ವೀಡಿಯೊ ವೀಕ್ಷಿಸಿ : ಸಾಯೋವರೆಗೂ ನಮಗಿರೋದು ಇದೊಂದೇ ಕೆಲಸ

ಬಕ್ಕಿಂಗ್‌ಹ್ಯಾಮ್‌ ಕಾಲುವೆಯಲ್ಲಿ ನೀರು ಹಕ್ಕಿಯಂತೆ ನೀರಿನೊಳಗೆ ಡೈವ್‌ ಮಾಡುತ್ತಾ, ಈಜುತ್ತಾ ಸಾಗುವ ಅವರನ್ನು ನಾನು ಮೊದಲಿಗೆ ನೋಡಿದ್ದು 2019ರಲ್ಲಿ. ಅವರ ಈ ಕೌಶಲ ನನ್ನನ್ನು ಅವರತ್ತ ಆಕರ್ಷಿಸಿತು. ಅವರು ಕಾಲುವೆಯ ತಟದಲ್ಲಿನ ಮರಳಿನೊಳಗೆ ಕೈ ತೂರಿಸಿ ಚಾಕಚಕ್ಯೆತೆಯಿಂದ ಎಲ್ಲರಿಗಿಂತಲೂ ವೇಗವಾಗಿ ಸೀಗಡಿ ಹಿಡಿಯುತ್ತಿದ್ದರು.

ಗೋವಿಂದಮ್ಮ ವೇಲು, ತಮಿಳುನಾಡಿನಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿಸಲಾಗಿರುವ ಇರುಳ ಸಮುದಾಯಕ್ಕೆ ಸೇರಿದವರು. ಅವರು ಸಣ್ಣ ಹುಡುಗಿಯಾಗಿದ್ದ ಕಾಲದಿಂದಲೂ ಚೆನೈ ಬಳಿಯ ಕೋಸಸ್ಥಲೈಯಾರ್‌ ನದಿಯ ಗುಂಟ ಮೀನು ಹೀಡಿಯುತ್ತಿದ್ದರು. ಈಗ ಬದುಕಿನ ಎಂಬತ್ತನೇ ವಸಂತದ ಸನಿಹದಲ್ಲಿರುವ ಅವರು ಕುಟುಂಬದ ಭೀಕರ ಆರ್ಥಿಕ ಸಮಸ್ಯೆಯ ಕಾರಣಕ್ಕೆ ದುಡಿಯಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಆದರೆ ಅವರಿಗೆ ದೃಷ್ಟಿ ಮಂದವಾಗಿದೆ ಮತ್ತು ಕೈಕಾಲುಗಳ ತುಂಬಾ ಗಾಯಗಳಿವೆ.

ಅಂದು ಚೆನ್ನೈ ಉತ್ತರ ಭಾಗದ ಕೋಸಸ್ಥಲೈಯಾರ್‌ ನದಿಯ ಪಕ್ಕದಲ್ಲಿರುವ ಬಕ್ಕಿಂಗ್‌ ಹ್ಯಾಮ್‌ ಕಾಲುವೆಯಲ್ಲಿ ಅವರು ಮೀನು ಹಿಡಿಯುವಾಗ ನಾನು ಈ ವಿಡಿಯೋ ಶೂಟ್‌ ಮಾಡಿದೆ. ಸೀಗಡಿ ಹಿಡಿಯಲು ಓಡಾಡುತ್ತಲೇ ಅವರು ನನ್ನೊಡನೆ ತನ್ನ ಬದುಕಿನ ಕುರಿತು ಮಾತನಾಡಿದರು.

ಗೋವಿಂದಮ್ಮನವರ ಕುರಿತು ಇನ್ನಷ್ಟು ತಿಳಿಯಲು ನೀವು ಈ ವರದಿಯನ್ನು ಓದಬಹುದು.

ಅನುವಾದ : ಶಂಕರ . ಎನ್ . ಕೆಂಚನೂರು

M. Palani Kumar

எம். பழனி குமார், பாரியில் புகைப்படக் கலைஞராக பணிபுரிகிறார். உழைக்கும் பெண்கள் மற்றும் விளிம்புநிலை மக்களின் வாழ்க்கைகளை ஆவணப்படுத்துவதில் விருப்பம் கொண்டவர். பழனி 2021-ல் Amplify மானியமும் 2020-ல் Samyak Drishti and Photo South Asia மானியமும் பெற்றார். தயாநிதா சிங் - பாரியின் முதல் ஆவணப் புகைப்பட விருதை 2022-ல் பெற்றார். தமிழ்நாட்டில் மலக்குழி மரணங்கள் குறித்து எடுக்கப்பட்ட 'கக்கூஸ்' ஆவணப்படத்தின் ஒளிப்பதிவாளராக இருந்தவர்.

Other stories by M. Palani Kumar
Text Editor : Vishaka George

விஷாகா ஜார்ஜ் பாரியின் மூத்த செய்தியாளர். பெங்களூருவை சேர்ந்தவர். வாழ்வாதாரங்கள் மற்றும் சூழலியல் சார்ந்து அவர் எழுதி வருகிறார். பாரியின் சமூக தளத்துக்கும் தலைமை தாங்குகிறார். கிராமப்புற பிரச்சினைகளை பாடத்திட்டத்திலும் வகுப்பறையிலும் கொண்டு வரக் கல்விக்குழுவுடன் பணியாற்றுகிறார். சுற்றியிருக்கும் சிக்கல்களை மாணவர்கள் ஆவணப்படுத்த உதவுகிறார்.

Other stories by Vishaka George
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru