ಕೊಲ್ಹಾಪುರ ಪ್ರಗತಿಪರ (ಪುರೋಗಾಮಿ) ನಗರವೆಂದೇ ಪರಿಚಿತ. ಇದಕ್ಕೆ ಶಾಹು, ಫುಲೆ ಮತ್ತು ಅಂಬೇಡ್ಕರ್ ಅವರಂತಹ ಮಹಾನ್ ವ್ಯಕ್ತಿಗಳ ಪರಂಪರೆಯ ಹಿನ್ನೆಲೆಯಿದೆ. ವಿವಿಧ ಧರ್ಮಗಳು ಮತ್ತು ಜಾತಿಗಳ ಜನರು ಈಗಲೂ ವೈವಿಧ್ಯಮಯ ಸಂಸ್ಕೃತಿಗಳ ನಡುವೆ ಗೌರವ ಮತ್ತು ಸ್ನೇಹ ಹಾಗೂ ಪ್ರಗತಿಪರ ಚಿಂತನೆಯ ಈ ಪರಂಪರೆಯನ್ನು ಜೀವಂತವಾಗಿಡಲು ಈಗಲೂ ಶ್ರಮಿಸುತ್ತಿದ್ದಾರೆ.
ಆದರೆ ಇದೆಲ್ಲದರ ನಡುವೆಯೂ ಈ ಸೌಹಾರ್ದ ಸಮಾಜದಲ್ಲಿ ಹುಳಿ ಹಿಂಡುವ ಸಂಘಟಿತ ಪ್ರಯತ್ನಗಳೂ ನಡೆಯುತ್ತಿವೆ. ಚಿಂತನೆಗಳನ್ನು ಚಿಂತನೆಗಳ ಮೂಲಕವೇ ಎದುರಿಸಬೇಕು. ಈ ನಿಟ್ಟಿನಲ್ಲಿ ಶರ್ಫುದ್ದೀನ್ ದೇಸಾಯಿ ಮತ್ತು ಸುನಿಲ್ ಮಾಲಿ ಅವರಂತಹ ನಾಗರಿಕರು ಸಮಾಜದಲ್ಲಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.
ಶರ್ಫುದ್ದೀನ್ ದೇಸಾಯಿ ಮತ್ತು ಸುನಿಲ್ ಮಾಲಿ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ತಾರಾದಾಳ ಗ್ರಾಮದವರು. ಇಲ್ಲಿ ಶರ್ಫುದ್ದೀನ್ ದೇಸಾಯಿ ಹಿಂದೂ ಗುರುವಿನೊಂದಿಗೆ ಸಂಬಂಧ ಹೊಂದಿದ್ದರೆ, ಸುನಿಲ್ ಮಾಲಿ ಮುಸ್ಲಿಂ ಗುರುವಿನ ಅನುಯಾಯಿ.
ಅನುವಾದ: ಶಂಕರ. ಎನ್. ಕೆಂಚನೂರು