ಸುಮಾರು 123 ವರ್ಷಗಳ ಹಿಂದೆ ಬರೆದ ಕವಿತೆಯಲ್ಲಿ ಅನಾದಿ ದೇವರು, ಹೊಸ ದೇವಸ್ಥಾನ, ಹೆಮ್ಮೆಯ ರಾಜ ಮತ್ತು ಅನ್ನ, ಬಟ್ಟೆ, ವಸತಿಗಾಗಿ ಪರದಾಡುವ ಸಾಮಾನ್ಯ ಜನರಿದ್ದಾರೆ. ಹಾಗೆಯೇ ಅದೇ ಕವಿತೆಯಲ್ಲಿ ಒಬ್ಬ ಸಾಧುವೂ ಇದ್ದರು. ಆತ ಪರಿಣಾಮಗಳನ್ನು ಲೆಕ್ಕಿಸದೆ ರಾಜನೆದುರು ಕಟುವಾದ ಮಾತುಗಳನ್ನು ಹೇಳುವ ಸನ್ಯಾಸಿ. ಮತ್ತು ಇಂತಹ ಒಂದು ತೀಕ್ಷ್ಣ ಕವಿತೆಯನ್ನು ಬಹಳ ಹಿಂದೆಯೇ ಬರೆದವರು ಅಸಾಮಾನ್ಯ ಕವಿ ರವೀಂದ್ರನಾಥ ಟ್ಯಾಗೋರ್.

ದೀನೋದಾನ್,  ಎನ್ನುವ ಈ ಕವಿತೆಯನ್ನು ಅವರ ಕಹಿನಿ ಎನ್ನುವ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ. ಈ ಕವಿತೆಯು ನಮಗೆ ಮಾನವತಾವಾದದ ಸಾರ್ವತ್ರಿಕ ಮೌಲ್ಯಗಳನ್ನು ಮರೆತು ಕಟ್ಟಿದ ರಾಜ್ಯದಲ್ಲಿನ ಜನಸಾಮನ್ಯರ ಬದುಕಿನ ಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ತೋರಿಸುತ್ತದೆ.

ಸುತ್ತಮುತ್ತಲಿನ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದಾಗ ಈ ಕವಿತೆ ಇಂದಿಗೂ ಪ್ರಸ್ತುತವಾಗಿರುವುದು ಕಾಣುತ್ತದೆ. ಜೊತೆಗೆ ಈ ಕವಿತೆ ಅಷ್ಟೇ ಅರ್ಥಪೂರ್ಣ ಮತ್ತು ಪ್ರಬುದ್ಧ.

ಸ್ಮಿತಾ ಖಟೋರ್ ಅವರ ಧ್ವನಿಯಲ್ಲಿ ಮೂಲ ಬಂಗಾಳಿ ಕವಿತೆಯನ್ನು ಆಲಿಸಿ

ಪ್ರತಿಷ್ಟಾ ಪಾಂಡ್ಯ ಅವರ ಧ್ವನಿಯಲ್ಲಿ ಕವಿತೆಯ ಇಂಗ್ಲಿಷ್ ಅನುವಾದವನ್ನು ಆಲಿಸಿ

দীনদান

নিবেদিল রাজভৃত্য, “মহারাজ, বহু অনুনয়ে
সাধুশ্রেষ্ঠ নরোত্তম তোমার সোনার দেবালয়ে
না লয়ে আশ্রয় আজি পথপ্রান্তে তরুচ্ছায়াতলে
করিছেন নাম-সংকীর্তন। ভক্তবৃন্দ দলে দলে
ঘেরি তাঁরে দরদর-উদ্‌বেলিত আনন্দধারায়
ধৌত ধন্য করিছেন ধরণীর ধূলি। শূন্যপ্রায়
দেবাঙ্গন; ভৃঙ্গ যথা স্বর্ণময় মধুভাণ্ড ফেলি
সহসা কমলগন্ধে মত্ত হয়ে দ্রুত পক্ষ মেলি
ছুটে যায় গুঞ্জরিয়া উন্মীলিত পদ্ম-উপবনে
উন্মুখ পিপাসাভরে, সেইমতো নরনারীগণে
সোনার দেউল-পানে না তাকায়ে চলিয়াছে ছুটি
যেথায় পথের প্রান্তে ভক্তের হৃদয়পদ্ম ফুটি
বিতরিছে স্বর্গের সৌরভ। রত্নবেদিকার ’পরে
একা দেব রিক্ত দেবালয়ে।”

শুনি রাজা ক্ষোভভরে
সিংহাসন হতে নামি গেলা চলি যেথা তরুচ্ছায়ে
সাধু বসি তৃণাসনে। কহিলেন নমি তাঁর পায়ে,
“হেরো প্রভু, স্বর্ণশীর্ষ নৃপতিনির্মিত নিকেতন
অভ্রভেদী দেবালয়, তারে কেন করিয়া বর্জন
দেবতার স্তবগান গাহিতেছ পথপ্রান্তে বসে?”
“সে মন্দিরে দেব নাই” কহে সাধু।

রাজা কহে রোষে,
“দেব নাই! হে সন্ন্যাসী, নাস্তিকের মতো কথা কহ।
রত্নসিংহাসন ’পরে দীপিতেছে রতনবিগ্রহ—
শূন্য তাহা?”

“শূন্য নয়, রাজদম্ভে পূর্ণ” সাধু কহে,
“আপনায় স্থাপিয়াছ, জগতের দেবতারে নহে।”

ভ্রূ কুঞ্চিয়া কহে রাজা, “বিংশ লক্ষ স্বর্ণমুদ্রা দিয়া
রচিয়াছি অনিন্দিত যে মন্দির, অম্বর ভেদিয়া
পূজামন্ত্রে নিবেদিয়া দেবতারে করিয়াছি দান,
তুমি কহ সে মন্দিরে দেবতার নাহি কোনো স্থান!”

শান্ত মুখে কহে সাধু, “যে বৎসর বহ্নিদাহে দীন
বিংশতি সহস্র প্রজা গৃহহীন অন্নবস্ত্রহীন
দাঁড়াইল দ্বারে তব, কেঁদে গেল ব্যর্থ প্রার্থনায়
অরণ্যে, গুহার গর্ভে, পথপ্রান্তে তরুর ছায়ায়,
অশ্বত্থবিদীর্ণ জীর্ণ মন্দিরপ্রাঙ্গণে, সে বৎসর
বিংশ লক্ষ মুদ্রা দিয়া রচি তব স্বর্ণদীপ্ত ঘর
দেবতারে সমর্পিলে। সে দিন কহিলা ভগবান —
“আমার অনাদি ঘরে অগণ্য আলোক দীপ্যমান
অনন্তনীলিমা-মাঝে; মোর ঘরে ভিত্তি চিরন্তন
সত্য, শান্তি, দয়া, প্রেম। দীনশক্তি যে ক্ষুদ্র কৃপণ
নাহি পারে গৃহ দিতে গৃহহীন নিজ প্রজাগণে
সে আমারে গৃহ করে দান! “চলি গেলা সেই ক্ষণে
পথপ্রান্তে তরুতলে দীনসাথে দীনের আশ্রয়।
অগাধ সমুদ্র-মাঝে স্ফীত ফেন যথা শূন্যময়
তেমনি পরম শূন্য তোমার মন্দির বিশ্বতলে,
স্বর্ণ আর দর্পের বুদ্‌বুদ্‌!”

রাজা জ্বলি রোষানলে,
কহিলেন, “রে ভণ্ড পামর, মোর রাজ্য ত্যাগ করে
এ মুহূর্তে চলি যাও।”

সন্ন্যাসী কহিলা শান্ত স্বরে,
“ভক্তবৎসলেরে তুমি যেথায় পাঠালে নির্বাসনে
সেইখানে, মহারাজ, নির্বাসিত করো ভক্তজনে।”

Destitute Donation

Said the royal attendant, “Despite entreaties, king,
The finest hermit, best among men, refuses shelter
In your temple of gold, he is singing to god
Beneath a tree by the road. The devout surround him
In numbers large, their overflowing tears of joy
Rinse the dust off the earth. The temple, though,
Is all but deserted; just as bees abandon
The gilded honeypot when maddened by the fragrance
Of the flower to swiftly spread their wings
And fly to the petals unfurling in the bush
To quench their eager thirst, so too are people,
Sparing not a glance for the palace of gold,
Thronging to where a flower in a devout heart
Spreads heaven’s incense. On the bejewelled platform
The god sits alone in the empty temple.”

At this,
The fretful king dismounted from his throne to go
Where the hermit sat beneath the tree. Bowing, he said,
“My lord, why have you forsaken god’s mighty abode,
The royal construction of gold that pierces the sky,
To sing paeans to the divine here on the streets?’
“There is no god in that temple,” said the hermit.

Furious,
The king said, “No god! You speak like a godless man,
Hermit. A bejewelled idol on a bejewelled throne,
You say it’s empty?”

“Not empty, it holds royal arrogance,
You have consecrated yourself, not the god of the world.”

Frowning, said the king, “You say the temple I made
With twenty lakh gold coins, reaching to the sky,
That I dedicated to the deity after due rituals,
This impeccable edifice – it has no room for god!”

Said the tranquil hermit, “The year when the fires
Raged and rendered twenty thousand subjects
Homeless, destitute, when they came to your door
With futile pleas for help, and sheltered in the woods,
In caves, in the shade of trees, in dilapidated temples,
When you constructed your gold-encrusted building
With twenty lakh gold coins for a deity, god said,
‘My eternal home is lit with countless lamps
In the blue, infinite sky; its everlasting foundations
Are truth, peace, compassion, love. This feeble miser
Who could not give homes to his homeless subjects
Expects to give me one!’ At that moment god left
To join the poor in their shelter beneath the trees.
As hollow as the froth and foam in the deep wide ocean
Is your temple, just as bereft beneath the universe,
A bubble of gold and pride.”

Flaring up in rage
The king said, “You false deceiver, leave my kingdom
This instant.”

Serenely the hermit said to him,
“You have exiled the one who loves the devout.
Now send the devout into the same exile, king.”

ನಿರ್ಬಲರ ರಾಮ

ಸಂತನೆಂದ,
ಗುಡಿಯೊಳಗೆ ದೇವರಿಲ್ಲ...

ರಾಜ ಕ್ರುದ್ಧನಾದ,
ಎಲೈ ಸಂತನೇ
ಅಲ್ಲ ನೀನು ಪಾಖಂಡಿಯೇ?
ವಿರಾಜಮಾನನಾಗಿಹನು ದೇವರಿಲ್ಲಿ
ಅಮೂಲ್ಯ ರತ್ನಖಚಿತ ಸಿಂಹಾಸನದಲ್ಲಿ
ಸುವರ್ಣ ಪ್ರಭೆಯೊಳಗೆ ಮಿಂಚುತಿಹನಿಲ್ಲಿ
ಆದರೂ ಹೇಳುವೆಯೋ ದೇವರಿಲ್ಲವೆಂದಿಲ್ಲಿ!

ಸಂತನುತ್ತರಿಸಿದ,
ಆದರೂ ಖಾಲಿಯಾಗಿದೆಯಯ್ಯಾ
ಅಲ್ಲಿರುವುದು ದೇವನಲ್ಲ
ನಿನ್ನ ಅರಸೊತ್ತಿಗೆಯ ಅಹಂಕಾರವಯ್ಯಾ
ನಿನ್ನ ಹೆಮ್ಮೆಯನ್ನು
ಪ್ರತಿಷ್ಠಾಪಿಸಿರುವೆಯಲ್ಲಿ
ಅದು ನಿಜದೇವರಲ್ಲವಯ್ಯಾ...

ರಾಜ ಹುಬ್ಬೇರಿಸಿದ,

ಸ್ವರ್ಣಂಗಳ ಸುರಿದಿರುವೆ
ಮಣದ ಮೇಲೆರಡು ಲಕ್ಷ,
ಆಗಸವನೇ ಚುಂಬಿಸುತಿದೆಯದರ ಕಳಶ!
ಸಕಲ ವೇದಾಗಮ ಶಾಸ್ತ್ರಂಗಳನಜಮಾಯಿಸಿ
ಪ್ರಾಣಪ್ರತಿಷ್ಟೆ ಸಂಪನ್ನವಾಗಿಹುದಿಲ್ಲಿ
ಆದರೂ ಅದೆಂತು ಧೈರ್ಯದಿ ಪ್ರಲಪಿಸುತ್ತಿರುವಿ
ದೇವನಿಲ್ಲವೆಂದಿಲ್ಲಿ!

ಶಾಂತಚಿತ್ತದಿಂದ ಸಂತನೊಪ್ಪಿಸಿದ,

ರಾಜನೇ,
ಜರ್ಝರಿತವಾಗಿರಲು
ನಿನ್ನ ಜನಕೋಟಿಯು ಕ್ಷಾಮ ಪ್ರಕೋಪದಲ್ಲಿ
ಅಶನ ವಸನ ವಿರಹಿತವಾಗಿ
ಕ್ಷುತ್ಪಿಪಾಸ ಭಾಧಿತವಾಗಿ
ದೇಹಿ ದೇಹಿಯೆಂದುಲಿಯುತ್ತಾ ಅಲೆಯುತಲಿರುವ
ನಿನ್ನ ಪ್ರಜಾಕೋಟಿಯಂ ಒದ್ದೋಡಿಸಿದೆ ಗಿರಿಕುಹರ ಗಹ್ವರಗಳಾಚೇ.
ಪರಿತ್ಯಕ್ತರಾಗಿ ಸಾಗಿಹರು
ಹಾದಿ ಬೀದಿಗಳೆಡೆಯಲ್ಲಿ
ಆಶ್ರಯಿಸಿಹರು
ಮುರುಕು ಗುಡಿ ಗುಂಡಾರಗಳಲ್ಲಿ...
ಹೊಟ್ಟೆ ಬಟ್ಟೆಗಿಲ್ಲದೆ ನಗರ ತೊರೆಯುತಿಹುದು
ಆ ನಿನ್ನ ಜನಕೋಟಿ...

ಲಕ್ಷ ಸುವರ್ಣಗಳ ನೀನು ದೇವನರಮನೆಗೆ
ಸುರಿದಿರುವ ದಿನವೇ ಆ ದೇವನುದ್ಗರಿಸಿರುವ...

"ಸತ್ಯ ಶಾಂತಿ ಸಹಾನುಭೂತಿ
ಮನುಜಪ್ರೀತಿಗಳೆಂಬ ಮೌಲ್ಯಗಳೇ
ಅಳಿವಿಲ್ಲದ ಗುಡಿಗೆ ಅಡಿಪಾಯವಾಗಿಹವಿಲ್ಲಿ...

ಅದ ಪ್ರಜ್ವಲಿಸುತಿವೆ
ಭೂಮ್ಯಾಕಾಶಗಳ‌ ನಡುವೆ
ಸೂರ್ಯ ಚಂದ್ರರೆಂಬ ನಿತ್ಯ ನಂದಾದೀಪಗಳಿಲ್ಲಿ...

ತನ್ನ ಜನಕೋಟಿಯು
ನಿರ್ಗತಿಕರಾಗಿ ಬಳಲುತಿರೆ
ಅಶನ‌ ವಸನಾಶ್ರಯಂಗಳ ಪೂರೈಸಲು
ಹೃದಯ ದಾರಿದ್ರ್ಯವಿರುವ ಕಡುಕೃಪಣ ರಾಜಂಗೆ
ಎನಗಾಗಿ ಗುಡಿಯ ನಿರ್ಮಿಸುವ
ನಿಸ್ವಾರ್ಥ ಚಿತ್ತವದು ಹೇಗೆ ಸಾಧ್ಯ?"

ಅದೋ ಆ ದಿನವೇ
ದೇವರು ತೊರೆದಿರುವ ನಿನ್ನ ಗುಡಿಯನ್ನು
ಸೇರಿಹೋಗಿಹನು ನಿನ್ನ
ನಿರ್ಗತಿಕ, ನಿಸ್ಸಾಯಕ ಜನಕೋಟಿಯಲ್ಲಿ

ಸಾಗರದಲ್ಲೀಗ ನೊರೆಯಿಲ್ಲ
ನಿನ್ನ ಗುಡಿಯೊಳಗೆ ದೇವನಿಲ್ಲ...

ನಿನ್ನ ಹುಸಿ ಗರ್ವ ಅಧಿಕಾರದಂತೆ
ನೀ ನಿರ್ಮಿಸಿದ ಗುಡಿಯೂ ಶೂನ್ಯವಿಲ್ಲಿ..."

ಕುಪಿತ ರಾಜನು ಗರ್ಜಿಸಿದ,

ಎಲೈ ನಿರ್ಲಜ್ಜ ಸಂತನೇ
ತೊರೆ ನನ್ನ ದೇಶವಂ ಈ‌ ಕ್ಷಣದಿ ನೀನು...

ಶಾಂತ ಚಿತ್ತದಿಂ ಸಂತನುಚ್ಚರಿಸಿದ,

ಪರಮಾತ್ಮನನ್ನು ಗಡಿಪಾರು ಮಾಡಿರುವ
ಓ ಸಾಮ್ರಾಟನೇ...
ಈ ಭಕುತರ ಮೇಲೂ ದಯೆದೋರು
ಅವರನ್ನೂ‌ ನೀನು ತ್ಯಜಿಸಿ ಬಿಡು...

ಬಂಗಾಳಿಯಿಂದ ಇಂಗ್ಲಿಷ್ ಅನುವಾದ: ಅರುಣ್ ಸಿನ್ಹಾ.

ಕವಿತೆಯ ಇಂಗ್ಲಿಷ್ ಅನುವಾದವನ್ನು ಮೊದಲು Scroll.in ನಲ್ಲಿ ಪ್ರಕಟಿಸಲಾಯಿತು ಮತ್ತು ಅನುವಾದಕರ ಅನುಮತಿಯೊಂದಿಗೆ ಇಲ್ಲಿ ಮರುಪ್ರಕಟಿಸಲಾಗಿದೆ

ಅನುವಾದ: ಪುನೀತ್‌ ಅಪ್ಪು

Poem : Rabindranath Tagore
English Translation : Arunava Sinha

அருணவ சின்ஹா, அசோகா பல்கலைக்கழகத்தில் படைப்பு எழுத்து பேராசிரியராகவும் மொழிபெயர்ப்புகளுக்கான அசோகா மையத்தின் துணை இயக்குநராகவும் இருக்கிறார். விருது பெற்ற மொழிபெயர்ப்பாளரான அவர், வங்க மொழி மற்றும் ஆங்கில மொழி ஆகியவற்றில் இயங்கி, பல செவ்வியல் நூல்களை, புனைவு-அபுனைவுகளை, கவிதைகளை மொழிபெயர்த்திருக்கிறார்.

Other stories by Arunava Sinha
Illustration : Atharva Vankundre

அதர்வா வங்குண்ட்ரே மும்பையை சேர்ந்த கதைசொல்லியும் ஓவியரும் ஆவார். பாரியின் பயிற்சிப் பணியில் 2023ம் ஆண்டின் ஜூலை முதல் ஆகஸ்ட் வரை இருந்தார்.

Other stories by Atharva Vankundre
Translator : Puneeth Appu

Puneeth Appu is a lawyer by profession, who also translates and writes stories and screenplays.

Other stories by Puneeth Appu