ಗ್ರಾಮಾಂತರ ಪ್ರದೇಶಗಳಲ್ಲಿ ಇದೊಂದು ಸಾಮಾನ್ಯ ಸಾರಿಗೆ ವಿಧಾನವಾಗಿದೆ. ಸರಕುಗಳನ್ನು ಇಳಿಸಿದ ನಂತರ ಖಾಲಿಯಾಗಿ ಮರಳುವ ಲಾರಿಗಳು, ಟೆಂಪೋಗಳ ಚಾಲಕರು ದಾರಿಯಲ್ಲಿ ಸಿಗುವ ಜನರನ್ನು ಹತ್ತಿಸಿಕೊಂಡು ಮಾಲಿಕರಿಗೆ ತಿಳಿಯದಂತೆ ಒಂದಿಷ್ಟು ಹಣ ಸಂಪಾದಿಸುತ್ತಾರೆ. ಈ ಸಾರಿಗೆ ವ್ಯವಸ್ಥೆಯನ್ನು ಯಾರು ಬೇಕಿದ್ದರೂ ಬಳಸಬಹುದು, ನೀವು ಕೂಡಾ. ಆದರೆ ಹಾತ್‌ ನಡೆಯುವ ದಿನಗಳಲ್ಲಿ (ವಾರದ ಸಂತೆಗಳಂತ ದಿನಗಳಲ್ಲಿ) ಸಂತೆ ಮುಗಿಸಿ ಮನೆಗೆ ಹೊರಟ ಜನರ ಜನರ ನಡುವೆ ಇಂತಹ  ಲಾರಿಗಳಲ್ಲಿ ಸೀಟ್‌ ಹಿಡಿಯುವುದು ಅಷ್ಟು ಸುಲಭದ ಕೆಲಸವಲ್ಲ. ಭಾರತದ ಯಾವುದೇ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಸಾರಿಗೆ ವ್ಯವಸ್ಥೆಯನ್ನು ನೀಡಬಹುದು. ಯೋಗ್ಯ ಸಾರಿಗೆ ವಿರಳವಾಗಿರುವ ಪ್ರದೇಶಗಳಲ್ಲಿ ಈ ಚಾಲಕರು ನಿಜಕ್ಕೂ ಅಮೂಲ್ಯವೆನ್ನಿಸುವ ಸೇವೆಯನ್ನು ಒದಗಿಸುತ್ತಿದ್ದಾರೆ. ಖಂಡಿತ ನೀವು ಆ ಸೇವೆಗಾಗಿ ಒಂದಿಷ್ಟು ಪಾವತಿಸಬೇಕು ಕೂಡಾ.

ಇದು ಒಡಿಶಾದ ಕೋರಾಪುಟ್‌ನ ಹೆದ್ದಾರಿಯ ನೋಟ. ಅಲ್ಲಿ ಕತ್ತಲು ಆವರಿಸಿತೊಡಗಿತ್ತು ಜನರು ಗಡಿಬಿಡಿಯಲ್ಲಿ ಮನೆಗೆ ಹಿಂತಿರುಗುತ್ತಿದ್ದರು. ಲಾರಿಯಲ್ಲಿ ಎಷ್ಟು ಜನರಿದ್ದರೆಂದು ಹೇಳುವುದು ಬಹಳ ಕಷ್ಟವಿತ್ತು. ಅಷ್ಟು ಜನರು ಅದರಲ್ಲಿ ಕಿಕ್ಕಿರಿದಿದ್ದರು. ಲಾರಿ ಚಾಲಕನಿಗೆ ತಾನು ಹಣ ಪಡೆದ ಲೆಕ್ಕಾಚಾರದ ಮೂಲಕ ಎಷ್ಟು ಜನರಿದ್ದಾರೆಂದು ತಿಳಿದಿರಬಹುದಾದರೂ ನಿಖರವಾದ ಲೆಕ್ಕ ಅವನಿಗೂ ತಿಳಿದಿರಲಿಕ್ಕಿಲ್ಲ. ಅದೂ ಅಲ್ಲದೆ ಡ್ರೈವರ್‌ ಎಲ್ಲರಿಗೂ ಒಂದೇ ಬಗೆಯಲ್ಲಿ ಶುಲ್ಕ ವಿಧಿಸುವುದಿಲ್ಲ. ಒಂದೊಂದು ರೀತಿಯ ಜನರಿಗೆ ಒಂದೊಂದು ರೀತಿ ಶುಲ್ಕ ವಿಧಿಸಲಾಗುತ್ತದೆ. ತಮ್ಮೊಂದಿಗೆ ಬುಟ್ಟಿಗಳು, ಕೋಳಿ, ಕುರಿಗಳನ್ನು ಹೊಂದಿರುವವರಿಗೆ ಒಂದು ಬಗೆಯ ಚಾರ್ಜ್‌ ಆದರೆ ತನ್ನ ನಿಗದಿತ ಪ್ರಯಾಣಿಕರು ಹಿರಿಯರಿಗೆ ಬೇರೆಯದೇ ಮಾದರಿಯ ಶುಲ್ಕವಿರುತ್ತದೆ. ಅವರೆಲ್ಲರನ್ನೂ ಅವರರ ದಾರಿಯಲ್ಲಿ ಇಳಿಸಿ ಮುಂಧೆ ಹೋಗುತ್ತಾನೆ. ಅಲ್ಲಿಂದ ಮುಂದಕ್ಕೆ ಅವರು ಕತ್ತಲೆಯಲ್ಲಿ ಬೆಟ್ಟಗಳನ್ನು ಹತ್ತಿಳಿದು ಊರುಗಳನ್ನು ಸೇರುತ್ತಾರೆ

ಕೆಲವರು ಸಂತೆಗೆ ಹೋಗಲು 30 ಕಿಲೋಮೀಟರುಗಳಷ್ಟು ದೂರ ಪ್ರಯಾಣ ಮಾಡಿರುತ್ತಾರೆ. ಅವರ ಮನೆಗಳು ಹೆದ್ದಾರಿಯಿಂದ ದೂರದಲ್ಲಿರುತ್ತವೆ. 1994ರಲ್ಲಿ ಎರಡರಿಂದ ಐದು ರೂಪಾಯಿಗಳ ಶುಲ್ಕ ನೀಡಿ ಅವರು ಕೊರಾಪುಟ್‌ನಿಂದ 20 ಕಿಲೋಮೀಟರ್ ತನಕ ಪಯಣಿಸಬಹುದಿತ್ತು. ಇದು ರಸ್ತೆಗಳ ಪರಿಸ್ಥಿತಿಯನ್ನೂ ಅವಲಂಬಿಸಿರುತ್ತದೆ. ದರಗಳು ಚಾಲಕರಿಂದ ಚಾಲಕರಿಗೆ ಸ್ವಲ್ಪ ಬದಲಾಗಬಹುದು, ಅಗತ್ಯದ ತುರ್ತು ಮತ್ತು ತಕ್ಷಣದ ಚೌಕಾಶಿಯ ಬಲಕ್ಕೂ ಒಳಪಟ್ಟಿರುತ್ತದೆ. ಈ ರೀತಿಯ ಸಾರಿಗೆಯಲ್ಲಿ ಪ್ರಯಾಣಿಸುವುದರಲ್ಲಿ ನನಗೆ ನನ್ನದೇ ಆದ ಸಮಸ್ಯೆಗಳಿವೆ ಮತ್ತು ನಾನು ಸಾವಿರಾರು ಕಿಲೋಮೀಟರುಗಳನ್ನು ಆ ಮಾರ್ಗದಲ್ಲಿ ಕ್ರಮಿಸಿದ್ದೇನೆ. ಆ ಸಮಸ್ಯೆಯೆಂದರೆ ನಾನು ಆ ಅವನ ಮಾನವ ಸರಕುಗಳ ಜೊತೆಗೆ ಕುಳಿತುಕೊಳ್ಳಬೇಕೆಂದು ನಾನು ಕೇಳಿದರೆ ಸುಲಭವಾಗಿ ಅನುಮತಿ ಸಿಗುತ್ತಿರಲಿಲ್ಲ. ಚಾಲಕನಿಗೆ ಈ ವಿಷಯದಲ್ಲಿ ಮನವೊಲಿಸುವುದೇ ನನಗೆ ಕಷ್ಟವಾಗುತ್ತಿತ್ತು. ನಾನು ಲಾರಿಯ ಹಿಂದೆ ಅಥವಾ ಮೇಲೆ ಕೂರಲು ಬಯಸುತ್ತಿದ್ದೆ ಆದರೆ ಅದರ ಮೇಲಲ್ಲ.

PHOTO • P. Sainath

ಆದರೆ ಗಾಡಿಯನ್ನು ಓಡಿಸುವ ವಿಶ್ವಾಸಿಯೂ, ಸ್ನೇಹಪರರೂ ಆದ ಚಾಲಕರಿಗೆ ನನ್ನ ಬಯಕೆ ಅರ್ಥವಾಗುವುದಿಲ್ಲ. "ಸಾರ್‌ ನನ್ನ ಕ್ಯಾಬಿನ್ನಿನಲ್ಲಿ ಇಷ್ಟಿರಿಯೋ ಇದೆಯಲ್ವ? ದಾರಿ ಉದ್ದಕ್ಕೂ ಕೇಳ್ತಾ ಬರಬಹುದು" ಎನ್ನುವುದು ಅವರ ಅಭಿಪ್ರಾಯ. ಅವರು ಹೇಳುವುದು ನಿಜ ಕೂಡ ನಾನು ಹಲವು ಬಾರಿ ಇಂತಹ ಪ್ರಯಾನವನ್ನು ಕೂಡ ಮಾಡಿದ್ದೆ. ಅವರ ಬಳಿಯಿರುವ ಪೈರೆಟೆಡ್‌ ಸಂಗೀತವನ್ನು ಕೇಳುತ್ತಾ ಸಾಗುವುದು ಕೂಡ ಚಂದವೇ. ಆದರೆ ನನಗೆ ಅದಕ್ಕಿಂತ ಮುಖ್ಯವಾಗಿ ಅವನು ತನ್ನ ಲಾರಿಯಲ್ಲಿಸಾಗಿಸುತ್ತಿದ್ದ ಜನರ ಅಂದಿನ ಸಂತೆಯ ಅನುಭವಗಳನ್ನು ಕೇಳುವುದಿತ್ತು. ಅವರ ಬದುಕಿನ ಕುರಿತು ತಿಳಿದುಕೊಳ್ಳುವುದಿತ್ತು. ಜೊತೆಗೆ ಕತ್ತಲಾಗುವುದಕ್ಕೆ ಮೊದಲು ಅವರುಗಳ ಚಿತ್ರ ತೆಗ್ದುಕೊಳ್ಳಬೇಕಿತ್ತು. ನಾನು ಬಹಳವಾಗಿ ವಿನಂತಿಸಿಕೊಂಡ ನಂತರ ಆ ಚಾಲಕ ಇವನ್ಯಾರೋ ಮೆಟ್ರೋ ಸಿಟಿಯ ಮೂರ್ಖನಿರಬೇಕು ಎನ್ನುವ ಭಾವದಲ್ಲಿ ನನ್ನನ್ನು ನಿರಾಶೆಯಿಂದ ನೋಡುತ್ತಾ ತನ್ನ ಕ್ಯಾಬಿನ್ನಿನ ಹೊರಗೆ ಕೂರಲು ಅನುವು ಮಾಡಿಕೊಟ್ಟ.

ಅದೇನೇ ಇದ್ದರೂ ಆತ ನನಗೆ ಹಿಂದೆ ಲಾರಿಯನ್ನು ಹತ್ತಲು ಸಹಾಯ ಮಾಡಿದರು. ಲಾರಿಯೊಳಗಿದ್ದ ಅನೇಕ ಕೈಗಳು ನನ್ನನ್ನು ಪ್ರೀತಿಯಿಂದ ಮೇಲೆ ಬರಮಾಡಿಕೊಂಡವು. ಅವರೆಲ್ಲೂ ಸಂತೆಗೆ ಹೋಗಿ ದಣಿವಿನೊಂದಿಗೆ ಮರಳುತ್ತಿದ್ದರೂ ನನ್ನೆಡೆಗೆ ಸೌಜನ್ಯ ತೋರಿಸಿದರು. ಅವರ ಕೋಳಿಗಳು, ಆಡುಗಳು, ಬುಟ್ಟಿಗಳು ಹೀಗೆ ಕೆಲವೊಂದಷ್ಟು ಫೋಟೊಗಳನ್ನಷ್ಟೇ ತೆಗೆಯಲು ಸಾಧ್ಯವಾಯಿತು. ನಂತರ ಎಲ್ಲೆಡೆ ಕತ್ತಲಾವರಿಸಿತು.

ಈ ಲೇಖನದ ಸಂಕ್ಷಿಪ್ತ ರೂಪ ದಿ ಹಿಂದೂ ಬಿಸ್ನೆಸ್‌ ಲೈನ್‌ ಪತ್ರಿಕೆಯಲ್ಲಿ 1995ರ ಸೆಪ್ಟೆಂಬರ್‌ ತಿಂಗಳ 22ನೇ ತಾರೀಖಿನಂದು ಪ್ರಕಟವಾಗಿತ್ತು.

ಅನುವಾದ: ಶಂಕರ ಎನ್. ಕೆಂಚನೂರು

ਪੀ ਸਾਈਨਾਥ People’s Archive of Rural India ਦੇ ਮੋਢੀ-ਸੰਪਾਦਕ ਹਨ। ਉਹ ਕਈ ਦਹਾਕਿਆਂ ਤੋਂ ਦਿਹਾਤੀ ਭਾਰਤ ਨੂੰ ਪਾਠਕਾਂ ਦੇ ਰੂ-ਬ-ਰੂ ਕਰਵਾ ਰਹੇ ਹਨ। Everybody Loves a Good Drought ਉਨ੍ਹਾਂ ਦੀ ਪ੍ਰਸਿੱਧ ਕਿਤਾਬ ਹੈ। ਅਮਰਤਿਆ ਸੇਨ ਨੇ ਉਨ੍ਹਾਂ ਨੂੰ ਕਾਲ (famine) ਅਤੇ ਭੁੱਖਮਰੀ (hunger) ਬਾਰੇ ਸੰਸਾਰ ਦੇ ਮਹਾਂ ਮਾਹਿਰਾਂ ਵਿਚ ਸ਼ੁਮਾਰ ਕੀਤਾ ਹੈ।

Other stories by P. Sainath
Translator : Shankar N. Kenchanuru

Shankar N. Kenchanur is a poet and freelance translator. He can be reached at [email protected].

Other stories by Shankar N. Kenchanuru