ಸಿಂಘುವಿನಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯು ಪ್ರತಿಭಟನಾ ಸ್ಥಳದ ಸನಿಹದಲ್ಲೇ ಪಾದಚಾರಿ ಮಾರ್ಗಗಳಲ್ಲಿ ಮತ್ತು ಕೊಳೆಗೇರಿ ಕಾಲೊನಿಗಳಲ್ಲಿ ವಾಸಿಸುತ್ತಿರುವ ಕುಟುಂಬಗಳನ್ನು ಸೆಳೆಯಿತು, ಮುಖ್ಯವಾಗಿ ಅವರು ಇಲ್ಲಿನ ಲಂಗರ್‌ಗಳಲ್ಲಿ ಸಿಗುವ ಉಚಿತ ಊಟಕ್ಕಾಗಿ ಬರುತ್ತಿದ್ದಾರೆ. ಮತ್ತು ಈ ಸಮುದಾಯ ಅಡುಗೆ ಮನೆಗಳು ಎಲ್ಲರನ್ನೂ ಸ್ವಾಗತಿಸುತ್ತವೆ.