ಅವರು ಮೊದಲಿಗೆ ತಾನು ಅಂಗಡಿಯ ಮಾಲಿಕನಲ್ಲ ಎಂದು ಹೇಳಿದರು, ಕೇವಲ ಅಂಗಡಿ ಮಾಲಿಕನ ಸ್ನೇಹಿತ ತಾನು ಎಂದರು. ನಂತರ ತನ್ನನ್ನು ತಾನು “ಮಾಲಿಕರ ಸ್ನೇಹಿತನನ್ನಾಗಿ” ಪರಿಚಯಿಸಿಕೊಂಡರು. ಮತ್ತು ಅದಾದ ಸ್ವಲ್ಪ ಹೊತ್ತಿನ ನಂತರ ಆತ “ಆ ಅಂಗಡಿಯಲ್ಲಿ ಕೆಲಸ ಮಾಡುವ ಮಾಲಿಕರ ಸ್ನೇಹಿತ” ಆದರು. ಬಹುಶಃ ನಾವು ಈ ಪ್ರಶ್ನೆಯನ್ನು ಇನ್ನಷ್ಟು ಹಿಗ್ಗಿಸಿದಿದ್ದರೆ ಅವರು ಅಂಗಡಿಯ ಮಾಲಿಕರೂ ಆಗಿಯೇಬಿಡುತ್ತಿದ್ದರೇನೋ.
ಅವರ ಫೋಟೊ ತೆಗೆಸಿಕೊಳ್ಳಲು ಅವರು ಒಪ್ಪಲಿಲ್ಲ. ಅಂಗಡಿಯ ಒಳಗೆ ಫೋಟೊ ತೆಗೆಯುವುದಕ್ಕೂ ಅವರಿಗೆ ಒಪ್ಪಿಗೆಯಿರಲಿಲ್ಲ. ಆದರೂ, ಹೊರಗೆ ಹಾಕಲಾಗಿದ್ದ ಬೋರ್ಡಿನ ಫೋಟೊ ತೆಗೆಯಲು ಅವರಿಗೆ ಒಪ್ಪಿಗೆಯಿತ್ತು.
ಅಂಗಡಿಯಿಂದ ಒಂದಷ್ಟು ದೂರದಲ್ಲಿ – ವಿದೇಶಿ ಶರಾಬ್ ದುಕಾನ್, (ವಿದೇಶಿ ಸಾರಾಬು ಅಂಗಡಿ) ಲೆಸೆನ್ಸ್: ರಮೇಶ್ ಪ್ರಸಾದ್, ಎಂದು ಬರೆಯಲಾಗಿದ್ದ ಬೋರ್ಡ್ ಇತ್ತು. ಈ ಅಂಗಡಿಯು ಈಗಿನ ಛತ್ತೀಸಗಢದ (ಆಗಿನ ಮಧ್ಯಪ್ರದೇಶ ರಾಜ್ಯದಲ್ಲಿ) ಸುರ್ಗುಜಾ ಜಿಲ್ಲೆಯ ಕಟ್ಘೋರಾ ಪಟ್ಟಣದ ತುದಿಯಲ್ಲಿತ್ತು. ಆದರೆ ನಮ್ಮೊಡನೆ ಕ್ಷಣಕ್ಷಣಕ್ಕೂ ಪರಿಚಯ ಬದಲಿಸಿಕೊಳ್ಳುತ್ತಿದ್ದ ವ್ಯಕ್ತಿ ರಮೇಶ್ ಪ್ರಸಾದ್ ಆಗಿರಲಿಲ್ಲ. ಈ ವ್ಯಕ್ತಿಗೆ ಈ ವಿದೇಶಿ ಮದ್ಯದಂಗಡಿಯೊಡನೆ ಇರುವ ಸಂಬಂಧವೆಂದರ ಆತ ಇಲ್ಲಿನ ಗ್ರಾಹಕ ಮಾತ್ರವೆನ್ನುವ ನಂಬಿಕೆ ನಮಗೆ ಬರತೊಡಗಿತು.
ಅದು ನಿಜವಾಗಿಯು ವಿದೇಶಿ ಮದ್ಯವಾಗಿತ್ತೆ? ಹಾಗೆ ನೋಡಿದರೆ ಅಲ್ಲ. ಐಎಮ್‌ಎಫ್‌ಎಲ್ ಎನ್ನುವ ಪದವನ್ನು ನಾನು ಕೊನೆಯ ಬಾರಿ ಯಾವಾಗ ಕೇಳಿದ್ದೆನ್ನುವುದು ನನಗೂ ನೆನಪಿಲ್ಲ. ಇದರ ಅರ್ಥ ಇಂಡಿಯನ್ ಮೇಡ್ ಫಾರಿನ್ ಲಿಕ್ಕರ್. (ಭಾರತದಲ್ಲಿ ಉತ್ಪಾದಿಸಲಾದ ವಿದೇಶಿ ಮದ್ಯ) 1994ರಲ್ಲಿ ಈ ಚಿತ್ರ ತೆಗೆದುಕೊಂಡ ಸಮಯದಲ್ಲಿ ಐಎಂಎಫ್ ಎಲ್ ಮತ್ತು ದೇಸಿ ಮದ್ಯದ ಬಗ್ಗೆ ತೀವ್ರ ಚರ್ಚೆ ನಡೆಯುತ್ತಿತ್ತು.
ಲಾ ಇನ್ ಸೈಡರ್ ವೆಬ್ ಸೈಟ್ ಮೂಲಕ ನಾನು ತಿಳಿದಂತೆ, "ವಿದೇಶಗಳಿಂದ ಆಮದು ಮಾಡಿಕೊಳ್ಳಲಾದ ಜಿನ್, ಬ್ರಾಂಡಿ, ವಿಸ್ಕಿ ಅಥವಾ ರಮ್‌ನ ವಿಧಾನದ ನಂತರ ಭಾರತದಲ್ಲಿ ಉತ್ಪಾದಿಸಲಾದ, ತಯಾರಿಸಿದ ಅಥವಾ ಸಂಯುಕ್ತಗೊಳಿಸಿದ ಮದ್ಯ ಎಂದರ್ಥ ಮತ್ತು ಅಂತಹ ಯಾವುದೇ ಸ್ಪಿರಿಟ್‌ಗಳನ್ನು ಒಳಗೊಂಡ ಅಥವಾ ಒಳಗೊಂಡಿರುವ ಮಿಲ್ಕ್ ಪಂಚ್ ಮತ್ತು ಇತರ ಮದ್ಯಗಳನ್ನು ಒಳಗೊಂಡಿದೆ, ಆದರೆ ಬಿಯರ್, ವೈನ್ ಮತ್ತು ವಿದೇಶಿ ಮದ್ಯವನ್ನು ಒಳಗೊಂಡಿಲ್ಲ." ಗಮನಿಸಿ ಇದು "ಬಿಯರ್, ವೈನ್ ಮತ್ತು ವಿದೇಶಿಮದ್ಯ"ವನ್ನು ತನ್ನ ಪಟ್ಟಿಯಿಂದ ಹೊರಗಿಡುತ್ತದೆ.
ಐಎಂಎಫ್ಎಲ್ ಆಮದು ಮಾಡಿದ ಮದ್ಯ ಮತ್ತು ಕಡ್ಡಾಯ ದೇಶೀಯ ಘಟಕ (ಬಹುಶಃ ಕಾಕಂಬಿ ಅಥವಾ ಬಹುಶಃ ಆಮದು ಮಾಡಿದ ವಸ್ತುಗಳ ಸ್ಥಳೀಯ ಮಿಶ್ರಣ ಅಥವಾ ಬಾಟ್ಲಿಂಗ್) ಎರಡನ್ನೂ ಒಳಗೊಂಡಿದೆ. ಈ ಕುರಿತು ಹೆಚ್ಚಿನ ಮಾಹಿತಿ ನಮಗೆ ನಿಜವಾಗಿಯೂ ತಿಳಿದಿಲ್ಲ.



