ರಾಜು ದುಮರ್‌ಗೊಂಯಿ ಅವರು ತಾರ್ಪಿ (ತಾರ್ಪಾ ಎಂದೂ ಕರೆಯುತ್ತಾರೆ) ನುಡಿಸಲು ಪ್ರಾರಂಭಿಸುತ್ತಿದ್ದಂತೆ ಅವರ ಕೆನ್ನೆಗಳು ಉಬ್ಬಿಕೊಳ್ಳುತ್ತವೆ. ಬಿದಿರು ಮತ್ತು ಒಣಗಿದ ಸೋರೆಕಾಯಿ ಬುರುಡೆ ಬಳಸಿ ಮಾಡಿದ ಈ ಐದು ಅಡಿ ಉದ್ದದ ಸಂಗೀತ ವಾದ್ಯವು ಉಸಿರು ತುಂಬಿದ ತಕ್ಷಣವೇ ಜೀವಂತವಾಗಿ ಅದರ ಇಂಪು ವಾತಾವರಣದಲ್ಲಿ ಹರಡುತ್ತದೆ.
2020ರ ಡಿಸೆಂಬರ್ 27ರಿಂದ 29ರವರೆಗೆ ರಾಜ್ಯ ಸರ್ಕಾರ ಆಯೋಜಿಸಿದ್ದ ರಾಷ್ಟ್ರೀಯ ಬುಡಕಟ್ಟು ನೃತ್ಯ ಉತ್ಸವದಲ್ಲಿ ಈ ಸಂಗೀತಗಾರ ಮತ್ತು ಅವರ ವಾದ್ಯವನ್ನು ಸುತ್ತಲಿದ್ದವರು ಗಮನಿಸದೆ ಇರುವ ಹಾಗಿರಲಿಲ್ಲ. ಈ ಕಾರ್ಯಕ್ರಮವನ್ನು ಛತ್ತೀಸಗಢದ ರಾಯ್ಪುರದಲ್ಲಿ ಅಯೋಜಿಸಲಾಗಿತ್ತು.
ಸಂಗೀತಗಾರ ರಾಜು ಮಹಾರಾಷ್ಟ್ರದ ಪಾಲ್ಘರ್ ಎನ್ನುವಲ್ಲಿರುವ ಮೊಖಡಾ ಗುಣದಜಪಾಡಾ ಎನ್ನುವ ಊರಿನವರು. ಅವರು ಈ ವಾದ್ಯವನ್ನು ದಸರಾ, ನವರಾತ್ರಿ ಹಾಗೂ ಇತರ ಹಬ್ಬಗಳ ಸಮಯದಲ್ಲಿ ನುಡಿಸುವುದಾಗಿ ತಿಳಿಸಿದರು.
ಇದನ್ನೂ ಓದಿ: 'ನನ್ನ ತಾರ್ಪಾ ನನ್ನ ದೇವರು'
ಅನುವಾದ: ಶಂಕರ. ಎನ್. ಕೆಂಚನೂರು