"ತನ್ನ ನಾಲ್ಕು ಮಕ್ಕಳೊಂದಿಗೆ ರಾತ್ರಿ ಪೂರ ನಡೆಯುವ ಆ ತಾಯಿ- ಅವಳು ನನ್ನ ಪಾಲಿಗೆ ದುರ್ಗಾ ಮಾತೆ."
ಈಗ ವಲಸೆ ಕಾರ್ಮಿಕರನ್ನು ಹೋಲುವ ಹಾಗೆ ದುರ್ಗಾ ದೇವಿಯ ವಿಗ್ರಹವನ್ನು ಅಕ್ಷರಶಃ ಚಿತ್ರಿಸಿದ ಕಲಾವಿದ ರಿಂಟು ದಾಸ್ ಅವರನ್ನು ಭೇಟಿ ಮಾಡಿ. ಇದು ನೈಋತ್ಯ ಕೋಲ್ಕತ್ತಾದ ಬೆಹಾಲಾದಲ್ಲಿರುವ ಬಾರಿಶಾ ಕ್ಲಬ್ನ ದುರ್ಗಾಪೂಜಾ ಪೆಂಡಾಲ್ನಲ್ಲಿರುವ ಅಸಾಧಾರಣ ಶಿಲ್ಪವಾಗಿದೆ. ದುರ್ಗಾ ಮಾತೆಗೆ ವಲಸೆ ಕಾರ್ಮಿಕರಂತೆ ಇತರ ದೇವತೆಗಳು ಸಹ ಜೊತೆಯಲ್ಲಿರುತ್ತಾರೆ ಉದಾಹರಣೆಗೆ- ಸರಸ್ವತಿ, ಲಕ್ಷ್ಮಿ, ಗಣೇಶ ಮತ್ತು ಇತರ ದೇವತಗಳು. ಇಡೀ ಈ ಪ್ರದರ್ಶನವು ಕರೋನ ವೈರಸ್ ಸಾಂಕ್ರಾಮಿಕ ಖಾಯಿಲೆಯ ಮಧ್ಯೆ ವಲಸಿಗರಿಗೆ ಅವರ ಹೋರಾಟಕ್ಕೆ ಕೊಡುವ ಗೌರವವಾಗಿದೆ.
46 ವರ್ಷದ ರಿಂಟು ದಾಸ್ ಅವರು ಲಾಕ್ಡೌನ್ ಅವಧಿಯಲ್ಲಿ ತಾವು ಕಳೆದ ಆರು ತಿಂಗಳಿಂದ ಗೃಹಬಂಧನದಲ್ಲಿದ್ದಾರೆ ಎಂದು ಅಂದುಕೊಂಡಿದ್ದರು. “ನಾನು ಟಿವಿಯಲ್ಲಿ ತುಂಬಾ ಜನರ ಸಾವನ್ನು ನೋಡಿದ್ದೇನೆ ಮತ್ತು ಅನೇಕ ಜನರು ಕೋವಿಡ್ನಿಂದ ಕೆಟ್ಟ ಪರಿಣಾಮಕ್ಕೆ ಒಳಗಾಗಿದ್ದನ್ನು ನೋಡಿದೆ” ಎನ್ನುತ್ತಾರೆ. ಎಷ್ಟೋ ಮಂದಿ, ಹಗಲು ರಾತ್ರಿ ಎನ್ನದೆ ನಡೆದರು. ತಾಯಂದಿರು, ಹೆಣ್ಣುಮಕ್ಕಳು ಎಲ್ಲರೂ ನಡೆಯುತ್ತಿದ್ದಾರೆ , ಕೆಲವೊಮ್ಮೆ ಅವರಿಗೆ ಸ್ವಲ್ಪವೂ ಕೂಡ ಆಹಾರ ಮತ್ತು ನೀರು ಸಿಗುವುದಿಲ್ಲ. ಈ ವರ್ಷ ಪೂಜೆ ಮಾಡಿದರೆ ಈ ಜನರಿಗಾಗಿ ಪೂಜೆ ಮಾಡುತ್ತೇನೆ ಎಂದು ಅಂದುಕೊಂಡೆ. ನಾನು ಆ ತಾಯಂದಿರನ್ನು ಗೌರವಿಸುತ್ತೇನೆ,” ಹಾಗಾಗಿ ನಾನು ದುರ್ಗಾ ಮಾತೆಯನ್ನು ವಲಸೆ ಕಾರ್ಮಿಕರ ತಾಯಿ ಎಂದು ಭಾವಿಸುತ್ತೇನೆ.
"ಮೂಲ ಕಲ್ಪನೆಗಳು ಬೇರೆಯೇ ಇವೆ" ರಿಂಟು ದಾಸ್ ಅವರ ಪ್ರಕಾರ ವಿಗ್ರಹವನ್ನು ಕೆತ್ತಿಸಿದ 41 ವರ್ಷದ ಪಲ್ಲಬ್ ಭೌಮಿಕ್ ಅವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ತಮ್ಮ ಮನೆಯಿಂದ PARI ತಂಡಕ್ಕೆ ವಿವರಿಸಿದರು. 2019 ರ ದುರ್ಗಾ ಪೂಜೆಯ ಅಬ್ಬರವು ಕೊನೆಗೊಳ್ಳುವ ಮೊದಲೇ ಬಾರಿಶಾ ಕ್ಲಬ್ ಸಂಘಟಕರು ಈ ವರ್ಷದ ಪೂಜೆಗೆ ಈಗಾಗಲೇ ತಯಾರಿ ಆರಂಭಿಸಿದ್ದರು. ಆದರೆ ನಂತರ ಕೋವಿಡ್ -19 ಸಾಂಕ್ರಾಮಿಕ ಖಾಯಿಲೆಯ ಪರಿಣಾಮಗಳು 2020ರಲ್ಲಿ ಬೇರೆ ರೀತಿಯಾಗಿರುತ್ತವೆ ಎಂದು ಸ್ಪಷ್ಟವಾಯಿತು. ಆದ್ದರಿಂದ ಕ್ಲಬ್ ಹಳೆಯ ಯೋಜನೆಗಳನ್ನು ಸ್ಥಗಿತಗೊಳಿಸಬೇಕಾಯಿತು ಮತ್ತು ಕ್ಲಬ್ ಹೊಸ ಯೋಜನೆಯನ್ನು ಲಾಕ್ಡೌನ್ ಮತ್ತು ಕಾರ್ಮಿಕ ಸಂಕಟದ ಸುತ್ತ ಹೆಣೆಯಿತು.



