ಎಲ್ಲಕ್ಕಿಂತ ಹೆಚ್ಚಾಗಿ ಪ್ಲಾಸ್ಟಿಕ್ ಎನ್ನುವ ವಸ್ತು ಎಲ್ಲಾ ಕಡೆ ಇದೆ. ಇದು ಬಹುತೇಕ ಎಲ್ಲೆಲ್ಲಿ ಕಲ್ಪಿಸಿಕೊಂಡಲ್ಲೆಲ್ಲ ಇದೆ - ಬೀದಿಗಳಲ್ಲಿ ಬಿದ್ದಿರುತ್ತದೆ, ನೀರಿನಲ್ಲಿ ತೇಲುವುದು, ಚೀಲಗಳಲ್ಲಿ ಸಂಗ್ರಹಿಸಿಡಲಾಗುತ್ತಿದೆ, ತೊಟ್ಟಿಗಳಲ್ಲಿ ಬಿದ್ದಿರುತ್ತದೆ, ಛಾವಣಿಗಳ ಮೇಲೆ ರಾಶಿ ಹಾಕಲಾಗುತ್ತದೆ. 13ನೇ ಕಾಂಪೌಂಡ್ನ ಗಡಿಯ ಭಾಗದಲ್ಲಿ ಹೆಚ್ಚಿನ ಮೌಲ್ಯದ ಲೋಹದ ಭಾಗಗಳನ್ನು ಹೊರತೆಗೆಯಲು ಪ್ಲಾಸ್ಟಿಕ್ ವಸ್ತುಗಳನ್ನು ಸುಟ್ಟಾಗ, ದಟ್ಟವಾದ ಹೊಗೆ ಗಾಳಿಯನ್ನು ಸೇರಿಕೊಳ್ಳತ್ತದೆ.
ಈ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯ ವಸ್ತುಗಳ ಮುಗಿಯದ ರಾಶಿಯು ಮುಂಬೈನ ಎಲ್ಲಾ ಭಾಗಗಳಿಂದ ಧಾರಾವಿಯ ಮರುಬಳಕೆ ವಲಯವಾದ ಈ ಕಾಂಪೌಂಡ್ಗೆ ನಿಯಮಿತವಾಗಿ ಬರುತ್ತದೆ. ನಗರದಲ್ಲಿ ಪ್ರತಿದಿನ ಉತ್ಪತ್ತಿಯಾಗುವ 10,000 ಟನ್ಗೂ ಹೆಚ್ಚು ತ್ಯಾಜ್ಯದಲ್ಲಿ ಹೆಚ್ಚಿನ ಭಾಗವನ್ನು ಕೈಗಾಡಿಗಳು, ಟ್ರಕ್ಗಳು ಮತ್ತು ಟೆಂಪೋಗಳಲ್ಲಿ ಇಲ್ಲಿಗೆ ತರಲಾಗುತ್ತದೆ. ಕಾರ್ಮಿಕರು - ಅವರಲ್ಲಿ ಹೆಚ್ಚಿನವರು ವಿವಿಧ ರಾಜ್ಯಗಳಿಂದ ವಲಸೆ ಬಂದ ಯುವಕರು - ಈ ವಿಭಾಗದ ಅಸಾಧ್ಯವಾದ ಕಿರಿದಾದ ಲೇನ್ಗಳಲ್ಲಿ ಈ ವಸ್ತುಗಳನ್ನು ಲೋಡ್ ಮಾಡುತ್ತಾರೆ ಮತ್ತು ಇಳಿಸುತ್ತಾರೆ.
ಇಲ್ಲಿನ ಶೆಡ್ಗಳಲ್ಲಿ ಪ್ಯಾಚ್ವರ್ಕ್ ನಡೆಯುತ್ತದೆ, ಅವುಗಳಲ್ಲಿ ಕೆಲವು ನಾಲ್ಕು-ಹಂತದ, ಮರುಬಳಕೆಯ ಬಹು-ಪದರದ ಪ್ರಕ್ರಿಯೆಯು ಮತ್ತೆ ಮತ್ತೆ ನಡೆಯುತ್ತಲೆ ಇರುತ್ತದೆ. ಪ್ರತಿಯೊಂದು ವಸ್ತುವನ್ನು ಅಸೆಂಬ್ಲಿ ಲೈನ್ ಮೂಲಕ ಹಾಕಲಾಗುತ್ತದೆ, ವ್ಯಕ್ತಿಯಿಂದ ವ್ಯಕ್ತಿಗಳ ನಡುವೆ ಈ ಕೆಲಸ ನಡೆದುಹೋಗುತ್ತದೆ. ಆ ಮರುಬಳಕೆಯ ವಸ್ತುವನ್ನು ಅದನ್ನು 'ಹೊಸ' ಕಚ್ಚಾ ವಸ್ತು ಅಥವಾ ಇನ್ನೊಂದು ಸಿದ್ಧ ಉತ್ಪನ್ನವಾಗಿ ಪರಿವರ್ತಿಸುವ ಮೊದಲು ಪ್ರಕ್ರಿಯೆಗೆ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ.
ತೇರಾ ಕಾಂಪೌಂಡಿನಲ್ಲಿ ಮರುಬಳಕೆಯ ಪರಿಸರ ವ್ಯವಸ್ಥೆಯು ಸೂಕ್ಷ್ಮವಾಗಿ-ಟ್ಯೂನ್ ಮಾಡಲಾದ ಆಂತರಿಕ ತರ್ಕವನ್ನು ಹೊಂದಿದೆ: ಇಲ್ಲಿ ಖರೀದಿ ಮತ್ತು ಮಾರಾಟ ವ್ಯವಸ್ಥೆಗಳ ಮ್ಯಾಟ್ರಿಕ್ಸ್ ಜಾರಿಯಲ್ಲಿದೆ, ಜನರು ಕೆಲಸಕ್ಕೆ ನಿರ್ದಿಷ್ಟ ಪರಿಭಾಷೆಯನ್ನು ಬಳಸುತ್ತಾರೆ, ಪ್ರಕ್ರಿಯೆಯ ಅನುಕ್ರಮ ಹಂತಗಳು ಚೆನ್ನಾಗಿ ಸ್ಥಾಪಿತವಾಗಿವೆ, ಮತ್ತು ಪ್ರತಿಯೊಬ್ಬ ವ್ಯಕ್ತಿಯು ಒಂದು ಅಥವಾ ಹೆಚ್ಚಿನ ಕಾರ್ಯಗಳಲ್ಲಿ ಪರಿಣತಿಯನ್ನು ಸಾಧಿಸಿರುತ್ತಾನೆ: ರದ್ದಿವಾಲಾಗಳು (ನಗರದಾದ್ಯಂತ ಇರುವ ಗುಜರಿ ವ್ಯಾಪಾರಿಗಳು) ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸುತ್ತಾರೆ, ತ್ಯಾಜ್ಯ-ಆಯುವವರು ಮತ್ತು ಫೆರಿವಾಲಾಗಳು (ಚಿಲ್ಲರೆ ವ್ಯಾಪಾರಿಗಳು) ಪ್ರತಿದಿನದ ಸಂಗ್ರಹಗಳನ್ನು ಶೆಡ್ಗಳಲ್ಲಿ ಸಂಗ್ರಹಿಸಿ ಇಡುತ್ತಾರೆ. ವಾಹನ ಚಾಲಕರು ಮತ್ತು ಸಹಾಯಕರು ಕಾಂತಾವಾಲಾಗಳಲ್ಲಿ (ತೂಕದ ಮಾಪಕಗಳನ್ನು ಹೊಂದಿರುವ ಡೀಲರ್ ಗಳು) ವಸ್ತುಗಳನ್ನು ಅನ್ ಲೋಡ್ ಮಾಡುತ್ತಾರೆ. ಆಮೇಲೆ ಗೋದಾಮುಗಳ ಮಾಲಿಕರಾದ ಸೇಠ್ ಗಳು, ಮೇಲ್ವಿಚಾರಕರು, ಗಂಡಸರು ಮತ್ತು ಹೆಂಗಸರು ಇಬ್ಬರೂ ಸಹಸ್ರಾರು ಕೆಲಸಗಳಲ್ಲಿ ನಿರತರಾದ ಕೆಲಸಗಾರರು ಇದ್ದಾರೆ.




