“ಕೇಂದ್ರ ಬಜೆಟ್ ಎನ್ನುವುದು ಅಧಿಕಾರಿಗಳಿಗೆ ಮಾತ್ರ” ಎನ್ನುವುದು ಅಲಿಮೊಹಮ್ಮದ್ಲೋನ್ ಅವರ ನಂಬಿಕೆ. ಇದರ ಅರ್ಥ ಬಜೆಟ್ ಎನ್ನುವುದನ್ನು ಮಧ್ಯಮವರ್ಗದ ಸರ್ಕಾರಿ ಲೋಗ್ ಅಥವಾ ಸರ್ಕಾರಿ ನೌಕರರಿಗಾಗಿ ವಿನ್ಯಾಸಗೊಳಿಸಲಾಗಿರುತ್ತದೆ ಎನ್ನುವುದು ಅವರ ವಿವರಣೆ. ಇದು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಈ ಸಣ್ಣ ಬೇಕರಿ ಮಾಲೀಕರು ಬಜೆಟ್ ಎನ್ನುವುದು ತನ್ನಂತಹ ಜನರನ್ನು ಗಮನದಲ್ಲಿ ಇಟ್ಟುಕೊಂಡು ತಯಾರಿಸಲಾಗುವ ಸಂಗತಿಯಲ್ಲ ಎನ್ನುವುದನ್ನು ಅರ್ಥ ಮಾಡಿಕೊಂಡಿರುವುದನ್ನು ಸೂಚಿಸುತ್ತದೆ.
“2024ರಲ್ಲಿ ನಾನು 1,400 ರೂಪಾಯಿ ಕೊಟ್ಟು 50 ಕೇಜಿ ಹಿಟ್ಟು ತರುತ್ತಿದ್ದೆ, ಆದರೆ ಈಗ ಅಷ್ಟೇ ಹಿಟ್ಟಿಗೆ 2,200 ರೂಪಾಯಿ ಕೊಡಬೇಕಿದೆ” ಎಂದು ಈ 52 ವರ್ಷದ ಬೇಕರಿ ಮಾಲಿಕ ಹೇಳುತ್ತಾರೆ. ಅವರು ನಮ್ಮೊಂದಿಗೆ ತಂಗ್ ಮಾರ್ಗ್ ಬ್ಲಾಕ್ ವ್ಯಾಪ್ತಿಯ ಮಾಹೀನ್ ಎನ್ನುವ ಗ್ರಾಮದಲ್ಲಿ ಮಾತನಾಡುತ್ತಿದ್ದರು. “ಬೆಲೆಗಳನ್ನು ಇಳಿಸುವ ಬಜೆಟ್ ಬಂದರೆ ಅದರಲ್ಲಿ ನನಗೆ ಆಸಕ್ತಿ ಮೂಡುತ್ತದೆ. ಉಳಿದಂತೆ ಅದು ನಾನು ಈ ಮೊದಲು ಹೇಳಿದ ಹಾಗೆ ಕೇವಲ ಅಧಿಕಾರಿಗಳ ಹಿತವನ್ನು ಬಯಸುವ ಬಜೆಟ್” ಎಂದು ಅವರು ಹೇಳಿದರು.
ಶ್ರೀನಗರದಿಂದಸುಮಾರು 45 ಕಿಲೋಮೀಟರ್ದೂರದಲ್ಲಿರುವಮಾಹೀನ್ಗ್ರಾಮವುಚಳಿಗಾಲದಪ್ರವಾಸಿತಾಣಗಳಾದತಂಗ್ ಮಾರ್ಗ್ ಮತ್ತು ಡ್ರಾಂಗ್ ನಡುವೆ ಇದೆ. ಇದು ಮುಖ್ಯವಾಗಿ ಕುದುರೆ ಬಾಡಿಗೆ, ಸ್ಲೆಡ್ಜ್-ಪುಲ್ಲಿಂಗ್ ಮತ್ತು ಗೈಡ್ ಸೇವೆಗಳಂತಹ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಲ್ಲಿತೊಡಗಿರುವಸುಮಾರು 250 ಕುಟುಂಬಗಳಿಗೆನೆಲೆಯಾಗಿದೆ. ತಂಪಾದಹವಾಮಾನದಿಂದಾಗಿ, ಮಾಹೀನ್ಪ್ರಾಥಮಿಕವಾಗಿಜೋಳವನ್ನುಉತ್ಪಾದಿಸುತ್ತದೆ.






