“ನನ್ನಬಳಿ ಯಾವತ್ತೂಸಾಕಷ್ಟು ಹಣವಿರುವುದಿಲ್ಲ” ಎನ್ನುವ ಬಬಿತಾಮಿತ್ರಾ ಕುಟುಂಬದಬಜೆಟ್ ಯೋಜಿಸುವಕುರಿತು ನಮ್ಮೊಂದಿಗೆಮಾತನಾಡುತ್ತಿದ್ದರು. “ಆಹಾರಕ್ಕೆಂದುಎತ್ತಿಟ್ಟುಕೊಂಡ ಹಣವನ್ನುಔಷಧಿಗಳಿಗೆ ಬಳಸುತ್ತೇನೆ. ಮಕ್ಕಳ ಓದಿಗೆಂದುಎತ್ತಿಟ್ಟ ಹಣವನ್ನುರೇಷನ್ ಖರೀದಿಸಲುಬಳಸಬೇಕಾಗುತ್ತದೆ. ಇದೆಲ್ಲಸಾಲದೆನ್ನುವಂತೆ ಪ್ರತಿತಿಂಗಳು ನನ್ನಮಾಲಕರಿಂದ ಸಾಲಮಾಡಬೇಕಾಗುತ್ತದೆ…”
ಕೋಲ್ಕತಾದ ಕಾಳಿಕಾಪುರ ಪ್ರದೇಶದ ಎರಡು ಕುಟುಂಬಗಳ ಮನೆಯಲ್ಲಿ ದುಡಿಯುವ ಈ 37 ವರ್ಷದ ಮನೆಕೆಲಸಗಾರ್ತಿ, ಆ ಮೂಲಕ ವರ್ಷಕ್ಕೆ ಕೇವಲ 1 ಲಕ್ಷ ರೂಪಾಯಿಗಳಷ್ಟನ್ನು ಗಳಿಸುತ್ತಾರೆ. ವರು ತಾನು 10 ವರ್ಷದ ಬಾಲಕಿಯಿದ್ದ ಸಮಯದಲ್ಲಿ ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಅಸನ್ನಗರದಿಂದ ನಗರಕ್ಕೆ ವಲಸೆ ಬಂದರು. "ನನ್ನ ಹೆತ್ತವರಿಗೆ ಮೂರು ಮಕ್ಕಳನ್ನು ಸಾಕಲು ಸಾಧ್ಯವಾಗಲಿಲ್ಲ. ಹೀಗಾಗಿ, ಮೂಲತಃ ನಮ್ಮ ಊರಿನ ಕುಟುಂಬದವರ ಮನೆಗೆಲಸಕ್ಕೆಂದು ನನ್ನನ್ನು ಕೋಲ್ಕತ್ತಾ ನಗರಕ್ಕೆ ಕಳುಹಿಸಲಾಯಿತು."
ಅಂದಿನಿಂದ ಬಬಿತಾ ಹಲವಾರು ಮನೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರುಕೋಲ್ಕತಾ ನಗರಕ್ಕೆ ಬಂದ ಇಷ್ಟು ವರ್ಷಗಳಲ್ಲಿ 27 ಕೇಂದ್ರ ಬಜೆಟ್ಟುಗಳು ಮಂಡಿಸಲ್ಪಟ್ಟಿವೆ. ಆದರೆ ಇವು ಅವರಮೇಲೆ ಅಥವಾ ಭಾರತದಲ್ಲಿ ಅಧಿಕೃತವಾಗಿ ಗುರುತಿಸಲ್ಪಟ್ಟ 4.2 ದಶಲಕ್ಷಕ್ಕೂ ಹೆಚ್ಚು ಮನೆಕೆಲಸಗಾರರ ಮೇಲೆ ಬೀರಿರುವ ಪರಿಣಾಮಕನಿಷ್ಠ. ಸ್ವತಂತ್ರ ಗಣತಿಗಳು ಈ ಕೆಲಸಗಾರರ ನಿಜವಾದ ಸಂಖ್ಯೆ 50 ಮಿಲಿಯನ್ ಮೀರಬಹುದು ಎಂದು ಹೇಳುತ್ತವೆ.
2017ರಲ್ಲಿಬಬಿತಾ ದಕ್ಷಿಣ 24 ಪರಗಣದ ಉಚ್ಛೇಪೋಟಾ ಪಂಚಾಯತ್ ವ್ಯಾಪತಿಯಭಾಗಬನ್ಪುರ ಪ್ರದೇಶದಲ್ಲಿ ವಾಸಿಸುವ ಬದುಕಿನ ನಾಲಕ್ನೇ ದಶಕದ ಕೊನೆಯಲ್ಲಿದ್ದ ಅಮಲ್ ಮಿತ್ರಾ ಎಂಬ ವ್ಯಕ್ತಿಯನ್ನು ವಿವಾಹವಾದರು. ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕನಾಗಿದ್ದ ಆ ವ್ಯಕ್ತಿ ಕುಟುಂಬವನ್ನು ನಡೆಸಲು ಅಷ್ಟಾಗಿ ಕೈಜೋಡಿಸದ ಕಾರಣ ಬಬಿತಾರ ಜವಾಬ್ದಾರಿಗಳು ದ್ವಿಗುಣಗೊಂಡವು. 5 ಮತ್ತು 6 ವರ್ಷದ ಇಬ್ಬರು ಗಂಡು ಮಕ್ಕಳು, 20 ರ ಹರೆಯದ ಮಲಮಗಳು, ಅತ್ತೆ, ಬಬಿತಾ ಮತ್ತು ಅಮಲ್ ಸೇರಿದಂತೆ ಆರು ಜನರ ಕುಟುಂಬವನ್ನು ಬಬಿತಾರ ಸಂಪಾದನೆ ಸಲಹುತ್ತಿದೆ.
ನಾಲ್ಕನೇ ತರಗತಿಗೆ ಶಾಲೆಯಿಂದ ಹೊರಬಿದ್ದ ಬಬಿತಾರಿಗೆ ನಿರ್ಮಲಾಸೀತಾರಾಮನ್ 2025-26 ರ ಸಾಲಿನಲ್ಲಿ ಘೋಷಿಸಿರುವ ಮಹಿಳಾ ನೇತೃತ್ವದ ಬೆಳವಣಿಗೆಯ ಪರಿಕಲ್ಪನೆ ಅಥವಾ ʼಜೆಂಡರ್ ಬಜೆಟಿಂಗ್ʼ ಕುರಿತು ಸ್ವಲ್ಪವೇ ತಿಳಿದಿದೆ. ಆದರೆ ಬಬಿತಾರ ಬದುಕಿನ ಅನುಭವಗಳು ಈ ಜ್ಞಾನಗಳನ್ನು ಮೀರಿದ್ದು. “ಕಷ್ಟದ ಸಮಯದಲ್ಲಿ ಮಹಿಳೆಯರ ಕೈ ಹಿಡಿಯಲು ಯಾವುದೇ ಸಹಾಯವಿಲ್ಲದಿರುವಾಗ, ಮಹಿಳೆಯರ ಪರ ಎಂದು ಕರೆದುಕೊಳ್ಳುವ ಬಜೆಟ್ಟಿನಿಂದ ಏನು ಪ್ರಯೋಜನ?” ಎಂದು ಕೇಳುವ ಅವರಲ್ಲಿ ಕೋವಿಡ್ - 19 ಸಮಯದಲ್ಲಿ ಅನುಭವಿಸಿದ ಸಂಕಷ್ಟಗಳ ಗಾಯ ಮನಸ್ಸಿನಲ್ಲಿ ಹಸಿಯಾಗಿಯೇ ಇದೆ.






