“ಒಂದು ದೇಶ ಅಥವಾ ಭಾಷೆ ಅಥವಾ ಧರ್ಮದ ಇತಿಹಾಸವು ರಾಜರು, ಮುಖ್ಯಸ್ಥರು ಮತ್ತು ನಾಯಕರ ಕ್ರಿಯೆಗಳಿಂದ ತುಂಬಿರುತ್ತದೆ. ಅಲ್ಲಿ ಜನಸಾಮಾನ್ಯರಿಗೆ ಹೆಚ್ಚು ಸ್ಥಳವಿರುವುದಿಲ್ಲ. ಆದರೂ ಅವರಿಲ್ಲದೆ ಇತಿಹಾಸಕ್ಕೆ ಅಸ್ತಿತ್ವವಿಲ್ಲ. ಜನರು ರಾಷ್ಟ್ರಗಳನ್ನು ನಿರ್ಮಿಸುತ್ತಾರೆ, ಭಾಷೆಗಳನ್ನು ಸೃಷ್ಟಿಸುತ್ತಾರೆ ಮತ್ತು ಧರ್ಮಗಳನ್ನು ಜನಪ್ರಿಯಗೊಳಿಸುತ್ತಾರೆ. ಆದರೆ ಸಮಯ ಕಳೆದಂತೆ ಪ್ರಬಲ ಗಣ್ಯರು ಅದನ್ನು ಸ್ವಾಧೀನಪಡಿಸಿಕೊಳ್ಳಲು ಬರುತ್ತಾರೆ", ಎಂದು ಈಗ ಕುನೊ ರಾಷ್ಟ್ರೀಯ ಉದ್ಯಾನವನದ ಅಂಚಿನಲ್ಲಿ ವಾಸಿಸುವ ಮೆರಾಜುದ್ದೀನ್ ಹೇಳುತ್ತಾರೆ. ಉದ್ಯಾನದ ಸುತ್ತಮುತ್ತಲಿನ ಸಮುದಾಯಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅವರು ಕಾಡಿನ ಜನರ ಹಕ್ಕುಗಳನ್ನು ಅಧಿಕಾರವು ಕಸಿಯುವುದಕ್ಕೆ ಸಾಕ್ಷಿಯಾಗಿದ್ದಾರೆ ಮತ್ತು ಅವರ ನೋವನ್ನು ತಮ್ಮದಾಗಿಸಿಕೊಂಡು ಅವುಗಳನ್ನು ಕವಿತೆಗಳಲ್ಲಿ ವ್ಯಕ್ತಪಡಿಸಿದ್ದಾರೆ.


Sheopur, Madhya Pradesh
|SUN, FEB 11, 2024
ಇತಿಹಾಸ, ವರ್ತಮಾನ ಮತ್ತು ಪ್ರವಾದಿಯನ್ನು ಮರಳಿ ಪಡೆಯುವೆವು
ದಲಿತ ಮತ್ತು ಆದಿವಾಸಿ ಸಮುದಾಯಗಳ ಒಕ್ಕಲೆಬ್ಬಿಸಲ್ಪಟ್ಟ ಮಕ್ಕಳಿಗಾಗಿ ತಮ್ಮ ಬದುಕನ್ನು ಮುಡಿಪಾಗಿಟ್ಟ ಕವಿ ಮತ್ತು ಶಿಕ್ಷಕ ಮಕ್ಕಳ ನೋವಿಗೆ ದನಿಯಾಗಿದ್ದಾರೆ
Poem and Text
Illustration
Editor
Translator
ಕೇಳಿ, ನಾನಿನ್ನೂ ಬದುಕಿದ್ದೇನೆ
ಮಸೀದಿ ಮತ್ತು ಮಂದಿರ ಕಟ್ಟಿದ ದೊರೆಗಳೇ!
ದೇಶ ಮತ್ತು ಭಾಷೆಗಳ ನಾಯಕರೇ!
ಕೇಳಿ, ನಾನಿನ್ನೂ ಬದುಕಿದ್ದೇನೆ, ನನ್ನ ದನಿ ಕೇಳಿಸಿಕೊಳ್ಳಿ.
ಓ ಕಿರೀಟ ಹೊತ್ತವರೇ, ಮಧ್ಯಪಂಥೀಯರೇ
ನಿಮಗೆ ಮರೆತು ಹೋಗಿದೆ ಈಗ
ನ್ಯಾಯವೆಂದರೇನೆಂದು, ರಕ್ಷಕರಾಗುವುದೆಂದರೇನೆಂದು
ಕಾಗದದ ನೋಟುಗಳ ಮೇಲೆ ಮುಖ ಬೆಲೆ ಬರೆಯುತ್ತೀರಿ
ಮನುಷ್ಯರ ಬೆಲೆಯನ್ನೇ ಮರೆತು ಕುಳಿತಿದ್ದೀರಿ
ನೆನಪಿರಲಿ ನಿಮಗೆ, ನಾನಿನ್ನೂ ಜೀವಂತವಿದ್ದೇನೆ.
ನನಗೆ ಗೊತ್ತು ನನಗೆ ಬಲವಿಲ್ಲ
ನಾನು ಸೋತಿದ್ದೇನೆ.
ನನ್ನ ಬತ್ತಿ ಹೋದ ನರ-ನಾಡಿಗಳಲ್ಲಿ
ಒಂದು ಹನಿಯಷ್ಟೂ ನೀರಿಲ್ಲ.
ಆದರೆ ನೆನಪಿರಲಿ ನಾನಿನ್ನೂ ಉಸಿರಾಡುತ್ತಿದ್ದೇನೆ
ಬರೆದುಕೊಳ್ಳಿ ನಾನಿನ್ನೂ ಬದುಕಿದ್ದೇನೆ.
ಸರಿ ತಪ್ಪುಗಳ ನಿರ್ಣಯಿಸುವ ದೊರೆಗಳೇ ಕೇಳಿ
ಲೇಖನಿ ಹಿಡಿದ ಬುದ್ಧಿಜೀವಿಗಳೇ
“ನನಗೆ ಗೊತ್ತು ನನಗೆ ಗೊತ್ತು”
ಎನ್ನುವ ನಿಮ್ಮ ಅರಚಾಟ ನಿಲ್ಲಿಸಿ
ನೀವು ಹಣದಾಸೆಯ ನಯವಂಚಕರೆನ್ನುವುದು ನನಗೆ ಗೊತ್ತು.
ನಿಮ್ಮ ಈ ಶೋಕಾಚರಣೆಯನ್ನು ನಿಲ್ಲಿಸಿ
ನಾನಿನ್ನೂ ಜೀವಂತವಿದ್ದೇನೆ
ಕೇಳಿ, ನಾನಿಲ್ಲಿದ್ದೇನೆ, ನಾನಿನ್ನೂ ಬದುಕಿದ್ದೇನೆ
ನಿಮ್ಮನ್ನು ರಾಜನನ್ನಾಗಿಸಿದ
ನಿಮ್ಮ ಆಟಾಟೋಪಗಳಿಗೆ ಅನುಮತಿಯಿತ್ತ
ವಿತ್ತ ನೀತಿಗಳನ್ನು ಯಾರು ಬರೆದರು?
ಯಾರು ಬರೆದರು ರಾಜನೀತಿಗಳನ್ನು?
ಈಗ ಬರೆಯಿರಿ ಅದನ್ನು, ನಾನಿನ್ನೂ ಬದುಕಿದ್ದೇನೆ.
ಕೇಳಿ, ನಾನಿಲ್ಲಿದ್ದೇನೆ, ನಾನಿನ್ನೂ ಬದುಕಿದ್ದೇನೆ.
ನೀವು ಧಾರ್ಮಿಕ ನಾಯಕರಿರಬಹುದು,
ಆದರೆ ಪ್ರವಾದಿ ನನ್ನವರು ಮತ್ತು ಕಾಬಾ ನನಗೆ ಸೇರಿದ್ದು.
ದೇವಸ್ಥಾನ ನನ್ನದು, ಮತ್ತು ದೇವರೂ ನನ್ನವ
ಗುರುದ್ವಾರಗಳು ನನ್ನದು ಮತ್ತು ಚರ್ಚುಗಳು ನನ್ನದು.
ಇಲ್ಲಿಂದ ಹೊರಡಿ ನೀವು, ನಾನಿನ್ನೂ ಬದುಕಿದ್ದೇನೆ!
ಕೇಳಿ, ನಾನಿಲ್ಲಿದ್ದೇನೆ, ನಾನಿನ್ನೂ ಬದುಕಿದ್ದೇನೆ
ಹೋಗಿ ಹೇಳಿ ನಿಮ್ಮ ರಾಜನಿಗೆ,
ಭೂ ಮಾಲಕನಿಗೆ, ಮಂತ್ರಿಗಳಿಗೆ
ಜನರ ನಡುವೆ ಸಂಘರ್ಷ ತಂದಿಕ್ಕುವವರಿಗೆ
ಹೇಳಿ ಹೋಗಿ ಆ ರಾಜಕಾರಣಿಗಳಿಗೆ
ನಾನು ಇಲ್ಲೇ ಇದ್ದೇನೆ, ಇನ್ನೂ ಬದುಕಿದ್ದೇನೆ ಎಂದು.
ಕೇಳಿ, ನಾನಿಲ್ಲಿದ್ದೇನೆ, ನಾನಿನ್ನೂ ಬದುಕಿದ್ದೇನೆ
(original) سن لو کہ ابھی میں زندہ ہوں
اے دیر و حرم کے مختارو
اے ملک و زباں کے سردارو
سن لو کہ ابھی میں زندہ ہوں
اے تاج بسر میزان بکف
تم عدل و حمایت بھول گئے
کاغذ کی رسیدوں میں لکھ کر
انسان کی قیمت بھول گئے
لکھو کہ ابھی میں زندہ ہوں
سن لو کہ ابھی میں زندہ ہوں
مانا کہ طبیعت بھاری ہے
اور بھوک بدن پر طاری ہے
پانی بھی نہیں شریانوں میں
پر سانس ابھی تک جاری ہے
سنبھلو کہ ابھی میں زندہ ہوں
سن لو کہ ابھی میں زندہ ہوں
اے شاہ سخن فرزانہ قلم
یہ شورش دانم بند کرو
روتے بھی ہو تم پیسوں کے لیے
رہنے دو یہ ماتم بند کرو
بخشو کہ ابھی میں زندہ ہوں
سن لو کہ ابھی میں زندہ ہوں
آئین معیشت کس نے لکھے
آداب سیاست کس نے لکھے
ہے جن میں تمہاری آغائی
وہ باب شریعت کس نے لکھے
لکھو کہ ابھی میں زندہ ہوں
سن لو کہ ابھی میں زندہ ہوں
اے پند گران دین و دھرم
پیغمبر و کعبہ میرے ہیں
مندر بھی مرے بھگوان مرے
گرودوارے کلیسا میرے ہیں
نکلو کہ ابھی میں زندہ ہوں
سن لو کہ ابھی میں زندہ ہوں
کہہ دو جا کر سلطانوں سے
زرداروں سے ایوانوں سے
پیکار تمدّن کے حامی
بے ننگ سیاست دانوں سے
کہہ دو کہ ابھی میں زندہ ہوں
سن لو کہ ابھی میں زندہ ہوں
ಅನುವಾದ: ಶಂಕರ. ಎನ್. ಕೆಂಚನೂರು
Want to republish this article? Please write to [email protected] with a cc to [email protected]
Donate to PARI
All donors will be entitled to tax exemptions under Section-80G of the Income Tax Act. Please double check your email address before submitting.
PARI - People's Archive of Rural India
ruralindiaonline.org
https://ruralindiaonline.org/articles/reclaiming-the-past-the-present-and-the-prophet-kn

