PARI ಶಿಕ್ಷಕಿಯಾಗಿ ಗ್ರಾಮೀಣ ಭಾರತ ವಿಷಯವಾಗಿದ್ದರೆ ಅದು ನೈಜ ಶಿಕ್ಷಣ, ಸ್ಪಷ್ಟ ಮತ್ತು ಕೊನೆ ತನಕ ಉಳಿಯುವಂಥದ್ದು ಎಂಬುದನ್ನು ನಾವು ಕಂಡುಕೊಳ್ಳಬಹುದು.
ನಮ್ಮಲ್ಲಿ ತರಬೇತಿ ಪಡೆಯುತ್ತಿರುವ ಅಕ್ಷಯ್ ಮಂಗಲ್ ಅವರ ಅನುಭವವನ್ನೇ ತೆಗೆದುಕೊಳ್ಳೋಣ. ಇವರು ತಮ್ಮ ಸಮಯವನ್ನು ಪರಿಯೊಂದಿಗೆ ವಿನಿಯೋಗಿಸಿಕೊಂಡು ಛತ್ತೀಸ್‌ಗಢದ ಗ್ರಾಮೀಣ ಪ್ರದೇಶದಲ್ಲಿರುವ ಆದಿವಾಸಿಗಳು ಮತ್ತು ಸ್ಥಳೀಯ ನಾಟಿ ವೈದ್ಯರ (jhola chaap) ವೈದ್ಯಕೀಯ ಸೌಲಭ್ಯಗಳಿಂದ ಹೇಗೆ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅಧ್ಯಯನ ಮಾಡಿದರು. “ಖಾಸಗಿ ಮತ್ತು ಸಾರ್ವಜನಿಕ, ಮತ್ತು ಅರ್ಹ ಹಾಗೂ ಅನರ್ಹ ವೈದ್ಯರುಗಳ ನಡುವಿನ ಆಳವಾದ ಸಂಬಂಧ ಇರುವುದನ್ನು ಗಮನಿಸಿದೆ,” ಎಂದರು, ಅವರು ರಾಜ್ಯದ ಜಂಜ್‌ಗೀರ್ ಚಾಂಪ್ ಜಿಲ್ಲೆಗೆ ಸೇರಿದವರಾಗಿದ್ದು, ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಓದುತ್ತಿದ್ದರು.
ತಮ್ಮ ಪಠ್ಯಪುಸ್ತಕದಲ್ಲಿ ಕಾಣಿಸಿಕೊಳ್ಳದ ಕಡೆಗಣಿಸಲ್ಪಟ್ಟ ಜನರ ಬದುಕಿನ ಬಗ್ಗೆಯೂ ಯುವ ಜನರು ಅಧ್ಯಯನ ಮಾಡುತ್ತಿದ್ದಾರೆ. ಪತ್ರಿಕೋದ್ಯಮ ವಿದ್ಯಾರ್ಥಿ ಶುಭಶ್ರೀ ಮಹಾಪಾತ್ರ ಅವರು ಒಡಿಶಾದ ಕೋರಪತ್‌ನಲ್ಲಿ ಗೌರಾ ಅವರಂಥ ದಿವ್ಯಾಂಗರು ಸರಕಾರದ ಸೌಲಭ್ಯಗಳನ್ನು ಪಡೆಯಲು ಪಡುತ್ತಿರುವ ಕಷ್ಟಗಳ ಬಗ್ಗೆ ವರದಿ ಮಾಡಿದ್ದು, “ಗೌರಾಗೆ ಅಷ್ಟು ಭಾವುಕ ಮತ್ತು ದೈಹಿಕ ನೋವನ್ನು ನೀಡುವಂತೆ ಮಾಡಲು ಆಡಳಿತ ವ್ಯವಸ್ಥೆಯಲ್ಲಿನ ಕೊರತೆಯಾದರೂ ಏನು?” ಎಂದು ಪ್ರಶ್ನಿಸುವಂತೆ ಮಾಡಿದೆ.
ಪೀಪಲ್ಸ್ ಆರ್ಚಿವ್ ಆಫ್ ಇಂಡಿಯಾದ ಶಿಕ್ಷಣ ವಿಭಾಗ -PARI ಶಿಕ್ಷಣ ಐದನೇ ವರ್ಷಕ್ಕೆ ಪದಾರ್ಪಣೆ ಮಾಡಿದೆ. ಈ ವರ್ಷಗಳಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಸಾಮಾಜಿಕ ಬದಲಾವಣೆಗಾಗಿ ಇರುವ ಸಂಘಟನೆಗಳಲ್ಲಿ ಕೆಲಸ ಮಾಡುತ್ತಿರುವ ಯುವಜನರು ಮತ್ತು ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳು ಸಾಮಾನ್ಯ ಜನರಲ್ಲಿರುವ ಕೌಶಲ್ಯದ ವೈವಿಧ್ಯತೆ ಮತ್ತು ಜ್ಞಾನವನ್ನು ಆಳವಾಗಿ ಅರ್ಥೈಸಿಕೊಂಡರು. ಮಾಧ್ಯಮಿಕ ಶಾಲಾ ವಿದ್ಯಾರ್ಥಿ ಪ್ರಜ್ವಲ್ ಠಾಕೂರ್, ಛತ್ತೀಸ್‌ಗಢದ ರಾಯ್‌ಪುರದಲ್ಲಿ ಧಾನ್ಯ ಅಲಂಕಾರಿಕಗಳ (Dhan jhoomers) ನ್ನು ದಾಖಲೀಕರಿಸಿದ್ದು, “ಹಬ್ಬಗಳಲ್ಲಿ ರೈತರ ಪಾತ್ರ ಮತ್ತು ಭತ್ತದ ಪ್ರಾಮುಖ್ಯತೆಯ ಬಗ್ಗೆ ಜಾಗ್ರತನಾದೆ. PARI ಶಿಕ್ಷಣದೊಂದಿಗೆ ಕೆಲಸ ಮಾಡಿದುದರಿಂದ ನಾನು ಬದುಕುತ್ತಿರುವ ಸಮಾಜದಲ್ಲಿನ ಹೊಸ ಚಿತ್ರಣದ ಅರಿವಾಯಿತು," ಎಂದರು.



