ನಾವು ಆದಿವಾಸಿಗಳು ನವಜಾತ ಶಿಶುಗಳಿಗೆ ಹೆಸರನ್ನು ಇಡಲು ನಮ್ಮದೇ ಆದ ವಿಧಾನಗಳನ್ನು ಹೊಂದಿದ್ದೇವೆ. ನಾವು ನದಿಗಳು, ಕಾಡುಗಳು, ಅವುಗಳ ಭೂಮಿ, ವಾರದ ದಿನಗಳು, ಅಥವಾ ಒಂದು ನಿರ್ದಿಷ್ಟ ದಿನಾಂಕ ಅಥವಾ ಪೂರ್ವಜರ ಹೆಸರನ್ನು ಸಹ ಇಡುತ್ತೇವೆ. ಆದರೆ, ಸಮಯ ಕಳೆದಂತೆ, ನಾವು ಬಯಸಿದ ರೀತಿಯಲ್ಲಿ ನಮ್ಮನ್ನು ಹೆಸರಿಸುವ ನಮ್ಮ ಹಕ್ಕನ್ನು ನಮ್ಮಿಂದ ಕಸಿದುಕೊಳ್ಳಲಾಯಿತು.  ಸಂಘಟಿತ ಧರ್ಮ ಮತ್ತು ಮತಾಂತರಗಳು ಈ ವಿಶಿಷ್ಟ ಹಕ್ಕನ್ನು ಕಸಿದುಕೊಂಡವು. ನಮ್ಮ ಹೆಸರುಗಳು ಬದಲಾಗುತ್ತಲೇ ಇದ್ದವು, ಮತ್ತು ಅವುಗಳನ್ನು ಮರು ನಿಯೋಜಿಸಲಾಯಿತು. ಆದಿವಾಸಿ ಮಕ್ಕಳು ನಗರದ ಆಧುನಿಕ ಶಾಲೆಗಳಿಗೆ ಹೋದಾಗ, ಸಂಘಟಿತ ಧರ್ಮವು ನಮ್ಮ ಹೆಸರುಗಳನ್ನು ಬದಲಾಯಿಸಿತು. ಅವರು ಪಡೆದ ಪ್ರಮಾಣಪತ್ರಗಳು ನಮ್ಮ ಮೇಲೆ ಬಲವಂತವಾಗಿ ಹೇರಲಾದ ಹೊಸ ಹೆಸರುಗಳಲ್ಲಿದ್ದವು. ನಮ್ಮ ಭಾಷೆಗಳು, ನಮ್ಮ ಹೆಸರುಗಳು, ನಮ್ಮ ಸಂಸ್ಕೃತಿ ಮತ್ತು ಇತಿಹಾಸಗಳು ಈ ರೀತಿಯಾಗಿ ಕೊಲ್ಲಲ್ಪಟ್ಟವು. ಈ ರೀತಿಯಾಗಿ ಹೆಸರಿಸುವುದರಲ್ಲಿ ಪಿತೂರಿ ಇದೆ. ಇಂದು ನಾವು ನಮ್ಮ ಬೇರುಗಳೊಂದಿಗೆ, ನಮ್ಮ ಇತಿಹಾಸದೊಂದಿಗೆ ಸಂಪರ್ಕ ಹೊಂದಿರುವ ಆ ಭೂಮಿಯನ್ನು ಹುಡುಕುತ್ತಿದ್ದೇವೆ. ನಮ್ಮ ಅಸ್ತಿತ್ವದೊಂದಿಗೆ ಗುರುತಿಸಲಾದ ಆ ದಿನಗಳು ಮತ್ತು ದಿನಾಂಕಗಳನ್ನು ನಾವು ಹುಡುಕುತ್ತಿದ್ದೇವೆ.

ಜೆಸಿಂತಾ ಕೆರ್ಕೆಟ್ಟಾ ಹಿಂದಿಯಲ್ಲಿ ಕವಿತೆ ಓದುವುದನ್ನು ಕೇಳಿ

ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಪದ್ಯದ ಇಂಗ್ಲಿಷ್‌ ಅನುವಾದವನ್ನು ಆಲಿಸಿ

ಇದು ಯಾರ ಹೆಸರು?

ನಾನು ಸೋಮವಾರದಂದು ಹುಟ್ಟಿದವ
ಅದಕ್ಕೇ ನನ್ನನ್ನು ಸೋಮ್ರಾ ಎಂದು ಕರೆಯಲಾಗುತ್ತದೆ.
ಮಂಗಳವಾರ ಜನಿಸಿದ ನನ್ನನ್ನು ಮಂಗಳ, ಮಂಗರ್‌ ಎಂದು ಕರೆಯಲಾಗುತ್ತದೆ.
ಬೃಹಸ್ಪತಿ ವಾರದ ದಿನ ಜನಿಸಿದ ನಾನು ಬಿರ್ಸಾ ಎನ್ನುವ ಹೆಸರಿನಿಂದ ಕರೆಯಲ್ಪಡುತ್ತೇನೆ.

ನಾನು ದಿನ, ತಾರೀಖುಗಳಂತೆ
ನನ್ನದೇ ಕಾಲದ ಮೇಲೆ ನಿಂತಿದ್ದೆ
ಆದರೆ ಅವರು ಬಂದು ನನ್ನ ಹೆಸರು ಬದಲಾಯಿಸಿದರು
ಹೆಸರಿನೊಂದಿಗೆ ನನ್ನ ದಿನಗಳು, ತಾರೀಖುಗಳು ಅಳಿಸಿಹೋದವು
ಅವೆಲ್ಲವೂ ನನ್ನದಾಗಿತ್ತು, ಅದು ನನ್ನ ಕಾಲವಾಗಿತ್ತು

ಈಗ ನಾನು ರಮೇಶ್, ನರೇಶ್ ಅಥವಾ ಮಹೇಶ್ ಆಗಿದ್ದೇನೆ
ಅಥವಾ ಆಲ್ಬರ್ಟ್, ಗಿಲ್ಬರ್ಟ್, ಆಲ್ಫ್ರೆಡ್.
ಈ ಹೆಸರುಗಳು ನನ್ನ ನೆಲದ ಹೆಸರುಗಳಲ್ಲ
ಈ ಹೆಸರುಗಳ ನೆಲ ನನ್ನನ್ನು ಸೃಷ್ಟಿಸಲಿಲ್ಲ
ಅವರ ಇತಿಹಾಸ ನನ್ನ ಇತಿಹಾಸವಲ್ಲ

ನಾನು ಅವರ ಇತಿಹಾಸದೊಳಗೆ.
ನನ್ನ ಇತಿಹಾಸಕ್ಕಾಗಿ ಹುಡುಕುತ್ತಿದ್ದೇನೆ
ಆದರೆ ಅಲ್ಲಿ ಕಾಣುವುದೇ ಬೇರೆ
ಪ್ರಪಂಚದ ಪ್ರತಿಯೊಂದು ಮೂಲೆಯಲ್ಲಿ, ಎಲ್ಲೆಡೆ
ನನ್ನ ಕೊಲೆ ಸರ್ವೇಸಾಮಾನ್ಯ.
ಮತ್ತು ಪ್ರತಿಯೊಂದು ಕೊಲೆಗೂ ಒಂದು ಸುಂದರವಾದ ಹೆಸರಿರುತ್ತದೆ.

ಅನುವಾದ: ಶಂಕರ. ಎನ್. ಕೆಂಚನೂರು

Poem and Text : Jacinta Kerketta

ఒరాన్ ఆదివాసీ సమాజానికి చెందిన జసింతా కెర్కెట్టా జార్ఖండ్ గ్రామీణ ప్రాంతానికి చెందిన స్వతంత్ర రచయిత, పాత్రికేయురాలు. ఆమె ఆదివాసీ సంఘాల పోరాటాలను వివరిస్తూ, వారు ఎదుర్కొంటున్న అన్యాయాలపై దృష్టిని ఆకర్షించే కవయిత్రి కూడా.

Other stories by Jacinta Kerketta
Painting : Labani Jangi

లావణి జంగి 2020 PARI ఫెలో. పశ్చిమ బెంగాల్‌లోని నాడియా జిల్లాకు చెందిన స్వయం-బోధిత చిత్రకారిణి. ఆమె కొల్‌కతాలోని సెంటర్ ఫర్ స్టడీస్ ఇన్ సోషల్ సైన్సెస్‌లో లేబర్ మైగ్రేషన్‌పై పిఎచ్‌డి చేస్తున్నారు.

Other stories by Labani Jangi
Editor : Pratishtha Pandya

PARI సృజనాత్మక రచన విభాగానికి నాయకత్వం వహిస్తోన్న ప్రతిష్ఠా పాండ్య PARIలో సీనియర్ సంపాదకురాలు. ఆమె PARIభాషా బృందంలో కూడా సభ్యురాలు, గుజరాతీ కథనాలను అనువదిస్తారు, సంపాదకత్వం వహిస్తారు. ప్రతిష్ఠ గుజరాతీ, ఆంగ్ల భాషలలో కవిత్వాన్ని ప్రచురించిన కవయిత్రి.

Other stories by Pratishtha Pandya
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru