಒಂದಿಷ್ಟು ಬಳೆ ಕೈಗೆ ಬಂದಿದೆಯಾದರೂ, ಅದರ ಪ್ರಮಾಣ ನಗಣ್ಯ.‌

ಮಂಗಲ್‌ ತನ್ನ ಬಳಿ ಇರುವ ಸೌರ ಫಲಕವನ್ನು ಒಂದು ವರ್ಷ ಹಿಂದೆ ಖರೀದಿಸಿದ್ದಳು. “ನಮ್ಮ ಪಾಡಾದವರ ಪೈಕಿ ಒಬ್ಬರು ಇದನ್ನು ತಂದಿದ್ದರು. ನನಗೂ ಒಂದು ಕೊಡು ಎಂದು ಹೇಳಿದೆ. ಆಬಳಿಕ ಇತರರು ಕೂಡ ಖರೀದಿಸಲು ಮುಂದೆ ಬಂದರು. ಇದರ ಬೆಲೆ ರೂ. 250- ನಮ್ಮ ಒಂದು ದಿನದ ಗಳಿಕೆಗೆ ಸಮ” ಎಂದಾಕೆ ತಿಳಿಸಿದರು.

A man smiling during the march .
PHOTO • Jyoti
Two men during the march
PHOTO • Jyoti

ಜಾನು ತೋರ್ಕೆ (ಎಡ) ಮತ್ತು  ಪವನ್‌ ಸೋನು (ಬಲ): 'ಕತ್ತಲಲ್ಲಿ ನಮ್ಮ ಮಕ್ಕಳು ಓದುವುದಾದರೂ ಹೇಗೆ?'

ಮಂಗಲ್‌ ಬಳಿ ರಿಚಾರ್ಜ್‌ ಮಾಡುವ ಒಂದು ಲ್ಯಾಂಪ್‌ ಕೂಡ ಇದೆ. ಸದ್ಯಕ್ಕೆ ಹತ್ತನೇ ತರಗತಿಯಲ್ಲಿ ಓದುತ್ತಿರುವ ಆಕೆಯ ಮಗ ಅದನ್ನು ಋಾತ್ರಿ ಹೊತ್ತು ಓದಲು ಮತ್ತು ಬರೆಯಲು ಉಪಯೋಗಿಸುತ್ತಾನೆ. “ಈ ಹಲಗೆ ಇರುವ ಕಾರಣ ಕನಿಷ್ಟ ಪಕ್ಷ ಅವನ ಓದಿಗೆ ಒಂದಿಷ್ಟು ಸಹಾಯವಾಗಿದೆ. ಕತ್ತಲಲ್ಲೇ ಮುಳುಗಿರುವನಮಗೆ ಇದೊಂದೇ ಭರವಸೆಯ ಬೆಳಕು” ಎಂದು ಮಂದಹಾಸ ಬೀರುತ್ತಲೇ ಆಕೆ ಹೇಳಿದರು.

ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಇತರ ಹಲವಾರು ಜನರ ತಲೆ ಮೇಲೆ ಅಥವಾ ಕೈಯಲ್ಲಿ ಇಂತಹ ಸೌರ ಫಲಕಗಳು ಕಾಣಿಸುತ್ತಿದ್ದವು. ಅವರ ಪೈಕಿ (2011ರ ಜನಗಣತಿ ಪ್ರಕಾರ) 108 ಮನೆಗಳನ್ನು ಹೊಂದಿರುವ ಪಾಯರಪಾಡಾ ಗ್ರಾಮದಿಂದ ಬಂದಿದ್ದ ಪವನ್‌ ಸೋನು (28) ಮತ್ತು ಜಾನು ತೋರ್ಕೆ  (30) ಕೂಡ ಇದ್ದು, ಅವರು ಜಲಕ್ಷಾಮ ಮತ್ತು ಬೆಳೆನಷ್ಟದ ಕುರಿತು ವಿವರಿಸಿದರು.

“ನಮ್ಮ 12 ಗುಡಿಸಲುಗಳು ಇರುವುದು ಊರಿನ ಹೊರವಲಯದಲ್ಲಿ. ಊರಿಗೆ ವಿದ್ಯಿತ್‌ ಸಂಪಕ ಇದೆ. ನಮ್ಮ  ಕೇರಿಗೆ ಮಾತ್ರ ಇಲ್ಲ. ರಾತ್ರಿ ಹೊತ್ತಿನಲ್ಲಿ ನಮ್ಮ ಮಕ್ಕಳು ಓದುವುದೆ ಹೇಗೆ? “ ಎಂದು ಪವನ್‌ ಕೇಳುತ್ತಾರೆ. “ಪ್ರತೀ ತಿಂಗಳು ರೇಶನ್‌ ಮೂಲಕ ಎರಡು ಲೀಟರ್‌ ಸೀಮೆ ಎಣ್ಣೆ ಸಿಗುತ್ತದೆ. ಇಷ್ಟರಲ್ಲೇ ಅಡುಗೆಯನ್ನೂ ಬೇಯಿಸಬೇಕು, ದೀಪವನ್ನೂ ಉರಿಸಬೇಕು ಎಂದರೆ ಹೇಗೆ ಸಾಧ್ಯ?” ಸರಕಾರವು ಇತ್ತ ಭೂಮಿಯ ಹಕ್ಕನ್ನೂ ಕೊಡುತ್ತಿಲ್ಲ. ಅತ್ತ ಮೂಲಸೌಕಯ ಕೂಡ ಒದಗಿಸುತ್ತಿಲ್ಲ. ನಮ್ಮ ಕನಿಷ್ಟ ಗಳಿಕೆಯ ಹಣ ವ್ಯಯಿಸಿ ಇಂತಹ ಪರಿಕರಗಳನ್ನು  ಖರೀದಿಸಿ ಬೆಳಕಿನ ವ್ಯವಸ್ಥೆ ನಾವೇ ಮಾಡಿಕೊಳ್ಳಬೇಕೇ?”

ಅನುವಾದ: ದಿನೇಶ ನಾಯಕ್

జ్యోతి పీపుల్స్ ఆర్కైవ్ ఆఫ్ రూరల్ ఇండియా లో సీనియర్ రిపోర్టర్. ‘మి మరాఠీ’, ‘మహారాష్ట్ర 1’ వంటి వార్తా చానెళ్లలో ఆమె గతంలో పనిచేశారు.

Other stories by Jyoti
Text Editor : Sharmila Joshi

షర్మిలా జోషి పీపుల్స్ ఆర్కైవ్ ఆఫ్ రూరల్ ఇండియా మాజీ ఎగ్జిక్యూటివ్ ఎడిటర్, రచయిత, అప్పుడప్పుడూ ఉపాధ్యాయురాలు కూడా.

Other stories by Sharmila Joshi
Translator : Dinesh Nayak

Dinesh Nayak is a senior journalist, author and translator based in Hubballi, Karnataka. Earlier he had worked with Times of India, The Hindu and other publications. He has translated literary and reasearch works for the Sahitya Akademi, New Delhi and Kuvempu Bhasha Bharati Pradhikara, Bengaluru.

Other stories by Dinesh Nayak