ಅವಳು ತನ್ನ ಪ್ರಿಯಕರನಿಂದ ದೂರವಿದ್ದಾಳೆ. ಅವನ ಭೇಟಿಗಾಗಿ ಅವಳು ಕಡಲು ದಾಟಿ ಹೋಗಲು ತಯಾರಿದ್ದಾಳೆ. ಅವಳು ಅವನನ್ನು ಸೇರುವ ಹಂಬಲದಲ್ಲಿದ್ದಾಳೆ. ಈ ಹಾಡು ಅವಳ ಕೋರಿಕೆಯನ್ನು ಧ್ವನಿಸುತ್ತದೆ
કુંજલ ન માર વીરા કુંજલ ન માર , હી કુંજલ વેધી દરિયા પાર
ಕುಂಜಲ್ ಹಕ್ಕಿಯನ್ನು ಕೊಲ್ಲಬೇಡಿ, ದಯವಿಟ್ಟು ಕೊಲ್ಲಬೇಡಿ! ಕುಂಜಲ್ ಕಡಲು ದಾಟಿ ಹೋಗುತ್ತದೆ
ಅವನು ತನ್ನನ್ನು ಮರೆಯುವುದು ಅವಳಿಗಿಷ್ಟವಿಲ್ಲ. ಅಂತಹ ಮರೆವು ಪ್ರತಿ ಚಳಿಗಾಲದಲ್ಲಿ ದೂರದ ಸೈಬಿರಿಯಾದಿಂದ ಶುಷ್ಕ ಕಚ್ಛ್ ಹುಲ್ಲುಗಾವಲು ಪ್ರದೇಶಕ್ಕೆ ವಲಸೆ ಬರುವ ಕೊಕ್ಕರೆ ಜಾತಿಯ ಹಕ್ಕಿಯನ್ನು ಕೊಂದಂತೆ. ಅವಳು ತನ್ನ ಪ್ರೇಮವನ್ನು ಹೋಲಿಸುವ ಕುಂಜ್ ಹಕ್ಕಿಯನ್ನು ಕಚ್ಛ್ ಪ್ರದೇಶದ ಜಾನಪದ ಸಂಸ್ಕೃತಿ ಬಹಳವಾಗಿ ಪ್ರೀತಿಸುತ್ತದೆ. ಸ್ನೇಹಿತೆಯಾಗಿ, ಸಲಹೆಗಾರನಾಗಿ, ವಿಶ್ವಾಸಾರ್ಹನಾಗಿ ಮತ್ತು ಕೆಲವೊಮ್ಮೆ ಅವಳ ಗುರುತು ಮತ್ತು ಆಕಾಂಕ್ಷೆಗಳ ರೂಪಕವಾಗಿಯೂ ಮಹಿಳೆಯರ ಜಗತ್ತಿನಲ್ಲಿ ಈ ಹಕ್ಕಿ ನಿರಾಯಾಸವಾಗಿ ಕಾಣಿಸಿಕೊಳ್ಳುತ್ತದೆ.
ಅವನು ಬರುವಾಗ ಅವಳಿಗಾಗಿ ಮೂಗು ನತ್ತು, ಉಂಗುರ, ಸರ, ಕಾಲುಗೆಜ್ಜೆ, ಬೈತಲೆ ಮತ್ತು ಕೈಬೆರಳುಗಳಿಗೆ ಆಭರಣ ತರುತ್ತಾನೆಂದು ಅವಳು ಕನಸು ಕಾಣುತ್ತಿದ್ದಾಳೆ. ಮತ್ತು ಈ ಆಭರಣಗಳ ಮೇಲೆ ಅವರ ಐಕ್ಯತೆಯನ್ನು ಸಾರುವ ಜೋಡಿ ಕುಂಜಲ್ ಹಕ್ಕಿಗಳ ಚಿತ್ರವನ್ನು ಕೆತ್ತಿಸಲಾಗಿರುತ್ತದೆ. ಮುಂದ್ರಾ ತಾಲ್ಲೂಕಿನ ಜುಮಾ ವಘೇರ್ ಅವರು ಸುಂದರವಾಗಿ ಹಾಡಿದ ಈ ಹಾಡು ಈ ಸರಣಿಯಲ್ಲಿ ಕಂಡುಬರುವ 'ಪಕ್ಷಿಶಾಸ್ತ್ರೀಯ ಜಾನಪದ ಹಾಡುಗಳ' ಸಂಖ್ಯೆಗೆ ಮತ್ತೊಂದು ಸುಂದರ ಸೇರ್ಪಡೆಯಾಗಿದೆ.
કરછી
કુંજલ ન માર વીરા કુંજલ ન માર, હી કુંજલ વેધી દરિયા પાર
કડલાર રે ઘડાય દે વીરા કડલા ઘડાય દે, કાભીયે જે જોડ તે કુંજ કે વીરાય
કુંજલ ન માર વીરા કુંજલ ન માર, હી કુંજલ વેધી દરિયા પાર
મુઠીયા રે ઘડાય દે વીરા મુઠીયા રે ઘડાય, બગલીયે જે જોડ તે કુંજ કે વીરાય
કુંજલ ન માર વીરા કુંજલ ન માર, હી કુંજલ વેધી દરિયા પાર
હારલો ઘડાય દે વીરા હારલો ઘડાય, દાણીએ જે જોડ તે કુંજ કે વીરાય
ન માર વીરા કુંજલ ન માર, હી કુંજલ વેધી દરિયા પાર
નથડી ઘડાય દે વીરા નથડી ઘડાય, ટીલડી જી જોડ તે કુંજ કે વીરાય
કુંજલ ન માર વીરા કુંજલ ન માર, હી કુંજલ વેધી દરિયા પાર
કુંજલ ન માર વીરા કુંજલ ન માર, હી કુંજલ વેધી દરિયા પાર
ಕನ್ನಡ
ಅಯ್ಯೋ
ಬೇಡ! ಕುಂಜಲ್ ಹಕ್ಕಿಯನ್ನು ಕೊಲ್ಲಬೇಡಿ, ಕುಂಜಲ್
ಕಡಲನ್ನು ದಾಟಿ ಹೋಗುತ್ತದೆ
ನನಗೆ
ಒಂದು ಜೋಡಿ ಕಡಾಲ ಮಾಡಿಕೊಡಿ, ಕಾಲಿಗೆ ಒಂದು ಜೊತೆ ಗೆಜ್ಜೆ ಮಾಡಿ ಕೊಡಿ,
ಮತ್ತೆ
ಪ್ರತಿಯೊಂದರ ಮೇಲೆ ಕುಂಜಲ್ ಹಕ್ಕಿಯ ಕೆತ್ತಿಸಿ
ಅಯ್ಯೋ
ಬೇಡ! ಕುಂಜಲ್ ಹಕ್ಕಿಯನ್ನು ಕೊಲ್ಲಬೇಡಿ, ಕುಂಜಲ್
ಕಡಲನ್ನು ದಾಟಿ ಹೋಗುತ್ತದೆ
ನನಗೊಂದು ಮುಥಿಯಾ
ಮಾಡಿಸಿಕೊಡಿ, ನನ್ನ ಬೆರಳಿಗೆ ಮುಥಿಯಾ ಮಾಡಿಸಿಕೊಡಿ
ಮತ್ತೆ ಬಳೆಗಳನ್ನು
ಮಾಡಿಸಿಕೊಡಿ ಅದರ ಮೇಲೆ ಕುಂಜಲ್ ಹಕ್ಕಿಯ ಚಿತ್ರವಿರಲಿ
ಅಯ್ಯೋ
ಬೇಡ! ಕುಂಜಲ್ ಹಕ್ಕಿಯನ್ನು ಕೊಲ್ಲಬೇಡಿ, ಕುಂಜಲ್
ಕಡಲನ್ನು ದಾಟಿ ಹೋಗುತ್ತದೆ
ನನಗೊಂದು ಹಾರ ಮಾಡಿಕೊಡಿ,
ನನಗೊಂದು ಕುತ್ತಿಗೆ ಹಾರ ಮಾಡಿ ಕೊಡಿ
ಅದರ ಮೇಲೆ ಕುಂಜಲ್
ಹಕ್ಕಿಯ ಜೋಡಿ ಚಿತ್ರವಿರಲಿ
ಅಯ್ಯೋ
ಬೇಡ! ಕುಂಜಲ್ ಹಕ್ಕಿಯನ್ನು ಕೊಲ್ಲಬೇಡಿ, ಕುಂಜಲ್
ಕಡಲನ್ನು ದಾಟಿ ಹೋಗುತ್ತದೆ
ನನಗೊಂದು ನಥಾನಿ
ಮಾಡಿಸಿ ಕೊಡಿ, ನನ್ನ ಮೂಗನ್ನು ಅಲಂಕರಿಸುವ ನಥಾನಿ
ಮತ್ತೆ ನನ್ನ ಹಣೆಯ
ಸಿಂಗರಿಸಲೊಂದು ತಿಲಾದಿ ಮಾಡಿ ಕೊಡಿ
ಅದರ ಮೇಲೆ ಜೋಡಿ
ಕುಂಜಲ್ ಹಕ್ಕಿಯ ಚಿತ್ರ ಕೆತ್ತಿಸಿ
ಅಯ್ಯೋ
ಬೇಡ! ಕುಂಜಲ್ ಹಕ್ಕಿಯನ್ನು ಕೊಲ್ಲಬೇಡಿ, ಕುಂಜಲ್
ಕಡಲನ್ನು ದಾಟಿ ಹೋಗುತ್ತದೆ
ಅಯ್ಯೋ
ಬೇಡ! ಕುಂಜಲ್ ಹಕ್ಕಿಯನ್ನು ಕೊಲ್ಲಬೇಡಿ, ಕುಂಜಲ್
ಕಡಲನ್ನು ದಾಟಿ ಹೋಗುತ್ತದೆ
ಹಾಡಿನ ಪ್ರಕಾರ: ಸಾಂಪ್ರದಾಯಿಕ ಜಾನಪದ ಹಾಡು
ವಿಭಾಗ: ಪ್ರೀತಿ ಮತ್ತು ಹಂಬಲದ ಹಾಡುಗಳು
ಹಾಡು: 12
ಹಾಡಿನ ಶೀರ್ಷಿಕೆ: ಕುಂಜಲ್ ನಾ ಮಾರ್ ವೀರ್ ಕುಂಜಲ್ ನಾ ಮಾರ್
ಸಂಗೀತ ಸಂಯೋಜನೆ : ದೇವಲ್ ಮೆಹ್ತಾ
ಗಾಯಕ ರು : ಮುಂದ್ರಾ ತಾಲ್ಲೂಕಿನ ಭದ್ರೇಸರ್ ಗ್ರಾಮದ ಜುಮಾ ವಘೇರ್
ಬಳಸ ಲಾಗಿರು ವ ವಾದ್ಯಗಳು: ಡ್ರಮ್, ಹಾರ್ಮೋನಿಯಂ, ಬಾಂಜೊ
ರೆಕಾರ್ಡಿಂಗ್ ಮಾಡಲಾದ ವರ್ಷ: 2012, ಕೆಎಂವಿಎಸ್ ಸ್ಟುಡಿಯೋ
ಸಮುದಾಯ ಚಾಲಿತ ರೇಡಿಯೋ ಸೂರ್ವಾಣಿ ರೆಕಾರ್ಡ್ ಮಾಡಿದ 341 ಹಾಡುಗಳು ಕಚ್ ಮಹಿಳಾ ವಿಕಾಸ್ ಸಂಘಟನೆ (ಕೆಎಂವಿಎಸ್) ಮೂಲಕ ಪರಿಗೆ ಬಂದಿವೆ. ಇನ್ನಷ್ಟು ಇಂತಹ ಹಾಡುಗಳಿಗಾಗಿ ಈ ಪುಟಕ್ಕೆ ಭೇಟಿ ನೀಡಿ: ರಣ್ ಪ್ರದೇಶದ ಹಾಡುಗಳು: ಕಚ್ಛೀ ಜಾನಪದ ಗೀತೆಗಳ ಸಂಗ್ರಹ
ಪ್ರೀತಿ ಸೋನಿ , ಕೆಎಂವಿಎಸ್ ಕಾರ್ಯದರ್ಶಿ ಅರುಣಾ ಧೋಲಾಕಿಯಾ , ಕೆಎಂವಿಎಸ್ ಯೋಜನಾ ಸಂಯೋಜಕ ಅಮದ್ ಸಮೇಜಾ ಮತ್ತು ಗುಜರಾತಿ ಅನುವಾದದ ಅಮೂಲ್ಯ ಸಹಾಯಕ್ಕಾಗಿ ಭಾರತಿಬೆನ್ ಗೋರ್ ಅವರಿಗೆ ವಿಶೇಷ ಧನ್ಯವಾದಗಳು.
ಅನುವಾದ: ಶಂಕರ. ಎನ್. ಕೆಂಚನೂರು