ನಾರಾಯಣ್ಕುಂಡಲಿಕ್ಹಜಾರೆಯವರಿಗೆಬಜೆಟ್ಎಂಬಪದಅರ್ಥವಾಗುತ್ತದೆ ಏಕೆಂದರೆ ಅವರ ಬಳಿ ಹೆಚ್ಚಿನ ಬಜೆಟ್ ಇಲ್ಲ.
"ಆಪ್ಲಾ ತೇವ್ಧಾ ಬಜೆಟ್ಚ್ ನಹೀ [ನನ್ನ ಬಳಿ ಅಷ್ಟು ಬಜೆಟ್ಇಲ್ಲ]!" ಕೇವಲನಾಲ್ಕುಪದಗಳಲ್ಲಿ, ನಾರಾಯಣ್ಕಾಕಾ 12 ಲಕ್ಷರೂ.ವರೆಗಿನ ತೆರಿಗೆ ಮುಕ್ತ ಆದಾಯದ ಕುರಿತಾದ ಪ್ರಚಾರಕ್ಕೆ ತೆರೆ ಎಳೆಯುತ್ತಾರೆ.
ಕೇಂದ್ರದ ಬಜೆಟ್ ಕುರಿತಾದ ಪ್ರಶ್ನೆಯು ಈ 65 ವರ್ಷದರೈತಮತ್ತುಹಣ್ಣುಮಾರಾಟಗಾರನನ್ನುತೀವ್ರವಾಗಿಯೋಚಿಸುವಂತೆ ಮಾಡಿತು. ನಂತರ ಅವರು, “ನನಗೆ ಈ ವಿಷಯದ ಬಗ್ಗೆ ಏನೂ ಗೊತ್ತಿಲ್ಲ, ಈ ಕುರಿತಾಗಿ ಎಂದೂ ಕೇಳಿಲ್ಲ” ಎಂದು ದೃಢವಾಗಿ ಹೇಳಿದರು.
ನಾರಾಯಣ ಹಜಾರೆಯವರಿಗೆ ಈ ಕುರಿತು ತಿಳಿಯುವ ಮಾರ್ಗಗಳೂ ಲಭ್ಯವಿಲ್ಲ. “ನನ್ನ ಬಳಿ ಫೋನ್ ಇಲ್ಲ. ಮನೆಯಲ್ಲಿ ಟಿವಿಯೂ ಇಲ್ಲ.” ಕೆಲವು ದಿನಗಳ ಹಿಂದೆ ಸ್ನೇಹಿತರೊಬ್ಬರು ಅವರಿಗೆ ರೇಡಿಯೋ ಒಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಆದರೆ ಸಾರ್ವಜನಿಕ ಪ್ರಸಾರ ಸೇವೆಯು ಈ ವಾರ್ಷಿಕ ಕಾರ್ಯಕ್ರಮದ ಬಗ್ಗೆ ಅವರಿಗೆ ಇನ್ನೂ ಮಾಹಿತಿ ನೀಡಿಲ್ಲ. "ಅಮ್ಚಾ ಅದಾನಿ ಮಾನಸಚಾ ಕೇ ಸಂಬಂಧ್, ತುಮ್ಹಿಚ್ ಸಾಂಗಾ [ಇದಕ್ಕೂ ನಮ್ಮಂತಹ ಅನಕ್ಷರಸ್ಥ ಜನರಿಗೆ ಏನಾದರೂ ಸಂಬಂಧವಿದೆಯೇ?" ಎಂದು ಅವರು ಕೇಳುತ್ತಾರೆ. 'ಕಿಸಾನ್ ಕ್ರೆಡಿಟ್ ಕಾರ್ಡ್' ಅಥವಾ ಈ ಕಾರ್ಡುಗಳಿಗೆ 'ಹೆಚ್ಚಿಸಿದ ಸಾಲದ ಮಿತಿ' ಎಂಬ ಪದಗಳು ನಾರಾಯಣ್ ಹಜಾರೆ ಅವರಿಗೆ ಅಪರಿಚಿತ.



