ಕೆಲವು ಸಾಂಪ್ರದಾಯಿಕ ವಿರೋಧಿಗಳಾದ ರೈತರು ಮತ್ತು ಆರ್ಥಿಯರು (ಕಮಿಷನ್ ಏಜೆಂಟರು) ಸೇರಿದಂತೆ ಸಾಮಾಜಿಕ ಶಕ್ತಿಗಳ ಒಂದು ದೊಡ್ಡ ಮತ್ತು ಸಂಘಟಿಸಲು ಸಾಧ್ಯವೇ ಇಲ್ಲದಿದ್ದ ಗುಂಪುಗಳನ್ನು ಇದು ಒಂದುಗೂಡಿಸಿದೆಯೆನ್ನುವುದು ಈ ಸರ್ಕಾರದ ಆಶ್ಚರ್ಯಕರ ಸಾಧನೆಯಾಗಿದೆ. ಅದರಾಚೆಗೆ, ಇದು ಸಿಖ್ಖರು, ಹಿಂದೂಗಳು, ಮುಸ್ಲಿಮರು, ಜಾಟ್ಗಳು ಮತ್ತು ಜಾಟ್-ಅಲ್ಲದವರು, ಕಾಪ್ಗಳು ಮತ್ತು ಖಾನ್ ಮಾರುಕಟ್ಟೆಯ ಜನರನ್ನು ಕೂಡ ಒಂದುಗೂಡಿಸಿದೆ. ಇದು ಅದ್ಭುತ.
ಆದರೆ ಈಗ ಶಾಂತವಾಗಿರುವ ದನಿಗಳು ಎರಡು ತಿಂಗಳುಗಳನ್ನು ಕಳೆದಿದ್ದು, ಇದು “ಕೇವಲ ಪಂಜಾಬ್ ಮತ್ತು ಹರಿಯಾಣದ ವಿಷಯ” ಎಂದು ನಮಗೆ ಭರವಸೆ ನೀಡುತ್ತಾ. ಬೇರೆ ಯಾರಿಗೂ ಇದರಿಂದ ತೊಂದರೆಯಾಗಿಲ್ಲ. ಇದು ಅಂತಹ ವಿಷಯವೇನಲ್ಲ ಎನ್ನಲಾಗುತ್ತಿತ್ತು.
ತಮಾಷೆಯಾಗಿದೆ. ಸುಪ್ರೀಂ ಕೋರ್ಟ್ ನೇಮಕ ಮಾಡದ ಸಮಿತಿಯು ಕೊನೆಯದಾಗಿ ಪರಿಶೀಲಿಸಿದಾಗ ಪಂಜಾಬ್ ಮತ್ತು ಹರಿಯಾಣ ಎರಡೂ ಭಾರತೀಯ ಒಕ್ಕೂಟದ ಭಾಗವಾಗಿತ್ತು. ಅಲ್ಲಿ ಏನು ನಡೆಯುತ್ತಿದೆ ಎಂಬುದು ನಮ್ಮೆಲ್ಲರಿಗೂ ಮುಖ್ಯ ಎಂದು ನೀವು ಭಾವಿಸುತ್ತೀರಿ.
ಒಂದು ಕಾಲದಲ್ಲಿ ಏರುದನಿಯಲ್ಲಿ ಮಾತಾಡುತ್ತಿದ್ದ ದನಿಗಳು ಇವರೆಲ್ಲರೂ ಸುಧಾರಣೆಗಳನ್ನು ವಿರೋಧಿಸುವ “ಶ್ರೀಮಂತ ರೈತರು” ಎಂದು ನಮ್ಮ ಬಳಿ ಹೇಳುತ್ತಿದ್ದವು. ಈಗಲೂ ಸುಮ್ಮನಾಗಿಸುವ ದನಿಯಲ್ಲಿ ಅದನ್ನೇ ಹೇಳುತ್ತಿವೆ.
ಕಳೆದ ಎನ್ಎಸ್ಎಸ್ ಸಮೀಕ್ಷೆಯ ಪ್ರಕಾರ, ಪಂಜಾಬ್ನಲ್ಲಿನ ಕೃಷಿ ಕುಟುಂಬವೊಂದರ ಸರಾಸರಿ ಮಾಸಿಕ ಆದಾಯ 18,059 ರೂ. ಪ್ರತಿ ರೈತ ಕುಟುಂಬದಲ್ಲಿ ಸರಾಸರಿಜನರ ಸಂಖ್ಯೆ 5.24 ಇತ್ತು. ಈ ಲೆಕ್ಕದಲ್ಲಿ, ಅಲ್ಲಿನ ರೈತರ ತಲಾ ಮಾಸಿಕ ಆದಾಯವು ಸುಮಾರು 3,450 ರೂ. ಇದು ಸಂಘಟಿತ ವಲಯದಲ್ಲಿ ಕಡಿಮೆ ಸಂಬಳ ಪಡೆಯುವ ಉದ್ಯೋಗಿಯ ಸಂಬಳಕ್ಕಿಂತಲೂ ಕಡಿಮೆ. ಇದು ಆಸಕ್ತಿದಾಯಕವಾಗಿದೆ.
ಅದ್ಭುತ! ಎಷ್ಟೊಂದು ಆಸ್ತಿ. ಆದರೆ ಅರ್ಧದಷ್ಟು ವಿಷಯವನ್ನು ನಮಗೆ ತಿಳಿಸಲಾಗಿಲ್ಲ. ಹರಿಯಾಣದ ಅಂಕಿ ಅಂಶಗಳ ಪ್ರಕಾರ ಅಲ್ಲಿನ ರೈತನ ಸರಾಸರಿ ಮಾಸಿಕ ಆದಾಯ 14,434 ರೂ. ಮತ್ತು ತಲಾ ಮಾಸಿಕ ಆದಾಯ ಸುಮಾರು 2,450 ರೂ (ರೈತ ಕುಟುಂಬ ಗಾತ್ರ 5.9 ವ್ಯಕ್ತಿಗಳು). ನಿಸ್ಸಂಶಯವಾಗಿ, ಈ ಸಂಕ್ಷಿಪ್ತ ಸಂಖ್ಯೆಗಳು ಅವನನ್ನು ಇತರ ಭಾರತೀಯ ರೈತರಿಗಿಂತ ಮುಂದಿರಿಸಿವೆ. ಉದಾಹರಣೆಗೆ, ಗುಜರಾತ್, ಇಲ್ಲಿನ ಕೃಷಿ ಕುಟುಂಬದ ಸರಾಸರಿ ಮಾಸಿಕ ಆದಾಯ 7,926 ರೂ. ಆಗಿದ್ದರೆ, ಪ್ರತಿ ತಲಾ ಮಾಸಿಕ ಆದಾಯವು 1,524 ರೂ. ಆಗಿದ್ದು, ಪ್ರತಿ ಕೃಷಿ ಕುಟುಂಬದಲ್ಲಿ ಸರಾಸರಿ 5.2 ಜನರು ಇದ್ದಾರೆ.
ಭಾರತದಲ್ಲಿ ರೈತ ಕುಟುಂಬವೊಂದರ ಸರಾಸರಿ ಮಾಸಿಕ ಆದಾಯ 6,426 ರೂ. (ಪ್ರತಿ ವ್ಯಕ್ತಿಗೆ ಸುಮಾರು 1,300 ರೂ.). ಅಂದ ಹಾಗೆ, ಈ ಸರಾಸರಿ ಮಾಸಿಕ ಅಂಕಿಅಂಶಗಳು ಎಲ್ಲಾ ಮೂಲಗಳಿಂದ ಬರುವ ಆದಾಯವನ್ನು ಒಳಗೊಂಡಿವೆ. ಕೃಷಿ ಮಾತ್ರವಲ್ಲ, ಜಾನುವಾರುಗಳು, ಕೃಷಿಯೇತರ ವ್ಯಾಪಾರ ಮತ್ತು ವೇತನ ಮತ್ತು ಸಂಬಳದಿಂದ ಬರುವ ಆದಾಯ ಇವೆಲ್ಲವೂ.
ರಾಷ್ಟ್ರೀಯ ಮಾದರಿ ಸಮೀಕ್ಷೆಯ 70 ನೇ ಸುತ್ತಿನಲ್ಲಿ 'ಭಾರತದ ಕೃಷಿ ಕುಟುಂಬಗಳ ಸ್ಥಿತಿಯ ಪ್ರಮುಖ ಸೂಚಕಗಳು' (2013) ನಲ್ಲಿ ದಾಖಲಾಗಿರುವಂತೆ ಇದು ಭಾರತದ ರೈತರ ಸ್ಥಿತಿ. ಮುಂದಿನ 12 ತಿಂಗಳಲ್ಲಿ ಈ ರೈತರ ಆದಾಯವನ್ನು ದ್ವಿಗುಣಗೊಳಿಸುವುದಾಗಿ ಸರ್ಕಾರ ಭರವಸೆ ನೀಡಿದೆ, ಅಂದರೆ 2022 ರ ವೇಳೆಗೆ. ಕಠಿಣ ಕಾರ್ಯ, ಇದು ರಿಹಾನ್ನಾ ಮತ್ತು ಥನ್ಬರ್ಗ್ರ ವಿಚ್ಛಿದ್ರಕಾರಕ ಮೂಗು ತೂರಿಸುವಿಕೆಗಿಂತಲೂ ಹೆಚ್ಚು ಕಿರಿಕಿರಿಗೊಳಿಸುತ್ತದೆ.
ಓಹ್, ದೆಹಲಿ ಗಡಿಗಳಲ್ಲಿರುವ ಆ ಶ್ರೀಮಂತ ರೈತರುಗಳು, ಎಷ್ಟೊಂದು ಸರಳವಾಗಿದ್ದಾರೆ! ಪಾಪ! ನಾನು ಶ್ರೀಮಂತರ ಕುರಿತು ಇನ್ನಷ್ಟು ಮೃದುವಾಗಬೇಕಿದೆ ಎನ್ನಿಸುತ್ತಿದೆ ಅವರನ್ನು ನೋಡಿದರೆ! ಅವರು 2 ಡಿಗ್ರಿಗಳಿಗಿಂತಲೂ ಕಡಿಮೆ ತಾಪಮಾನದ ಚಳಿಯಲ್ಲಿ ತಣ್ಣಗಿನ ಲೋಹದ ಟ್ರಾಲಿಗಳಲ್ಲಿ ಮಲಗುತ್ತಿದ್ದಾರೆ. ಐದಾರು ಡಿಗ್ರಿ ತಾಪಮಾನದಲ್ಲಿ ತೆರೆದ ಸ್ಥಳಗಳಲ್ಲಿ ಸ್ನಾನ ಮಾಡುತ್ತಾರೆ. ಓಹ್! ಎಷ್ಟೊಂದು ಸರಳ ಈ ಶ್ರೀಮಂತರು!
ಏತನ್ಮಧ್ಯೆ, ರೈತರೊಂದಿಗೆ ಸಂವಹನ ನಡೆಸಲು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗೆ ಪರಸ್ಪರ ಅವರಲ್ಲೇ ಮಾತನಾಡಲು ಸಾಧ್ಯವಾಗುತ್ತಿದ್ದಂತಿಲ್ಲ - ನಾಲ್ವರು ಸದಸ್ಯರಲ್ಲಿ ಒಬ್ಬರು ಸಮಿತಿಯ ಮೊದಲ ಸಭೆಗೂ ಮೊದಲೇ ರಾಜೀನಾಮೆ ನೀಡಿದರು. ಮತ್ತು ಪ್ರತಿಭಟನಾಕಾರರೊಂದಿಗೆ ಮಾತುಕತೆಯೆನ್ನುವುದು ದೂರದ ಮಾತು.
ಮಾರ್ಚ್ 12 ರಂದು ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಗೆ ನೀಡಿದ ಎರಡು ತಿಂಗಳ ಅವಧಿ (ಕೃಷಿಗೆ ಅಗತ್ಯವಾದ ಪರಾಗಸ್ಪರ್ಶ ನಡೆಸುವ ಕೀಟಗಳ ಗರಿಷ್ಠ ಜೀವಿತಾವಧಿಯೂ ಇಷ್ಟೇ ದಿನಗಳು!) ಈ ಅವಧಿಯ ಕೊನೆಗೆ ಸಮಿತಿಯು ತಲುಪಲು ಸಾಧ್ಯವಾಗದವರ ಸುದೀರ್ಘ ಪಟ್ಟಿಯೊಂದನ್ನು ಮತ್ತು ಅವರೊಂದಿಗೆ ಮಾತನಾಡಲು ನಿರಾಕರಿಸಿದವರ ಇನ್ನೊಂದು ದೊಡ್ಡ ಪಟ್ಟಿಯನ್ನು ಹೊಂದಿರುತ್ತದೆ.ಜೊತೆಗೊಂದು ಅವರು ನಿಜವಾಗಿಯೂ ಮಾತನಾಡಬಾರದಾಗಿದ್ದ ಜನರ ಕಿರು ಪಟ್ಟಿಯೂ ಇರಲಿದೆ.
ಪ್ರತಿಭಟನಾ ನಿರತ ರೈತರನ್ನು ಬೆದರಿಸುವ ಎಲ್ಲ ಪ್ರಯತ್ನಗಳ ನಂತರವವೂ ಅವರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. ಅವರನ್ನು ಅಪಖ್ಯಾತಿಗೊಳಿಸುವ ಪ್ರತಿಯೊಂದು ನಡೆಯೂ ಆಡಳಿತ ಪರ ಮಾಧ್ಯಮಗಳಿಂದ ಹೆಚ್ಚಿನ ಬೆಂಬಲವನ್ನು ಪಡೆದಿರಬಹುದು - ಆದರೆ ಅದು ಹೋರಾಟ ಕಣದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಭಯಾನಕವೆನ್ನಿಸುವ ಸಂಗತಿಯೆಂದರೆ, ಈ ಸರ್ಕಾರವು ಹೆಚ್ಚು ಸರ್ವಾಧಿಕಾರಿ, ದೈಹಿಕ ಮತ್ತು ದಬ್ಬಾಳಿಕೆಯ ತನ್ನ ಪ್ರಯತ್ನಗಳನ್ನು ಹೆಚ್ಚಿಸುವುದನ್ನು ನಿಲ್ಲಿಸುವುದಿಲ್ಲ.