“ಇದು ನನ್ನ ಉಪಕರಣವಲ್ಲ” ತನ್ನ ಪತ್ನಿ ಬಾಬುದಿ ಭೋಪಿ ಅವರೊಂದಿಗೆ ಸೇರಿ ತಯಾರಿಸಿದ್ದ ರಾವಣಹತ್ತವೊಂದನ್ನು ಪಕ್ಕದಲ್ಲಿಡುತ್ತಾ ಹೇಳಿದರು ಕಿಶನ್‌ ಭೋಪ.

“ನಾನೂ ಇದನ್ನು ನುಡಿಸುತ್ತೇನೆ, ಇದು ನನ್ನದಲ್ಲ. ಇದು ರಾಜಸ್ಥಾನದ ಹೆಮ್ಮೆ” ಎನ್ನುತ್ತಾರೆ ಕಿಶನ್‌

ರಾವಣಹತ್ತವು ಬಿದಿರಿನಿಂದ ತಯಾರಿಸಲಾಗುವ ದಾರ ಮತ್ತು ಬಿಲ್ಲಿನ ವಾದ್ಯ. ಕಿಶನ್‌ ಅವರ ಕುಟುಂಬವು ಇದನ್ನು ತಲೆಮಾರುಗಳಿಂದ ತಯಾರಿಸುತ್ತಿದೆ ಹಾಗೂ ನುಡಿಸುತ್ತಿದೆ. ಅವರು ಇದರ ಇತಿಹಾಸವನ್ನು ಹಿಂದೂ ಪುರಾಣವಾದ ರಾಮಾಯಣದ ಕಾಲಕ್ಕೆ ಒಯ್ಯುತ್ತಾರೆ. ಇದರ ರಾವಣ ಎನ್ನುವ ಹೆಸರು ಲಂಕೆಯ ರಾಜನಿಂದ ಬಂದಿದೆ.  ಇತಿಹಾಸಕಾರರು ಮತ್ತು ಲೇಖಕರು ಇದನ್ನು ಒಪ್ಪುತ್ತಾರೆ ಮತ್ತು ರಾವಣನು ಶಿವನನ್ನು ಮೆಚ್ಚಿಸಿ ವರವನ್ನು ಪಡೆಯಲು ಈ ಸಾಧನವನ್ನು ರಚಿಸಿದನು ಎಂದು ಅವರು ಹೇಳುತ್ತಾರೆ.

2008ರಲ್ಲಿ ಪ್ರಕಟವಾದ ರಾವಣಹತ್ತ: ಎಪಿಕ್ ಜರ್ನಿ ಆಫ್ ಆನ್ ಇನ್ಸ್ಟ್ರುಮೆಂಟ್ ಇನ್ ರಾಜಸ್ಥಾನ್ ಎಂಬ ಪುಸ್ತಕದ ಲೇಖಕರಾದ ಡಾ.ಸುನೀರಾ ಕಾಸ್ಲಿವಾಲ್ ಹೇಳುತ್ತಾರೆ, "ರಾವಣಹತ್ತವು ಬಾಗಿದ ವಾದ್ಯಗಳಲ್ಲಿ ಅತ್ಯಂತ ಹಳೆಯದು." ಇದನ್ನು ಪಿಟೀಲಿನಂತೆ ಹಿಡಿದು ನುಡಿಸುವುದರಿಂದ, ಅನೇಕ ವಿದ್ವಾಂಸರು ಇದು ಪಿಟೀಲು ಮತ್ತು ಸೆಲ್ಲೊದಂತಹ ವಾದ್ಯಗಳ ಹಿಂದಿನ ಆವೃತ್ತಿ ಎಂದು ನಂಬುತ್ತಾರೆ.

ಕಿಶನ್‌ ಮತ್ತು ಬಾಬುದಿಯವರ ಪಾಲಿಗೆ ಈ ಕರಕುಶಲ ಕಲೆಯು ಹೊಟ್ಟೆಪಾಡು ಕೂಡಾ ಹೌದು. ಉದಯಪುರ ಜಿಲ್ಲೆಯ ಗಿರ್ವಾ ತಹಸಿಲ್ನ ಬರ್ಗಾವೊ ಗ್ರಾಮದಲ್ಲಿರುವ ಅವರ ಮನೆಯಲ್ಲಿ ಮರದ ತುಂಡುಗಳು, ತೆಂಗಿನ ಚಿಪ್ಪುಗಳು, ಆಡಿನ ಚರ್ಮ ಮತ್ತು ತಂತಿಗಳನ್ನು ಎಲ್ಲೆಂದರಲ್ಲಿ ಕಾಣಬಹುದು. ಅವರು ನಾಯಕ್ ಸಮುದಾಯಕ್ಕೆ ಸೇರಿದವರು, ರಾಜಸ್ಥಾನದಲ್ಲಿ ಈ ಸಮಿದಾಯವನ್ನು ಪರಿಶಿಷ್ಟ ಜಾತಿ ಎಂದು ಪಟ್ಟಿ ಮಾಡಲಾಗಿದೆ.

ಉದಯಪುರ ನಗರದ ಜನಪ್ರಿಯ ಪ್ರವಾಸಿ ತಾಣವಾದ ಗಂಗೌರ್ ಘಾಟಿನಲ್ಲಿ ಕೆಲಸವನ್ನು ಪ್ರಾರಂಭಿಸಲು ದಂಪತಿಗಳು ಪ್ರತಿದಿನ ಬೆಳಿಗ್ಗೆ 9 ಗಂಟೆಗೆ ತಮ್ಮ ಹಳ್ಳಿಯನ್ನು ಬಿಡುತ್ತಾರೆ. ಖರೀದಿದಾರರನ್ನು ಆಕರ್ಷಿಸಲು ಕಿಶನ್ ಪಕ್ಕದಲ್ಲಿ ಕುಳಿತು ರಾವಣಹತ್ತವನ್ನು ನುಡಿಸಿದರೆ, ಬಾಬುದಿ ಉಪಕರಣಗಳನ್ನು ಮಾರಾಟ ಮಾಡುತ್ತಾರೆ. ಸಂಜೆ 7 ಗಂಟೆಯ ಹೊತ್ತಿಗೆ ತಮ್ಮ ಕೆಲಸವನ್ನು ಮುಗಿಸಿ ಮನೆಯಲ್ಲಿ ಬಿಟ್ಟುಬಂದಿದ್ದ ಐದು ಮಕ್ಕಳನ್ನು ಸೇರಿಕೊಳ್ಳುತ್ತಾರೆ.

ಈ ಕಿರುಚಿತ್ರದಲ್ಲಿ, ಕಿಶನ್ ಮತ್ತು ಬಾಬುದಿ ಅವರು ರಾವಣಹತ್ತವನ್ನು ಹೇಗೆ ತಯಾರಿಸುತ್ತಾರೆ, ವಾದ್ಯದಿಂದ ಅವರ ಬದುಕು ಹೇಗೆ ರೂಪುಗೊಂಡಿದೆ ಮತ್ತು ಈ ಕರಕುಶಲತೆಯನ್ನು ಜೀವಂತವಾಗಿಡುವಲ್ಲಿ ತಾವು ಎದುರಿಸುತ್ತಿರುವ ಸವಾಲುಗಳನ್ನು ಹಂಚಿಕೊಂಡಿದ್ದಾರೆ.

ಕಿರುಚಿತ್ರ ನೋಡಿ: ಸೇವಿಂಗ್‌ ರಾವಣ

ಅನುವಾದ: ಶಂಕರ. ಎನ್. ಕೆಂಚನೂರು

ਉਰਜਾ, ਪੀਪਲਜ਼ ਆਰਕਾਈਵ ਆਫ ਰੂਰਲ ਇੰਡੀਆ ਵਿਖੇ ਵੀਡੀਓ-ਸੀਨੀਅਰ ਅਸਿਸਟੈਂਟ ਐਡੀਟਰ ਹਨ। ਉਹ ਇੱਕ ਦਸਤਾਵੇਜ਼ੀ ਫਿਲਮ ਨਿਰਮਾਤਾ ਹਨ ਅਤੇ ਸ਼ਿਲਪਕਾਰੀ, ਰੋਜ਼ੀ-ਰੋਟੀ ਅਤੇ ਵਾਤਾਵਰਣ ਦੇ ਮੁੱਦਿਆਂ ਨੂੰ ਕਵਰ ਕਰਨ ਵਿੱਚ ਦਿਲਚਸਪੀ ਰੱਖਦੀ ਹਨ। ਊਰਜਾ ਪਾਰੀ ਦੀ ਸੋਸ਼ਲ ਮੀਡੀਆ ਟੀਮ ਨਾਲ ਵੀ ਕੰਮ ਕਰਦੀ ਹਨ।

Other stories by Urja
Text Editor : Riya Behl

ਰੀਆ ਬਹਿਲ, ਪੀਪਲਸ ਆਰਕਾਈਵ ਆਫ਼ ਰੂਰਲ ਇੰਡੀਆ (ਪਾਰੀ) ਦੀ ਪੱਤਰਕਾਰ ਅਤੇ ਫ਼ੋਟੋਗ੍ਰਾਫ਼ਰ ਹਨ। ਪਾਰੀ ਐਜੂਕੇਸ਼ਨ ਵਿੱਚ ਸਮੱਗਰੀ ਸੰਪਾਦਕ ਦੇ ਰੂਪ ਵਿੱਚ ਉਹ ਵਿਦਿਆਰਥੀਆਂ ਦੇ ਨਾਲ਼ ਰਲ਼ ਕੇ ਵਾਂਝੇ ਭਾਈਚਾਰਿਆਂ ਦੇ ਜੀਵਨ ਦਾ ਦਸਤਾਵੇਜੀਕਰਨ ਕਰਦੀ ਹਨ।

Other stories by Riya Behl
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru