ಪರಿ ಲೈಬ್ರರಿ 2024ರ ವರ್ಷದಲ್ಲಿ ಒಂದು ಮೈಲಿಗಲ್ಲನ್ನೇ ಸಾಧಿಸಿದೆ. ನಾವು ಈ ವರ್ಷ ದಾಖಲೆ ಸಂಖ್ಯೆಯ ಸಂಪನ್ಮೂಲಗಳನ್ನು ಸಂಗ್ರಹಿಸಿ ಆರ್ಕೈವ್ ಮಾಡಿದ್ದೇವೆ. ಇವುಗಳಲ್ಲಿ ಕಾಯಿದೆಗಳು ಮತ್ತು ಕಾನೂನುಗಳು, ಪುಸ್ತಕಗಳು, ಸಮಾವೇಶಗಳು, ಪ್ರಬಂಧಗಳು, ಸಂಕಲನಗಳು, ಶಬ್ದಕೋಶಗಳು, ಸರ್ಕಾರಿ ವರದಿಗಳು, ಕರಪತ್ರಗಳು, ಸಮೀಕ್ಷೆಗಳು ಮತ್ತು ಲೇಖನಗಳು ಸೇರಿವೆ.

ಈ ನಡುವೆ 2024ರ ವರ್ಷವು ದಾಖಲೆಯ ಉಷ್ಣತೆಯನ್ನು ದಾಖಲಿಸಲಿದೆ. ಇದು 2023ನೇ ಇಸವಿಯ ಅತ್ಯಧಿಕ ಉಷ್ಣತೆಯ ದಾಖಲೆಯನ್ನು ಹಿಂದಿಕ್ಕಿ ಈ ದಾಖಲೆಯನ್ನು ಸೃಷ್ಟಿಸಲಿದೆ.  ಬದಲಾಗುತ್ತಿರುವ ಹವಾಗುಣವು ವಲಸೆ ಪ್ರಭೇದಗಳ ಮೇಲೆ ಪರಿಣಾಮ ಬೀರಿದೆ, ಅವುಗಳಲ್ಲಿ ಐದರಲ್ಲಿ ಒಂದು ಈಗ ಅಳಿವಿನ ಅಂಚಿನಲ್ಲಿದೆ. ಮತ್ತು ಭಾರತದ ತರಿ ಭೂಮಿ , ಸರೋವರ, ಕೆರೆ, ಕೊಳ, ಹಳ್ಳ ನದಿ ಎಲ್ಲವೂ ಅಪಾಯದಲ್ಲಿವೆ.

ಮಾಲಿನ್ಯ ಮತ್ತು ಉಷ್ಣತೆಯ ನಡುವಿನ ಸಂಬಂಧವನ್ನು ಇಲ್ಲಿನ ದಾಖಲೆಗಳಲ್ಲಿ ಅತ್ಯುತ್ತಮವಾಗಿ ದಾಖಲಿಸಲಾಗಿದೆ. ಧೂಳಿನ ಕಣಗಳಿಂದಾಗಿ ಉಂಟಾಗುವ ಗಾಳಿ ಮಾಲಿನ್ಯವು ದಕ್ಷಿಣ ಏಷ್ಯಾದಲ್ಲಿ ವಿಶೇಷವಾಗಿ ದಾಖಲೆ ಮಟ್ಟದಲ್ಲಿದೆ. ಭಾರತದಲ್ಲಿ ಇದರ ಸಾಂದ್ರತೆ ಪ್ರತಿ ಘನ ಮೀಟರಿಗೆ 54.4 ಮೈಕ್ರೋಗ್ರಾಂ. ಇದು ದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿದ ಮಿತಿಗಿಂತ 11 ಪಟ್ಟು ಹೆಚ್ಚು. ಹೊಸದೆಹಲಿಯಲ್ಲಿ ಈ ಸಾಂದ್ರತೆಯ ಮಟ್ಟ ಪ್ರತಿ ಘನ ಮೀಟರಿಗೆ 102.1 ಮೈಕ್ರೋಗ್ರಾಂಗಳಷ್ಟಿತ್ತು, ಇದು ಇನ್ನೂ ಆತಂಕಕಾರಿ ಮಟ್ಟ. ಈ ಒಂದು ಘಟನೆಯು ರೈಡ್‌ - ಸೋರ್ಸಿಂಗ್‌ ಸೇವೆ ನೀಡುವ ಗಿಗ್‌ ಕೆಲಸಗಾರರ ಅನುಭವವನ್ನು ಕಟ್ಟಿಕೊಕೊಡುವ ಕಾಮಿಕ್‌ ಪುಸ್ತಕವೊಂದರ ಪ್ರಕಟಣೆಗೆ ಕಾರಣವಾಯಿತು.

PHOTO • Design courtesy: Dipanjali Singh

ಸತತ ಎರಡು ವರ್ಷಗಳ ನಿರಂತರ ತಾಪಮಾನ ದಾಖಲೆಗಳ ನಂತರ, ಪ್ಯಾರಿಸ್ ಒಪ್ಪಂದವು ಉಲ್ಲಂಘನೆಯಾಗುವ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ. ತಾಪಮಾನದ ಹೆಚ್ಚಳವನ್ನು ಕೇವಲ ಪ್ರಕೃತಿಯಷ್ಟೇ ಅನುಭವಿಸಿಲ್ಲ. ಈ ಬಾರಿ 18ನೇ ಲೋಕಸಭೆಗೆ ನಡೆದ 2024ರ ಸಾರ್ವತ್ರಿಕ ಚುನಾವಣೆಯ ಕಾರಣದಿಂದಾಗಿ ರಾಷ್ಟ್ರ ರಾಜಕೀಯ ವಲಯದಲ್ಲೂ ಕಾವೇರಿದ ವಾತಾವರಣ ಏರ್ಪಟ್ಟಿತ್ತು.

ಭಾರತ ಸರ್ಕಾರದ ಹಣಕಾಸು ಸಚಿವಾಲಯವು 2018ರಲ್ಲಿ ಪರಿಚಯಿಸಿದ ಎಲೆಕ್ಟೋರಲ್‌ ಬಾಂಡ್‌ ಯೋಜನೆಯನ್ನು ಫೆಬ್ರವರಿ 15, 2024ರಂದು ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ಪರಿಗಣಿಸಿತು. ಇದಾದ ಒಂದು ತಿಂಗಳ ನಂತರ ಒಂದು ತಿಂಗಳ ನಂತರ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಚುನಾವಣಾ ಆಯೋಗ ಈ ಬಾಂಡ್‌ ಪತ್ರಗಳ ಖರೀದಿ ಹಾಗೂ ನಗದೀಕರಣಕ್ಕೆ ಸಂಬಂಧಿಸಿದ ವಿವರಗಳನ್ನು ಮಾಡಿದವು.

ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸರ್ವೀಸಸ್ (ಪಿಆರ್ ಮತ್ತು ಪ್ರೈವೇಟ್ ಲಿಮಿಟೆಡ್), ಮೇಘಾ ಎಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ಸ್ ಲಿಮಿಟೆಡ್ ಮತ್ತು ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಎಲೆಕ್ಟೋರಲ್‌ ಬಾಂಡ್‌ ಮೂಲಕ ರಾಜಕೀಯ ಪಕ್ಷಗಳಿಗೆ ಅತಿಹೆಚ್ಚು ದೇಣಿಗೆ ನೀಡಿದವರಲ್ಲಿ ಮೊದಲ ಮೂರು ಸ್ಥಾನದಲ್ಲಿರುವ ಕಂಪನಿಗಳು. ಭಾರತೀಯ ಜನತಾ ಪಕ್ಷ (6,060 ಕೋಟಿ ರೂ.), ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (1,609 ಕೋಟಿ ರೂ.) ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (1,422 ಕೋಟಿ ರೂ.) ಅತಿ ಹೆಚ್ಚು ಮೊತ್ತದ ಹಣವನ್ನು ಸ್ವೀಕರಿಸಿದ ಪಕ್ಷಗಳು .

ಭಾರತದಲ್ಲಿನ ಸಂಪತ್ತಿನ ಹಂಚಿಕೆಗೆ ಸಂಬಂಧಿಸಿದಂತೆ 1922 ಮತ್ತು 2022ರ ನಡುವೆ ಶೇಕಡವಾರು ಹೋಲಿಕೆಯನ್ನು ಹೋಲಿಸಿ ನೋಡಿದಾಗ, 1922ರಲ್ಲಿ ಅವರು ಹೊಂದಿದ್ದ ರಾಷ್ಟ್ರೀಯ ಆದಾಯದ ಪಾಲಿಗಿಂತಲೂ ದೊಡ್ಡ ಪಾಲನ್ನು 2022ರಲ್ಲಿ ಹೊಂದಿದ್ದಾರೆ. 2022ರಲ್ಲಿ ರಾಷ್ಟ್ರೀಯ ಆದಾಯದ ಸುಮಾರು 60 ಪ್ರತಿಶತದಷ್ಟು ದೇಶದ 10 ಪ್ರತಿಶತದಷ್ಟು ಶ್ರೀಮಂತರನ್ನು ಸೇರಿದೆ.

ಇದಕ್ಕೆ ವ್ಯತಿರಿಕ್ತವಾಗಿ, ಇಂದು ಗ್ರಾಮೀಣ ಭಾರತದ ಸರಾಸರಿ ವ್ಯಕ್ತಿಯು ಸರಕು ಮತ್ತು ಸೇವೆಗಳಿಗಾಗಿ ತಿಂಗಳಿಗೆ ಕೇವಲ 3,773 ರೂ.ಗಳನ್ನು ಖರ್ಚು ಮಾಡುತ್ತಾನೆ ಎಂದು 2022-23ರ ಸರ್ವೇ ಆಫ್‌ ಹೌಸ್‌ ಹೋಲ್ಡ್‌ ಕನ್ಸಂಪ್ಷನ್‌ ಎಕ್ಸ್‌ಪೆಂಡಿಚರ್‌ ವರದಿ ಹೇಳಿದೆ. ಮತ್ತು ಕಾರ್ಮಿಕರ ಸರಾಸರಿ ನೈಜ ಗಳಿಕೆಯಲ್ಲಿ 2019 ಮತ್ತು 2022ರ ನಡುವೆ ಯಾವುದೇ ಸುಧಾರಣೆ ಕಂಡುಬಂದಿಲ್ಲ.

2024ರಲ್ಲಿ, "ಭಾರತವನ್ನು ಡಿಜಿಟಲ್ ಸಶಕ್ತ ಸಮಾಜ ಮತ್ತು ಜ್ಞಾನ ಆರ್ಥಿಕತೆಯಾಗಿ ಪರಿವರ್ತಿಸುವ" ಗುರಿಯನ್ನು ಹೊಂದಿರುವ ಡಿಜಿಟಲ್ ಇಂಡಿಯಾ ಕಾರ್ಯಕ್ರಮವು ತನ್ನ 10ನೇ ವರ್ಷಕ್ಕೆ ಕಾಲಿಟ್ಟಿದೆ. ವಿಪರ್ಯಾಸವೆಂದರೆ, 2024ರಲ್ಲಿ, ಇಂಟರ್ನೆಟ್ ಸ್ಥಗಿತದ ವಿಷಯದಲ್ಲಿ ನಾವು ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದ್ದೇವೆ. ಅದೂ ಸತತ ಆರನೇ ವರ್ಷ.

ಲಿಂಗತ್ವ ವಿಚಾರಕ್ಕೆ ಸಂಬಂಧಿಸಿದಂತೆ ಎಸಗಲಾಗುವ ಅನ್ಯಾಯ ಮತ್ತು ಅಸಮಾನತೆಯ ವಿಷಯದಲ್ಲಿ ವಿಷಯದಲ್ಲಿ ದೇಶವು ಕಳೆದ ವರ್ಷಕ್ಕಿಂತಲೂ ಈ ವರ್ಷ ಇನ್ನಷ್ಟು ಹದಗೆಟ್ಟಿದೆ. ಗ್ಲೋಬಲ್‌ ಜೆಂಡರ್‌ ಗ್ಯಾಪ್‌ ರಿಪೋರ್ಟ್‌ ನಮ್ಮ ಭಾರತಕ್ಕೆ 129ನೇ ಸ್ಥಾನವನ್ನು ನೀಡಿದೆ. ಇದು ಹಿಂದಿನ ವರ್ಷಕ್ಕಿಂತ ಎರಡು ಅಂಕ ಕಡಿಮೆ (ಮತ್ತು ಕಳಪೆ). ದು ಶೈಕ್ಷಣಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಭಾರತೀಯ ಮಹಿಳೆಯರ ಸ್ಥಿತಿ ಹದಗೆಡುತ್ತಿರುವುದನ್ನು ಸೂಚಿಸುತ್ತದೆ. ಲಿಂಗ ಸಮಾನತೆಗೆ ಸಂಬಂಧಿಸಿದಂತೆ ನಾವು 139 ದೇಶಗಳ ಪಟ್ಟಿಯಲ್ಲಿ 91 ಸ್ಥಾನದಲ್ಲಿದ್ದೇವೆ ಎನ್ನುತ್ತದೆ ಎಸ್‌ಡಿಜಿ ಜೆಂಡರ್‌ ಇಂಡೆಕ್ಸ್ .‌

ಲಿಂಗತ್ವ ಸಂಬಂಧಿ ವಿಷಯಗಳ ಕುರಿತು ಮಾತನಾಡುವಾಗ, ವಿಧಾನಸಭೆಯ 135 ಹಾಲಿ ಸದಸ್ಯರು (ಶಾಸಕರು) ಮಹಿಳೆಯರ ವಿರುದ್ಧದ ಅಪರಾಧಗಳ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ - ಮಹಿಳೆಯ ಗೌರವಕ್ಕೆ ಧಕ್ಕೆ ತರುವುದು, ಮದುವೆಯ ಉದ್ದೇಶದಿಂದ ಅಪಹರಣ, ಅತ್ಯಾಚಾರ, ಪುನರಾವರ್ತಿತ ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ವೇಶ್ಯಾವಾಟಿಕೆಗೆ ಅಪ್ರಾಪ್ತರನ್ನು ಖರೀದಿಸುವುದು ಮತ್ತು ಮಹಿಳೆಯ ಗೌರವವನ್ನು ದುರುಪಯೋಗಪಡಿಸಿಕೊಳ್ಳುವುದು.

ಕಾನೂನು ಕುರಿತಾದ ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಲು ಯಾವ ವಯಸ್ಸು ಕೂಡ ಹೆಚ್ಚಲ್ಲ. ನ್ಯಾಯಮೂರ್ತಿ ಅಡ್ಡಾ ಅವರು ಈ ವರ್ಷ ಪ್ರಕಟಿಸಿದ ದೈನದಂದಿನ ಬದುಕಿನಲ್ಲಿ ಸಹಾಯಕ್ಕೆ ಬರಬಹುದಾದ “ ದಿ ಲಾ ಅಂಡ್ ಎವೆರಿಡೇ ಲೈಫ್ ” ಎನ್ನುವ ಪುಸ್ತಕ ನಿಮಗೆ ಈ ನಿಟ್ಟಿನಲ್ಲಿ ಬಹಳ ಸಹಾಯ ಮಾಡಬಲ್ಲದು.

PHOTO • Design courtesy: Dipanjali Singh

ಇವುಗಳ ಜೊತೆಗೆ , ಆರೋಗ್ಯ , ಭಾಷೆಗಳು , ಲಿಂಗ , ಸಾಹಿತ್ಯ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಸಂಪನ್ಮೂಲಗಳನ್ನು ಸಂಗ್ರಹಿಸಿದ್ದೇವೆ. ಅವುಗಳೊಂದಿಗೆ ಸಾರಾಂಶಗಳು ಮತ್ತು ಮುಖ್ಯಾಂಶಗಳನ್ನು ಸೇರಿಸುವ ಮೂಲಕ ನಾವು ಅದನ್ನು ಪರಿಪೂರ್ಣಗೊಳಿಸುವುದಕ್ಕೂ ಪ್ರಯತ್ನಿಸಿದ್ದೇವೆ. ಇದರ ಜೊತೆಗೆ ನಾವು ನಮ್ಮ ಲೈಬ್ರರಿ ಬುಲೆಟಿನ್ ಯೋಜನೆಯನ್ನೂ ಆರಂಭಿಸಿದ್ದೇವೆ. ಇದು ನಿರ್ದಿಷ್ಟ ವಿಷಯಗಳ ಕುರಿತಾದ ಪರಿ ಕಥೆಗಳು ಮತ್ತು ಸಂಪನ್ಮೂಲ ಸಂಗ್ರಹಗಳನ್ನು ಹೊಂದಿರುತ್ತದೆ. ಮುಂದಿನ ವರ್ಷ, ಈ ಜನರ ಗ್ರಂಥಾಲಯವನ್ನು ಉಳಿಸಿಕೊಳ್ಳುವ ನಮ್ಮ ಅಧ್ಯಯನದ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಮ್ಮ ಹೊಸ ಪ್ರಯತ್ನಗಳನ್ನು ನೋಡಲು ಆಗಾಗ ಇತ್ತ ಬರುತ್ತಿರಿ!

PHOTO • Design courtesy: Dipanjali Singh

ಪರಿ ಲೈಬ್ರರಿಗೆ ನೀವು ಸ್ವಯಂಸೇವಕರಾಗಿ ಕೊಡುಗೆ ನೀಡಲು ಬಯಸಿದಲ್ಲಿ ದಯವಿಟ್ಟು [email protected] ವಿಳಾಸವನ್ನು ಸಂಪರ್ಕಿಸಿ

ನಮ್ಮ ಕೆಲಸಗಳು ನಿಮ್ಮಲ್ಲಿ ಆಸಕ್ತಿಯನ್ನು ಹುಟ್ಟಿಸಿದ್ದಲ್ಲಿ ಮತ್ತು ನೀವು ನಿಮ್ಮದೇ ಆದ ರೀತಿಯಲ್ಲಿ ಪರಿ ವೇದಿಕೆಗೆ ಸಹಾಯ ನೀಡಲು ಬಯಸಿದ್ದಲ್ಲಿ ದಯವಿಟ್ಟು [email protected] ವಿಳಾಸದ ಮೂಲಕ ನಮ್ಮನ್ನು ಸಂಪರ್ಕಿಸಿ. ಫ್ರೀಲಾನ್ಸ್‌ ಮತ್ತು ಸ್ವತ್ರಂತ್ರ ಬರಹಗಾರರು , ವರದಿಗಾರರು , ಛಾಯಾಗ್ರಾಹಕರು , ಚಲನಚಿತ್ರ ತಯಾರಕರು , ಅನುವಾದಕರು , ಸಂಪಾದಕರು , ಚಿತ್ರಕಾರರು ಮತ್ತು ಸಂಶೋಧಕರನ್ನು ನಮ್ಮ ತಂಡದೊಂದಿಗೆ ಕೆಲಸ ಮಾಡಲು ನಾವು ಆಹ್ವಾನವನ್ನು ಈ ಮೂಲಕ ನೀಡುತ್ತಿದ್ದೇವೆ.

ಕವರ್ ಡಿಸೈನ್: ಸ್ವದೇಶ ಶರ್ಮಾ

ಅನುವಾದ: ಶಂಕರ. ಎನ್. ಕೆಂಚನೂರು

Swadesha Sharma

ஸ்வதேஷ ஷர்மா ஒரு ஆய்வாளரும் பாரியின் உள்ளடக்க ஆசிரியரும் ஆவார். பாரி நூலகத்துக்கான தரவுகளை மேற்பார்வையிட தன்னார்வலர்களுடன் இணைந்து பணியாற்றுகிறார்.

Other stories by Swadesha Sharma
Editor : PARI Library Team

பாரி நூலகக் குழுவின் தீபாஞ்சலி சிங், ஸ்வதேஷ் ஷர்மா மற்றும் சிதித்தா சொனவனே ஆகியோர் மக்களின் அன்றாட வாழ்க்கைகள் குறித்த தகவல் பெட்டகத்தை உருவாக்கும் பாரியின் முயற்சிக்கு தேவையான ஆவணங்களை ஒழுங்கமைக்கின்றனர்.

Other stories by PARI Library Team
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru