ಪಾಲಿಯೆಸ್ಟರ್ ಸೀರೆಗಳು 90 ರೂಪಾಯಿಗಳಿಗೆಲ್ಲ ಲಭ್ಯವಿರುವಾಗ, ತಾನು ನೇಯುವ ಕೋಟ್ಪಾಡ್ ಸೀರೆಯನ್ನು 300 ರೂಪಾಯಿಗಳನ್ನು ಕೊಟ್ಟು ಯಾರು ಖರೀದಿಸುತ್ತಾರೆ ಎನ್ನುವ ಚಿಂತೆ ಮಧುಸೂದನ್ ತಾಂತಿ ಅವರನ್ನು ಕಾಡುತ್ತಿದೆ
ಒಡಿಶಾದ ಕೋರಾಪುಟ್ ಜಿಲ್ಲೆಯ ಕೋಟ್ಪಾಡ್ ತಹಸಿಲ್ ಡೊಂಗ್ರಿಗುಡ ಗ್ರಾಮದ ನಲವತ್ತರ ಹರೆಯದ ಈ ನೇಕಾರ, ಪ್ರಸಿದ್ಧ ಕೋಟ್ಪಾಡ್ ಸೀರೆಗಳನ್ನು ಅನೇಕ ದಶಕಗಳಿಂದ ನೇಯುತ್ತಿದ್ದಾರೆ. ಕೋಟ್ಪಾಡ್ ಸೀರೆಯು ಸಂಕೀರ್ಣವಾದ ಆಕಾರಗಳನ್ನು ಹೊಂದಿದ್ದು, ಇದನ್ನು ಕಪ್ಪು, ಕೆಂಪು ಮತ್ತು ಕಂದು ಬಣ್ಣದ ರೋಮಾಂಚಕ ಛಾಯೆಗಳಲ್ಲಿ ಹತ್ತಿ ದಾರಗಳಿಂದ ನೇಯಲಾಗುತ್ತದೆ.
"ನೇಯ್ಗೆ ನಮ್ಮ ಕುಟುಂಬದ ಕಸುಬು. ಅಜ್ಜ ನೇಯ್ಗೆ ಮಾಡುತ್ತಿದ್ದರು, ನನ್ನ ತಂದೆ ನೇಯ್ಗೆ ಮಾಡುತ್ತಿದ್ದರು ಮತ್ತು ಈಗ ಮಗ ನೇಯ್ಗೆ ಮಾಡುತ್ತಿದ್ದಾನೆ" ಎಂದು ಮಧುಸೂದನ್ ಹೇಳುತ್ತಾರೆ, ಅವರು ತಮ್ಮ ಎಂಟು ಸದಸ್ಯರ ಕುಟುಂಬವನ್ನು ಪೋಷಿಸುವ ಸಲುವಾಗಿ ಇತರ ಅನೇಕ ಕೆಲಸಗಳನ್ನು ಮಾಡುತ್ತಾರೆ.
ಎ ವೀವ್ ಇನ್ ಟೈಮ್ ಎಂಬ ಈ ಕಿರುಚಿತ್ರವನ್ನು 2014ರಲ್ಲಿ ತಯಾರಿಸಲಾಯಿತು. ಈ ಚಿತ್ರವು ಮಧುಸೂದನ್ ಅವರ ಆನುವಂಶಿಕ ಕರಕುಶಲತೆ ಮತ್ತು ಅದನ್ನು ಉಳಿಸಿಕೊಳ್ಳುವಲ್ಲಿ ಅವರ ಎದುರಿಸುತ್ತಿರುವ ತೊಂದರೆಗಳನ್ನು ಅನ್ವೇಷಿಸುತ್ತದೆ.
ಅನುವಾದ: ಶಂಕರ. ಎನ್. ಕೆಂಚನೂರು