“ಸೌಮ್ಯ ಕೋಪವನ್ನು ತೋರಿಸುವುದಕ್ಕೆ, ಕಣ್ಣುಗಳನ್ನು ಸ್ವಲ್ಪ ಮೇಲ್ಭಾಗಕ್ಕೆತ್ತಿರುವಂತೆ ಚಿತ್ರಿಸಬೇಕು… ಉಗ್ರ ಕೋಪಕ್ಕೆ ಕಣ್ಣುಗಳು ದೊಡ್ಡದಾಗಿರಬೇಕು ಹುಬ್ಬುಗಳು ಗಂಟಿಕ್ಕಿರಬೇಕು. ಸಂತೋಷವನ್ನು ಪ್ರದರ್ಶಿಸಲು ಕೆನ್ನೆಯ ಮೇಲೆ ಮುಗುಳ್ನಗೆ ಕಾಣಬೇಕು.

ಇಂತಹ ಸೂಕ್ಷ್ಮ ವಿವರಗಳಿಗೆ ಗಮನ ಕೊಡುವುದರಿಂದಲೇ ದಿಲೀಪ್‌ ಪಟ್ನಾಯಕ್‌ ಜಾರ್ಖಂಡ್‌ ರಾಜ್ಯದ ಸರಾಯ್‌ ಕೇಲ ಛಾವು ನೃತ್ಯದಲ್ಲಿ ಬಳಸುವ ಮುಖವಾಡಗಳನ್ನು ತಯಾರಿಸುವಲ್ಲಿ ಹೆಸರುವಾಸಿಯಾಗಿದ್ದಾರೆ. “ಮುಖವಾಡ ಪಾತ್ರವನ್ನು ಬಿಂಬಿಸುವಂತಿರಬೇಕು” ಎಂದು ಅವರು ಹೇಳುತ್ತಾರೆ. ಸರಾಯ್‌ ಕೇಲ ಛಾವು ಕಲೆಯ ಮುಖವಾಡಗಳು ವಿಶಿಷ್ಟವಾದದ್ದು. ಅವು ನವರಸ ಭಾವವನ್ನು ಸಾಕಾರಗೊಳಿಸುತ್ತವೆ. ಇದು ಬೇರೆ ಛಾವು ಶೈಲಿಗಳಲ್ಲಿ ನೀವು ಕಾಣಲು ಸಾಧ್ಯವಿಲ್ಲ.”

ಅವರ ಕೆಲಸದ ಸ್ಥಳದಲ್ಲಿ ಸಿದ್ಧತೆಯ ಹಂತದಲ್ಲಿದ್ದ ಹಲವು ಮುಖವಾಡಗಳು ಸುತ್ತಲೂ ಹರಡಿಕೊಂಡಿದ್ದವು. ಅವು ನೋಡಲು ವಿಶಿಷ್ಟವಾಗಿದ್ದವು. ಈ ಮುಖವಾಡಗಳ ಅಗಲವಾದ ಕಣ್ಣು, ತೀಡಿದ ತೆಳು ಹುಬ್ಬುಗಳು, ಗಾಢ ಬಣ್ಣದ ಚರ್ಮದ ಟೋನ್‌, ಇವೆಲ್ಲವೂ ಸೇರಿ ಒಂದು ವೈವಿಧ್ಯಮಯವಾದ ಅಭಿವ್ಯಕ್ತಿಯನ್ನು ಸೆರೆಹಿಡಿಯುವಂತಿದ್ದವು.

ಈ ಕಲಾ ಪ್ರಕಾರ ನೃತ್ಯ ಮತ್ತು ಸಮರ ಕಲೆಯ ಸಂಗಮ. ಇದರಲ್ಲಿ ಕಲಾವಿದರು ಈ ಮುಖವಾಡಗಳನ್ನು ಧರಿಸಿ ರಾಮಾಯಣ, ಮಹಾಭಾರತ ಮತ್ತು ಸ್ಥಳೀಯ ಜಾನಪದದ ಕಥೆಗಳನ್ನು ಅಭಿನಯಿಸುತ್ತಾರೆ. ದಿಲೀಪ್‌ ಈ ಎಲ್ಲಾ ಪ್ರದರ್ಶನಗಳಿಗೂ ಬೇಕಾಗುವ ಮುಖವಾಡಗಳನ್ನು ತಯಾರಿಸಬಲ್ಲರು. ಆದರೆ ಅವುಗಳಲ್ಲಿ ಅವರ ನೆಚ್ಚಿನ ಮುಖವಾಡವೆಂದರೆ ಕೃಷ್ಣನದು. “ಕೋಪವನ್ನು ಪ್ರದರ್ಶಿಸಲು ದೊಡ್ಡ ಕಣ್ಣುಗಳು ಹಾಗೂ ಹುಬ್ಬು ಮೇಲಕೆತ್ತಿರುವಂತೆ ಚಿತ್ರಿಸಿದರೆ ಮುಗಿಯಿತು. ಆದರೆ ಕಿಡಿಗೇಡಿತನವನ್ನು ಮುಖವಾಡದಲ್ಲಿ ತೋರಿಸುವುದು ಸುಲಭದ ಕೆಲಸವಲ್ಲ.”

ಸ್ವತಃ ದಿಲೀಪ್‌ ಅವರು ಪ್ರದರ್ಶನ ಕಲಾವಿದರಾಗಿರುವುದರಿಂದ ಅವರಿಗೆ ಈ ಕಲೆಯ ಆಳ ಅಗಲವನ್ನು ಇನ್ನಷ್ಟು ಖಚಿತವಾಗಿ ತಿಳಿದುಕೊಳ್ಳಲು ಸಾಧ್ಯವಾಗಿದೆ. ಬಾಲ್ಯದಲ್ಲಿ ಛಾವು ತಂಡದ ಭಾಗವಾಗಿದ್ದ ಅವರು, ಛಾವು ಹಬ್ಬದ ಸಮಯದಲ್ಲಿ ಶಿವನ ದೇಗುಲದಲ್ಲಿ ನಡೆಯುವ ನೃತ್ಯವನ್ನು ನೋಡುವ ಮೂಲಕ ಈ ನೃತ್ಯ ಕಲೆಯ ಅ ಆ ಇ ಕಲಿತಿದ್ದರು. ಕೃಷ್ಣನ ನೃತ್ಯ ಅವರ ಇಷ್ಟದ ನೃತ್ಯ. ಇಂದು ಧೋಲ್‌ ನುಡಿಸುವ ಅವರು ಸರಾಯ್‌ ಕೇಲ ಛಾವು ತಂಡದ ಭಾಗವಾಗಿ ಕೆಲಸ ಮಾಡುತ್ತಾರೆ.

PHOTO • Ashwini Kumar Shukla
PHOTO • Ashwini Kumar Shukla

ದಿಲೀಪ್ ಪಟ್ನಾಯಕ್ ಸೆ ರಾಯ್ಕೇ ಲಾ ಜಿಲ್ಲೆಯ ತೆಂಟೊಪೊಸಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ( ಎಡಕ್ಕೆ ). ತೆಂ ಟೊಪೊಸಿಯ ಶಿವ ದೇವಾಲಯದ ಬಳಿ ಸ್ಥಳೀಯ ಛಾ ವು ಪ್ರದರ್ಶನದ ಸಮಯದಲ್ಲಿ ಅವರು ಧೋಲ್ ( ಬಲ ) ನುಡಿಸುತ್ತಾರೆ

ದಿಲೀಪ್‌ ಜಾರ್ಖಂಡ್‌ ರಾಜ್ಯದ ಸರಾಯ್‌ ಕೇಲಾ ಜಿಲ್ಲೆಯ ತೆಂಟೊಪೊಸಿ ಎನ್ನುವ ಊರಿನವರು. ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರಿರುವ ಈ ಊರಿನಲ್ಲಿ ಅವರು ತನ್ನ ಪತ್ನಿ, ನಾಲ್ವರು ಹೆಣ್ಣುಮಕ್ಕಳು ಮತ್ತು ಒಬ್ಬ ಮಗನೊಂದಿಗೆ ವಾಸಿಸುತ್ತಿದ್ದಾರೆ. ಕೃಷಿ ಮಾಡಿದ ಹೊಲಗಳ ನಡುವೆ ನೆಲೆಗೊಂಡಿರುವ ಅವರ ಎರಡು ಕೋಣೆಗಳ ಇಟ್ಟಿಗೆ ಮನೆ ಮತ್ತು ಕಾಂಪೌಂಡ್ ಅವರ ಕೆಲಸದ ಸ್ಥಳವೂ ಹೌದು. ಮುಂಭಾಗದ ಬಾಗಿಲ ಬಳಿ ಜೇಡಿಮಣ್ಣಿನ ರಾಶಿ ಇದೆ ಮತ್ತು ಮನೆಯ ಎದುರು ಹಸಿರಾಗಿ ಹರಡಿರುವ ಬೇವಿನ ಮರವಿದೆ, ಮಳೆಯಿಲ್ಲದ ಸಮಯದಲ್ಲಿ ಅವರು ಅಲ್ಲಿ ಕುಳಿತು ಕೆಲಸ ಮಾಡುತ್ತಾರೆ.

“ನಾನು ಸಣ್ಣವನಿದ್ದಾಗಿನಿಂದಲೂ ನನ್ನ ತಂದೆ [ಕೇಶವ್ ಆಚಾರ್ಯ] ಮುಖವಾಡಗಳನ್ನು ತಯಾರಿಸುವುದನ್ನು ನೋಡುತ್ತಿದ್ದೆ. ಎಂದು ಮೂರನೇ ತಲೆಮಾರಿನ ಕಲಾವಿದ ದಿಲೀಪ್ ಹೇಳುತ್ತಾರೆ. “ಅವರು ಜೇಡಿ ಮಣ್ಣು ಬಳಸಿ ಪಾತ್ರವನ್ನು ಬೇಕಿದ್ದರೂ ಅಚ್ಚು ಹೊಯ್ಯುತ್ತಿದ್ದರು.” ಸರಾಯ್‌ ಕೇಲಾದ ಹಿಂದಿನ ರಾಜಮನೆತನವು ಈ ಕಲೆಗೆ ಬೆಂಬಲ ನೀಡುತ್ತಿತ್ತು. ಈ ಹಿಂದೆ ಮುಖವಾಡ ತಯಾರಿಕೆಯನ್ನು ಕಲಿಸುವ ಸಲುವಾಗಿ ಪ್ರತಿ ಊರಿನಲ್ಲೂ ತರಬೇತಿ ಕೇಂದ್ರಗಳಿದ್ದವು ಎಂದು ಅವರು ಹೇಳುತ್ತಿದ್ದರು. ಅವರ ತಂದೆ ಇಲ್ಲಿ ಶಿಕ್ಷಕರಾಗಿದ್ದರು.

"ನಾನು 40 ವರ್ಷಗಳಿಂದ ಈ ಮುಖವಾಡಗಳನ್ನು ತಯಾರಿಸುತ್ತಿದ್ದೇನೆ" ಎಂದು ಈ ಹಳೆಯ ಸಂಪ್ರದಾಯವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ಕೊನೆಯ ಕುಶಲಕರ್ಮಿಗಳಲ್ಲಿ ಒಬ್ಬರಾದ 65 ವರ್ಷದ ದಿಲೀಪ್ ಹೇಳುತ್ತಾರೆ. "ಜನರು ಕಲಿಯಲು ಬಹಳ ದೂರದಿಂದ ಬರುತ್ತಾರೆ. ಅವರು ಅಮೆರಿಕ, ಜರ್ಮನಿ, ಫ್ರಾನ್ಸ್ ದೇಶಗಳಿಂದ ಬರುತ್ತಾರೆ..." ಎಂದು ಅವರು ಹೇಳುತ್ತಾರೆ.

ಒಡಿಶಾ ರಾಜ್ಯದ ಗಡಿಯಲ್ಲಿರುವ ಸರಾಯ್‌ ಕೇಲಾ ಜಿಲ್ಲೆ ಸಂಗೀತ ಮತ್ತು ನೃತ್ಯಕಲೆ ಉತ್ಸಾಹಿಗಳ ಕೇಂದ್ರ. “ಸರಾಯ್‌ ಕೇಲಾ ಎಲ್ಲಾ ಛಾವು ನೃತ್ಯಗಳಿಗೆ ತಾಯಿಯಿದ್ದಂತೆ. ಇದು ಇಲ್ಲಿಂದ ಮಯೂರಭಂಜ್‌ [ಒಡಿಶಾ] ಮತ್ತು ಮನಭೂಮ್‌ [ಪುರುಲಿಯಾ] ಪ್ರದೇಶಗಳಿಗೆ ಹರಡಿತು” ಎಂದು ಸರಾಯ್‌ ಕೇಲಾ ಛಾವು ಕೇಂದ್ರದ ಮಾಜಿ ನಿರ್ದೇಶಕ 62 ವರ್ಷದ ಗುರು ತಪನ್ ಪಟ್ನಾಯಕ್ ಹೇಳುತ್ತಾರೆ. ಸರಾಯ್‌ ಕೇಲಾ ರಾಯಲ್‌ ಛಾವು ತಂಡವು 1938ರಲ್ಲಿ ಯೂರೋಪಿನ ದೇಶಗಳಲ್ಲಿ ಪ್ರದರ್ಶನ ನೀಡುವ ಮೂಲಕ ಪ್ರಸ್ತುತಪಡಿಸಿದ ಮೊದಲ ತಂಡ ಎನ್ನಿಸಿಕೊಂಡಿತು. ಅಂದಿನಿಂದ ಈ ಶೈಲಿಯು ಜಗತ್ತಿನ ಅನೇಕ ಮೂಲೆಗಳಿಗೆ ಪ್ರಯಾಣಿಸಿದೆ ಎಂದು ಅವರು ವಿವರಿಸುತ್ತಾರೆ.

ಛಾವು ಕಲೆಗೆ ಇಷ್ಟೆಲ್ಲ ಜಾಗತಿಕ ಮೆಚ್ಚುಗೆಯಿದ್ದರೂ, ಈ ಅಪ್ರತಿಮ ಮುಖವಾಡಗಳನ್ನು ತಯಾರಿಸಬಲ್ಲ ಕುಶಲಕರ್ಮಿಗಳ ಸಂಖ್ಯೆ ಕಡಿಮೆಯಾಗಿದೆ. "ಸ್ಥಳೀಯ ಜನರು ಕಲಿಯಲು ಬಯಸುವುದಿಲ್ಲ" ಎಂದು ದಿಲೀಪ್ ಹೇಳುತ್ತಾರೆ, ಅವರ ಧ್ವನಿಯಲ್ಲಿನ ನೋವು ಈ ಕಲೆಯ ಅಂತಿಮ ಘಟ್ಟವನ್ನು ಪ್ರತಿಧ್ವನಿಸುತ್ತಿತ್ತು.

*****

ತನ್ನ ಮನೆಯಂಗಳದಲ್ಲಿ ಕುಳಿತು, ದಿಲೀಪ್ ತನ್ನ ಉಪಕರಣಗಳನ್ನು ಎಚ್ಚರಿಕೆಯಿಂದ ಜೋಡಿಸಿ, ನಂತರ ಮರದ ಚೌಕಟ್ಟಿನ ಮೇಲೆ ನಯವಾದ ಜೇಡಿಮಣ್ಣನ್ನು ಇಡುತ್ತಾರೆ. "ಮುಖವಾಡವನ್ನು ಅಳೆದು ವಿಭಜಿಸಲು ಬೆರಳುಗಳನ್ನು ಬಳಸುತ್ತೇವೆ - ಒಂದು ಕಣ್ಣುಗಳಿಗೆ, ಒಂದು ಮೂಗಿಗೆ ಮತ್ತು ಇನ್ನೊಂದು ಬಾಯಿಗೆ" ಎಂದು ಅವರು ವಿವರಿಸುತ್ತಾರೆ.

ನೋಡಿ: ಸರಾಯ್‌ ಕೇಲಾ ಛಾವು ಮುಖವಾಡ ತಯಾರಿಕೆ

'ಸರಾಯ್‌ ಕೇಲಾ ಎಲ್ಲಾ ಛಾವು ನೃತ್ಯಗಳಿಗೆ ತಾಯಿಯಿದ್ದಂತೆ. [...] ಇದು ನನ್ನ ಪರಂಪರೆ. ನಾನು ಬದುಕಿರುವ ತನಕ ಇದನ್ನು ಮುಂದುವರೆಸುತ್ತೇನೆ'

ತನ್ನ ಕೈಗಳನ್ನು ಒದ್ದೆ ಮಾಡಿಕೊಂಡ ಅವರು ಮುಖವಾಡಗಳ ಮೇಲೆ ನವರಸಗಳನ್ನು ರೂಪಿಸಲು ಪ್ರಾರಂಭಿಸುತ್ತಾರೆ – ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ, ಶಾಂತ.

ಛಾವು ನೃತ್ಯಗಳಲ್ಲಿ ಹಲವು ಶೈಲಿಗಳಿವೆ. ಆದರೆ ಸರಾಯ್‌ ಕೇಲಾ ಹಾಗೂ ಪುರುಲಿಯಾ ಛಾವುಗಳಲ್ಲಿ ಮಾತ್ರ ಮುಖವಾಡಗಳನ್ನು ಬಳಸಲಾಗುತ್ತದೆ. “ಸರಾಯ್‌ ಕೇಲಾ ನೃತ್ಯದ ಆತ್ಮವೇ ಈ ಮುಖವಾಡಗಳು. ಅವುಗಳಿಲ್ಲದೆ ಹೋಗಿದ್ದರೆ ಈ ಕಲೆಯೇ ಇರುತ್ತಿರಲಿಲ್ಲ” ಎಂದು ದಿಲೀಪ್‌ ಹೇಳುತ್ತಾರೆ. ಹಾಗೆ ಹೇಳುವಾಗಲೂ ಅವರ ಕೈಗಳು ಮಣ್ಣಿನಲ್ಲಿ ವೇಗವಾಗಿ ಆಡುತ್ತಿದ್ದವು.

ಮಣ್ಣಿನ ಮುಖವಾಡವನ್ನು ಆಕಾರಗೊಳಿಸಿದ ನಂತರ, ದಿಲೀಪ್ ಅದರ ಮೇಲೆ ರಾಖ್ (ಹಸುವಿನ ಸಗಣಿ ಬೂದಿ) ಅನ್ನು ಸಿಂಪಡಿಸುತ್ತಾರೆ, ಇದರಿಂದ ಅಚ್ಚನ್ನು ಮುಖವಾಡದಿಂದ ಸುಲಭವಾಗಿ ಬೇರ್ಪಡಿಸಲು ಸಾಧ್ಯವಾಗುತ್ತದೆ. ನಂತರ ಅವರು ಕಾಗದದ ಆರು ಪದರಗಳನ್ನು ಲೇಯಿ (ಹಿಟ್ಟು ಬಳಸಿ ತಯಾರಿಸಿದ ಅಂಟು) ಯೊಂದಿಗೆ ಅಂಟಿಸುತ್ತಾರೆ. ನಂತರ ಮುಖವಾಡವನ್ನು ಎರಡು-ಮೂರು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ ಮತ್ತು ನಂತರ ಬ್ಲೇಡ್‌ ಬಳಸಿ ಎಚ್ಚರಿಕೆಯಿಂದ ತೆಗೆದುಹಾಕಿ ನಿಖರವಾಗಿ ಚಿತ್ರಿಸಲಾಗುತ್ತದೆ. "ಸರಾಯ್‌ ಕೇಲಾ ಮುಖವಾಡಗಳು ನೋಡಲು ತುಂಬಾ ಸುಂದರವಾಗಿವೆ" ಎಂದು ದಿಲೀಪ್ ಹೆಮ್ಮೆಯಿಂದ ಹೇಳುತ್ತಾರೆ. ಅವರು ಈ ಪ್ರದೇಶದ ಸುಮಾರು 50 ಹಳ್ಳಿಗಳಿಗೆ ಮುಖವಾಡಗಳನ್ನು ಪೂರೈಸುತ್ತಾರೆ.

ಹಿಂದೆ, ಹೂವು, ಎಲೆ ಮತ್ತು ನದಿಪಾತ್ರದ ಕಲ್ಲುಗಳಿಂದ ತಯಾರಿಸಿದ ನೈಸರ್ಗಿಕ ಬಣ್ಣಗಳನ್ನು ಮುಖವಾಡಗಳಿಗೆ ಬಣ್ಣ ಬಳಿಯಲು ಬಳಸಲಾಗುತ್ತಿತ್ತು ಆದರೆ ಈಗ ಕೃತಕ ಬಣ್ಣಗಳನ್ನು ಬಳಸಲಾಗುತ್ತದೆ.

PHOTO • Ashwini Kumar Shukla
PHOTO • Ashwini Kumar Shukla

ಮುಖವಾಡವನ್ನು ಅಳೆಯಲು ಮತ್ತು ಮೂರು ಭಾಗಗಳಾಗಿ ವಿಭಜಿಸಲು ದಿಲೀಪ್ ತನ್ನ ಬೆರಳುಗಳನ್ನು ( ಎಡ ) ಬಳಸುತ್ತಾರೆ - ' ಒಂದು ಕಣ್ಣುಗಳಿಗೆ , ಒಂದು ಮೂಗಿಗೆ ಮತ್ತು ಇನ್ನೊಂದು ಬಾಯಿಗೆ '. ಮರದ ಉಪಕರಣವನ್ನು ( ಬಲಕ್ಕೆ ) ಬಳಸಿಕೊಂಡು , ಅವರು ಕಣ್ಣುಗಳನ್ನು ಕೆತ್ತುತ್ತಾರೆ , ವಿಭಿನ್ನ ಭಾವನೆಗಳಿಗೆ ವಿಭಿನ್ನ ಆಕಾರಗಳನ್ನು ಎಚ್ಚರಿಕೆಯಿಂದ ಅಳೆಯುತ್ತಾರೆ

PHOTO • Ashwini Kumar Shukla
PHOTO • Ashwini Kumar Shukla

ಎಡ: ಮಣ್ಣಿನ ಮುಖವಾಡವನ್ನು ಆಕಾರಗೊಳಿಸಿದ ನಂತರ, ದಿಲೀಪ್ ಅದರ ಮೇಲೆ ರಾಖ್ (ಹಸುವಿನ ಸಗಣಿ ಬೂದಿ) ಅನ್ನು ಸಿಂಪಡಿಸುತ್ತಾರೆ, ಇದರಿಂದ ಅಚ್ಚನ್ನು ಮುಖವಾಡದಿಂದ ಸುಲಭವಾಗಿ ಬೇರ್ಪಡಿಸಲು ಸಾಧ್ಯವಾಗುತ್ತದೆ. ನಂತರ ಅವರು ಕಾಗದದ ಆರು ಪದರಗಳನ್ನು ಲೇಯಿ (ಹಿಟ್ಟು ಬಳಸಿ ತಯಾರಿಸಿದ ಅಂಟು) ಯೊಂದಿಗೆ ಅಂಟಿಸುತ್ತಾರೆ. ನಂತರ ಮುಖವಾಡವನ್ನು ಎರಡು-ಮೂರು ದಿನಗಳ ಕಾಲ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ ಮತ್ತು ನಂತರ ಬ್ಲೇಡ್‌ ಬಳಸಿ ಎಚ್ಚರಿಕೆಯಿಂದ ತೆಗೆದುಹಾಕಿ ನಿಖರವಾಗಿ ಚಿತ್ರಿಸಲಾಗುತ್ತದೆ. ಬಲ: ಸರಾಯ್‌ ಕೇಲಾ ಮುಖವಾಡಗಳನ್ನು ತಯಾರಿಸುತ್ತಿರುವ ಕೊನೆಯ ಕೆಲವು ಕಲಾವಿದರಲ್ಲಿ ಒಬ್ಬರಾದ ದಿಲೀಪ್, ನಿಖರವಾಗಿ ರೂಪುರೇಖೆಗಳನ್ನು ಚಿತ್ರಿಸುತ್ತಾರೆ, ಮುಖವಾಡವು ಪ್ರತಿನಿಧಿಸಬೇಕಾದ ಭಾವನೆಯ ಆಧಾರದ ಮೇಲೆ ಕಣ್ಣುಗಳು, ತುಟಿಗಳು ಮತ್ತು ಕೆನ್ನೆಗಳನ್ನು ಹೈಲೈಟ್ ಮಾಡುತ್ತಾರೆ

*****

"ಕಲಾವಿದನು ಮುಖವಾಡವನ್ನು ಧರಿಸಿದ ನಂತರ, ಅವರು ಪಾತ್ರವಾಗಿ ರೂಪಾಂತರಗೊಳ್ಳುತ್ತಾರೆ" ಎಂದು 50 ವರ್ಷಗಳಿಂದ ಛಾವು ಪ್ರದರ್ಶನ ನೀಡುತ್ತಿರುವ ತಪನ್ ಹೇಳುತ್ತಾರೆ. "ನೀವು ರಾಧಾ ಪಾತ್ರದಲ್ಲಿ ನಟಿಸುತ್ತಿದ್ದರೆ, ನೀವು ರಾಧೆಯ ವಯಸ್ಸು ಮತ್ತು ನೋಟವನ್ನು ಪರಿಗಣಿಸಬೇಕು. ಧರ್ಮಗ್ರಂಥಗಳ ಪ್ರಕಾರ, ಅವಳು ತುಂಬಾ ಸುಂದರವಾಗಿದ್ದಳು. ಆದ್ದರಿಂದ, ನಾವು ರಾಧಾಳ ಅಚ್ಚನ್ನು ಅವಳ ವಿಶಿಷ್ಟ ತುಟಿಗಳು ಮತ್ತು ಕೆನ್ನೆಗಳನ್ನು ಆಧರಿಸಿ ತಯಾರಿಸುತ್ತೇವೆ, ಅದು ಅವಳಂತೆ ಕಾಣುವ ಹಾಗೆ ಮಾಡುತ್ತೇವೆ."

"ಒಮ್ಮೆ ನೀವು ಮಾಸ್ಕ್ ಧರಿಸಿದರೆ, ನಿಮ್ಮ ದೇಹ ಮತ್ತು ಕುತ್ತಿಗೆಯ ಚಲನೆಗಳ ಮೂಲಕ ಭಾವನೆಗಳನ್ನು ತಿಳಿಸಬೇಕು" ಎಂದು ಅವರು ಹೇಳುತ್ತಾರೆ. ನರ್ತಕಿಯ ದೇಹವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: 'ಅಂಗ' (ಕುತ್ತಿಗೆಯ ಕೆಳಗೆ) ಮತ್ತು 'ಉಪಾಂಗ್' (ತಲೆ). 'ಉಪಾಂಗ್' ಕಣ್ಣುಗಳು, ಮೂಗು, ಕಿವಿಗಳು ಮತ್ತು ಬಾಯಿಯನ್ನು ಒಳಗೊಂಡಿದೆ, ಎಲ್ಲವನ್ನೂ ಮುಖವಾಡದಿಂದ ಮುಚ್ಚಲಾಗಿರುತ್ತದೆ. ಪ್ರದರ್ಶಕನು ದೇಹದ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಬಳಸಿಕೊಂಡು ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ.

"ಒಮ್ಮೆ ನೀವು ಮಾಸ್ಕ್ ಧರಿಸಿದರೆ, ನಿಮ್ಮ ದೇಹ ಮತ್ತು ಕುತ್ತಿಗೆಯ ಚಲನೆಗಳ ಮೂಲಕ ಭಾವನೆಗಳನ್ನು ತಿಳಿಸಬೇಕು" ಎಂದು ಅವರು ಹೇಳುತ್ತಾರೆ. ನರ್ತಕಿಯ ದೇಹವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ: 'ಅಂಗ' (ಕುತ್ತಿಗೆಯ ಕೆಳಗೆ) ಮತ್ತು 'ಉಪಾಂಗ್' (ತಲೆ). 'ಉಪಾಂಗ್' ಕಣ್ಣುಗಳು, ಮೂಗು, ಕಿವಿಗಳು ಮತ್ತು ಬಾಯಿಯನ್ನು ಒಳಗೊಂಡಿದೆ, ಎಲ್ಲವನ್ನೂ ಮುಖವಾಡದಿಂದ ಮುಚ್ಚಲಾಗಿದೆ. ಪ್ರದರ್ಶಕನು ದೇಹದ ಮೇಲಿನ ಮತ್ತು ಕೆಳಗಿನ ಭಾಗಗಳನ್ನು ಬಳಸಿಕೊಂಡು ಭಾವನೆಗಳನ್ನು ವ್ಯಕ್ತಪಡಿಸುತ್ತಾನೆ.

ಜಾನಪದ ಕತೆಯ ಪ್ರಕಾರ, ಮೂಲ ಪ್ರದರ್ಶಕರು ಜನರ ಮುಂದೆ ನೃತ್ಯ ಮಾಡಲು ನಾಚಿಕೆಪಡುತ್ತಿದ್ದರು ಮತ್ತು ತಮ್ಮ ಮುಖಗಳನ್ನು ಮುಚ್ಚಿಕೊಳ್ಳಲು ಈ ಮುಖವಾಡಗಳನ್ನು ಧರಿಸುತ್ತಿದ್ದರು. "ಈ ರೀತಿಯಾಗಿ ಮುಖವಾಡವು ಪರಿಕಂಡಕ್ಕೆ [ಸಮರ ಕಲೆ] ಬಂದಿತು" ಎಂದು ತಪನ್ ವಿವರಿಸುತ್ತಾರೆ. ಮೊದಲಿಗೆ ಮುಖವಾಡಗಳಾಗಿ ಕಣ್ಣುಗಳಿಗೆ ರಂಧ್ರಗಳನ್ನು ಹೊಂದಿರುವ ಬಿದಿರಿನ ಬುಟ್ಟಿಗಳಾಗಿದ್ದವು. ಸಂಪ್ರದಾಯವು ವಿಕಸನಗೊಂಡಿದ್ದರೂ, ಅವರು ಚಿಕ್ಕವರಿದ್ದಾಗ ಕುಂಬಳಕಾಯಿ ಬುರುಡೆಗಳಿಂದ ಮುಖವಾಡಗಳನ್ನು ತಯಾರಿಸುತ್ತಿದ್ದರು ಎಂದು ದಿಲೀಪ್ ಹೇಳುತ್ತಾರೆ.

ಮತ್ತೊಂದು ಮೂಲ ಕಥೆಯು ಛಾವು ಕಲೆಯ ಮೂಲವನ್ನು ಛಾವಾನಿ ಅಥವಾ ಮಿಲಿಟರಿ ಶಿಬಿರಗಳಲ್ಲಿ ಗುರುತಿಸುತ್ತದೆ, ಹೀಗಾಗಿ ಅದರಲ್ಲಿ ಸಮರ ಕಲೆಗಳಂತಹ ಚಲನೆಗಳು ಸೇರಿಕೊಂಡಿವೆ. ಆದರೆ ತಪನ್ ಇದನ್ನು ಒಪ್ಪುವುದಿಲ್ಲ: "ಛಾವು ಛಾಯಾದಿಂದ [ನೆರಳುಗಳಿಂದ] ಹುಟ್ಟಿಕೊಂಡಿತು" ಎಂದು ಅವರು ಹೇಳುತ್ತಾರೆ, ಪ್ರದರ್ಶಕರು ಅವರು ನಿರ್ವಹಿಸುವ ಪಾತ್ರಗಳ ನೆರಳುಗಳಂತೆ ಎಂದು ಅವರು ವಿವರಿಸುತ್ತಾರೆ.

ಈ ನೃತ್ಯವನ್ನು ಸಾಂಪ್ರದಾಯಿಕವಾಗಿ ಪುರುಷರು ಪ್ರದರ್ಶಿಸುತ್ತಾರೆ. ಮತ್ತು ಇತ್ತೀಚಿನ ವರ್ಷಗಳಲ್ಲಿ, ಕೆಲವು ಮಹಿಳೆಯರು ಛಾವು ತಂಡಗಳನ್ನು ಸೇರಿಕೊಂಡಿದ್ದರೂ, ಸರಾಯ್‌ ಕೇಲಾದ ಹೃದಯಭಾಗದಲ್ಲಿ, ಪ್ರದರ್ಶನಗಳು ಇನ್ನೂ ಪುರುಷ ಪ್ರಾಬಲ್ಯವನ್ನು ಹೊಂದಿವೆ.

PHOTO • Ashwini Kumar Shukla
PHOTO • Ashwini Kumar Shukla

ಎಡಕ್ಕೆ: ದಿಲೀಪ್ ಅವರ ಮನೆಯ ಜಗಲಿಯ ಒಂದು ಬದಿಯಲ್ಲಿ ಪ್ರದರ್ಶಿಸಲಾದ ಸರೈಕೇಲಾ ಮುಖವಾಡಗಳು ನವರಸವನ್ನು ಪ್ರತಿನಿಧಿಸುತ್ತವೆ - ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ, ಶಾಂತ. ಬಲ: ದಿಲೀಪ್ ತನ್ನ ಕೆಲವು ಪ್ರಸಿದ್ಧ ಮುಖವಾಡಗಳ ಮತ್ತು ಅವರು ನಡೆಸಿದ ಕಾರ್ಯಾಗಾರಗಳ ಹಳೆಯ ಫೋಟೊಗಳನ್ನು ತೋರಿಸುತ್ತಿದ್ದಾರೆ

ಮಾಸ್ಕ್ ತಯಾರಿಕೆಗೂ ಇದು ಅನ್ವಯಿಸುತ್ತದೆ. ಛಾವ್ ಮೇ ಮಹಿಳಾ ನಹೀ... ಯಹೀ ಪರಂಪರಾ ಚಲಾ ಆ ರಹಾ ಹೈ, ಮಾಸ್ಕ್ ಮೇಕಿಂಗ್ ಕಾ ಸಾರಾ ಕಾಮ್ ಹಮ್ ಖುದ್ ಕಾರ್ತೆ ಹೈನ್ [ಮಹಿಳೆಯರು ಛಾವು ಕಲೆಯಲ್ಲಿ ಭಾಗಿಯಾಗುವುದಿಲ್ಲ ... ಇದು ಸಂಪ್ರದಾ, ಮತ್ತು ಮುಖವಾಡ ತಯಾರಿಸುವ ಎಲ್ಲಾ ಕೆಲಸಗಳನ್ನು ನಾವೇ ಮಾಡುತ್ತೇವೆ" ಎಂದು ದಿಲೀಪ್ ಹೇಳುತ್ತಾರೆ ಮತ್ತು "ಮಗ ಇಲ್ಲಿದ್ದಾಗ ನನಗೆ ಸಹಾಯ ಮಾಡುತ್ತಾನೆ."

ಅವರ ಮಗ ದೀಪಕ್ ತನ್ನ ತಂದೆಯಿಂದ ಮುಖವಾಡಗಳನ್ನು ತಯಾರಿಸುವುದನ್ನು ಕಲಿತಿದ್ದಾರೆ. ಆದರೆ 25 ವರ್ಷದ ಅವರು ಧನಬಾದ್‌ ನಗರಕ್ಕೆ ಸ್ಥಳಾಂತರಗೊಂಡಿದ್ದಾರೆ, ಅಲ್ಲಿ ಅವರು ಐಟಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ ಮತ್ತು ಮಾಸ್ಕ್ ತಯಾರಿಕೆಗಿಂತ ಹೆಚ್ಚು ಹಣ ಸಂಪಾದಿಸುತ್ತಾರೆ.

ಆದರೂ, ಪ್ರತಿಮೆಗಳನ್ನು ತಯಾರಿಸುವ ವಿಷಯಕ್ಕೆ ಬಂದಾಗ, ಇಡೀ ಕುಟುಂಬ ಮುಂದೆ ಬರುತ್ತದೆ. ದಿಲೀಪ್ ಅವರ ಪತ್ನಿ ಸಂಯುಕ್ತಾ ಅವರು ವಿಗ್ರಹಗಳನ್ನು ತಯಾರಿಸುವಾಗ ಎಲ್ಲಾ ಕೆಲಸಗಳನ್ನು ಮಾಡುವುದಾಗಿ ಹೇಳುತ್ತಾರೆ. "ಸಂಚಾ ಬನಾತೇ ಹೈ, ಮಿಟ್ಟಿ ತೈಯಾರ್ ಕರ್ತೇ ಹೈ, ಪೇಂಟಿಂಗ್ ಭಿ ಕರ್ತೇ ಹೈ. ಲೇಕಿನ್‌ ಮುಖುಟಾ ಮೇ ಲೇಡಿಸ್‌ ಕುಚ್‌ ನಹೀ ಕರ್ತೀ ಹೈ [ನಾವು ಅಚ್ಚುಗಳನ್ನು ತಯಾರಿಸುತ್ತೇವೆ, ಜೇಡಿಮಣ್ಣನ್ನು ತಯಾರಿಸುತ್ತೇವೆ ಮತ್ತು ಚಿತ್ರಕಲೆಯನ್ನೂ ಮಾಡುತ್ತೇವೆ. ಆದರೆ ಮುಖವಾಡಗಳ ವಿಷಯಕ್ಕೆ ಬಂದಾಗ, ಮಹಿಳೆಯರು ಏನನ್ನೂ ಮಾಡುವುದಿಲ್ಲ]."

2023ರಲ್ಲಿ ದಿಲೀಪ್ 500-700 ಮಾಸ್ಕ್ಗಳನ್ನು ತಯಾರಿಸಿದರು, ಇದು ಅವರಿಗೆ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟನ್ನು ಗಳಿಸಿಕೊಟ್ಟಿತು ಮತ್ತು ಅವರು ವರ್ಷವಿಡೀ ಬಣ್ಣ, ಬ್ರಷ್ ಮತ್ತು ಬಟ್ಟೆಗಾಗಿ ಸುಮಾರು 3,000ರಿಂದ 4,000 ರೂಪಾಯಿಗಳನ್ನು ಖರ್ಚು ಮಾಡಿದ್ದರು. ಅವರು ಇದನ್ನು ತಮ್ಮ "ಅರೆಕಾಲಿಕ ಕೆಲಸ" ಎಂದು ಕರೆಯುತ್ತಾರೆ ಮತ್ತು ಈಗ ಅವರ ಮುಖ್ಯ ಉದ್ಯೋಗವೆಂದರೆ ವಿಗ್ರಹಗಳನ್ನು ತಯಾರಿಸುವುದು, ಅದರಿಂದ ಅವರು ವಾರ್ಷಿಕವಾಗಿ ಮೂರರಿಂದ ನಾಲ್ಕು ಲಕ್ಷ ರೂ.ಗಳನ್ನು ಗಳಿಸುತ್ತಾರೆ.

ಅವರು ವಿವಿಧ ಛಾವು ನೃತ್ಯ ಕೇಂದ್ರಗಳಿಗಾಗಿ ಕಮಿಷನ್ ಮೇಲೆ ಮುಖವಾಡಗಳನ್ನು ತಯಾರಿಸುತ್ತಾರೆ ಮತ್ತು ಚೈತಾ ಪರವ್ ಅಥವಾ ವಸಂತ ಹಬ್ಬದ ಭಾಗವಾಗಿ ಪ್ರತಿ ಏಪ್ರಿಲ್‌ ತಿಂಗಳಿನಲ್ಲಿ ನಡೆಯುವ ಚೈತ್ರ ಮೇಳದಲ್ಲಿ ಮಾರಾಟ ಮಾಡುತ್ತಾರೆ - ಇದು ಸರಾಯ್‌ ಕೇಲಾ ಛಾವು ಹಂಗಾಮಿನ ಪ್ರಮುಖ ಪ್ರದರ್ಶನವಾಗಿದ್ದು, ಪ್ರಪಂಚದಾದ್ಯಂತದ ಪ್ರವಾಸಿಗರನ್ನು ಆಕರ್ಷಿಸುತ್ತದೆ. ದೊಡ್ಡ ಮುಖವಾಡಗಳ ಬೆಲೆ 250-300 ರೂ.ಗಳ ನಡುವೆ ಇದ್ದರೆ, ಸಣ್ಣವು ತಲಾ ನೂರು ರೂಪಾಯಿಗಳಿಗೆ ಮಾರಾಟವಾಗುತ್ತವೆ.

ದಿಲೀಪ್ ಅವರು ತಾನು ಈ ಕೆಲಸವನ್ನು ಮುಂದುವರೆಸುವುದಕ್ಕೆ ಹಣ ಕಾರಣವಲ್ಲ ಎಂದು ಬಹಳ ಸ್ಪಷ್ಟವಾಗಿ ಹೇಳುತ್ತಾರೆ. “ಇದು ನನ್ನ ಸಂಪ್ರದಾಯ. ನಾನು ಬದುಕಿರುವವರೆಗೂ ಈ ಸಂಪ್ರದಾಯವನ್ನು.”

ಈ ವರದಿಗೆ ಮೃಣಾಲಿನಿ ಮುಖರ್ಜಿ ಫೌಂಡೇಶನ್ (ಎಂಎಂಎಫ್) ಫೆಲೋಶಿಪ್ ಬೆಂಬಲ ದೊರಕಿದೆ.

ಅನುವಾದ: ಶಂಕರ. ಎನ್. ಕೆಂಚನೂರು

Ashwini Kumar Shukla

அஷ்வினி குமார் ஷுக்லா ஜார்க்கண்டை சேர்ந்த ஒரு சுயாதீன பத்திரிகையாளரும் புது தில்லியில் இருக்கும் வெகுஜன தொடர்புக்கான இந்திய கல்வி நிறுவனத்தின் பட்டதாரியும் (2018-2019) ஆவார். பாரி- MMF மானியப் பணியாளராக 2023ம் ஆண்டில் இருந்தவர்.

Other stories by Ashwini Kumar Shukla
Editor : PARI Desk

பாரி டெஸ்க், எங்களின் ஆசிரியப் பணிக்கு மையமாக இருக்கிறது. இக்குழு, நாடு முழுவதும் இருக்கிற செய்தியாளர்கள், ஆய்வாளர்கள், புகைப்படக் கலைஞர்கள், பட இயக்குநர்கள் மற்றும் மொழிபெயர்ப்பாளர்களுடன் இணைந்து இயங்குகிறது. பாரி பதிப்பிக்கும் எழுத்துகள், காணொளி, ஒலி மற்றும் ஆய்வு அறிக்கைகள் ஆகியவற்றை அது மேற்பார்வையிட்டு கையாளுகிறது.

Other stories by PARI Desk
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru