“ಈ ಆಟ ಇಲ್ಲಿನ ಹಲ್ಬಿ ಮತ್ತು ಗೊಂಡಿ ಭಾಷೆಯಲ್ಲಿ ಘೋಡೋಂಡಿ ಎಂದೇ ಪರಿಚಿತ. ಇದರ ಅರ್ಥ ಕುದುರೆ ಸವಾರಿ. ಈ ಕೋಲಿನ ಮೇಲೆ ನಡೆಯುವಾಗ ನಿಮಗೆ ಕುದುರೆ ಸವಾರಿ ಮಾಡುತ್ತಿರುವಷ್ಟೇ ಸಂತೋಷವಾಗುತ್ತದೆ.” ಎನ್ನುತ್ತಾರೆ ಇಲ್ಲಿನ ಯುವ ಶಿಕ್ಷಕ ಕಿಬಾಯ್‌ಬಲೆಂಗ ನಿವಾಸಿ ಗೌತಮ್ ಸೇಥಿಯಾ. (ಜನಗಣತಿಯಲ್ಲಿ ಕಿವಾಯ್‌ಬಲೇಗಾ ಎಂದು ಪಟ್ಟಿ ಮಾಡಲಾಗಿದೆ.)
ಛತ್ತೀಸ್‌ಗಢದ ಬಸ್ತಾರ್ ಪ್ರದೇಶದ ಕೊಂಡಗಾಂವ್ ಜಿಲ್ಲೆಯ ಕೊಂಡಗಾಂವ್ ಬ್ಲಾಕ್‌ನಲ್ಲಿರುವ ಈ ಗ್ರಾಮದ ಜಗದಾಹಿನ್‌ಪಾರಾ ಹಾಡಿಯಲ್ಲಿ, ಹದಿಹರೆಯ ಪೂರ್ವದ ಹುಡುಗರು ಈ ಆಟ ಆಡುತ್ತಾರೆ. ಆದರೆ ಘೋಡೊಂಡಿ ಆಟವಾಡುವ ಯಾವುದೇ ಹುಡುಗಿಯರನ್ನು ನಾನು ಇಲ್ಲಿ ನೋಡಿಲ್ಲ - ಹರೇಲಿ ಅಮಾವಾಸ್ಯೆಯ ಶುಭ ದಿನದಂದು ಕೋಲಿನ ಸವಾರಿ ಪ್ರಾರಂಭಿಸುತ್ತಾರೆ (ಜುಲೈ-ಆಗಸ್ಟ್ ಸುಮಾರಿಗೆ). ಆಗಸ್ಟ್-ಸೆಪ್ಟೆಂಬರ್ ತಿಂಗಳಿನಲ್ಲಿ ಗಣೇಶ್ ಚತುರ್ಥಿಯ ನಂತರ ನಯಖಾನಿ (ಅಥವಾ ಛತ್ತೀಸ್‌ಗಢದ ಇತರ ಭಾಗಗಳಲ್ಲಿನ ನವಾಖಾನಿ)ಯವರೆಗೆ ಸವಾರಿಗಳು ಮತ್ತು ಆಟಗಳು ಮುಂದುವರಿಯುತ್ತವೆ.