“ಈ ವರ್ಷದ ಬಜೆಟ್ ನಮ್ಮ ಬದುಕಿಗೆ ಸಂಬಂಧಿಸಿದಂತೆ ಯಾವುದೇ ಒಳಿತು ಮಾಡುವುದಿಲ್ಲ. ಈ ಬೆಜೆಟ್ ಮುಖ್ಯವಾಗಿ ಮಧ್ಯಮ ವರ್ಗಕ್ಕೆ, ವಿಶೇಷವಾಗಿ ಸಂಬಳ ಪಡೆಯುವ ವ್ಯಕ್ತಿಗಳಿಗೆ ಸಂಬಂಧಿಸಿದ್ದು ಎನ್ನಿಸುತ್ತದೆ” ಎಂದು ಗೀತಾ ವಳಚಲ್ ಹೇಳುತ್ತಾರೆ.
ನಿರ್ದಿಷ್ಟ ದುರ್ಬಲ ಬುಡಕಟ್ಟುಗುಂಪು (ಪಿವಿಟಿಜಿ) ವರ್ಗದಡಿ ಪಟ್ಟಿ ಮಾಡಲಾಗಿರುವ ಕಾಡರ್ ಸಮುದಾಯದ ಸದಸ್ಯರಾದ 36 ವರ್ಷದ ಗೀತಾ ಕೇರಳದ ತ್ರಿಶೂರ್ ಜಿಲ್ಲೆಯ ಉದ್ದೇಶಿತ ಅಥಿರಪ್ಪಲ್ಲಿ ಜಲವಿದ್ಯುತ್ ಯೋಜನೆಯ ಜಲಾನಯನ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.
ಈ ಅಣೆಕಟ್ಟು ಚಾಲಕುಡಿ ನದಿ ಜಲಾನಯನ ಪ್ರದೇಶದಲ್ಲಿದೆ ಮತ್ತು ಇದು ನಾಲ್ಕನೇಬಾರಿಗೆ ಅವರ ಸಮುದಾಯವನ್ನು ಒಕ್ಕಲೆಬ್ಬಿಸುತ್ತಿದೆ. "ದೇಶಾದ್ಯಂತ ದೊಡ್ಡ ಪ್ರಮಾಣದ ಮೂಲಸೌಕರ್ಯಯೋಜನೆಗಳಿಂದಾಗಿ ನಾವು ಗಮನಾರ್ಹ ಒಕ್ಕಲೆಬ್ಬಿಸುವಿಕೆಯನ್ನು ಎದುರಿಸುತ್ತಿದ್ದೇವೆ. ಇದಲ್ಲದೆ, ನಮ್ಮ ಭೂಮಿ, ಅರಣ್ಯ ಮತ್ತು ಸಂಪನ್ಮೂಲಗಳನ್ನು ಕಾರ್ಪೊರೇಟ್ ಸಂಸ್ಥೆಗಳು ಸ್ವಾಧೀನಪಡಿಸಿಕೊಳ್ಳುತ್ತಿರುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ" ಎಂದು ಅಣೆಕಟ್ಟಿನವಿರುದ್ಧದ ಜನಾಂದೋಲನದಮುಖವಾಗಿ ಮಾರ್ಪಟ್ಟಿರುವಗೀತಾ ಹೇಳುತ್ತಾರೆ.
"ಕಾಡುಗಳಲ್ಲಿ ವಾಸಿಸುವಬುಡಕಟ್ಟು ಸಮುದಾಯಗಳಿಗೆ, ಹವಾಗುಣ ಬದಲಾವಣೆಯುಹಿಂದೆಂದೂ ಕಂಡಿರದ ಸವಾಲುಗಳನ್ನುಸೃಷ್ಟಿಸುತ್ತದೆ. ನಾವು ಪ್ರತಿಕೂಲ ವಾತಾವರಣ, ಅವನತಿ ಹೊಂದಿದ ಕಾಡುಗಳು ಮತ್ತು ಸೀಮಿತ ಜೀವನೋಪಾಯದಆಯ್ಕೆಗಳ ನಡುವೆ ಬದುಕುತ್ತಿದ್ದೇವೆ" ಎಂದು ಕೇರಳದ ಏಕೈಕ ಮಹಿಳಾ ಬುಡಕಟ್ಟು ಮುಖ್ಯಸ್ಥೆಯಾದ ಗೀತಾ ಹೇಳುತ್ತಾರೆ.




