"ರೇ ರೇಲಾ ರೇ ರೇಲಾ ರೇ ರೇಲಾ" ಎಂದು ಹಾಡುತ್ತಾ ನರ್ತಿಸುತ್ತಿದ್ದ ಅವರ ಹೆಜ್ಜೆಗಳಲ್ಲಿ ಒಂದು ಅದ್ಭುತ ಲಯ ಮತ್ತು ಚುರುಕುತನವಿತ್ತು. ಮೊಣಕಾಲುದ್ದದ ಸೀರೆಯುಟ್ಟು ಬಿಳಿ ಸೀರೆಯುಟ್ಟು ತಲೆಗೆ ಮುಂಡಾಸು ಕಟ್ಟಿಕೊಂಡಿದ್ದ ಮೂವರು ಯುವತಿಯರ ಗುಂಪು ಒಟ್ಟಿಗೆ ಹೆಗಲ ಮೇಲೆ ಕೈ ಹಾಕಿಕೊಂಡು ವರ್ತುಲಾಕಾರದಲ್ಲಿ ನರ್ತಿಸುತ್ತಾ, ಗೊಂಡ್‌ ಸಮುದಾಯಗಳಲ್ಲಿ ಜನಪ್ರಿಯವಾಗಿರುವ ರೇಲಾ ಹಾಡುಗಳನ್ನು ಹಾಡುತ್ತಿದ್ದರು.

ಕೆಲವೇ ಕ್ಷಣಗಳಲ್ಲಿ ಯುವತಿಯರಂತೆಯೇ ಬಿಳಿ ಬಣ್ಣದ ಉಡುಗೆ ತೊಟ್ಟಿದ್ದ ಯುವಕರ ಗುಂಪೊಂದು ತಲೆಗೆ ಕಟ್ಟಿದ್ದ ಮುಂಡಾಸಿನಲ್ಲಿ ಬಣ್ಣ ಬಣ್ಣದ ಆಕರ್ಷಕ ಹಕ್ಕಿ ಗರಿಗಳನ್ನು ಕಟ್ಟಿಕೊಂಡು ಅವರನ್ನು ಕೂಡಿಕೊಂಡರು. ಆ ಯುವಕರು ತಮ್ಮ ಕೈಯಲ್ಲಿದ್ದ ಡೋಲನ್ನು (ಮಂಡ್ರಿ) ಬಾರಿಸುತ್ತಾ ರೇಲಾ ಹಾಡು ಹಾಡುತ್ತಾ ಕುಣಿಯುತ್ತಿದ್ದರೆ ಅವರ ಕಾಲಿಗೆ ಕಟ್ಟಿದ್ದ ಗೆಜ್ಜೆಯು ಅವರ ಸಂಕೀರ್ಣ ಹೆಜ್ಜೆಗಳಿಗೆ ತಕ್ಕಂತೆ ಸದ್ದು ಹೊರಡಿಸುತ್ತಿತ್ತು. ತಮ್ಮ ತೋಳನ್ನು ಪರಸ್ಪರ ಬಳಸುತ್ತಾ ಆ ಯುವಕರ ಸುತ್ತ ವೃತ್ತಾಕಾರದಲ್ಲಿ ಕುಣಿಯತೊಡಗಿದರು. ನಂತರ ಅವರೆಲ್ಲ ಸೇರಿ ಹಾಡಿ ಕುಣಿಯತೊಡಗಿದರು.

ಈ 16ರಿಂದ 30 ವರ್ಷದೊಳಗಿನ ಗೊಂಡ್ ಸಮುದಾಯದ 43 ಪುರುಷರು ಮತ್ತು ಮಹಿಳೆಯರ ಗುಂಪಿನಲ್ಲಿದ್ದ ಎಲ್ಲರೂ ಛತ್ತೀಸ್‌ಗಢದ ಕೊಂಡಗಾಂವ್ ಜಿಲ್ಲೆಯ ಕೆಸ್ಕಲ್ ಬ್ಲಾಕ್‌ನಲ್ಲಿರುವ ಬೆಡ್‌ಮರಿ ಗ್ರಾಮದಿಂದ ಬಂದವರು.

ರಾಜ್ಯದ ರಾಜಧಾನಿಯಾದ ರಾಯ್‌ಪುರದಿಂದ ಸುಮಾರು 100 ಕಿಲೋಮೀಟರ್ ದೂರದಲ್ಲಿರುವ ರಾಯ್‌ಪುರ-ಜಗದಾಲ್‌ಪುರ ಹೆದ್ದಾರಿಗೆ (ಬಸ್ತಾರ್ ಪ್ರದೇಶದಲ್ಲಿ) ಹತ್ತಿರವಿರುವ ಈ ಸ್ಥಳವನ್ನು ತಲುಪಲು ಅವರು ವ್ಯಾನ್‌ನಲ್ಲಿ 300 ಕಿಲೋಮೀಟರ್‌ಗಿಂತಲೂ ಹೆಚ್ಚು ದೂರ ಪ್ರಯಾಣಿಸಿದ್ದರು. ಮಧ್ಯ ಭಾರತದ ಆದಿವಾಸಿ ಸಮುದಾಯಗಳಿಂದ ಬಂದ ಮತ್ತು ವಿಶೇಷವಾಗಿ ಛತ್ತೀಸ್‌ಗಢದ ಇತರ ನರ್ತಕರು ಬಂದು ಸೇರಿದ್ದರು. ಇಲ್ಲಿ 2015ರ ಡಿಸೆಂಬರ್ 10ರಿಂದ 12ರವರೆಗೆಮೂರು ದಿನಗಳ ವೀರ್ ಮೇಳ ಆಚರಿಸಲಾಯಿತು, ಛತ್ತೀಸ್‌ಗಢದ ಬಲೋದಬಜಾರ್-ಭಟಾಪರಾ ಜಿಲ್ಲೆಯ ಸೋನಾಖಾನ್‌ನ ಬುಡಕಟ್ಟು ರಾಜ ವೀರ್ ನಾರಾಯಣ್ ಸಿಂಗ್ ಅವರ ತ್ಯಾಗದ ನೆನಪಿಗಾಗಿ ಈ ಆಚರಣೆಯನ್ನು ನಡೆಸಲಾಗುತ್ತದೆ. ಬ್ರಿಟಿಷ್ ಆಡಳಿತದ ವಿರುದ್ಧ ದಂಗೆ ಎದ್ದಿದ್ದ ರಾಜನನ್ನು 1857ರ ಡಿಸೆಂಬರ್‌ನಲ್ಲಿ ವಸಾಹತುಶಾಹಿ ಆಡಳಿತಗಾರರು ರಾಯ್‌ಪುರ ಜಿಲ್ಲೆಯ ಜೈಸ್ತಂಬ್ ಚೌಕ್‌ನಲ್ಲಿ ಸೆರೆಹಿಡಿದು ಗಲ್ಲಿಗೇರಿಸಲಾಗಿತ್ತು. ಸ್ಥಳೀಯರು ಹೇಳುವ ಪ್ರಕಾರ ನೇಣು ಹಾಕಿದ ನಂತರ ರಾಜನ ದೇಹವನ್ನು ಸ್ಫೋಟಿಸಲಾಗಿತ್ತು.

ವಿಡಿಯೋ ನೋಡಿ: ಬಸ್ತಾರ್‌ನಲ್ಲಿ, ಹಲ್ಕಿ ಮಾಂಡ್ರಿ, ರೇಲಾ ಮತ್ತು ಕೊಲಾಂಗ್ ನೃತ್ಯ ಗಾಯನ ಪ್ರದರ್ಶನ

ಉತ್ಸವ ನಡೆಯುವ ಸ್ಥಳವಾದ ರಾಜರಾವ್ ಪಥಾರ್ ಅನ್ನು ಗೊಂಡ್ ಆದಿವಾಸಿಗಳ ಪೂರ್ವಜ ದೇವರಿಗೆ ಅರ್ಪಿತವಾದ ದೇವಸ್ಥಾನ್ (ಪವಿತ್ರ ಪೂಜಾ ಸ್ಥಳ) ಎಂದು ಪರಿಗಣಿಸಲಾಗಿದೆ. ಮೂರು ದಿನಗಳ ಸಮಾರಂಭ ಹಾಡುಗಳು ಮತ್ತು ನೃತ್ಯಗಳಿಂದ ಕೂಡಿರುತ್ತದೆ.

"ರೇಲಾ [ಅಥವಾ ರಿಲೋ ಅಥವಾ ರೆಲೊ] ನಮ್ಮ ಸಮುದಾಯವನ್ನು ಒಂದುಗೂಡಿಸುತ್ತದೆ" ಎಂದು ಸರ್ವಾ ಆದಿವಾಸಿ ಜಿಲ್ಲಾ ಕೋಶದ ಅಧ್ಯಕ್ಷ ಪ್ರೇಮ್‌ಲಾಲ್ ಕುಂಜಮ್ ಹೇಳುತ್ತಾರೆ. “ಹಾರದಲ್ಲಿನ ಹೂವುಗಳಂತೆ, ಜನರು ಇಲ್ಲಿ ಒಂದಾಗಿ ನೃತ್ಯ ಮಾಡುತ್ತಾರೆ, ಒಬ್ಬರಿಗೊಬ್ಬರು ಕೈ ಜೋಡಿಸುತ್ತಾರೆ. ಈ ನೃತ್ಯದಲ್ಲಿ ಶಕ್ತಿ ಮತ್ತು ಉತ್ಸಾಹದ ಭಾವನೆ ತುಂಬಿರುತ್ತದೆ.” ರೇಲಾ ಹಾಡುಗಳ ಲಯ ಮತ್ತು ಸಾಹಿತ್ಯವು ಗೊಂಡ್ವಾನ ಸಂಸ್ಕೃತಿಯನ್ನು ಪ್ರತಿನಿಧಿಸುತ್ತದೆ (ಗೊಂಡ್ ಸಮುದಾಯದ ಸಂಪ್ರದಾಯಗಳು) ಎಂದು ಅವರು ವಿವರಿಸುತ್ತಾರೆ. "ಈ ಹಾಡುಗಳ ಮೂಲಕ, ನಮ್ಮ ಗೊಂಡ್ ಸಂಸ್ಕೃತಿಯ ಸಂದೇಶವನ್ನು ನಮ್ಮ ಹೊಸ ಪೀಳಿಗೆಗೆ ತಲುಪಿಸುತ್ತೇವೆ" ಎಂದು ಪ್ರೇಮ್‌ಲಾಲ್ ಹೇಳುತ್ತಾರೆ.

"ರೇಲಾ ಎನ್ನುವುದು ದೇವರ ಒಂದು ರೂಪ" ಎಂದು ಬಲೋಡ್ ಜಿಲ್ಲೆಯ ಬಲೋಡ್ಗಾ ಗ್ರಾಮದ ದೌಲತ್ ಮಾಂಡವಿ ಹೇಳುತ್ತಾರೆ. “ನಮ್ಮ ಆದಿವಾಸಿ ಸಂಪ್ರದಾಯದ ಪ್ರಕಾರ, ದೇವತೆಗಳ ಗಮನ ಸೆಳೆಯಲು ಈ ಹಾಡನ್ನು ಹಾಡಲಾಗುತ್ತದೆ. ನೀವು ನೋವಿನಿಂದ ಬಳಲುತ್ತಿದ್ದರೆ ಅಥವಾ ನಿಮ್ಮ ದೇಹದಲ್ಲಿ ಬೇರೆ ಯಾವುದೇ ಸಮಸ್ಯೆ ಇದ್ದರೆ, ನೀವು ರೇಲಾ ಹಾಡಿಗೆ ನೃತ್ಯ ಮಾಡಿದರೆ ಅದು ಕಣ್ಮರೆಯಾಗುತ್ತದೆ. ಈ ಹಾಡುಗಳನ್ನು ಆದಿವಾಸಿ ಸಮುದಾಯಗಳ ವಿವಾಹ ಮತ್ತು ಇತರ ಸಂದರ್ಭಗಳಲ್ಲಿ  ಪ್ರದರ್ಶಿಸಲಾಗುತ್ತದೆ.”

ಡಿಸೆಂಬರ್‌ನಲ್ಲಿ ನಡೆದ ವೀರ್ ಜಾತ್ರೆಯಲ್ಲಿ ಭಾಗವಹಿಸಿದ ಕಿರಿಯರಲ್ಲಿ ಒಬ್ಬಳಾದ ಎಂದು 8ನೇ ತರಗತಿ ವಿದ್ಯಾರ್ಥಿ ಸುಖರಿಯನ್ ಕವಾಡೆ "ನನಗೆ ರೈಲಾ ತುಂಬಾ ಇಷ್ಟ. ಇದು ನಮ್ಮ ಸಂಸ್ಕೃತಿಯ ಒಂದು ಭಾಗವಾಗಿದೆ." ಎನ್ನುತ್ತಾಳೆ. ಈ ತಂಡದೊಡನೆ ಬಂದ ಕಾರಣ ಹಲವು ಸ್ಥಳಗಳನ್ನು ನೋಡಲು ಸಾಧ್ಯವಾಗಿದ್ದಕ್ಕಾಗಿ ಅವಳು ಸಂಭ್ರಮದಲ್ಲಿದ್ದಳು.

ಬೇಡ್‌ಮಾಮರಿ ಗ್ರಾಮದ ಗುಂಪು ರೈಲಾ ಹಾಡುಗಳೊಂದಿಗೆ ಪ್ರದರ್ಶನ ಪ್ರಾರಂಭಿಸಿ ಮತ್ತು ಹಲ್ಕಿ ಮಂದಾರಿ ಮತ್ತು ಕೋಲಾಂಗ್ ನೃತ್ಯವನ್ನು ಪ್ರದರ್ಶಿಸಿತು.

'The Mandri is traditionally performed during Hareli and goes on till around Diwali', says Dilip Kureti, an Adivasi college student.
PHOTO • Purusottam Thakur
'The Mandri is traditionally performed during Hareli and goes on till around Diwali', says Dilip Kureti, an Adivasi college student.
PHOTO • Purusottam Thakur

'ಮಂಡ್ರಿಯ ಪ್ರದರ್ಶನ ಸಾಂಪ್ರದಾಯಿಕವಾಗಿ ಹರೇಲಿಯ ಸಮಯದಲ್ಲಿ ಪ್ರಾರಂಭವಾಗಿ ದೀಪಾವಳಿಯವರೆಗೆ ನಡೆಯುತ್ತದೆ' ಎಂದು ಆದಿವಾಸಿ ಕಾಲೇಜು ವಿದ್ಯಾರ್ಥಿ ದಿಲೀಪ್ ಕುರೆತಿ ಹೇಳುತ್ತಾರೆ

"ಮಂಡರಿಯನ್ನು ಸಾಂಪ್ರದಾಯಿಕವಾಗಿ ಹರೇಲಿಯ ಸಮಯದಲ್ಲಿ ಪ್ರದರ್ಶಿಸಲಾಗುತ್ತದೆ [ಬೀಜಗಳು ಮೊಳಕೆಯೊಡೆಯುವ ಸಮಯದಲ್ಲಿ ಹಬ್ಬವು ಪ್ರಾರಂಭವಾಗುತ್ತದೆ ಮತ್ತು ಖಾರಿಫ್ ಋತುವಿನಲ್ಲಿ ಅವು ಬೆಳೆದು ಸಸ್ಯಗಳಾಗಿ ಹೊಲಗಳು ಹಸಿರು ಬಣ್ಣಕ್ಕೆ ತಿರುಗುತ್ತವೆ ಮತ್ತು ಈ ನೃತ್ಯವನ್ನು ದೀಪಾವಳಿಯವರೆಗೆ ಆಚರಿಸಲಾಗುತ್ತದೆ]" ಎಂದು ಬುಡಕಟ್ಟು ಸಮುದಾಯದವರಾದ ಕಾಲೇಜು ವಿದ್ಯಾರ್ಥಿ ದಿಲೀಪ್ ಕುರತಿ ಹೇಳುತ್ತಾರೆ. ಈ ಅವಧಿಯಲ್ಲಿ, ದೊಡ್ಡ ಡೋಲು (ಮಂದಾರ್) ಹಿಡಿದಿರುವ ಪುರುಷರು ಮತ್ತು ತಾಳಗಳೊಡನೆ ಮಹಿಳೆಯರು ಒಟ್ಟಿಗೆ ನೃತ್ಯ ಮಾಡುತ್ತಾರೆ.

ಚಳಿಗಾಲದ ಅವಧಿಯಲ್ಲಿ ಪುಸ್ ಕೊಲಾಂಗ್ ಅನ್ನು ಆಚರಿಸಲಾಗುತ್ತದೆ, ಇದು ಡಿಸೆಂಬರ್ ಅಂತ್ಯದಲ್ಲಿ ಪ್ರಾರಂಭವಾಗಿ ಜನವರಿ ಮಧ್ಯದವರೆಗೂ ಮುಂದುವರೆಯುತ್ತದೆ (ಚಾಂದ್ರಮಾನ ಪಂಚಾಂಗದ ಪುಸ್ ಅಥವಾ ಪೌಶ್ ತಿಂಗಳು). ಈ ಸಮಯದಲ್ಲಿ ಗೊಂಡ್ ಸಮುದಾಯದ ಯುವಕರು ಕೊಲಾಂಗ್ ನೃತ್ಯವನ್ನು ರೇಲಾ ಹಾಡುಗಳಿಗೆ ತಕ್ಕಂತೆ ಕುಣಿಯುತ್ತಾರೆ. ‌ನೃತ್ಯದ ಪ್ರದರ್ಶನಕ್ಕಾಗಿ ನೆರೆಯ ಹಳ್ಳಿಗಳಿಗೂ ಪ್ರಯಾಣಿಸುತ್ತಾರೆ - ಇದು ಧವಾಯಿ (ವುಡ್‌ಫೋರ್ಡಿಯಾ ಫ್ರೂಟಿಕೊಸಾ)ಮರದ ಕೋಲುಗಳನ್ನು ಬಳಸಿ ವಿಶೇಷವಾಗಿ ತಯಾರಿಸಿದ ಕೋಲುಗಳಿಂದ ಪ್ರದರ್ಶಿಸುವ ಶಕ್ತಿಯುತವಾದ ಅಥ್ಲೆಟಿಕ್ ನೃತ್ಯ.

"ಪುಸ್‌ ಕೊಲಾಂಗ್‌ ಸಮಯದಲ್ಲಿ ಅಗತ್ಯ ಪಡಿತರ ಸಾಮಾಗ್ರಿಗಳನ್ನು [ಇತರ ಹಳ್ಳಿಗಳಿಗೆ ಹೋಗುವಾಗ] ಕೊಂಡು ಹೋಗುತ್ತೇವೆ. ನಮ್ಮ ಮಧ್ಯಾಹ್ನದ ಊಟವನ್ನು ನಾವೇ ಅಡುಗೆ ಮಾಡಿಕೊಳ್ಳುತ್ತೇವೆ. ರಾತ್ರಿಯ ಊಟದ ವ್ಯವಸ್ಥೆಯನ್ನು ಕಾರ್ಯಕ್ರಮ ನಡೆಯುವ ಹಳ್ಳಿಯವರು ವ್ಯವಸ್ಥೆ ಮಾಡುತ್ತಾರೆ." ಎಂದು ಬೇಡ್‌ಮಾಮರಿಯ ತಂಡದ ಹಿರಿಯ ನಾಯಕ ಸೋಮರು ಕೊರ್ರಾಮ್ ಹೇಳುತ್ತಾರೆ.

ಪೌಶ್ ತಿಂಗಳ ಹುಣ್ಣಿಮೆಯ ಚಂದ್ರ ರಾತ್ರಿಯ ಆಕಾಶವನ್ನು ಬೆಳಗಿಸುವ ಮುನ್ನ ಪ್ರಯಾಣದಲ್ಲಿರುವ ತಂಡಗಳು ತಮ್ಮ ಗ್ರಾಮಗಳಿಗೆ ಮರಳಿದಾಗ ಹಬ್ಬ ಮತ್ತು ನೃತ್ಯಗಳು ಮುಕ್ತಾಯಗೊಳ್ಳುತ್ತವೆ.

The Pus Kolang is celebrated during the winter season, going into mid-January (the Pus or Poush month in the lunar calendar
PHOTO • Purusottam Thakur
The Pus Kolang is celebrated during the winter season, going into mid-January (the Pus or Poush month in the lunar calendar
PHOTO • Purusottam Thakur

ಪುಸ್ ಕೊಲಾಂಗ್ ಆಚರಣೆ ಡಿಸೆಂಬರ್ ಅಂತ್ಯದಲ್ಲಿ ಪ್ರಾರಂಭವಾಗಿ ಜನವರಿ ತಿಂಗಳ ಮಧ್ಯದವರೆಗೂ ಮುಂದುವರೆಯುತ್ತದೆ. (ಚಾಂದ್ರಮಾನ ಪಂಚಾಂಗದ ಪುಸ್ ಅಥವಾ ಪೌಶ್ ತಿಂಗಳು)

ಅನುವಾದ: ಶಂಕರ ಎನ್. ಕೆಂಚನೂರು

Purusottam Thakur

ਪੁਰਸ਼ੋਤਮ ਠਾਕੁਰ 2015 ਤੋਂ ਪਾਰੀ ਫੈਲੋ ਹਨ। ਉਹ ਪੱਤਰਕਾਰ ਤੇ ਡਾਕਿਊਮੈਂਟਰੀ ਮੇਕਰ ਹਨ। ਮੌਜੂਦਾ ਸਮੇਂ, ਉਹ ਅਜ਼ੀਮ ਪ੍ਰੇਮਜੀ ਫਾਊਂਡੇਸ਼ਨ ਨਾਲ਼ ਜੁੜ ਕੇ ਕੰਮ ਕਰ ਰਹੇ ਹਨ ਤੇ ਸਮਾਜਿਕ ਬਦਲਾਅ ਦੇ ਮੁੱਦਿਆਂ 'ਤੇ ਕਹਾਣੀਆਂ ਲਿਖ ਰਹੇ ਹਨ।

Other stories by Purusottam Thakur
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru