ವಜೀರಿಥಾಲ್: ಕತ್ತಲೆ ಕೂಪದಲ್ಲಿ ಆರೋಗ್ಯ ಸೇವೆ
ಜಮ್ಮು ಮತ್ತು ಕಾಶ್ಮೀರದ ಬಂಡೀಪೋರ್ ಜಿಲ್ಲೆಯ ನಿರ್ಜನ ಹಳ್ಳಿಯಲ್ಲಿ ಗರ್ಭಿಣಿಯರು ಅನಿಯಮಿತ ವಿದ್ಯುತ್ ಪೂರೈಕೆ ಮತ್ತು ಕಳಪೆ ಸಾರ್ವಜನಿಕ ಆರೋಗ್ಯ ಸೌಲಭ್ಯಗಳೊಂದಿಗೆ ಹೆಣಗಾಡುತ್ತಿದ್ದಾರೆ. ಅವರಿಗಿರುವಏಕೈಕ ಭರವಸೆಯೆಂದರೆ ಹಳ್ಳಿಯ ಹಿರಿಯ ದಾಯಿ
ನವೆಂಬರ್ 17, 2022 | ಪ್ರೀತಿ ಡೇವಿಡ್
ದಟ್ಟ ಹೊಗೆಯಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಬೀಡಿ ಕಟ್ಟುವ ಮಹಿಳೆಯರ ಆರೋಗ್ಯ
ಮುರ್ಷಿದಾಬಾದ್ ಜಿಲ್ಲೆಯ ಬೀಡಿ ಕಟ್ಟುವ ಕಡು ಬಡ ಮಹಿಳೆಯರು ಅತ್ಯಲ್ಪ ಸಂಬಳದ ಕೆಲಸಕ್ಕಾಗಿ ತಮ್ಮ ಆರೋಗ್ಯವನ್ನೇ ಬಲಿ ನೀಡುತ್ತಿದ್ದಾರೆ. ತಂಬಾಕಿನೊಡನೆ ನಿರಂತರ ಸಂಪರ್ಕದಲ್ಲಿರುವುದು ಅವರ ಸಾಮಾನ್ಯ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ
ಅಕ್ಟೋಬರ್ 31, 2022 | ಸ್ಮಿತಾ ಖಟೋರ್
ಮುಟ್ಟಾಗುವ ಹುಡುಗಿಯರು ಮತ್ತು ಹೆಂಗಸರಿಗಲ್ಲ ಈ ದೇಶ
ಉತ್ತರಾಖಂಡದ ಉಧಮ್ ಸಿಂಗ್ ನಗರ್ ಜಿಲ್ಲೆಯಲ್ಲಿ, ಋತುಸ್ರಾವ ಮತ್ತು ಹೆರಿಗೆಯ ಸಮಯದಲ್ಲಿ ತಮ್ಮ ಮೇಲೆ ಹೇರಲಾಗುವ ಆಳವಾದ ಪೂರ್ವಾಗ್ರಹಗಳು ಮತ್ತು ಕಷ್ಟಗಳ ಬಗ್ಗೆ ಮಹಿಳೆಯರು ಮಾತನಾಡುತ್ತಾರೆ
ಸೆಪ್ಟೆಂಬರ್ 19, 2022 | ಕೃತಿ ಅತ್ವಾಲ್
ಬೊಲೆರೊ ಹಿಂದಿನ ಸೀಟಿನಲ್ಲಿ ಹೆರಿಗೆ
ಹಿಮಾಚಲ ಪ್ರದೇಶದ ಗ್ರಾಮೀಣ ಪ್ರದೇಶಗಳಲ್ಲಿ ಕೈಗೆಟುಕುವ ವೈದ್ಯಕೀಯ ಸೇವೆಗಳು ಮತ್ತು ಕಾರ್ಯಸಮರ್ಥ ಸಮುದಾಯ ಆರೋಗ್ಯ ಕೇಂದ್ರಗಳ ಅನುಪಸ್ಥಿತಿಯಲ್ಲಿ ಇಲ್ಲಿನ ಮಹಿಳೆಯರು ಗರ್ಭಿಣಿ ಆರೋಗ್ಯ ಮತ್ತು ಆರೋಗ್ಯಸಂಬಂಧಿ ಚಿಕಿತ್ಸೆಗಳಿಲ್ಲದೆ ಪರದಾಡುತ್ತಿದ್ದಾರೆ
ಆಗಸ್ಟ್ 31, 2022 | ಜಿಗ್ಯಾಸಾ ಮಿಶ್ರಾ
ಅಸುಂಡಿಯ ದಲಿತ ಮಹಿಳೆಯರ ಖಾಸಗಿ ಗೋಳುಗಳು
ಕಡಿಮೆ ವೇತನ ಮತ್ತು ́ಹಸಿದುಳಿಯುವಂತೆ ಮಾಡುವ ಆಹಾರ ಪದ್ಧತಿಯʼಯು ಹಾವೇರಿ ಜಿಲ್ಲೆಯ ಈ ಗ್ರಾಮದಲ್ಲಿ ಮಹಿಳೆಯರ ಯೋಗಕ್ಷೇಮದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ. ಜೊತೆಗೆ ಸರಿಯಾದ ಶೌಚ ವ್ಯವಸ್ಥೆಗಳಿಲ್ಲದಿರುವುದು ಮುಟ್ಟು ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಹಿಳೆಯರಿಗೆ ಇನ್ನಷ್ಟು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ
ಆಗಸ್ಟ್ 18, 2022 | ಎಸ್. ಸೆಂಥಲಿರ್
‘ಸಂತಾನ ಹರಣ ಚಿಕಿತ್ಸೆಗೆ ಒಬ್ಬಳೇ ನಡೆದುಕೊಂಡು ಹೋಗಿದ್ದೆʼ
ಉದಯಪುರ ಜಿಲ್ಲೆಯ ಗಮೇತಿ ಸಮುದಾಯದ ಮನೆಯ ಗಂಡಸರು ಕಾರ್ಮಿಕರಾಗಿ ದೂರದ ಸೂರತ್, ಮುಂಬಯಿ ಮತ್ತು ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದು, ಅವರು ಮನೆಯಲ್ಲೇ ಬಿಟ್ಟು ಹೋದ ಮಹಿಳೆಯರು ಸ್ವತಃ ತಾವೇ ಗರ್ಭನಿರೋಧಕ ಮತ್ತು ಮತ್ತು ಆರೋಗ್ಯ ರಕ್ಷಣೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ
ಜುಲೈ 23, 2022 | ಕವಿತಾ ಅಯ್ಯರ್
‘ನನಗೆ ಇನ್ನೊಂದು ಮಗುವನ್ನು ಹೊಂದುವುದು ಇಷ್ಟವಿರಲಿಲ್ಲ’
ಹೆಚ್ಚು ಮಕ್ಕಳನ್ನು ಹೊಂದುವುದನ್ನು ತಡೆಯುವ ಸಲುವಾಗಿ ಸುನಿತಾ ದೇವಿ ಸುರಕ್ಷಿತ ಮತ್ತು ಸುಲಭ ಮಾರ್ಗವನ್ನು ಬಯಸಿದ್ದರು, ಆದರೆ ಕಾಪರ್-ಟಿ ವಿಫಲವಾದ ನಂತರ, ಗರ್ಭಪಾತವನ್ನು ಮಾಡಿಸಲು ಅವರು ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಖಾಸಗಿ ಆಸ್ಪತ್ರೆಗೆ ದೆಹಲಿ ಮತ್ತು ಬಿಹಾರದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಬೇಕಾಯಿತು
ಜುಲೈ 17, 2022 | ಸಂಸ್ಕೃತ ತಲ್ವಾರ್
ಟಿಕಾರಿ: ಗುಟ್ಟು ಮತ್ತು ಕತೆಗಳ ಸಂಗ್ರಾಹಕಿ
ಗರ್ಭನಿರೋಧಕಗಳು ಮತ್ತು ಇತರ ಅಗತ್ಯ ವಸ್ತುಗಳ ಚೀಲದೊಂದಿಗೆ ಸದಾ ಸನ್ನದ್ಧರಿರುವ ಕಲಾವತಿ ಸೋನಿ ತನ್ನ ಸಮುದಾಯದ ಅನೇಕರಿಗೆ ವಿಶ್ವಾಸಾರ್ಹ ಸಹೇಲಿಯಾಗಿ (ಗೆಳತಿ) ಒದಗುತ್ತಾರೆ. ಅವರು ತನ್ನ ಅನೌಪಚಾರಿಕ ಸಂಭಾಷಣೆಗಳ ಮೂಲಕ ಅಮೇಥಿ ಜಿಲ್ಲೆಯ ಟಿಕಾರಿ ಗ್ರಾಮದ ಮಹಿಳೆಯರ ನಡುವೆ ಸಂತಾನೋತ್ಪತ್ತಿ ಹಕ್ಕುಗಳ ಸಂದೇಶವನ್ನು ಜೀವಂತವಾಗಿರಿಸಿದ್ದಾರೆ
ಜೂನ್ 22, 2022 | ಅನುಭಾ ಭೋಸ್ಲೆ
ʼಇದೆಲ್ಲವೂ ನನ್ನ ಗರ್ಭಕೋಶ ತೆಗೆದುಹಾಕಿದಾಗಿನಿಂದ ಆರಂಭವಾಯಿತುʼ
ಬೀಡ್ ಜಿಲ್ಲೆಯಲ್ಲಿ ದೊಡ್ಡ ಸಂಖ್ಯೆಯಲ್ಲಿ ಹಿಸ್ಟೆರೆಕ್ಟಮಿಗೆ ಚಿಕಿತ್ಸೆಗೆ ಒಳಗಾಗಿರುವ ಕಬ್ಬಿನ ಗದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರು ಶಸ್ತ್ರಚಿಕಿತ್ಸೆಯ ನಂತರದ ಆತಂಕ, ಖಿನ್ನತೆ, ದೈಹಿಕ ಕಾಯಿಲೆಗಳು ಮತ್ತು ಹಳಸಿದ ವೈವಾಹಿಕ ಸಂಬಂಧವನ್ನು ಸದ್ದಿಲ್ಲದೆ ನಿಭಾಯಿಸುತ್ತಿದ್ದಾರೆ
ಮಾರ್ಚ್ 25, 2022 | ಜ್ಯೋತಿ ಶಿನೋಲಿ
'ನನಗೆ ಗರ್ಭಪಾತವಾದ ಬಗ್ಗೆ ಜನರಿಗೆ ಗೊತ್ತಾಗುವುದು ನನಗೆ ಇಷ್ಟವಿರಲಿಲ್ಲ'
ಆ ಊರಿನಲ್ಲಿ ಹೊಳೆಯ ನೀರು ಹೆಚ್ಚು ಉಪ್ಪುಪ್ಪು, ಬಿರುಬಿಸಿಲಿನ ಬೇಸಿಗೆ, ಮತ್ತು ಇನ್ನು ಉತ್ತಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೆನ್ನುವುದು ಕನಸಿನ ಮಾತು. ಇವೆಲ್ಲವೂ ಸೇರಿ ಇಲ್ಲಿನ ಮಹಿಳೆಯರ ಬದುಕನ್ನು ಅನಾರೋಗ್ಯದ ಸುಳಿಯಲ್ಲಿ ಸಿಲುಕುವಂತೆ ಮಾಡಿವೆ
ಮಾರ್ಚ್ 10, 2022 | ಊರ್ವಶಿ ಸರ್ಕಾರ್
ʼಅವರು ನನಗೆ ಔಷಧಿ ಕೊಡುವಾಗ ಮೈಮೇಲೆ ಕೈಯಾಡಿಸುತ್ತಾರೆʼ
ಆಸ್ಪತ್ರೆಯ ಸಿಬ್ಬಂದಿಗಳಿಂದ ಶೋಷಣೆ ಮತ್ತು ಅವಮಾನಕ್ಕೊಳಗಾಗಿ, ಅವರ ಗೌಪ್ಯತೆಯನ್ನು ಉಲ್ಲಂಘಿಸಿದರು, ಲೈಂಗಿಕ ಕಾರ್ಯಕರ್ತೆಯರ ಅಸಮಾನ್ಯ ಕಳಂಕ ಅವರಿಗೆ ರಾಜಧಾನಿಯಲ್ಲೂ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಮಿತಿಯನ್ನು ಹೇರಿದೆ. ಈಗ ಈ ಮಹಾಮಾರಿಯು ಅವರನ್ನು ಇನ್ನಷ್ಟು ಸಂಕಷ್ಟಕ್ಕೆ ಈಡು ಮಾಡಿದೆ
ಫೆಬ್ರವರಿ 21, 2022 | ಶಾಲಿನಿ ಸಿಂಗ್
ಜಾರ್ಖಂಡ್ ರಾಜ್ಯದಲ್ಲಿನ ಆರ್ಎಮ್ಪಿಗಳು: ಇಲ್ಲಿ ನಂಬಿಕೆಯೇ ʼಗುಣಪಡಿಸುವʼ ಶಕ್ತಿ
ಪಶ್ಚಿಮಿ ಸಿಂಗ್ ಭುಮ್ ಜಿಲ್ಲೆಯ ಒಳನಾಡಿನ ಹಳ್ಳಿಗಳಲ್ಲಿ ಮೂಲಸೌಕರ್ಯದ ಕೊರತೆ ಮತ್ತು ಕಳಪೆಯಾದ ಆರೋಗ್ಯ ವ್ಯವಸ್ಥೆಯು ಅಲ್ಲಿನ ಜನರನ್ನು ʼಗ್ರಾಮೀಣ ಮೆಡಿಕಲ್ ಪ್ರಾಕ್ಟೀಷನರ್ಗಳʼ ಮೊರೆಹೋಗುವಂತೆ ಮಾಡುತ್ತದೆ. ಮತ್ತು ಆರೋಗ್ಯವನ್ನು ನಂಬಿಕೆಯನ್ನಾಧರಿಸಿದ ವಿಷಯವನ್ನಾಗಿಸಿದೆ
ಫೆಬ್ರವರಿ 3, 2022 | ಜಸಿಂತಾ ಕೆರ್ಕೆಟ್ಟಾ
ಮೇಲ್ಘಾಟ್ನ ಕೊನೆಯ ಸಾಂಪ್ರದಾಯಿಕ ಸೂಲಗಿತ್ತಿಯರು
ಮಹಾರಾಷ್ಟ್ರದ ಮೇಲ್ಘಾಟ್ ಹುಲಿ ಸಂರಕ್ಷಿತ ಪ್ರದೇಶದ ಸುತ್ತಮುತ್ತಲಿನ ಬುಡಕಟ್ಟು ನೆಲೆಗಳಲ್ಲಿ, ಸಾಂಪ್ರದಾಯಿಕ ಸೂಲಗಿತ್ತಿಯರಾದ ರೋಪಿ ಮತ್ತು ಚಾರ್ಕು ದಶಕಗಳಿಂದ ಇಲ್ಲಿನ ಮನೆಗಳಲ್ಲಿ ಹೆಂಗಸರಿಗೆ ಹೆರಿಗೆ ಮಾಡಿಸಿದ್ದಾರೆ. ಆದರೆ, ಈಗ ಇಬ್ಬರಿಗೂ ವಯಸ್ಸಾಗಿದ್ದು, ಅವರ ಪರಂಪರೆಯನ್ನು ಮುಂದೆ ಸಾಗಿಸಬಲ್ಲ ದೀಪಧಾರಿಗಳು ಕಾಣುತ್ತಿಲ್ಲ
ಅಕ್ಟೋಬರ್ 28, 2022 | ಕವಿತಾ ಅಯ್ಯರ್
ಉತ್ತರ ಪ್ರದೇಶ: ಇಲ್ಲಿ ಪುರುಷ ಸಂತಾನಹರಣ ಶಸ್ತ್ರಚಿಕಿತ್ಸೆ ಒಂದು ಆಯ್ಕೆಯೂ ಅಲ್ಲ
ಉತ್ತರ ಪ್ರದೇಶ ವಾರಾಣಸಿ ಜಿಲ್ಲೆಯ ಮುಸಹರ್ ಮಹಿಳೆಯರ ಬದುಕನ್ನು ಹದಗೆಡಿಸುತ್ತಿರುವುದು ಕೇವಲ ಆರೋಗ್ಯ ಸೇವೆಗಳ ಪ್ರವೇಶದ ಕೊರತೆ ಮಾತ್ರವಲ್ಲ, ಅವರ ಆಯ್ಕೆಗಳನ್ನು ನಿರ್ಬಂಧಿಸುವ ಕಳಂಕ ಹೊರಿಸಲಾದ ಇತಿಹಾಸವೂ ಇದರಲ್ಲಿ ಪಾಲು ಪಡೆದಿದೆ
ಜನವರಿ 10, 2022 | ಜಿಗ್ಯಾಸಾ ಮಿಶ್ರಾ
ಮಧುಬನಿ: ಇಲ್ಲಿ ಹೆಣ್ಣು ಮಕ್ಕಳಿಗೆ ಜನನ ಪ್ರಮಾಣ ಪತ್ರ ಮಾಡಿಸಲಾಗುವುದಿಲ್ಲ
ಬಿಹಾರದ ಮಧುಬನಿ ಜಿಲ್ಲೆಯ ಬಡ ಕುಟುಂಬಗಳ ಮಹಿಳೆಯರು ತೀರಾ ಅಗತ್ಯದ ಸಮಯದಲ್ಲಿ ಆರೋಗ್ಯ ಸೇವೆಗಳನ್ನು ಪಡೆಯುವಾಗ ಅಡೆತಡೆಗಳನ್ನು ಎದುರಿಸುತ್ತಾರೆ. ಅವರಿಗೆ ಸೇವೆ ನೀಡುವ ಕೆಲವು ವ್ಯವಸ್ಥೆಗಳಲ್ಲಿನ ಸಣ್ಣ ಭ್ರಷ್ಟಾಚಾರವು ಅವರನ್ನು ಅಸಹಾಯಕ ಸ್ಥಿತಿಗೆದೂಡುತ್ತದೆ
ಅಕ್ಟೋಬರ್ 27, 2021 | ಜಿಗ್ಯಾಸಾ ಮಿಶ್ರಾ
ಉತ್ತರ ಪ್ರದೇಶ: ʼನಮ್ಮ ಊರು ಬೇರೊಂದು ಯುಗದಲ್ಲಿ ಬದುಕುತ್ತಿದೆʼ
ಇಲ್ಲಿ ಹೇಳಲಾಗಿರುವ ಇನ್ನೇನು ಕೆಲವೇ ದಿನಗಳಲ್ಲಿ ಮದುವೆಯಾಗಲಿರುವ ಸೋನು ಮತ್ತು ಮೀನಾರ ಕಥೆಯು ಪ್ರಯಾಗ್ ರಾಜ್ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿನ ದಲಿತರ ಕಾಲೋನಿಗಳಲ್ಲಿ ಬದುಕುತ್ತಿರುವ ಎಲ್ಲಾ ಹದಿಹರೆಯದ ಹೆಣ್ಣುಮಕ್ಕಳ ಕಥೆಯೂ ಹೌದು
ಅಕ್ಟೋಬರ್ 11, 2021 | ಪ್ರೀತಿ ಡೇವಿಡ್
ಮೂರು ಹೆಣ್ಣು ಮಕ್ಳಾ? ಹಾಗಿದ್ರೆ ಇಬ್ರಾದ್ರೂ ಗಂಡು ಮಕ್ಕಳನ್ನ ಮಾಡ್ಕೋ
ಬಡತನ, ಅನಕ್ಷರತೆ ಮತ್ತು ತಮ್ಮ ಬದುಕಿನ ಮೇಲಿನ ನಿಯಂತ್ರಣದ ಕೊರತೆಯಿಂದಾಗಿ, ಬಿಹಾರದ ಗಯಾ ಜಿಲ್ಲೆಯ ವಿವಿಧ ವರ್ಗಗಳ ಮಹಿಳೆಯರ ಆರೋಗ್ಯವು ಅಪಾಯದಲ್ಲಿದೆ
ಸೆಪ್ಟೆಂಬರ್ 29, 2021 | ಜಿಗ್ಯಾಸಾ ಮಿಶ್ರಾ
ಕಾಪರ್-ಟಿ ಎನ್ನುವ ಬಲೆ: ಒಂದು ದೀರ್ಘ ನೋವಿನ ಕಥೆ
ಹೆರಿಗೆಯ ನಂತರ ದೀಪಾ ದೆಹಲಿಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವಾಗ, ಅವರಿಗೆ ತನ್ನ ದೇಹದೊಳಗೆ ಕಾಪರ್-ಟಿ ಆಳವಡಿಸಲಾಗಿದೆಯೆನ್ನುವುದು ತಿಳಿದಿರಲಿಲ್ಲ. ಎರಡು ವರ್ಷಗಳ ನಂತರ, ನೋವು ಮತ್ತು ರಕ್ತಸ್ರಾವ ಆರಂಭವಾದಾಗ, ವೈದ್ಯರಲ್ಲಿಗೆ ಹೋದರೆ ಅಲ್ಲಿ ಅವರಿಗೆ ತಿಂಗಳುಗಳ ಕಾಲ ಸಾಧನವನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ
ಸೆಪ್ಟೆಂಬರ್ 14, 2021 | ಸಂಸ್ಕೃತ ತಲ್ವಾರ್
'ಗಂಡಸರ ಕಣ್ಣುಗಳು ಸದಾ ನಮ್ಮನ್ನೇ ನೋಡುತ್ತಿರುವಂತೆ ಭಾಸವಾಗುತ್ತದೆ'
ಮುಚ್ಚಿರುವ ಸಾರ್ವಜನಿಕ ಶೌಚಾಲಯಗಳು, ದೂರದಲ್ಲಿರುವ ಬ್ಲಾಕ್ಗಳು, ಪರದೆಗಳಿಂದ ಮುಚ್ಚಿದ ಸಣ್ಣ ಕೊಠಡಿಯಂತಹ ಶೌಚಾಲಯಗಳು, ಸ್ನಾನ ಮತ್ತು ಸ್ಯಾನಿಟರಿ ಪ್ಯಾಡ್ಗಳ ಬಳಕೆ ಮತ್ತು ವಿಲೇವಾರಿಗೆ ಗೌಪ್ಯತೆಯ ಕೊರತೆ, ಶೌಚಕ್ಕೆ, ಪ್ಯಾಡ್ ಬದಲಾಯಿಸಲು ರಾತ್ರಿ ರೈಲ್ವೆ ಹಳಿಗಳನ್ನು ಅವಲಂಬಿಸಬೇಕಾದ ಅನಿವಾರ್ಯತೆ: ಇವೆಲ್ಲವೂ ಪಾಟ್ನಾದ ಕೊಳೆಗೇರಿಗಳಲ್ಲಿನ ವಲಸೆ ಕುಟುಂಬಗಳ ಹುಡುಗಿಯರು ಎದುರಿಸುತ್ತಿರುವ ಕೆಲವು ದೈನಂದಿನ ಸಮಸ್ಯೆಗಳು
ಆಗಸ್ಟ್. 31, 2021 | ಕವಿತಾ ಅಯ್ಯರ್
‘ನೀರಿನಲ್ಲಿ ಕ್ಯಾನ್ಸರ್ ಇರುವುದು ನನಗೆ ಮೊದಲೇ ತಿಳಿದಿದ್ದರೆ…’
ಅಂತರ್ಜಲದಲ್ಲಿ ಆರ್ಸೆನಿಕ್ ಅಂಶವನ್ನು ಹೊಂದಿರುವ ಬಿಹಾರದ ಹಳ್ಳಿಗಳಲ್ಲಿ, ಪ್ರೀತಿಯವರಂತಹ ಕುಟುಂಬಗಳ ಪುರುಷರು ಮತ್ತು ಮಹಿಳೆಯರು ಇಬ್ಬರನ್ನೂ ಕ್ಯಾನ್ಸರ್ನಿಂದಾಗಿ ಕಳೆದುಕೊಂಡಿವೆ, ಮತ್ತು ಅವರಿಗೂ ಸ್ತನದಲ್ಲಿ ಗಡ್ಡೆಯಾಗಿದೆ. ಆದರೆ ಇಲ್ಲಿನ ಮಹಿಳೆಯರು ಚಿಕಿತ್ಸೆ ಪಡೆಯುವಲ್ಲಿ ಹೆಚ್ಚಿನ ಸವಾಲುಗಳನ್ನು ಎದುರಿಸುತ್ತಾರೆ
ಆಗಸ್ಟ್ 25, 2021 | ಕವಿತಾ ಅಯ್ಯರ್
ಬಿಹಾರ: 7 ಮನೆ ಹೆರಿಗೆ, 36ಕ್ಕೆ ಅಜ್ಜಿ
ಶಾಂತಿ ಮಾಂಝಿ ಬಿಹಾರದ ಶಿಯೋಹರ್ ಜಿಲ್ಲೆಯ ತನ್ನ ಮುಸಹರ್ ಸಮುದಾಯದ ಹಾಡಿಯಲ್ಲಿನ ಮನೆಯಲ್ಲೇ ಏಳು ಮಕ್ಕಳಿಗೆ ಜನ್ಮ ನೀಡಿದ್ದಾರೆ, ಇಲ್ಲಿ ಕೆಲವರಿಗಷ್ಟೇ ಆರೋಗ್ಯ ಸೇವೆಗಳಿಗೆ ಪ್ರವೇಶವಿದೆ ಮತ್ತು ಇಲ್ಲಿ ಹೆರಿಗೆಗೆ ಸಹಾಯ ಮಾಡಬಲ್ಲ ಪಿಎಚ್ಸಿ ಇದೆಯೋ - ಇಲ್ಲವೋ ಎನ್ನುವುದು ಹೆಚ್ಚಿನವರಿಗೆ ತಿಳಿದಿಲ್ಲ
ಆಗಸ್ಟ್ 18, 2021 | ಕವಿತಾ ಅಯ್ಯರ್
ʼನನ್ನ ಹೆಣ್ಣು ಮಕ್ಕಳ ಬದುಕು ನನ್ನಂತಾಗುವುದು ಬೇಡʼ
ಬಿಹಾರದ ಪಾಟ್ನಾ ಜಿಲ್ಲೆಯ ವಿವಾಹಿತ ಬಾಲಕಿಯರು ಮತ್ತು ಯುವತಿಯರಿಗೆ ಗಂಡು ಮಗು ಹುಟ್ಟುವ ತನಕವೂ ಮಕ್ಕಳನ್ನು ಹೆರುತ್ತಲೇ ಇರಬೇಕಾಗುತ್ತದೆ. ಅವರಿಗೆ ಇದರಿಂದ ಹೊರಬರುವ ದಾರಿಗಳೇ ಇಲ್ಲ. ಇಲ್ಲಿನ ಸಾಮಾಜಿಕ ರೂಢಿಗಳು ಮತ್ತು ಪೂರ್ವಗ್ರಹಗಳು ಕಾನೂನು ಮತ್ತು ನಿಯಮಗಳ ಮೇಲೇರಿ ಸವಾರಿ ಮಾಡುತ್ತಿವೆ
ಜುಲೈ 23, 2021 | ಜಿಗ್ಯಾಸಾ ಮಿಶ್ರಾ
ತಿಂಗಳಿಗೊಮ್ಮೆ ಕ್ವಾರಂಟೈನ್ಗೆ ಒಳಗಾಗುವ ಕಾಡುಗೊಲ್ಲ ಮಹಿಳೆಯರು
ದೇವರಿಗೆ ಅಪಚಾರವಾಗುವ ಭಯ ಮತ್ತು ಸಾಮಾಜಿಕ ಕಳಂಕದ ಭಯ ಕರ್ನಾಟದ ಕಾಡುಗೊಲ್ಲ ಸಮುದಾಯದ ಮಹಿಳೆಯರು ತಮ್ಮ ಮುಟ್ಟಿನ ದಿನಗಳು ಮತ್ತು ಹೆರಿಗೆಯ ನಂತರದ ದಿನಗಳನ್ನು ಮರಗಳಡಿ ಮತ್ತು ಗುಡಿಸಲಿನಲ್ಲಿ ಕಳೆಯುವ ಹಾಗೆ ಮಾಡಿವೆ. ಕಾನೂನು, ಅಭಿಯಾನಗಳು ಮತ್ತು ವೈಯಕ್ತಿಕ ಪ್ರತಿರೋಧದ ಹೊರತಾಗಿಯೂ ಇದನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ
ಜುಲೈ 5, 2021 | ತಮನ್ನಾ ನಸೀರ್
ʼನಾನು ಮದುವೆಯಾಗಬಹುದಾದ ಹೆಣ್ಣಲ್ಲʼ
ತಮ್ಮ ‘ಶಾಶ್ವತ’ ಗ್ರಾಹಕರನ್ನು ಮೆಚ್ಚಿಸುವ ಸಲುವಾಗಿ ಚಿಕ್ಕ ವಯಸ್ಸಿನಲ್ಲಿಯೇ ಗರ್ಭಿಣಿಯರಾಗುವ ಬಿಹಾರದ ಮುಜಾಫರಪುರ ಜಿಲ್ಲೆಯ ಚತುರ್ಭುಜ್ ಸ್ತಾನ್ ವೇಶ್ಯಾಗೃಹದ ಲೈಂಗಿಕ ಕಾರ್ಯಕರ್ತೆಯರು ಕೋವಿಡ್ -19 ಲಾಕ್ಡೌನ್ಗಳಿಂದ ಬಹಳ ತೊಂದರೆಗೀಡಾಗಿದ್ದಾರೆ
ಜೂನ್ 15, 2021 | ಜಿಗ್ಯಾಸಾ ಮಿಶ್ರಾ
ಮಲ್ಕನ್ಗಿರಿಯಲ್ಲಿ ಮೃತ್ಯುಂಜಯ ಜನಿಸಿದ ಕತೆ
ಒಡಿಶಾದ ಮಲ್ಕನ್ಗಿರಿ ಜಲಾಶಯ ಪ್ರದೇಶದ ಆದಿವಾಸಿ ಹಾಡಿಗಳಲ್ಲಿ, ದಟ್ಟವಾದ ಕಾಡುಗಳು, ಎತ್ತರದ ಬೆಟ್ಟಗಳು ಮತ್ತು ಸರ್ಕಾರ-ಬಂಡುಕೋರರ ಸಂಘರ್ಷ ಒಂದೆಡೆಯಾದರೆ, ಅನಿಯಮಿತ ದೋಣಿ ಸೇವೆಗಳು ಮತ್ತು ಕಚ್ಚಾ ರಸ್ತೆಗಳಲ್ಲೇ ಅಲ್ಲಿನ ಜನರು ಲಭ್ಯವಿರುವ ಅಲ್ಪ ಆರೋಗ್ಯ ಸೇವೆಯನ್ನು ತಲುಪಬೇಕಾಗಿದೆ
ಜೂನ್ 4, 2021 | ಜಯಂತಿ ಬುರುಡಾ
ಬಿಹಾರ: ʼನನಗೆ ಕೊರೋನಾ ಸಮಯದಲ್ಲಿ ಮದುವೆಯಾಯಿತುʼ
ಕಳೆದ ವರ್ಷದ ಲಾಕ್ಡೌನ್ ಸಮಯದಲ್ಲಿ ಬಿಹಾರದ ಗ್ರಾಮೀಣ ಪ್ರದೇಶಗಳಲ್ಲಿ, ಅನೇಕ ಹದಿಹರೆಯದ ಹುಡುಗಿಯರನ್ನು ಹಳ್ಳಿಗೆ ಮರಳಿದ ವಲಸೆ ಕಾರ್ಮಿಕರಿಗೆ ಮದುವೆ ಮಾಡಿಕೊಡಲಾಯಿತು. ಅವರಲ್ಲಿ ಹಲವರು ಈಗ ಗರ್ಭಿಣಿಯಾಗಿದ್ದಾರೆ ಹಾಗೂ ಮುಂದೇನು ಎನ್ನುವ ಚಿಂತೆಯಲ್ಲಿದ್ದಾರೆ
ಮೇ 7, 2021 | ಕವಿತಾ ಅಯ್ಯರ್
ಮಧುಬನಿ: ಸುಪ್ತ ಬದಲಾವಣೆಯ ಹರಿಕಾರರು
ಒಂದು ದಶಕದ ಹಿಂದೆ, ಬಿಹಾರದ ಹಸನ್ ಪುರ ಗ್ರಾಮದಲ್ಲಿ ಕುಟುಂಬ ಯೋಜನೆ ಕುರಿತು ಅಲ್ಲಿನ ಜನರು ನಿರ್ಲಕ್ಷ್ಯ ತೋರುತ್ತಿದ್ದರು. ಆದರೆ ಈಗ ಇಲ್ಲಿನ ಮಹಿಳೆಯರು ಗರ್ಭನಿರೋಧಕ ಚುಚ್ಚುಮದ್ದು ಪಡೆಯಲು ಸಲ್ಹಾ ಮತ್ತು ಶಮಾ ಎನ್ನುವ ಹೆಸರಿನ ಅಲ್ಲಿನ ಆರೋಗ್ಯ ಕಾರ್ಯಕರ್ತರ ಬಳಿಗೆ ಬರುತ್ತಿದ್ದಾರೆ. ಹಾಗಿದ್ದರೆ ಈ ಬದಲಾವಣೆ ಹೇಗೆ ಸಾಧ್ಯವಾಯಿತು?
ಏಪ್ರಿಲ್ 13, 2021 | ಕವಿತಾ ಅಯ್ಯರ್
ಅತಿಯಾದ ಕೆಲಸ ಮತ್ತು ಜನರ ಅಸಹನೆಯ ನಡುವೆ ಸಿಲುಕಿರುವ ಬಿಹಾರದ ಮಹಿಳಾ ವೈದ್ಯರು
ಬಿಹಾರದ ಕಿಶನ್ ಗಂಜ್ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿರುವ ಕೆಲವು ಸ್ತ್ರೀರೋಗತಜ್ಞೆಯರ ಪಾಲಿಗೆ ದಿನಗಳು ದೀರ್ಘವಾಗಿರುತ್ತವೆ ಮತ್ತು ವೈದ್ಯಕೀಯ ಅವಶ್ಯಕತೆಗಳ ಪೂರೈಕೆಯ ಕೊರತೆಯಿರುತ್ತವೆ. ಇವೆರಡರ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅವರಿಗೆ ಕಷ್ಟಕರ ಕೆಲಸವಾಗಿದೆ, ಜೊತೆಗೆ ಅಲ್ಲಿಗೆ ಬರುವ ರೋಗಿಗಳು ನಿರಂತರ ಗರ್ಭಧಾರಣೆಗಳು ಮತ್ತು ಗರ್ಭನಿರೋಧಕಗಳನ್ನು ಬಳಕೆಗೆ ತೋರುವ ಹಿಂಜರಿಕೆಯನ್ನು ಸಹ ನಿಭಾಯಿಸಬೇಕು
ಏಪ್ರಿಲ್ 7, 2021 | ಅನುಭಾ ಭೋಸ್ಲೆ
'ನನಗೆ ಒಂಬತ್ತು ಹೆಣ್ಣು ಮಕ್ಕಳು ಮತ್ತು ಈ ಹತ್ತನೆಯವನು ಗಂಡು'
ಗುಜರಾತ್ನ ಧೋಲ್ಕಾ ತಾಲ್ಲೂಕಿನ ಭರ್ವಾಡ್ ಪಶುಪಾಲನಾ ಸಮುದಾಯದ ಮಹಿಳೆಯರಿಗೆ, ಕುಟುಂಬದಲ್ಲಿ ಗಂಡು ಮಕ್ಕಳನ್ನು ಹೆರುವಂತೆ ಒತ್ತಡ ಹೇರಲಾಗುತ್ತದೆ ಮತ್ತು ಕೆಲವು ಕುಟುಂಬ ಯೋಜನೆ ಆಯ್ಕೆಗಳಾದ ಗರ್ಭನಿರೋಧಕ ಆಯ್ಕೆಗಳು ಮತ್ತು ಸಂತಾನೋತ್ಪತ್ತಿ ಹಕ್ಕುಗಳು ಇಲ್ಲಿ ಕೇವಲ ಪದಗಳಿಗೆ ಸೀಮಿತವಾಗಿವೆ
ಏಪ್ರಿಲ್ 1, 2021 | ಪ್ರತಿಷ್ಠಾ ಪಾಂಡ್ಯ
ʼಓದು ಮುಂದುವರೆಸುತ್ತಿದ್ದರೆ ನನ್ನನ್ನು ಮದುವೆಯಾಗುವವರಾರೆಂದು ಕೇಳುತ್ತಾರೆ'
ಬಿಹಾರದ ಸಮಸ್ತಿಪುರ ಜಿಲ್ಲೆಯ ಮಹಾದಲಿತ್ ಸಮುದಾಯದ ಹದಿಹರೆಯದ ಹುಡುಗಿಯರು ಶಿಕ್ಷಣ ಪಡೆಯಲು ಹಲವು ಬಗೆಯ ಸಾಮಾಜಿಕ ನಿಂದನೆಗಳನ್ನು ಕೇಳಬೇಕಾಗುತ್ತದೆ, ಕೆಲವೊಮ್ಮೆ ದೈಹಿಕ ಹಿಂಸೆಯನ್ನೂ ಎದುರಿಸಬೇಕಾಗುತ್ತದೆ. ಕೆಲವು ಹುಡುಗಿಯರು ಇದೆಲ್ಲದರ ವಿರುದ್ಧ ತಿರುಗಿಬಿದ್ದು ತಮ್ಮ ಓದನ್ನು ಮುಂದುವರೆಸುತ್ತಾರೆ. ಆದರೆ ಉಳಿದವರು ಕೈಚೆಲ್ಲಿಬಿಡುತ್ತಾರೆ
ಮಾರ್ಚ್ 29, 2021 | ಅಮೃತ ಬ್ಯಾತ್ನಾಳ್
ʼನಮ್ಮ ಕಚೇರಿಯೇ ನಮಗೆ ಮಲಗುವ ಕೋಣೆʼ
ಬಿಹಾರದ ದರ್ಭಂಗಾ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಳ ಮತ್ತು ಸೌಲಭ್ಯಗಳ ಕೊರತೆಯಿಂದಾಗಿ, ಅಲ್ಲಿನ ಆರೋಗ್ಯ ಕಾರ್ಯಕರ್ತರು ಕಚೇರಿಯಲ್ಲಿ, ವಾರ್ಡ್ನ ಹಾಸಿಗೆಯ ಮೇಲೆ ಮತ್ತು ಕೆಲವೊಮ್ಮೆ ನೆಲದ ಮೇಲೂ ಮಲಗಬೇಕಾದ ಪರಿಸ್ಥಿತಿಯಲ್ಲಿದ್ದಾರೆ
ಮಾರ್ಚ್ 26, 2021 | ಜಿಗ್ಯಾಸಾ ಮಿಶ್ರಾ
ಮೊದಲ ದಿನ ಮಗು ಗರ್ಭದಲ್ಲೇ ತೀರಿಕೊಂಡಿದೆ ಎಂದರು, ಮರುದಿನ ಜನ್ಮ ಪ್ರಮಾಣ ಪತ್ರ ನೀಡಿದರು
ವೈಶಾಲಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಅಲ್ಟ್ರಾಸೌಂಡ್ ಯಂತ್ರದಲ್ಲಿ ಜೇಡಗಳು ಬಲೆ ಹೆಣೆದಿವೆ, ಹಣ ನೀಡದೆ ಸಿಬ್ಬಂದಿ ಕೆಲಸ ಮಾಡುವುದಿಲ್ಲ, ಹುಟ್ಟಬೇಕಿರುವ ಮಗು ಹೊಟ್ಟೆಯಲ್ಲಿಯೇ ಸತ್ತಿದೆ ಎಂದು ಹೇಳುತ್ತಾರೆ - ಖಾಸಗಿ ಕ್ಲಿನಿಕ್ಗೆ ಹೋಗುವ ಅನಿವಾರ್ಯತೆಯನ್ನು ಸೃಷ್ಟಿಸಿ ಹೆರಿಗೆ ವೆಚ್ಚವನ್ನು ಹೆಚ್ಚಿಸುತ್ತಾರೆ
ಫೆಬ್ರವರಿ 22, 2021 | ಜಿಗ್ಯಾಸಾ ಮಿಶ್ರಾ
ರೋಗಗ್ರಸ್ತ ಆರೋಗ್ಯ ಕೇಂದ್ರಗಳು ಮತ್ತು 'ಬಿನಾ-ಡಿಗ್ರಿ' (ಪದವಿಯಿಲ್ಲದ) ವೈದ್ಯರು
ಸದಾ ಕಾಡು ಪ್ರಾಣಿಗಳು ಅಲೆದಾಡುವ, ಕಡಿಮೆ ಸಿಬ್ಬಂದಿ ಹೊಂದಿರುವ ಪಿಎಚ್ ಸಿ, ಆಸ್ಪತ್ರೆಗಳ ಕುರಿತಾದ ಭಯ, ಕಳಪೆ ಫೋನ್ ಸಂಪರ್ಕ - ಇವೆಲ್ಲವೂ ಬಿಹಾರದ ಬರಗಾಂವ್ ಖುರ್ದ್ ಗ್ರಾಮದ ಗರ್ಭಿಣಿ ಮಹಿಳೆಯರು ತಪ್ಪದೆ ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವಂತೆ ನೋಡಿಕೊಳ್ಳುತ್ತವೆ
ಫೆಬ್ರವರಿ 15, 2021 | ಅನುಭಾ ಭೋಸ್ಲೆ ಮತ್ತು ವಿಷ್ಣು ಸಿಂಗ್
ಅಲ್ಮೋರಾ: ಹೆರಿಗೆಗಾಗಿ ಪರ್ವತಗಳನ್ನು ಹತ್ತಿಳಿಯುತ್ತಾ...
ಕಳೆದ ವರ್ಷ, ಉತ್ತರಾಖಂಡದ ಅಲ್ಮೋರಾ ಜಿಲ್ಲೆಯ ರಾನೋ ಸಿಂಗ್ ಅವರು ಆಸ್ಪತ್ರೆ ಹೋಗುತ್ತಿರುವಾಗ ಅರ್ಧದಷ್ಟು ದೂರದಲ್ಲಿ ರಸ್ತೆಯಲ್ಲಿಯೇ ಮಗುವಿಗೆ ಜನ್ಮ ನೀಡಿದರು, ಈ ಪ್ರದೇಶದಲ್ಲಿ ಭೂಪ್ರದೇಶ ಮತ್ತು ವೆಚ್ಚಗಳು ಪರ್ವತದಲ್ಲಿನ ಹಳ್ಳಿಗಳ ಅನೇಕರನ್ನು ಮನೆಯಲ್ಲಿಯೇ ಹೆರಿಗೆ ಮಾಡಿಸಿಕೊಳ್ಳುವ ಅನಿವಾರ್ಯತೆಗೆ ದೂಡುತ್ತಿವೆ
ಫೆಬ್ರವರಿ 11, 2021 | ಜಿಗ್ಯಾಸಾ ಮಿಶ್ರಾ
ಒಂದು ಬಲವಂತದ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮತ್ತು ಒಂದು ನಿರರ್ಥಕ ಸಾವು
ರಾಜಸ್ಥಾನದ ಬನ್ಸಿ ಗ್ರಾಮದ ಭಾವನಾ ಸುತಾರ್ ಕಳೆದ ವರ್ಷ ಕ್ಯಾಂಪ್ ಒಂದರಲ್ಲಿ ನಡೆದ ಸಂತಾನ ಹರಣ ಚಿಕಿತ್ಸೆ ಪ್ರಕ್ರಿಯೆಯ ನಂತರ ನಿಧನರಾದರು. ಈ ಸಂತಾನ ಹರಣ ಚಿಕಿತ್ಸೆಗೂ ಮೊದಲು ಅದಕ್ಕೆ ಸಂಬಂಧಿಸಿದ ಎಲ್ಲ ನಿಯಮಗಳನ್ನು ಉಲ್ಲಂಘಿಸಲಾಗಿದೆ ಮತ್ತು ಭಾವನಾ ಅವರಿಗೆ ಗರ್ಭನಿರೋಧಕದ ವಿಷಯದಲ್ಲಿ ಲಭ್ಯವಿರುವ ಆಯ್ಕೆಗಳನ್ನು ಪರಿಗಣಿಸಲು ಸಾಕಷ್ಟು ಸಮಯವನ್ನೂ ನೀಡಿರಲಿಲ್ಲ. ಇತ್ತ ಅವರ ಪತಿ ದಿನೇಶ್ ಈಗಲೂ ನ್ಯಾಯಕ್ಕಾಗಿ ಅಲೆಯುತ್ತಿದ್ದಾರೆ
ನವೆಂಬರ್ 20, 2020 | ಅನುಭಾ ಭೋಸ್ಲೆ
‘ನಾನು ಒಂಬತ್ತು ತಿಂಗಳ ಬಸುರಿಯಾಗಿರುವಾಗಲೂ ಗಿರಾಕಿಗಳು ಬರುತ್ತಿದ್ದರು’
ನಾಲ್ಕು ಗರ್ಭಪಾತಗಳು, ಕುಡುಕ ಪತಿ ಮತ್ತು ಕಾರ್ಖಾನೆಯ ಕೆಲಸ ಕಳೆದುಕೊಂಡಿದ್ದರಿಂದ, ದೆಹಲಿ ಮೂಲದ ʼಹನಿʼ ತಾನು ಐದನೇ ಬಾರಿಗೆ ಗರ್ಭಿಣಿಯಾಗಿದ್ದಾಗ ಲೈಂಗಿಕ ವೃತ್ತಿಗೆ ಇಳಿದರು ಮತ್ತು ಅಂದಿನಿಂದ ಎಸ್ಟಿಡಿಯೊಂದಿಗೆ ಬದುಕುತ್ತಿದ್ದಾರೆ. ಈಗ, ಲಾಕ್ಡೌನ್ನಲ್ಲಿ, ಅವರು ದುಡಿಮೆಗಾಗಿ ಹೆಣಗಾಡುತ್ತಿದ್ದಾರೆ
ಅಕ್ಟೋಬರ್ 15, 2020 | ಜಿಗ್ಯಾಸಾ ಮಿಶ್ರಾ
'ನನ್ನ ಪತ್ನಿಗೆ ಹೇಗೆ ಸೋಂಕು ತಗುಲಿತು?'
ಸಂತಾನ ಹರಣ ಚಿಕಿತ್ಸೆಯ ನಂತರದ ಸೋಂಕಿನಿಂದಾಗಿ, ರಾಜಸ್ಥಾನದ ದೌಸಾ ಜಿಲ್ಲೆಯ 27 ವರ್ಷದ ಸುಶೀಲಾ ದೇವಿ ಮೂರು ವರ್ಷ ನೋವನ್ನು ಅನುಭವಿಸುತ್ತಾ ಆಸ್ಪತ್ರೆಗಳಿಗೆ ಅಲೆಯಬೇಕಾಯಿತು, ಇದರಿಂದಾಗಿ ಸಾಲ ಹೆಚ್ಚಾಗಿದ್ದಲ್ಲದೆ ಕೊನೆಗೆ ಅವರ ಗರ್ಭಕೋಶವನ್ನೇ ತೆಗೆದುಹಾಕಬೇಕಾಯಿತು
ಸೆಪ್ಟೆಂಬರ್ 3, 2020 | ಅನುಭಾ ಭೋಸ್ಲೆ ಮತ್ತು ಸಂಸ್ಕೃತ ತಲ್ವಾರ್
‘ಡಾಕ್ಟರ್ ನನ್ನ ಮೂಳೆಗಳು ಟೊಳ್ಳಾಗಿವೆ ಎಂದು ಹೇಳುತ್ತಾರೆ’
ಗರ್ಭಕೋಶ ತೆಗೆಯುವುದು ಸೇರಿದಂತೆ ಜೀವಿತಾವಧಿಯ ಅನಾರೋಗ್ಯ ಮತ್ತು ಶಸ್ತ್ರಚಿಕಿತ್ಸೆಗಳ ನಂತರ, ಪುಣೆ ಜಿಲ್ಲೆಯ ಹದಶಿ ಗ್ರಾಮದ ಬೀಬಾಬಾಯಿ ಲೊಯರೆ ಬಾಗಿ ಹೋಗಿದ್ದಾರೆ. ಈಗಲೂ, ಅವರು ಕೃಷಿ ಕೆಲಸವನ್ನು ಮಾಡುತ್ತಾರೆ ಮತ್ತು ಪಾರ್ಶ್ವವಾಯು ಪೀಡಿತ ಗಂಡನನ್ನು ನೋಡಿಕೊಳ್ಳುತ್ತಾರೆ
ಜುಲೈ 2, 2020 | ಮೆಧಾ ಕಾಳೆ
'ನನ್ನ ಕಾಟ್ [ಗರ್ಭಕೋಶ] ಹೊರಬರುತ್ತಲೇ ಇರುತ್ತದೆ'
ಗರ್ಭಕೋಶ ಕೆಳೆಗೆ ಬರುವ ತೊಂದರೆ ಹೊಂದಿರುವ ಭಿಲ್ ಮಹಿಳೆಯರು ಮಹಾರಾಷ್ಟ್ರದ ನಂದುರ್ಬಾರ್ ಜಿಲ್ಲೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಅಲ್ಲಿ ಯಾವುದೇ ರಸ್ತೆ ಮತ್ತು ಮೊಬೈಲ್ ಸಂಪರ್ಕ ಕೂಡ ಇಲ್ಲ. ಇದರಿಂದಾಗಿ ಅವರು ಹೆರಿಗೆ ಸಮಯದಲ್ಲಿ ವಿಪರೀತ ನೋವು, ಸಂಕಟಗಳನ್ನು ಅನುಭವಿಸುತ್ತಿದ್ದಾರೆ
ಜೂನ್ 17, 2020 | ಜ್ಯೋತಿ ಶಿನೋಲಿ
‘ವೈದ್ಯರು ಗರ್ಭಕೋಶ ತೆಗೆಸಲು ಹೇಳಿದ್ದರು’
ಮಾನಸಿಕವಾಗಿ ಅಶಕ್ತರಾದ ಮಹಿಳೆಯರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಕ್ಕುಗಳನ್ನು ಬಲವಂತವಾಗಿ ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಪಡಿಸುವ ಮೂಲಕ ಕಸಿಯಲಾಗುತ್ತಿದೆ. ಆದರೆ ಮಹಾರಾಷ್ಟ್ರದ ವಾಡಿ ಗ್ರಾಮದ ಮಲನ್ ಮೋರ್ ಈ ವಿಷಯದಲ್ಲಿ ಅದೃಷ್ಟವಂತೆ, ಅವರಿಗೆ ಬೆಂಬಲವಾಗಿ ಆಕೆಯ ತಾಯಿ ನಿಂತಿದ್ದಾರೆ
ಜೂನ್ 09, 2020 | ಮೆಧಾ ಕಾಳೆ
'ಸುಮಾರು 12 ಮಕ್ಕಳ ನಂತರ ಮಕ್ಕಳು ಹುಟ್ಟುವುದು ತಾನಾಗಿಯೇ ನಿಲ್ಲುತ್ತದೆ'
ಹರಿಯಾಣದ ಬಿವಾನ್ ಗ್ರಾಮದಲ್ಲಿ ಸಾಂಸ್ಕೃತಿಕ ಅಂಶಗಳು, ಲಭ್ಯವಿಲ್ಲದ ಆರೋಗ್ಯ ಸೇವೆಗಳು ಮತ್ತು ಪೂರೈಕೆದಾರರ ಅಸಡ್ಡೆ ಇವೆಲ್ಲವುಗಳಿಂದಾಗಿ ಇಲ್ಲಿನ ಮಿಯೋ ಮುಸ್ಲಿಮ್ ಮಹಿಳೆಯರಿಗೆ ಗರ್ಭನಿರೋಧಕಗಳ ಲಭ್ಯತೆ ಇಲ್ಲದಂತಾಗಿದೆ. ಇದು ಇಲ್ಲಿನ ಮಹಿಳೆಯರನ್ನು ನಿರಂತರ ಹೆರಿಗೆಯ ಬಲೆಯಲ್ಲಿ ಸಿಕ್ಕಿಕೊಳ್ಳುವಂತೆ ಮಾಡಿದೆ
ಮೇ 20, 2020 | ಅನುಭಾ ಭೋನ್ಸ್ಲೆ ಮತ್ತು ಸಂಸ್ಕೃತ ತಲ್ವಾರ್
ಋತುಚಕ್ರ; ಮೂಲ ಸೌಕರ್ಯಗಳಿಲ್ಲದೆ ಲಾಕ್-ಡೌನ್ ಆದ ಶಾಲಾ ವಿದ್ಯಾರ್ಥಿನಿಯರು
ಶಾಲೆಗಳು ಮುಚ್ಚುವುದರೊಂದಿಗೆ, ಉತ್ತರ ಪ್ರದೇಶದ ಚಿತ್ರಕೂಟ ಜಿಲ್ಲೆಯ ಬಡ ಕುಟುಂಬಗಳ ಹುಡುಗಿಯರು ಉಚಿತ ಸ್ಯಾನಿಟರಿ ನ್ಯಾಪ್ಕಿನ್ ಸೌಲಭ್ಯವನ್ನು ಕಳೆದುಕೊಂಡಿದ್ದಾರೆ ಮತ್ತು ಅಪಾಯಕಾರಿಯಾದ ಇತರ ಆಯ್ಕೆಗಳತ್ತ ಮುಖ ಮಾಡುತ್ತಿದ್ದಾರೆ. ಉತ್ತರ ಪ್ರದೇಶವೊಂದರಲ್ಲೇ ಇಂತಹ ಲಕ್ಷಾಂತರ ಹುಡುಗಿಯರಿದ್ದಾರೆ
ಮೇ 12, 2020 | ಜಿಗ್ಯಾಸಾ ಮಿಶ್ರಾ
ಹೆಸರಿಗಷ್ಟೇ ಆರೋಗ್ಯ ಪಾಲಕರು, ಕೆಲಸ ಮಾತ್ರ ಕೇವಲ ಲೆಕ್ಕ ಮಾಡುವುದು
ಮುಗಿಯದ ಸಮೀಕ್ಷೆಗಳು, ವರದಿಗಳು ಮತ್ತು ಕೆಲಸಗಳ ಹೊರೆ ಮತ್ತು ಕಡಿಮೆ ಸಂಬಳದ ನಡುವೆಯೂ ಹರಿಯಾಣದ ಸೋನಿಪತ್ ಜಿಲ್ಲೆಯ ಸುನೀತಾ ರಾಣಿ ಮತ್ತು ಆಶಾ ಕಾರ್ಮಿಕರು ಗ್ರಾಮೀಣ ಕುಟುಂಬಗಳ ಸಂತಾನಾಭಿವೃದ್ಧಿಯ ಆರೋಗ್ಯ ಸಂಬಂಧಿ ಅಗತ್ಯಗಳನ್ನು ಪೂರೈಸಲು ಹೋರಾಡುತ್ತಿದ್ದಾರೆ
ಮೇ 8, 2020 | ಅನುಭಾ ಭೋಸ್ಲೆ ಮತ್ತು ಪಲ್ಲವಿ ಪ್ರಸಾದ್
“ನೀಲಗಿರಿ ಬೆಟ್ಟಸಾಲಿನಲ್ಲಿ ಅಪೌಷ್ಟಿಕತೆಯ ಆನುವಂಶಿಕತೆ”
ಅತಿಯಾದ ಹಿಮೋಗ್ಲೋಬಿನ್ ಕೊರತೆ ಎದುರಿಸುತ್ತಿರುವ ತಾಯಂದಿರು, 7 ಕಿಲೋ ತೂಕದ ಎರಡು ವರ್ಷ ವಯಸ್ಸಿನ ಮಕ್ಕಳು, ಮದ್ಯಪಾನ, ಕಡಿಮೆ ಆದಾಯ ಮತ್ತು ಅರಣ್ಯಕ್ಕೆ ಪ್ರವೇಶ ಕಡಿಮೆಯಾಗಿರುವುದು ಇವೆಲ್ಲವೂ ತಮಿಳುನಾಡಿನ ಗುಡಲೂರಿನಲ್ಲಿ ಆದಿವಾಸಿ ಮಹಿಳೆಯರಲ್ಲಿ ತೀವ್ರ ಅಪೌಷ್ಟಿಕತೆಗೆ ಕಾರಣವಾಗಿದೆ.
ಮೇ 1, 2020 | ಪ್ರೀತಿ ಡೇವಿಡ್
ʼಆ ಮೊಮ್ಮಗನಿಗಾಗಿ, ನಮಗೆ ನಾಲ್ಕು ಮಕ್ಕಳಾದವುʼ
ದೆಹಲಿಯಿಂದ 40 ಕಿ.ಮೀ ದೂರದಲ್ಲಿರುವ ಹರಿಯಾಣದ ಹರ್ಸಾನ ಕಲಾನ್ ಗ್ರಾಮದ ಮಹಿಳೆಯರು ಪುರುಷರ ದ್ವೇಷದ ನಡುವೆ ತಮ್ಮ ಜೀವನ ಮತ್ತು ಸಂತಾನೋತ್ಪತ್ತಿ ಆಯ್ಕೆಗಳ ಮೇಲೆ ಒಂದಿಷ್ಟು ನಿಯಂತ್ರಣ ಸಾಧಿಸಲು ಎಷ್ಟು ಕಷ್ಟಪಡಬೇಕೆನ್ನುವುದನ್ನು ವಿವರಿಸಿದ್ದಾರೆ
ಏಪ್ರಿಲ್ 21, 2020 | ಅನುಭಾ ಭೋಸ್ಲೆ ಮತ್ತು ಸಂಸ್ಕೃತ ತಲ್ವಾರ್
'ಈಗ ನನ್ನ ಆಡುಗಳೇ ನನ್ನ ಮಕ್ಕಳಂತೆ'
ಮಹಾರಾಷ್ಟ್ರದ ನಂದೂರ್ಬಾರ್ ಜಿಲ್ಲೆಯ ಧಡ್ಗಾಂವ್ ಪ್ರದೇಶದ ಭಿಲ್ ಮಹಿಳೆಯರು ಕಳಂಕ, ಸಾಮಾಜಿಕ ಬಹಿಷ್ಕಾರ ಮತ್ತು ಬಂಜೆತನಕ್ಕೆ ಪರಿಣಾಮಕಾರಿ ಚಿಕಿತ್ಸೆ ನೀಡಲು ವಿಫಲವಾದ ಗ್ರಾಮೀಣ ಆರೋಗ್ಯ ವ್ಯವಸ್ಥೆಯೊಂದಿಗೆ ಬಡಿದಾಡುತ್ತಿದ್ದಾರೆ
ಏಪ್ರಿಲ್ 13, 2020 | ಜ್ಯೋತಿ ಶಿನೋಲಿ
'ಕಳೆದ ವರ್ಷ, ಒಬ್ಬ ಪುರುಷ ಮಾತ್ರ ವ್ಯಾಸೆಕ್ಟಮಿ ಚಿಕಿತ್ಸೆಗೆ ಒಪ್ಪಿಕೊಂಡಿದ್ದಾನೆ'
'ಪುರುಷರ ಬದ್ಧತೆ' ಎನ್ನುವುದು ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ಪ್ರಸಿದ್ಧವಾದ ಪದವಾಗಿದೆ, ಆದರೆ ಬಿಹಾರದ ವಿಕಾಸ್ ಮಿತ್ರ ಮತ್ತು ಆಶಾ ಕಾರ್ಮಿಕರು ಸಂತಾನ ಶಕ್ತಿ ಹರಣ ಚಿಕಿತ್ಸೆಗೆ ಒಳಗಾಗುವಂತೆ ಪುರುಷರನ್ನು ಮನವೊಲಿಸುವಲ್ಲಿ ಒಂದಿಷ್ಟು ಕಡಿಮೆ ಯಶಸ್ಸನ್ನು ಕಂಡಿದ್ದಾರೆ ಮತ್ತು ಗರ್ಭನಿರೋಧಕಗಳು ಮಹಿಳೆಯರಿಗೆ ಮಾತ್ರ ಸೀಮಿತವಾಗಿದೆ
ಮಾರ್ಚ್ 18, 2020 | ಅಮೃತ ಬ್ಯಾತ್ನಾಳ್
'ಅವರಿಗೆ ಕೇವಲ ಮಾತ್ರೆ ನೀಡಿ ಕಳುಹಿಸಲಾಗುತ್ತದೆ'
ಛತ್ತೀಸ್ಗಢದ ನಾರಾಯಣಪುರ ಜಿಲ್ಲೆಯಲ್ಲಿನ ಸುಸಜ್ಜಿತ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿನ ಸೌಲಭ್ಯಗಳು ಅನೇಕ ಆದಿವಾಸಿ ಮಹಿಳೆಯರಿಗೆ ಸಿಗುತ್ತಿಲ್ಲ. ಇದರಿಂದಾಗಿ ಅವರು ಅನಧಿಕೃತ ವೈದ್ಯರಲ್ಲಿ ಗರ್ಭಪಾತ ಮತ್ತು ಹೆರಿಗೆಗಾಗಿ ಹೋಗುವ ಮೂಲಕ ಅಪಾಯಕ್ಕೆ ಒಳಗಾಗುತ್ತಿದ್ದಾರೆ.
ಮಾರ್ಚ್ 11, 2020 | ಪ್ರೀತಿ ಡೇವಿಡ್
‘ಇನ್ನು ಚಿಂತೆಯಿಲ್ಲ’- ನೇಹಾಳಿಗೆ ನಸ್ಬಂದಿಯ ಅವಕಾಶ ದೊರೆಯಿತು
2016ರ ಸರ್ವೋಚ್ಛ ನ್ಯಾಯಾಲಯದ ತೀರ್ಪಿನ ನಂತರ ಸಂತಾನಶಕ್ತಿ ಹರಣ ಶಿಬಿರಗಳ ಬದಲಾಗಿ, ‘ನಸ್ಬಂದಿ ದಿನವನ್ನು’ಆರಂಭಿಸಲಾಯಿತು. ಆದರೆ ಈಗಲೂ ಮಹಿಳೆಯರೇ ಮುಖ್ಯವಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಉತ್ತರಪ್ರದೇಶದಲ್ಲಿನ ಅನೇಕರು ಇತರೆ ಆಧುನಿಕ ಗರ್ಭನಿಯಂತ್ರಣದ ಆಯ್ಕೆಗಳಿಲ್ಲದ ಕಾರಣ, ಇದನ್ನೇ ಅವಲಂಬಿಸುತ್ತಿದ್ದಾರೆ
ಫೆಬ್ರವರಿ 28, 2020 | ಅನುಭಾ ಭೋಸ್ಲೆ
ಕೂವಲಪುರಂನ ವಿಲಕ್ಷಣ ಗೆಸ್ವ್ ಹೌಸ್
ಮಧುರೈ ಜಿಲ್ಲೆಯ ಕೂವಲಪುರಂ ಮತ್ತು ಇತರೆ ನಾಲ್ಕು ಹಳ್ಳಿಗಳಲ್ಲಿ ಋತುಮತಿಯಾದ ಹೆಂಗಸರನ್ನು, ‘ಗೆಸ್ಟ್ ಹೌಸ್ ಗಳಲ್ಲಿ’ ಪ್ರತ್ಯೇಕವಾಗಿರಿಸುವ ಪದ್ಧತಿಯು ಮುಂದುವರಿದಿದೆ. ದೇವರು ಹಾಗೂ ಜನರ ಕೋಪಕ್ಕೆ ಹೆದರಿ ಯಾರೂ ಈ ತಾರತಮ್ಯವನ್ನು ಆಕ್ಷೇಪಿಸುವುದಿಲ್ಲ.