ಅದು 1997ನೇ ಇಸವಿ
ಹಿರಿಯ ಮಹಿಳಾ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ ಶಿಪ್‌ನ ಅಂತಿಮ ಪಂದ್ಯದಲ್ಲಿ ಪಶ್ಚಿಮ ಬಂಗಾಳ ಮತ್ತು ಮಣಿಪುರ ತಂಡಗಳು ಪರಸ್ಪರ ಮುಖಾಮುಖಿಯಾಗಿದ್ದವು. ಈ ವಾರ್ಷಿಕ ಅಂತರರಾಜ್ಯ ಪಂದ್ಯಾವಳಿಯಲ್ಲಿ ಮಣಿಪುರದೆದುರು ಕಳೆದ ಮೂರು ಫೈನಲ್ ಪಂದ್ಯಗಳಲ್ಲಿ ಬಂಗಾಳ ಸೋತಿತ್ತು, ಆದರೆ ಈ ಬಾರಿ ಆ ತಂಡವು ತಮ್ಮ ಹಳದಿ ಮತ್ತು ಮರೂನ್ ಜರ್ಸಿಗಳಲ್ಲಿ ದೈತ್ಯರಾಗಿ ನಿಂತಿದ್ದರು. ಪಶ್ಚಿಮ ಬಂಗಾಳದ ಹಲ್ದಿಯಾ ನಗರದ ದುರ್ಗಾಚಕ್ ಕ್ರೀಡಾಂಗಣದಲ್ಲಿ ಫುಟ್ಬಾಲ್ ಆಟಗಾರರಾದ ಬಂದನಾ ಪೌಲ್ ತಮ್ಮ ತವರಿನ ಅಂಗಳದಲ್ಲಿದ್ದರು.
ಸಿಳ್ಳೆ ಊದುವುದರೊಂದಿಗೆ ಪಂದ್ಯಾಟ ಆರಂಭಗೊಂಡಿತು.
ಇದಕ್ಕೂ ಮುನ್ನ, 16 ವರ್ಷದ ಸ್ಟ್ರೈಕರ್ ಈ ಚಾಂಪಿಯನ್‌ಶಿಪ್‌ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಆ ಪಂದ್ಯದಲ್ಲಿ ಪಶ್ಚಿಮ ಬಂಗಾಳವು ಗೋವಾ ವಿರುದ್ಧ ಗೆದ್ದಿತ್ತು, ಆದರೆ ಅದು ಪಾಲ್ ಅವರನ್ನು ಎಡಗಾಲಿನ ಗಾಯದಿಂದ ಬಳಲುವಂತೆ ಮಾಡಿತು: "ಆದರೂ ನಾನು [ಪಂಜಾಬ್ ವಿರುದ್ಧ] ಸೆಮಿಫೈನಲ್ಲಿನಲ್ಲಿ ಆಡಿದ್ದೆ ಆದರೆ ನಾನು ನೋವಿನಿಂದ ಬಳಲುತ್ತಿದ್ದೆ. ಆ ದಿನ ನಾವು ಫೈನಲ್ ತಲುಪಿದಾಗ, ನನಗೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ."
ಪಶ್ಚಿಮ ಬಂಗಾಳದ ಅತ್ಯಂತ ಕಿರಿಯ ಆಟಗಾರರಾದ ಪಾಲ್, ಅಂದು ಚಾಂಪಿಯನ್ ಶಿಪ್ ಫೈನಲ್ ಪಂದ್ಯವನ್ನು ಬೆಂಚ್ ಮೂಲಕ ವೀಕ್ಷಿಸಿದರು.
ಪಂದ್ಯದ ಕೆಲವು ನಿಮಿಷಗಳು ಬಾಕಿ ಉಳಿದಿದ್ದವು ಮತ್ತು ಎರಡೂ ತಂಡಗಳು ಗೋಲು ಗಳಿಸಲಿಲ್ಲ. ಪಶ್ಚಿಮ ಬಂಗಾಳದ ತರಬೇತುದಾರ ಶಾಂತಿ ಮಲ್ಲಿಕ್ ಈ ಬೆಳವಣಿಗೆಯಿಂದ ಬೇಸರಗೊಂಡಿದ್ದರು. ಅಂದಿನ ಪಂದ್ಯಾಟಕ್ಕೆ 12,000 ಆಸನಗಳ ಕ್ರೀಡಾಂಗಣದಲ್ಲಿ ನೆರೆದಿದ್ದ ಪ್ರೇಕ್ಷಕರಲ್ಲಿ ರಾಜ್ಯದ ಮುಖ್ಯಮಂತ್ರಿ ಮತ್ತು ಕ್ರೀಡಾ ಸಚಿವರು ಸೇರಿದ್ದರು. ಮಲ್ಲಿಕ್ ಪಾಲ್ ಬಳಿ ಪಂದ್ಯಕ್ಕೆ ಸಿದ್ಧಗೊಳ್ಳುವಂತೆ ಹೇಳಿದರು. "ನನ್ನ ಸ್ಥಿತಿಯನ್ನು ನೋಡಿ' ಎಂದು ನಾನು ಅವರಿಗೆ ಹೇಳಿದೆ. ಆದರೆ ತರಬೇತುದಾರ್ತಿ ಹೇಳಿದರು, 'ನೀನು ಎದ್ದು ಆಡಿದರೆ ಒಂದು ಗೋಲ್ ಬರುತ್ತೆ ಅಂರ ನನ್ನ ಮನಸ್ಸು ಹೇಳ್ತಿದೆ' ಎಂದು ಅವರು ಹುರಿದುಂಬಿಸಿದರು,” ಎಂದು ಪಾಲ್ ಹೇಳುತ್ತಾರೆ.
ಆಗ ಬೇಗನೆ ನೋವು ಕಡಿಮೆ ಮಾಡಬಲ್ಲಂತಹ ಎರಡು ಚುಚ್ಚುಮದ್ದುಗಳನ್ನು ನೀಡಲಾಯಿತು. ನಂತರ ಕಾಲಿಗೆ ಕ್ರೇಪ್ ಬ್ಯಾಂಡೇಜ್ ಕಟ್ಟಿಕೊಂಡು ತಮ್ಮ ಪರಿಕರಗಳೊಡನೆ ಪಾಲ್ ಆಡಲು ಸಿದ್ಧರಾಗಿ ಕಾಯತೊಡಗಿದರು. ಪಂದ್ಯವನ್ನು ಡ್ರಾ ಮಾಡಲಾಯಿತು ಮತ್ತು ಯಾವ ತಂಡ ಮೊದಲು ಗೋಲ್ ಹೊಡೆಯುತ್ತದೆಯೋ ಅದನ್ನು ಚಾಂಪಿಯನ್ ಎಂದು ಘೋಷಿಸಲಾಗುವ ಹೆಚ್ಚುವರಿ ಸಮಯದ ಆಟವಾದ ಗೋಲ್ಡನ್ ಗೋಲ್ ಸಮಯವನ್ನು ನಿದಿಪಡಿಸಲಾಯಿತು.
“ನಾನು ಕ್ರಾಸ್ ಬಾರ್ ಕಡೆ ಗುರಿಯಿಟ್ಟೆ, ಮತ್ತು ಚೆಂಡು ಬಲದಿಕ್ಕಿನತ್ತ ತಿರುಗಿತು. ಆಗ ಕೀಪರ್ ಜಿಗಿದಳಾದರೂ ಚೆಂಡು ಅವಳನ್ನು ದಾಟಿಕೊಂಡು ನೆಟ್ ಕಡೆ ಪುಟಿಯಿತು.”





















