ಅವನ ದೇಶವೆನ್ನುವುದು ಕೋಟಿ ಕೋಟಿ ಜನರು ಕಂಡ ಕನಸಿನ ಮೊತ್ತವಾಗಿತ್ತು. ಅದಕ್ಕಾಗಿ ಜೀವ ತೆತ್ತ ಜನರೂ ಇದ್ದರು. ಕಳೆದ ಕೆಲವು ವರ್ಷಗಳಿಂದ ಅವನೂ ಕನಸು ಕಾಣಲಾರಂಭಿಸಿದ್ದ. ಗುಂಪೊಂದು ಮನುಷ್ಯನೊಬ್ಬನನ್ನು ಜೀವಂತ ಸುಟ್ಟಿತ್ತು ಆದರೆ ಅವನಿಗೆ ಅದನ್ನು ತಡೆಯಲು ಸಾಧ್ಯವಾಗಿರಲಿಲ್ಲ. ಇನ್ನೊಮ್ಮೆ ಮನೆಯ ಚಾವಡಿಯಲ್ಲಿ ಜನ ಸೇರಿದ್ದರು. ಕೆಲವು ಹೆಂಗಸರು ಅಳುತ್ತಿದ್ದರು. ಕೆಲವು ಗಂಡಸರು ಸ್ಥಬ್ಧರಾಗಿ ನಿಂತಿದ್ದರೆ ಅಲ್ಲೇ ಮೂಲೆಯಲ್ಲಿ ಎರಡು ಶವಗಳನ್ನು ಸುತ್ತಿ ಇರಿಸಲಾಗಿತ್ತು. ಪುಟ್ಟ ಹುಡುಗಿಯೊಬ್ಬಳು ಆ ಹೆಣವನ್ನು ನೋಡುತ್ತಾ ಕುಳಿತಿದ್ದಳು. ಅವನಿಗೆ ಇದೆಲ್ಲವನ್ನೂ ಕನಸು ಕಂಡಿದ್ದಕ್ಕೆ ನಾಚಿಕೆಯಾಗಿತ್ತು. ತಾನು ಕನಸು ಕಾಣುವುದನ್ನು ಬಹಳ ಹಿಂದೆಯೇ ನಿಲ್ಲಿಸಿಬಿಡಬೇಕಿತ್ತು ಎಂದು ಅವನಿಗೆ ಅನ್ನಿಸಿತು. ಕನಸಿನಾಚೆಗೆ ದೇಶ ಇದಕ್ಕಿಂತಲೂ ಭೀಕರವಾಗಿ ಸ್ಮಶಾನವಾಗಿ ಮಾರ್ಪಟ್ಟಿರುವುದು ತಿಳಿದಿತ್ತು. ಆದರೆ ಅವನಿಗೆ ಕನಸು ಕಾಣುವುದನ್ನು ನಿಲ್ಲಿಸುವುದು ಹೇಗೆನ್ನುವುದಾಗಲೀ, ಅಥವಾ ಹೊರಗೆ ಬರುವುದು ಹೇಗೆನ್ನುವುದಾಗಲೀ ತಿಳಿದಿರಲಿಲ್ಲ

ದೇವೇಶ್‌ ಅವರ ದನಿಯಲ್ಲಿ ಕನ್ನಡ ಕವಿತೆಯ ವಾಚನವನ್ನು ಕೇಳಿ

ಪ್ರತಿಷ್ಠಾ ಪಾಂಡ್ಯ ಅವರ ದನಿಯಲ್ಲಿ ಕವಿತೆಯ ಇಂಗ್ಲಿಷ್‌ ಅವತರಣಿಕೆಯನ್ನು ಆಲಿಸಿ


तो यह देश नहीं…

1.
एक हाथ उठा
एक नारा लगा
एक भीड़ चली
एक आदमी जला

एक क़ौम ने सिर्फ़ सहा
एक देश ने सिर्फ़ देखा
एक कवि ने सिर्फ़ कहा
कविता ने मृत्यु की कामना की

2.
किसी ने कहा,
मरे हुए इंसान की आंखें
उल्टी हो जाती हैं
कि न देख सको उसका वर्तमान
देखो अतीत

किसी ने पूछा,
इंसान देश होता है क्या?

3.
दिन का सूरज एक गली के मुहाने पर डूब गया था
गली में घूमती फिर रही थी रात की परछाई
एक घर था, जिसके दरवाज़ों पर काई जमी थी
नाक बंद करके भी नहीं जाती थी
जलते बालों, नाखूनों और चमड़ी की बू

बच्ची को उसके पड़ोसियों ने बताया था
उसका अब्बा मर गया
उसकी मां बेहोश पड़ी थी

एक गाय बचाई गई थी
दो लोग जलाए गए थे

4.
अगर घरों को रौंदते फिरना
यहां का प्रावधान है
पीटकर मार डालना
यहां का विधान है
और, किसी को ज़िंदा जला देना
अब संविधान है

तो यह देश नहीं
श्मशान है

5.
रात की सुबह न आए तो हमें बोलना था
ज़ुल्म का ज़ोर बढ़ा जाए हमें बोलना था

क़ातिल
जब कपड़ों से पहचान रहा था
किसी का खाना सूंघ रहा था
चादर खींच रहा था
घर नाप रहा था
हमें बोलना था

उस बच्ची की आंखें, जो पत्थर हो गई हैं
कल जब क़ातिल
उन्हें कश्मीर का पत्थर बताएगा
और
फोड़ देगा
तब भी
कोई लिखेगा
हमें बोलना था

ಇದು ದೇಶವಲ್ಲ…

1.
ಒಂದು ಕೈ ಮೇಲೆದ್ದಿತು
ಒಂದು ಘೋಷಣೆ ಹೊರಬಿದ್ದಿತು
ಒಂದು ಮೆರವಣಿಗೆ ಹೊರಟಿತು
ಒಂದು ಜೀವ ಜೀವಂತ ಸುಟ್ಟು ಹೋಯಿತು

ಒಂದು ಸಮುದಾಯವಷ್ಟೇ ನೋವು ತಿಂದಿತು
ದೇಶ ಅದನು ಸುಮ್ಮನೆ ನಿಂತು ನೋಡಿತು
ಈಗಷ್ಟೇ ಕವಿಯೊಬ್ಬ ಗೊಣಗಿದ,
ಕಾವ್ಯ ಸಾಯಲು ಬಯಸುತ್ತಿದೆ

2.
ಯಾರೋ ಹೇಳಿದರು,
ಸತ್ತ ಮನುಷ್ಯನ ಕಣ್ಣುಗಳು
ತಿರುಗಿಬಿಡುತ್ತವಂತೆ.
ಅವನಿಗೆ ವರ್ತಮಾನ ಕಾಣುವುದಿಲ್ಲ
ಇತಿಹಾಸವಷ್ಟೇ ಕಾಣುತ್ತದೆಯಂತೆ.
ಯಾರೋ ಕೇಳಿದರು
ದೇಶವೂ ಮನುಷ್ಯನಂತೆಯೇ ಇರಬಹುದೆ?

3.
ಅಂದಿ ಸೂರ್ಯ ಅದ್ಯಾವುದೋ ಗಲ್ಲಿಯಲ್ಲಿ ಕಂತಿದ್ದ.
ರಾತ್ರಿಯ ನೆರಳು ಬೀದಿಯಲೆಯುತ್ತಿತ್ತು.
ಅಲ್ಲೊಂದು ಪಾಚಿಗಟ್ಟಿದ ಬಾಗಿಲಿನ ಮನೆ
ಮನೆಯ ಹತ್ತಿರ ಹೋಗಲು ಯಾರಿಗೂ ಸಾಧ್ಯವಿರಲಿಲ್ಲ
ಇಲ್ಲ, ಮೂಗು ಮುಚ್ಚಿಕೊಂಡರೂ ಹತ್ತಿರ ಹೋಗುವಂತಿರಲಿಲ್ಲ
ಅಲ್ಲಿ ಮಾಂಸ ಸುಟ್ಟ ಕಮಟು ವಾಸನೆ
ನಿಮ್ಮ ಕರುಳನ್ನು ಬೇಡವೆಂದರೂ ತುಂಬುತ್ತಿತ್ತು.

ಪುಟ್ಟ ಹುಡುಗಿಗೆ ನೆರೆಮನೆಯವರೆಂದರು
ನಿನ್ನ ಅಪ್ಪ ಸತ್ತ
ನಿನ್ನಮ್ಮನಿಗೆ ಪ್ರಜ್ಞೆಯಿಲ್ಲ
ದನವನ್ನು ಉಳಿಸಲಾಗಿದೆ
ಮತ್ತು ಇಬ್ಬರು ಸುಟ್ಟು ಹೋಗಿದ್ದಾರೆಂದು.

4.
ಇಲ್ಲಿದೆ ನೋಡಿ ಕಾನೂನು
ಮನೆಗಳನ್ನು ಕೆಡವಿ ಬೀಳಿಸಲು
ಗುಂಪು ಗುಂಪಾಗಿ ಹಲ್ಲೆ ಮಾಡಿ
ಕೊಲ್ಲುವುದಕ್ಕೂ ಕಾನೂನು ಉಂಟು
ಈಗ ನೀವು ಸಂವಿಧಾನ ಬದ್ಧವಾಗಿ
ಜನರನ್ನು ಸುಟ್ಟು ಕೊಲ್ಲಬಹುದು.

ಯಾರು ಹೇಳುತ್ತಾರೆ ಇದನ್ನೊಂದು ದೇಶವೆಂದು?
ಇದೊಂದು ಸುಡುಗಾಡು.

5.
ರಾತ್ರಿ ಮುಗಿದು ಬೆಳಕು ಬಾರದಿದ್ದ ಸಮಯ
ನಾವು ಮಾತನಾಡಬೇಕು.
ಅಧಿಕಾರ ನಮ್ಮ ಮೇಲೆ ಸವಾರಿಯೆಸಗುವಾಗ
ನಾವು ಮಾತನಾಡಲೇಬೇಕು.

ಕೊಲೆಗಾರ
ಬಟ್ಟೆಯಿಂದಲೇ ಅಪರಾಧಿಗಳನ್ನು ಗುರುತಿಸುವಾಗ
ಯಾರದೋ ಅಡುಗೆ ಮನೆಗೆ ಇಣುಕಿ ನೋಡುವಾಗ
ಚಾದರಗಳನ್ನು ಎಳೆಯುವಾಗ
ಮನೆಗಳನ್ನು ಅಳೆಯುವಾಗ
ನಾವು ಮಾತನಾಡಬೇಕಿತ್ತು

ನಾಳೆ ಆ ಪುಟ್ಟ ಹುಡುಗಿಯ ಕಣ್ಣುಗಳು
ಕಲ್ಲಾಗಿ ಹೋದಾಗ
ಅವರು ಹೇಳುತ್ತಾರೆ
ಅವಳ ಕಣ್ಣುಗಳಲ್ಲಿರುವುದು
ಕಾಶ್ಮೀರದ ಕಲ್ಲು, ಒಡೆದುಬಿಡೋಣ ಅವುಗಳನ್ನು ಎಂದು
ಆಗಲೂ ಯಾರಾದರೂ ಬರೆಯುತ್ತಾರೆ
ನಾವು ಮೊದಲೇ ಮಾತನಾಡಬೇಕಿತ್ತು ಎಂದು

ಅನುವಾದ: ಶಂಕರ. ಎನ್. ಕೆಂಚನೂರು

Poem and Text : Devesh

தேவேஷ் ஒரு கவிஞரும் பத்திரிகையாளரும் ஆவணப்பட இயக்குநரும் மொழிபெயர்ப்பாளரும் ஆவார். இந்தி மொழிபெயர்ப்பு ஆசிரியராக அவர் பாரியில் இருக்கிறார்.

Other stories by Devesh
Editor : Pratishtha Pandya

பிரதிஷ்தா பாண்டியா பாரியின் மூத்த ஆசிரியர் ஆவார். இலக்கிய எழுத்துப் பிரிவுக்கு அவர் தலைமை தாங்குகிறார். பாரிபாஷா குழுவில் இருக்கும் அவர், குஜராத்தி மொழிபெயர்ப்பாளராக இருக்கிறார். கவிதை புத்தகம் பிரசுரித்திருக்கும் பிரதிஷ்தா குஜராத்தி மற்றும் ஆங்கில மொழிகளில் பணியாற்றுகிறார்.

Other stories by Pratishtha Pandya
Painting : Labani Jangi

லபானி ஜங்கி 2020ம் ஆண்டில் PARI மானியப் பணியில் இணைந்தவர். மேற்கு வங்கத்தின் நாடியா மாவட்டத்தைச் சேர்ந்தவர். சுயாதீன ஓவியர். தொழிலாளர் இடப்பெயர்வுகள் பற்றிய ஆய்வுப்படிப்பை கொல்கத்தாவின் சமூக அறிவியல்களுக்கான கல்வி மையத்தில் படித்துக் கொண்டிருப்பவர்.

Other stories by Labani Jangi
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru