ಶೆರಿಂಗ್ ದೋರ್ಜಿ ಭುಟಿಯಾ ಐದು ದಶಕಗಳಿಂದ ಬಿಲ್ಲುಗಳನ್ನು ಕೈಯಿಂದಲೇ ತಯಾರಿಸುತ್ತಿದ್ದಾರೆ. ವೃತ್ತಿಯಲ್ಲಿ ಬಡಗಿಯಾಗಿರುವ ದೋರ್ಜಿ ಪೀಠೋಪಕರಣಗಳನ್ನು ರಿಪೇರಿ ಮಾಡುವ ಮೂಲಕ ದೈನಂದಿನ ಬದುಕನ್ನು ನಡೆಸುತ್ತಾರೆ, ಆದರೆ ಅವರಿಗೆ ಸ್ಫೂರ್ತಿ ನೀಡುವುದು ಬಿಲ್ಲು ತಯಾರಿಕೆ. ಇದು ಅವರ ಸ್ಥಳೀಯ ಸಿಕ್ಕಿಂನ ಸಂಸ್ಕೃತಿಯಲ್ಲಿ ಆಳವಾಗಿ ಬೇರೂರಿದೆ.
ಸಿಕ್ಕಿಂನ ಪಕ್ಯೋಂಗ್ ಜಿಲ್ಲೆಯ ಕಾರ್ತೋಕ್ ಗ್ರಾಮದಲ್ಲಿ ಒಂದು ಕಾಲದಲ್ಲಿಸಾಕಷ್ಟು ಬಿಲ್ಲು ತಯಾರಕರು ಇದ್ದರು ಎಂದು ಸ್ಥಳೀಯರು ಹೇಳುತ್ತಾರೆ, ಆದರೆ ಈಗ ಅವರಲ್ಲಿ ಶೆರಿಂಗ್ ಮಾತ್ರ ಉಳಿದಿದ್ದಾರೆ. ಅವರು ಬಿಲ್ಲುಗಳನ್ನು ಬಿದಿರಿನಿಂದ ತಯಾರಿಸುತ್ತಾರೆ ಮತ್ತು ಅವು ಲೊಸೂಂಗ್ ಎನ್ನುವ ಬೌದ್ಧ ಹಬ್ಬದ ಸಮಯದಲ್ಲಿ ಮಾರಾಟವಾಗುತ್ತವೆ.
ಅವರ ಬಗ್ಗೆ ಇನ್ನಷ್ಟು ತಿಳಿಯಲು : ಶೆರಿಂಗ್: ಪಕ್ಯೋಂಗ್ ನ ನೇರ-ಬಿಲ್ಲು ತಯಾರಕ
ಅನುವಾದ: ಶಂಕರ ಎನ್. ಕೆಂಚನೂರು