"ತನ್ನ ನಾಲ್ಕು ಮಕ್ಕಳೊಂದಿಗೆ ರಾತ್ರಿ ಪೂರ ನಡೆಯುವ  ಆ ತಾಯಿ- ಅವಳು ನನ್ನ ಪಾಲಿಗೆ ದುರ್ಗಾ ಮಾತೆ."

ಈಗ ವಲಸೆ ಕಾರ್ಮಿಕರನ್ನು ಹೋಲುವ ಹಾಗೆ ದುರ್ಗಾ ದೇವಿಯ ವಿಗ್ರಹವನ್ನು ಅಕ್ಷರಶಃ ಚಿತ್ರಿಸಿದ ಕಲಾವಿದ ರಿಂಟು ದಾಸ್ ಅವರನ್ನು ಭೇಟಿ ಮಾಡಿ. ಇದು ನೈಋತ್ಯ ಕೋಲ್ಕತ್ತಾದ ಬೆಹಾಲಾದಲ್ಲಿರುವ ಬಾರಿಶಾ ಕ್ಲಬ್‌ನ ದುರ್ಗಾಪೂಜಾ ಪೆಂಡಾಲ್‌ನಲ್ಲಿರುವ ಅಸಾಧಾರಣ ಶಿಲ್ಪವಾಗಿದೆ. ದುರ್ಗಾ ಮಾತೆಗೆ ವಲಸೆ ಕಾರ್ಮಿಕರಂತೆ ಇತರ ದೇವತೆಗಳು ಸಹ ಜೊತೆಯಲ್ಲಿರುತ್ತಾರೆ ಉದಾಹರಣೆಗೆ- ಸರಸ್ವತಿ, ಲಕ್ಷ್ಮಿ, ಗಣೇಶ ಮತ್ತು ಇತರ ದೇವತಗಳು. ಇಡೀ ಈ ಪ್ರದರ್ಶನವು ಕರೋನ ವೈರಸ್ ಸಾಂಕ್ರಾಮಿಕ ಖಾಯಿಲೆಯ ಮಧ್ಯೆ ವಲಸಿಗರಿಗೆ ಅವರ ಹೋರಾಟಕ್ಕೆ ಕೊಡುವ ಗೌರವವಾಗಿದೆ.

46 ವರ್ಷದ ರಿಂಟು ದಾಸ್ ಅವರು ಲಾಕ್‌ಡೌನ್ ಅವಧಿಯಲ್ಲಿ ತಾವು ಕಳೆದ ಆರು ತಿಂಗಳಿಂದ ಗೃಹಬಂಧನದಲ್ಲಿದ್ದಾರೆ ಎಂದು ಅಂದುಕೊಂಡಿದ್ದರು. “ನಾನು ಟಿವಿಯಲ್ಲಿ ತುಂಬಾ ಜನರ ಸಾವನ್ನು ನೋಡಿದ್ದೇನೆ ಮತ್ತು ಅನೇಕ ಜನರು ಕೋವಿಡ್‌ನಿಂದ ಕೆಟ್ಟ ಪರಿಣಾಮಕ್ಕೆ ಒಳಗಾಗಿದ್ದನ್ನು ನೋಡಿದೆ” ಎನ್ನುತ್ತಾರೆ. ಎಷ್ಟೋ ಮಂದಿ, ಹಗಲು ರಾತ್ರಿ  ಎನ್ನದೆ ನಡೆದರು. ತಾಯಂದಿರು, ಹೆಣ್ಣುಮಕ್ಕಳು ಎಲ್ಲರೂ ನಡೆಯುತ್ತಿದ್ದಾರೆ , ಕೆಲವೊಮ್ಮೆ ಅವರಿಗೆ ಸ್ವಲ್ಪವೂ ಕೂಡ ಆಹಾರ ಮತ್ತು ನೀರು ಸಿಗುವುದಿಲ್ಲ. ಈ ವರ್ಷ ಪೂಜೆ ಮಾಡಿದರೆ ಈ ಜನರಿಗಾಗಿ ಪೂಜೆ ಮಾಡುತ್ತೇನೆ ಎಂದು ಅಂದುಕೊಂಡೆ. ನಾನು ಆ ತಾಯಂದಿರನ್ನು ಗೌರವಿಸುತ್ತೇನೆ,” ಹಾಗಾಗಿ ನಾನು ದುರ್ಗಾ ಮಾತೆಯನ್ನು  ವಲಸೆ ಕಾರ್ಮಿಕರ ತಾಯಿ ಎಂದು ಭಾವಿಸುತ್ತೇನೆ.

"ಮೂಲ ಕಲ್ಪನೆಗಳು ಬೇರೆಯೇ ಇವೆ" ರಿಂಟು ದಾಸ್ ಅವರ ಪ್ರಕಾರ ವಿಗ್ರಹವನ್ನು ಕೆತ್ತಿಸಿದ 41 ವರ್ಷದ ಪಲ್ಲಬ್ ಭೌಮಿಕ್ ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ತಮ್ಮ ಮನೆಯಿಂದ PARI ತಂಡಕ್ಕೆ ವಿವರಿಸಿದರು. 2019 ರ ದುರ್ಗಾ ಪೂಜೆಯ ಅಬ್ಬರವು ಕೊನೆಗೊಳ್ಳುವ ಮೊದಲೇ ಬಾರಿಶಾ ಕ್ಲಬ್ ಸಂಘಟಕರು ಈ ವರ್ಷದ ಪೂಜೆಗೆ ಈಗಾಗಲೇ ತಯಾರಿ ಆರಂಭಿಸಿದ್ದರು. ಆದರೆ ನಂತರ ಕೋವಿಡ್ -19 ಸಾಂಕ್ರಾಮಿಕ ಖಾಯಿಲೆಯ ಪರಿಣಾಮಗಳು 2020ರಲ್ಲಿ ಬೇರೆ ರೀತಿಯಾಗಿರುತ್ತವೆ ಎಂದು ಸ್ಪಷ್ಟವಾಯಿತು. ಆದ್ದರಿಂದ ಕ್ಲಬ್ ಹಳೆಯ ಯೋಜನೆಗಳನ್ನು ಸ್ಥಗಿತಗೊಳಿಸಬೇಕಾಯಿತು ಮತ್ತು ಕ್ಲಬ್‌ ಹೊಸ ಯೋಜನೆಯನ್ನು ಲಾಕ್‌ಡೌನ್ ಮತ್ತು ಕಾರ್ಮಿಕ ಸಂಕಟದ ಸುತ್ತ ಹೆಣೆಯಿತು.

This worker in Behala said he identified with the Durga-as-migrant theme, finding it to be about people like himself
PHOTO • Ritayan Mukherjee

ಬೆಹಾಲಾದಲ್ಲಿನ ಈ ಕೆಲಸಗಾರ ತಾನು ವಲಸಿಗರ ರೂಪದಲ್ಲಿರುವ ದುರ್ಗಾ ಥೀಮ್‌ನೊಂದಿಗೆ ಗುರುತಿಸಿಕೊಂಡಿದ್ದೇನೆ ಮತ್ತು ಅದು ತನ್ನಂತಹ ಜನರ ಕುರಿತಾಗಿದೆ ಎಂದು ಹೇಳಿದರು

“ಬಾರಿಶಾ ಕ್ಲಬ್‌ನ ಪೂಜೆಯ ಕಲಾ ನಿರ್ದೇಶಕರಾದ ರಿಂತು ದಾಸ್ ಅವರ ಮೇಲ್ವಿಚಾರಣೆಯಲ್ಲಿ ನಾನು ದುರ್ಗಾ ಮಾತೆಯ ಮಕ್ಕಳು ಮತ್ತು ಮಹಿಷಾಸುರನೊಂದಿಗೆ ದುರ್ಗಾ ಮಾತೆಯ ವಿಗ್ರಹಗಳನ್ನು ರಚಿಸುವಾಗ, ಇತರ ಕುಶಲಕರ್ಮಿಗಳು ಪೆಂಡಾಲ್‌ನ ವಿವಿಧ ಭಾಗಗಳಲ್ಲಿ ಕೆಲಸವನ್ನು ಬಹಳ ಚೆನ್ನಾಗಿ ಮಾಡಿದರು" ಎಂದು ಭೌಮಿಕ್ ಹೇಳುತ್ತಾರೆ. ದೇಶದಾದ್ಯಂತ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಎಲ್ಲಾ ಪೂಜಾ ಸಮಿತಿಗಳು ಕೆಟ್ಟ ಪರಿಣಾಮವನ್ನು ಅನುಭವಿಸಿದ ಕಾರಣದಿಂದಾಗಿ, ಬಾರಿಶಾ ಕ್ಲಬ್ ಕೂಡ ತನ್ನ ಬಜೆಟ್ ಅನ್ನು ಅರ್ಧದಷ್ಟು ಕಡಿತಗೊಳಿಸಬೇಕಾಗಿತ್ತು. ಮೂಲ ವಿಷಯವನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಾಗದ ಕಾರಣ, ದುರ್ಗಾ ಮಾತೆಯನ್ನು ವಲಸೆ ಹೋಗುತ್ತಿರುವ ತಾಯಿ ಎನ್ನುವ ಕಲ್ಪನೆಯನ್ನು ರಿಂಟು ದಾಸ್‌ ಅವರು ಮಾಡಿದರು. ನಾವು ಅದನ್ನು ಚರ್ಚಿಸಿ ಮೂರ್ತಿಯನ್ನು ಕೆತ್ತಲು ಪ್ರಾರಂಭ ಮಾಡಿದೆವು ಮತ್ತು ಈ ಪೆಂಡಾಲ್, ತಂಡದವರ ಒಳ್ಳೆಯ ಕೆಲಸಗಳ ಫಲ ಎಂದು ನಾನು ಹೇಳುತ್ತೇನೆ.

ನಾನು ನೋಡಿದ ಆ ಸಂದರ್ಭಗಳು, "ತನ್ನ ಹಸಿದ ಮಕ್ಕಳೊಂದಿಗೆ ದುರ್ಗೆಯು ನರಳುತ್ತಿರುವ ಮೂರ್ತಿಯನ್ನು ಮಾಡುವಂತೆ ಮಾಡಿದೆ" ಎಂದು ಭೌಮಿಕ್ ಹೇಳುತ್ತಾರೆ. ದಾಸ್ ಅವರು ನೋಡಿದಂತೆ, “ಹಲವಾರು ಬಡ ತಾಯಂದಿರು ತಮ್ಮ ಮಕ್ಕಳೊಂದಿಗೆ ಇರುವ ಚಿತ್ರಗಳನ್ನು” ಹಳ್ಳಿಗಳಲ್ಲಿನ ತಮ್ಮ ತಮ್ಮ ಮನೆಗಳಿಗೆ ಆ ದೀರ್ಘ ನಡಿಗೆಗಳಲ್ಲಿ ಹೋಗುವುದನ್ನು ನೋಡಿದ್ದರು. ಗ್ರಾಮೀಣ ಪಟ್ಟಣದಲ್ಲಿ ನೆಲೆಸಿದ ಕಲಾವಿದರಾಗಿ, ಅವರು ತಮ್ಮ ಸುತ್ತಮುತ್ತಲಿನ ತಾಯಂದಿರ ಹೋರಾಟವನ್ನು ಮರೆಯಲು ಸಾಧ್ಯವಾಗಲಿಲ್ಲ. “ನನ್ನ ಹುಟ್ಟೂರಾದ ನಾಡಿಯಾ ಜಿಲ್ಲೆಯ ಕೃಷ್ಣನಗರದಲ್ಲಿ ಇದನ್ನು ಪೂರ್ಣಗೊಳಿಸಲು ಸುಮಾರು ಮೂರು ತಿಂಗಳ ಕೆಲಸ ಬೇಕಾಯಿತು. ಅಲ್ಲಿಂದ ಅದು ಬಾರಿಶಾ ಕ್ಲಬ್‌ಗೆ ಹೋಯಿತು,” ಎಂದು ಭೌಮಿಕ್ ಹೇಳುತ್ತಾರೆ. ಅವರು ಕೋಲ್ಕತ್ತಾದ ಸರ್ಕಾರಿ ಕಲಾ ಕಾಲೇಜಿನಲ್ಲಿ ಓದುತ್ತಿದ್ದಾಗ, ಪ್ರಸಿದ್ಧ ಕಲಾವಿದ ಬಿಕಾಶ್ ಭಟ್ಟಾಚಾರ್ಜಿಯವರ ಕೆಲಸದಿಂದ ಹೆಚ್ಚು ಪ್ರಭಾವಿತರಾಗಿದ್ದರು, ಅವರ ಚಿತ್ರಕಲೆ “ದರ್ಪಮಯಿ” ಅವರ ದುರ್ಗೆಯ ಪರಿಕಲ್ಪನೆಗೆ ಪ್ರೇರಣೆಯಾಯಿತು.

ಪೆಂಡಾಲ್‌ನ ಥೀಮ್ ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆಯನ್ನು ಪಡೆಯಿತು. “ಈ ಪೆಂಡಾಲ್ ನಮ್ಮ ಬಗ್ಗೆಯೇ ಹೇಳುತ್ತದೆ”, ಕವಲುದಾರಿಗಳಲ್ಲಿ ಕಣ್ಮರೆಯಾಗುವ ಮೊದಲು ಒಬ್ಬ ಕೆಲಸಗಾರ ನನಗೆ ಹೇಳಿದನು. ವಲಸೆ ಅವತಾರದಲ್ಲಿ ದುರ್ಗೆಯ ಚಿತ್ರಣವನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌ಗಳನ್ನು ಕೆಲವರು ಮಾಡಿದ್ದಾರೆ ಮತ್ತು ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಏನೇ ಆದರೂ, "ಈ ದೇವತೆ ಎಲ್ಲರಿಗೂ ತಾಯಿ” ಎಂದು ಸಂಘಟನಾ ಸಮಿತಿಯ ವಕ್ತಾರರು ಹೇಳುತ್ತಾರೆ."

"ಬಂಗಾಳದ ಶಿಲ್ಪಿಗಳು, ವಿಗ್ರಹ ತಯಾರಕರು ಮತ್ತು ಕಲಾವಿದರು ಯಾವಾಗಲೂ ದುರ್ಗಾ ಮಾತೆಯನ್ನು ತಮ್ಮ ಸುತ್ತಲೂ ನೋಡುವ ಮಹಿಳೆಯರಂತೆ ಕಲ್ಪಿಸಿಕೊಳ್ಳುತ್ತಾರೆ”, ಎಂದು ಈ ಚಿತ್ರಣವನ್ನು ಟೀಕಿಸುವವರಿಗೆ ಪಲ್ಲಬ್ ಭೌಮಿಕ್ ಹೇಳುತ್ತಾರೆ.

ಈ ವರದಿಗೆ ಸಹಾಯ ಮಾಡಿದ್ದಕ್ಕಾಗಿ ಸ್ಮಿತಾ ಖಟೋರ್ ಮತ್ತು ಸಿಂಚಿತಾ ಮಾಜಿ ಅವರಿಗೆ ಧನ್ಯವಾದಗಳು.

ಅನುವಾದ: ಅಶ್ವಿನಿ ಬಿ.

Ritayan Mukherjee

ரிதயன் முகர்ஜி, கொல்கத்தாவைச் சேர்ந்த புகைப்படக்காரர். 2016 PARI பணியாளர். திபெத்திய சமவெளியின் நாடோடி மேய்ப்பர் சமூகங்களின் வாழ்வை ஆவணப்படுத்தும் நீண்டகால பணியில் இருக்கிறார்.

Other stories by Ritayan Mukherjee
Translator : Ashwini B. Vaddinagadde

Ashwini B. is a Bengaluru based accountant and translator and writer by passion.

Other stories by Ashwini B. Vaddinagadde