ಮಹುವಾ (ಮಧುಕಾ ಲಾಂಜಿಫೋಲಿಯಾ) ಸೀಸನ್ ಎರಡರಿಂದ ಮೂರು ತಿಂಗಳವರೆಗೆ ಇದ್ದು ಬೇಗನೇ ಬಂದು ಹೋಗುತ್ತದೆ. ಬೇಸಿಗೆ ಆರಂಭವಾಗುವಾಗ ಮಧ್ಯ ಭಾರತದಾದ್ಯಂತ ಕಂಡುಬರುವ ಎತ್ತರದ ಮರಗಳು ಈ ಸುಂದರ  ಹೂವುಗಳನ್ನು ಬಿಡುತ್ತವೆ.

ಈ ತಿಳಿ ಹಳದಿ ಹೂವುಗಳನ್ನು ಸಂಗ್ರಹಿಸುವುದೇ ಒಂದು ಹಬ್ಬ. ಛತ್ತೀಸ್‌ಗಢದಲ್ಲಿ ಚಿಕ್ಕ ಮಕ್ಕಳು ಸೇರಿದಂತೆ ಇಡೀ ಕುಟುಂಬಗಳು ಕಾಡಿನಲ್ಲಿ ಬಿದ್ದಿರುವ ಈ ಹೂಗಳನ್ನು ಹೆಕ್ಕುವುದನ್ನು ಕಾಣಬಹುದು. "ಇದು ತುಂಬಾ ತ್ರಾಸದ ಕೆಲಸ," ಭೂಪಿಂದರ್ ಹೇಳುತ್ತಾರೆ. "ನಾವು ಮುಂಜಾನೆ ಮತ್ತು ಸಂಜೆ ಎರಡೂ ಹೊತ್ತು ಮಹುವಾವನ್ನು ಸಂಗ್ರಹಿಸುತ್ತೇವೆ," ಎನ್ನುತ್ತಾರೆ ಅವರು. ಧಮ್ತಾರಿ ಜಿಲ್ಲೆಯ ಚನಗಾಂವ್‌ನ ಇವರು ತಮ್ಮ ಹೆತ್ತವರಿಗೆ ಈ ಕೆಲಸದಲ್ಲಿ ನೆರವಾಗಲು ಬಂದಿದ್ದಾರೆ. ಸುತ್ತಮುತ್ತಲಿನ ಅನೇಕ ಜನರು ಇದಕ್ಕಾಗಿ ಸೇರುವುದರಿಂದ ಒಂದು ಹಬ್ಬದ ವಾತಾವರಣ ಸೃಷ್ಟಿಯಾಗುತ್ತದೆ.

ಸೀಸನ್‌ನಲ್ಲಿ ಮಹುವಾ ಹೂಗಳು ತಮ್ಮ ಸುವಾಸನೆಯ ಮೂಲಕ ಇಡೀ ಪ್ರದೇಶವನ್ನು ಸುಗಂಧಗೊಳಿಸುತ್ತವೆ. ರಾಯ್‌ಗಢ್ ಜಿಲ್ಲೆಯ ಧರಮ್‌ಜೈಗಢದಿಂದ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಬರುವ ಗ್ರಾಮಸ್ಥರು ನೂರಾರು ಮಹುವಾ ಮರಗಳ ಅಡಿಯಲ್ಲಿ ಬಿದ್ದಿರುವ ಹೂವುಗಳನ್ನು ಸಂಗ್ರಹಿಸುತ್ತಾರೆ. ಅವುಗಳನ್ನು ಒಣಗಿಸಿ ತೆಗೆದಿಡಲಾಗುತ್ತದೆ.ಇವುಗಳಿಂದ ಹಿಟ್ಟು, ಮದ್ಯ ಮತ್ತು ಇನ್ನೂ ಬೇರೆ ಬೇರೆ ಉತ್ಷನ್ನಗಳನ್ನು ತಯಾರಿಸುತ್ತಾರೆ.

“ಮಹುವಾ ನಾವು ಸಂಗ್ರಹಿಸುವ ಪ್ರಮುಖ ಕಾಡುತ್ಪನ್ನ. ಹಸಿದಾಗ ನಾವು ಇದನ್ನು ಆಹಾರವಾಗಿ ಬಳಸುತ್ತೇವೆ. ಅಗತ್ಯ ಬಿದ್ದಾಗ ಹಣಕ್ಕಾಗಿ ಸ್ವಲ್ಪ ಮಹುವಾವನ್ನು ಮಾರಾಟ ಮಾಡಬಹುದು, ”ಎಂದು ಅಂಬಿಕಾಪುರದ ಸಾಮಾಜಿಕ ಕಾರ್ಯಕರ್ತ ಮತ್ತು ಬುಡಕಟ್ಟು ಮುಖಂಡ ಗಂಗಾರಾಮ್ ಪೈಂಕ್ರಾ ಹೇಳುತ್ತಾರೆ. ಕೂಲಿ ಕೆಲಸ ಸಿಗದೇ ಇದ್ದಾಗ ಜನರು ಬದುಕು ಸಾಗಿಸಲು ಈ ಹೂವುಗಳ ಮೇಲೆ ಅವಲಂಬಿತರಾಗುತ್ತಾರೆ ಎನ್ನುತ್ತಾರೆ ಗಂಗಾರಾಮ್‌.

ʼಮಹುವಾ ನಾವು ಸಂಗ್ರಹಿಸುವ ಪ್ರಮುಖ ಕಾಡುತ್ಪನ್ನ. ಹಸಿದಾಗ ನಾವು ಇದನ್ನು ಆಹಾರವಾಗಿ ಬಳಸುತ್ತೇವೆ. ಅಗತ್ಯ ಬಿದ್ದಾಗ ಹಣಕ್ಕಾಗಿ ಸ್ವಲ್ಪ ಮಹುವಾವನ್ನು ಮಾರಾಟ ಮಾಡಬಹುದುʼ

ವಿಡಿಯೋ ನೋಡಿ: ʼಋತುವಿಗಿಂತ ಹೆಚ್ಚು ಕಾಲ ಇರುವ ಮಹುವಾ'

"ಬುಡಕಟ್ಟು ಜನರು ಈ ಹೂವುಗಳಿಂದ ತಯಾರಿಸಿದ ಮದ್ಯವನ್ನು ಸವಿಯುತ್ತಾರೆ. ಇದು ನಮ್ಮ ಪೂಜೆ ಮತ್ತಿತರ ಆಚರಣೆಗಳಲ್ಲಿ ಇರಲೇಬೇಕು," ಎಂದು ಗಂಗಾರಾಮ್ ಹೇಳುತ್ತಾರೆ.

ತುಂಬಾ ಗಂಟೆಗಳ ಕಾಲ ಇವನ್ನು ನೆಲದಿಂದ ಹೆಕ್ಕುವುದು ಸುಲಭದ ಕೆಲಸವೇನಲ್ಲ. "ನಮ್ಮ ಬೆನ್ನು, ಕಾಲುಗಳು, ಕೈಗಳು, ಮೊಣಕಾಲುಗಳು ಮತ್ತು ಸೊಂಟ, ಎಲ್ಲಾ ಕಡೆ ನೋವು ಕಾಣಿಸಿಕೊಳ್ಳುತ್ತದೆ" ಎಂದು ಭೂಪಿಂದರ್ ಹೇಳುತ್ತಾರೆ.

ಛತ್ತೀಸ್‌ಗಢ ಸರ್ಕಾರ ಮಹುವಾ ಹೂವಿಗೆ ಒಂದು ಕೆಜಿಗೆ  30 ರುಪಾಯಿ ಅಥವಾ ಕ್ವಿಂಟಲ್‌ಗೆ 3,000 ರುಪಾಯಿ ಕನಿಷ್ಠ ಬೆಂಬಲ ಬೆಲೆಯನ್ನು ನಿಗದಿಪಡಿಸಿದೆ.

ಛತ್ತೀಸ್‌ಗಢ ಮಾತ್ರವಲ್ಲ ಮಧ್ಯಪ್ರದೇಶ, ಜಾರ್ಖಂಡ್, ಒಡಿಶಾ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಹಾಗೂ ಬಾಂಗ್ಲಾದೇಶದಲ್ಲೂ ಈ ಮಹುವಾ ಹೂವುಗಳನ್ನು ಕಾಣಬಹುದು.

Usha (extreme right) and her sisters Uma and Sarita (yellow) are busy collecting mahua in the forest near Aam gaon
PHOTO • Purusottam Thakur

ಉಷಾ (ಬಲ) ಮತ್ತು ಆಕೆಯ ಸಹೋದರಿಯರಾದ ಉಮಾ ಮತ್ತು ಸರಿತಾ (ಹಳದಿ) ಆಮ್ ಗಾಂವ್ ಬಳಿಯ ಕಾಡಿನಲ್ಲಿ ಮಹುವಾ ಸಂಗ್ರಹಿಸುತ್ತಿರುವುದು

Usha fillng up the tub with her collection of mahua flowers
PHOTO • Purusottam Thakur

ಉಷಾ ಮಹುವಾ ಹೂವುಗಳನ್ನು ಹೆಕ್ಕಿ ತನ್ನ ಬಳಿಯಿರುವ ಟಬ್‌ನಲ್ಲಿ ತುಂಬುತ್ತಾಳೆ

Sarita (yellow), the eldest child in the family, is studying in 2nd year BA. She has been collecting the flowers in this season, since she was a child. She says last year they had earned about 40,000 rupees from collecting mahua . Their entire family works on collecting it, including their parents and grandparents. Her sister Uma (red) is standing in the background
PHOTO • Purusottam Thakur

ಕುಟುಂಬದ ಹಿರಿಯ ಮಗಳಾದ ಸರಿತಾ (ಹಳದಿ) 2ನೇ ವರ್ಷದ ಬಿಎ ಓದುತ್ತಿದ್ದಾರೆ. ಅವರು ತಮ್ಮ ಬಾಲ್ಯದಿಂದಲೂ ಈ ಸೀಸನ್‌ನಲ್ಲಿ ಹೂವುಗಳನ್ನು ಸಂಗ್ರಹಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ. ಕಳೆದ ವರ್ಷ ಮಹುವಾ ಸಂಗ್ರಹಿಸಿ ಸುಮಾರು 40,000 ರೂಪಾಯಿಗಳನ್ನು ಗಳಿಸಿರುವುದಾಗಿ ಅವರೇ ಹೇಳುತ್ತಾರೆ. ಅವರ ಹೆತ್ತವರು ಮತ್ತು ಅಜ್ಜಿ-ಅಜ್ಜಿ ಸೇರಿದಂತೆ ಇಡೀ ಕುಟುಂಬವೇ ಈ ಕೆಲಸ ಮಾಡುತ್ತದೆ. ಅವರ ಸಹೋದರಿ ಉಮಾ (ಕೆಂಪು) ಹಿಂದೆ ನಿಂತಿದ್ದಾರೆ

Sarita (in yellow) and Uma (red) picking up mahua flowers
PHOTO • Purusottam Thakur

ಸರಿತಾ (ಹಳದಿ ಬಣ್ಣದ ಬಟ್ಟೆ) ಮತ್ತು ಉಮಾ (ಕೆಂಪು ಬಣ್ಣದ ಬಟ್ಟೆ) ಮಹುವಾ ಹೂಗಳನ್ನು ಹೆಕ್ಕುತ್ತಿರುವುದು

A bunch of Madhuca longifolia flowers hanging from the tree
PHOTO • Purusottam Thakur

ಮರದಲ್ಲಿ ನೇತಾಡುತ್ತಿರುವ ಮಧುಕಾ ಲಾಂಜಿಫೋಲಿಯಾ ಹೂವುಗಳ ಗೊಂಚಲು

A picture of mahua flowers lying on the ground
PHOTO • Purusottam Thakur

ನೆಲದ ಮೇಲೆ ಬಿದ್ದಿರುವ ಮಹುವಾ ಹೂವುಗಳು

A young kid who is busy collecting mahua with her mother and grandparents
PHOTO • Purusottam Thakur

ತನ್ನ ತಾಯಿ ಮತ್ತು ಅಜ್ಜ-ಅಜ್ಜಿಯರೊಂದಿಗೆ ಮಹುವಾ ಹೆಕ್ಕುತ್ತಿರುವ ಪುಟ್ಟ ಮಗು

The same kid searching the ground to collect the flowers
PHOTO • Purusottam Thakur

ಅದೇ ಮಗು ನೆಲದ ಮೇಲೆ ಹೂಗಳನ್ನು ಹುಡುಕುತ್ತಿರುವುದು

75-year-old Chherken Rathia is also busy in collecting mahua . She says she has been doing this since she was a child
PHOTO • Purusottam Thakur

75 ವರ್ಷದ ಚೆರ್ಕೆನ್ ರಾಥಿಯಾ ಕೂಡ ಮಹುವಾ ಹೆಕ್ಕುವುದರಲ್ಲಿ ತೊಡಗಿದ್ದಾರೆ. ಚಿಕ್ಕಂದಿನಿಂದಲೇ ಇದನ್ನು ಮಾಡುತ್ತಿದ್ದೆ ಎನ್ನುತ್ತಾರೆ ಅವರು

Jalsai Raithi and his wife are collecting mahua from their own tree in their field
PHOTO • Purusottam Thakur

ಜಲ್ಸಾಯಿ ರೈಥಿ ಮತ್ತು ಅವರ ಪತ್ನಿ ತಮ್ಮ ಜಮೀನಿನಲ್ಲಿರುವ ತಮ್ಮದೇ ಸ್ವಂತ ಮರದಿಂದ ಮಹುವಾ ಸಂಗ್ರಹಿಸುತ್ತಿರುವುದು

Jalsai Rathi and his family enjoying their collection of flowers in the morning sun
PHOTO • Purusottam Thakur

ಜಲ್ಸಾಯಿ ರೈಥಿ ಮತ್ತು ಅವರ ಕುಟುಂಬ ಬೆಳಗಿನ ಬಿಸಿಲಿನಲ್ಲಿ ಆನಂದದಿಂದ ಹೂವುಗಳ ಸಂಗ್ರಹಿಸುತ್ತಿರುವುದು

ಅನುವಾದ: ಚರಣ್‌ ಐವರ್ನಾಡು

Purusottam Thakur

ਪੁਰਸ਼ੋਤਮ ਠਾਕੁਰ 2015 ਤੋਂ ਪਾਰੀ ਫੈਲੋ ਹਨ। ਉਹ ਪੱਤਰਕਾਰ ਤੇ ਡਾਕਿਊਮੈਂਟਰੀ ਮੇਕਰ ਹਨ। ਮੌਜੂਦਾ ਸਮੇਂ, ਉਹ ਅਜ਼ੀਮ ਪ੍ਰੇਮਜੀ ਫਾਊਂਡੇਸ਼ਨ ਨਾਲ਼ ਜੁੜ ਕੇ ਕੰਮ ਕਰ ਰਹੇ ਹਨ ਤੇ ਸਮਾਜਿਕ ਬਦਲਾਅ ਦੇ ਮੁੱਦਿਆਂ 'ਤੇ ਕਹਾਣੀਆਂ ਲਿਖ ਰਹੇ ਹਨ।

Other stories by Purusottam Thakur
Editor : Priti David

ਪ੍ਰੀਤੀ ਡੇਵਿਡ ਪੀਪਲਜ਼ ਆਰਕਾਈਵ ਆਫ਼ ਇੰਡੀਆ ਦੇ ਇਕ ਪੱਤਰਕਾਰ ਅਤੇ ਪਾਰੀ ਵਿਖੇ ਐਜੁਕੇਸ਼ਨ ਦੇ ਸੰਪਾਦਕ ਹਨ। ਉਹ ਪੇਂਡੂ ਮੁੱਦਿਆਂ ਨੂੰ ਕਲਾਸਰੂਮ ਅਤੇ ਪਾਠਕ੍ਰਮ ਵਿੱਚ ਲਿਆਉਣ ਲਈ ਸਿੱਖਿਅਕਾਂ ਨਾਲ ਅਤੇ ਸਮਕਾਲੀ ਮੁੱਦਿਆਂ ਨੂੰ ਦਸਤਾਵੇਜਾ ਦੇ ਰੂਪ ’ਚ ਦਰਸਾਉਣ ਲਈ ਨੌਜਵਾਨਾਂ ਨਾਲ ਕੰਮ ਕਰਦੀ ਹਨ ।

Other stories by Priti David
Video Editor : Sinchita Parbat

ਸਿੰਚਿਤਾ ਪਾਰਬਤ People’s Archive of Rural India ਦੀ ਸੀਨੀਅਰ ਵੀਡੀਓ ਐਡੀਟਰ ਹਨ ਅਤੇ ਇੱਕ ਸੁਤੰਤਰ ਫੋਟੋਗ੍ਰਾਫਰ ਤੇ ਡਾਕੂਮੈਂਟਰੀ ਫਿਲਮ ਨਿਰਮਾਤਾ ਹਨ। ਉਹਨਾਂ ਦੀਆਂ ਪਹਿਲੀਆਂ ਕਹਾਣੀਆਂ ਸਿੰਚਿਤਾ ਮਾਜੀ ਦੇ ਨਾਮ ਹੇਠ ਦਰਜ ਹਨ।

Other stories by Sinchita Parbat
Translator : Charan Aivarnad

Charan Aivarnad is a poet and a writer. He can be reached at: [email protected]

Other stories by Charan Aivarnad